Diabetes: ನೀವು ಮಧುಮೇಹ ಪೀಡಿತರೆ? ಹಾಗಿದ್ರೆ ನಿಮ್ಮ ಆರೋಗ್ಯ ರಕ್ಷಣೆಗಾಗಿ ಇಲ್ಲಿವೆ ಗಿಡಮೂಲಿಕೆಗಳು

ಮಧುಮೇಹ ಎಂಬ ಸಿಹಿಯಾದ ರೋಗ ಮನುಷ್ಯನನ್ನು ನಿಧಾನಕ್ಕೆ ಕೊಲ್ಲುತ್ತಲೇ ಇರುತ್ತದೆ. ಈ ಸಿಹಿರೋಗದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಅತ್ಯುತ್ತಮ ಗಿಡಮೂಲಿಕೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನೀವು ಭಾರತದ ನಿವಾಸಿಯಾಗಿದ್ದರೆ ಗುರ್ಮಾರ್ (ಪ್ರಾದೇಶಿಕ ಭಾಷೆಗಳಲ್ಲಿ ಬೇರೆ ಹೆಸರು ಇರುವ ಸಾಧ್ಯತೆಯೂ ಇದೆ) (Gurmez herbal) ಎಂಬ ಬಳ್ಳಿಯ ಬಗ್ಗೆ ಕೇಳಿಯೇ ಇರುತ್ತೀರಿ. ಈ ಬಳ್ಳಿಯನ್ನು ಆಯುರ್ವೇದ (Ayurveda) ವೈದ್ಯರು ಹಾವು ಕಡಿತ (Snake Bite), ಮಲೇರಿಯಾ (Malaria) ಹಾಗೂ ಅತಿ ಮುಖ್ಯವಾಗಿ ಮಧುಮೇಹಕ್ಕೆ (Diabetes) ಚಿಕಿತ್ಸೆ ನೀಡಲು ಬಳಸುತ್ತಾರೆ. ಮಧುಮೇಹ ಒಂದು ಅಸ್ವಸ್ಥತೆಯಾಗಿದ್ದು, ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಜನರನ್ನು ಬಾಧಿಸುತ್ತಿದೆ. ಈ ನ್ಯೂನತೆಯು ತೀವ್ರ ತೆರನಾದ ಅಸ್ವಸ್ಥತೆಗೆ ಕಾರಣವಾಗುತ್ತಿದೆ. ಅಪಾಯಕಾರಿ ಸಂಗತಿಯೇನೆಂದರೆ, ಈ ನ್ಯೂನತೆಯನ್ನು ನಿಭಾಯಿಸಲು ಸಾಧ್ಯ ಎಂದು ಹೇಳಲಾಗುತ್ತಿದ್ದರೂ, ಅದು ಖಚಿತವಾಗಿ ಗುಣವಾಗುವ ಬಗ್ಗೆ ಯಾವುದೇ ಖಾತ್ರಿಯಿಲ್ಲ.

ಜಿಮ್ನೇಮಾ ಸಿಲ್ವೆಸ್ಟ್ರೆ ಬಳ್ಳಿಯ ಮ್ಯಾಜಿಕ್

ಮಲೇರಿಯಾ ಹಾಗೂ ಹಾವು ಕಡಿತಕ್ಕೆ ಔಷಧವನ್ನಾಗಿ ಬಳಸಲಾಗುವ ಜಿಮ್ನೇಮಾ ಸಿಲ್ವೆಸ್ಟ್ರೆ (Gymnema Sylvestre) ಎಂಬ ಬಳ್ಳಿಯು ತನ್ನ ಮಧುಮೇಹ ಪ್ರತಿರೋಧಕ ಗುಣಗಳಿಂದ ಗಮನ ಸೆಳೆದಿದ್ದು, ಈ ಕುರಿತು ಸಂಶೋಧಕರು ಮತ್ತಷ್ಟು ಅಧ್ಯಯನವನ್ನು ನಡೆಸುತ್ತಿದ್ದಾರೆ. ಈ ಕುರಿತ ಅಧ್ಯಯನಗಳ ಬಗ್ಗೆ ವರದಿ ಮಾಡಿರುವ ಬ್ರಿಟನ್‌ನ ಎಕ್ಸ್‌ಪ್ರೆಸ್, ಕರುಳಿನಿಂದ ಹೀರಲ್ಪಟ್ಟ ರಕ್ತದಲ್ಲಿನ ಸಕ್ಕರೆ ಹೆಚ್ಚಾಗಲು ಕಾರಣವಾಗುವ ಸಕ್ಕರೆಯ ಪ್ರಮಾಣವನ್ನು ಜಿಮ್ನೇಮಾ ತಗ್ಗಿಸುತ್ತದೆ ಎಂದು ಹೇಳಿದೆ.

22 ರೋಗಿಗಳ ರಕ್ತದ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸಿರುವ ಸಂಶೋಧಕರು, ಜಿಮ್ನೇಮಾ ಸಾರವು ಅವುಗಳ ಮೇಲೆ ಬೀರಿರುವ ಪರಿಣಾಮ ಕುರಿತು ನಡೆದಿರುವ ಅಧ್ಯಯನದಲ್ಲಿ ಧನಾತ್ಮಕ ಫಲಿತಾಂಸ ದೊರೆತಿದೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: Weekend Tips: ಯಶಸ್ವಿ ಜನರ ವಾರಾಂತ್ಯ ಹೀಗಿರುತ್ತಂತೆ, ನೀವೂ ಈ 12 ಅಭ್ಯಾಸ ಬೆಳೆಸಿಕೊಳ್ಳಿ

ಮೊದಲು ನಾವು ಮಧುಮೇಹವನ್ನು ಅರ್ಥ ಮಾಡಿಕೊಳ್ಳೋಣ:

ಟೈಪ್ 1 ಮಧುಮೇಹ:

ಈ ಸ್ಥಿತಿಯು ಮೇದೋಜೀರಕ ಗ್ರಂಥಿಯು ಸ್ವಯಂಚಾಲಿತವಾಗಿ ಇನ್ಸುಲಿನ್ ಉತ್ಪಾದಿಸಲಾಗದ ಸ್ಥಿತಿಯಾಗಿದೆ. ಟೈಪ್ 1 ಮಧುಮೇಹವನ್ನು ಅಪ್ರಾಪ್ತ ಮಧುಮೇಹ ಅಥವಾ ಇನ್ಸುಲಿನ್ ಅವಲಂಬನೆಯ ಮಧುಮೇಹ ಎಂದೂ ಕರೆಯಲಾಗುತ್ತಿತ್ತು. ಇದು ವಿಷಮ ಪರಿಸ್ಥಿತಿಯಾಗಿದ್ದು, ಈ ಸ್ಥಿತಿಯಲ್ಲಿ ಮೇದೋಜೀರಕ ಗ್ರಂಥಿಯಿಂದ ಕೊಂಚವೇ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುತ್ತದೆ ಅಥವಾ ಯಾವುದೇ ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ‌. ಇಂತಹ ಸಂದರ್ಭದಲ್ಲಿ ರಕ್ತವನ್ನು ಪ್ರವೇಶಿಸುವ ಗ್ಲೂಕೋಸ್, ಹಾರ್ಮೋನ್ ನೆರವಿನಿಂದ ಇಂಧನ ಉತ್ಪಾದಿಸುತ್ತದೆ.

ಟೈಪ್ 2 ಮಧುಮೇಹ:

ಈ ಸ್ಥಿತಿಯು ಜೀವನಕ್ರಮದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಇತರೆ ರೋಗ, ಸಮಯ ಅಥವಾ ಚಟುವಟಿಕೆಯ ಸಾಮಾನ್ಯ ಕೊರತೆ, ಅಪಘಾತ ಸಂಬಂಧಿ ಅಂಗವಿಕಲತೆ ಇತ್ಯಾದಿಗಳ ಎರಡನೆ ಹಂತದ ಜೀವನಕ್ರಮಗಳಿಂದ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಟೈಪ್ 2 ಮಧುಮೇಹ ನಿವಾರಣೆಗೆ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲ ಎಂಬ ಸಂಗತಿಯನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ.

ಇದನ್ನೂ ಓದಿ: Corona: ಒಬ್ಬ ವ್ಯಕ್ತಿ ಎಷ್ಟು ಬಾರಿ ಕೊರೊನಾ ಮರು ಸೋಂಕಿಗೆ ಒಳಗಾಗಬಹುದು? ಇಲ್ಲಿದೆ ಡೀಟೈಲ್ಸ್!

ಈ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಗುಣಪಡಿಸಲೂ ಸಾಧ್ಯವಿದೆ. ಕೆಲವು ಜನರಿಗೆ ಮಧುಮೇಹ ಔಷಧಗಳ ಅಗತ್ಯವಿಲ್ಲವಾದರೆ, ಮತ್ತೆ ಕೆಲವರು ತೂಕ ನಿಯಂತ್ರಣ, ಮಧುಮೇಹಕ್ಕೆ ಪೂರಕವಾದ ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮಗಳಿಂದ ಈ ಮಧುಮೇಹವು ಹಿಮ್ಮೆಟ್ಟಿರುವುದನ್ನು ಗಮನಿಸಿದ್ದಾರೆ.

ಅದೃಷ್ಟವಶಾತ್, ಕೆಲವು ಆಹಾರ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುತ್ತವೆ ಹಾಗೂ ಈ ಅಸ್ವಸ್ಥತೆಯನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ ಎಂಬ ಸಂಗತಿಯನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇನ್ಸುಲಿನ್ ಉತ್ಪತ್ತಿ ಹೆಚ್ಚಿಸುವ ಜಿಮ್ನೇಮಾ

ಜಿಮ್ನೇಮಾದಿಂದ ಹೊರತೆಗೆಯಲಾಗಿರುವ ಸಂಯುಕ್ತಗಳು ಕರುಳಿನ ನಾಳಗಳಿಂದ ಹೀರಿಕೆಯಾಗುವ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತವೆ. ಇದರಿಂದ ಇನ್ಸುಲಿನ್ ಉತ್ಪತ್ತಿ ಸುಧಾರಣೆಗೊಂಡು ರಕ್ತದ ಸಕ್ಕರೆ ಪ್ರಮಾಣ ತಗ್ಗಿಸಲು ನೆರವು ದೊರೆಯುತ್ತದೆ. ಪ್ರಾಣಿಗಳ ಮೇಲೆ ನಡೆಸಲಾಗಿರುವ ಪ್ರಯೋಗಗಳು ಜಿಮ್ನೇಮಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಗ್ಗಿಸುವುದನ್ನು ದೃಢಪಡಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Published by:Annappa Achari
First published: