ಬೇವನ್ನು ಬಳಸಿ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಉಪಾಯಗಳು

ತಲೆ ಹೊಟ್ಟಿನ ನಿವಾರಣೆಗೆ ಬೇವಿನ ಎಲೆಗಳನ್ನು ಬಳಸಬಹುದು. ಇದು ಪರಿಣಾಮಕಾರಿಯಾಗಿಯೂ ಕೆಲಸ ಮಾಡುತ್ತದೆ. ಬೇವಿನ ಎಲೆಗಳನ್ನು ಬಳಸುವ ವಿಧಾನಗಳ ವಿವರ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೊಟ್ಟಿನ ಸಮಸ್ಯೆ ಬಹಳ ಸಾಮಾನ್ಯ. ತಲೆಯಲ್ಲಿ ಹೊಟ್ಟು ಹೆಚ್ಚಾದರೆ ತುರಿಕೆ, ಕೂದಲು ಉದುರುವುದು ಕೂಡ ಹೆಚ್ಚುತ್ತದೆ. ಹೊಟ್ಟಿನ ಸಮಸ್ಯೆಯಿಂದಾಗಿ ಸಾಕಷ್ಟು ಸಲ ಮುಜುಗರವನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ತಲೆ ಹೊಟ್ಟಿನಿಂದ ಮುಕ್ತವಾಗಲು , ನಾನಾ ರೀತಿಯ ಪರಿಣಾಮಕಾರಿ ವಿಧಾನಗಳನ್ನು ಪ್ರಯತ್ನಿಸಿರುತ್ತಾರೆ. ಹೊಟ್ಟಿನ ಸಮಸ್ಯೆ ನಿವಾರಿಸಲು ಹಲವಾರು ಉಪಾಯಗಳು ಇವೆ. ಅವುಗಳಲ್ಲಿ ಕಹಿ ಬೇವಿನ ಬಳಕೆ ಕೂಡ ಒಂದು. ಬೇವು ಆಯುರ್ವೇದ ಚಿಕಿತ್ಸಾ ಪದ್ಧತಿಯ ಒಂದು ಬಹುಮುಖ್ಯ ಭಾಗ ಮತ್ತು ನೂರಾರು ವರ್ಷಗಳಿಂದ ಬಳಕೆಯಲ್ಲಿ ಇರುವಂತದ್ದು. ರುಚಿಯಲ್ಲಿ ಕಹಿಯಾದರೂ ಬೇವಿನ ಎಲೆಗಳಲ್ಲಿ ಇರುವ ಔಷಧೀಯ ಗುಣಗಳು ನಮ್ಮ ಪಾಲಿಗೆ ಸಿಹಿಯನ್ನೇ ತರುತ್ತವೆ. ಅಂದರೆ ಅದನ್ನು ಆರೋಗ್ಯದ ಸಮಸ್ಯೆ, ಕೂದಲು ಮತ್ತು ಚರ್ಮದ ಸಮಸ್ಯೆಗಳ ನಿವಾರಣೆಗೆ ಬಳಸುತ್ತಾರೆ.

ತಲೆ ಹೊಟ್ಟಿನ ನಿವಾರಣೆಗೆ ಬೇವಿನ ಎಲೆಗಳನ್ನು ಬಳಸಬಹುದು. ಇದು ಪರಿಣಾಮಕಾರಿಯಾಗಿಯೂ ಕೆಲಸ ಮಾಡುತ್ತದೆ. ಬೇವಿನ ಎಲೆಗಳನ್ನು ಬಳಸುವ ವಿಧಾನಗಳ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ


ಬೇವಿನ ನೀರು
ಸಾಮಾಗ್ರಿಗಳು:
• 35-40 ಬೇವಿನ ಎಲೆಗಳು
• 1 -1 1/2 ಲೀಟರ್ ನೀರು

ವಿಧಾನ:
• ಮೊದಲು ನೀರನ್ನು ಬಿಸಿ ಮಾಡಿ, ಗ್ಯಾಸ್‍ ಮೇಲಿನಿಂದ ತೆಗೆದು ಇರಿಸಿ
• ಅದಕ್ಕೆ ಬೇವಿನ ಎಲೆಗಳನ್ನು ಹಾಕಿ, ರಾತ್ರಿಯಿಡೀ ನೆನೆಸಿಡಿ
• ಬೆಳಗ್ಗೆ ಆ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ
• ಇದನ್ನು ಬಳಸುವುದರಿಂದ ಹೊಟ್ಟಿನ ಕಾರಣದಿಂದ ಉಂಟಾದ ತುರಿಕೆ ಕಡಿಮೆ ಆಗುತ್ತದೆ.

ಹೊಟ್ಟಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಬೇಕೆಂದರೆ, ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಬಳಸಿ.

ಇದನ್ನೂ ಓದಿ: Bigg Boss Kannada 8 Elimination: ಮಧ್ಯರಾತ್ರಿ ನಡೆದ ಎಲಿಮಿನೇಷನ್​ನಲ್ಲಿ ಬಿಗ್ ಬಾಸ್​ ಮನೆಯಿಂದ ಹೊರ ನಡೆದ ಸ್ಪರ್ಧಿ ಇವರೇ..!

ಬೇವಿನ ಹೇರ್ ಮಾಸ್ಕ್
ಸಾಮಾಗ್ರಿಗಳು:
• 30-40 ಬೇವಿನ ಎಲೆಗಳು
• 1 ಲೀಟರ್ ನೀರು
• 1 ಟೇಬಲ್ ಚಮಚ ಜೇನು ತುಪ್ಪ

ವಿಧಾನ:
• ನೀರನ್ನು ಕುದಿಸಿ, ಗ್ಯಾಸ್ ಮೇಲಿಂದ ತೆಗೆದಿಡಿ
• ಈಗ ಬೇವಿನ ಎಲೆಗಳನ್ನು ಹಾಕಿ, ರಾತ್ರಿಯಿಡೀ ನೆನೆಯಲು ಬಿಡಿ
• ಬಳಿಕ ನೀರನ್ನು ಸೋಸಿ, ಎಲೆಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ.
• ಆ ಪೇಸ್ಟ್‌ಗೆ ಜೇನು ತುಪ್ಪ ಸೇರಿಸಿ, ಕೂದಲು ಮತ್ತು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿರಿ.
• 25-30 ನಿಮಿಷ ಹಾಗೆಯೇ ಬಿಡಿ, ಬಳಿಕ ತೊಳೆಯಿರಿ
• ವಾರಕ್ಕೆ ಒಂದು ಬಾರಿ ಈ ವಿಧಾನ ಅನುಸರಿಸುವುದರಿಂದ ಹೊಟ್ಟು ಮಾಯವಾಗುತ್ತದೆ.

ಇದನ್ನೂ ಓದಿ: ದಿಗಂತ್​ ಜೊತೆಗಿನ ಕ್ಯೂಟ್​ ಫೋಟೋ ಶೇರ್ ಮಾಡಿದ ಐಂದ್ರಿತಾ ರೇ..!

ಬೇವು ಮತ್ತು ತೆಂಗಿನ ಎಣ್ಣೆ
ಸಾಮಾಗ್ರಿಗಳು:
• 1/2 ಕಪ್ ತೆಂಗಿನ ಎಣ್ಣೆ
• 10 ಬೇವಿನ ಎಲೆಗಳು
• 1/2 ಟೇಬಲ್ ಚಮಚ ಲಿಂಬೆ ರಸ
• 2 ಚಮಚ ಹರಳೆಣ್ಣೆ

ವಿಧಾನ:
1. ಮೊದಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಬಳಿಕ ಅದಕ್ಕೆ ಬೇವಿನ ಎಲೆಗಳನ್ನು ಹಾಕಿ. ಸುಮಾರು 10-15 ನಿಮಿಷಗಳವರೆಗೆ ಕುದಿಸಿ
2. ಎಣ್ಣೆ ತಣಿದ ಬಳಿಕ, ಹರಳೆಣ್ಣೆ, ಲಿಂಬೆ ರಸವನ್ನು ಸೇರಿಸಿ.
3. ಈ ಮಿಶ್ರಣವನ್ನು ಒಂದು ಬಾಟಲಿಯಲ್ಲಿ ಹಾಕಿ, ವಾರಕ್ಕೆ ಕನಿಷ್ಟ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ.
4. ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯವರೆಗೆ ಹಾಗೆಯೇ ಬಿಡಿ, ಬಳಿಕ ತೊಳೆದು ತೆಗೆಯಿರಿ.
Published by:Anitha E
First published: