ಕೂದಲ ಸಮಸ್ಯೆಗೆ ನೈಸರ್ಗಿಕ ಎಣ್ಣೆ ಉತ್ತಮ​ ಪರಿಹಾರ

news18
Updated:June 18, 2018, 6:38 PM IST
ಕೂದಲ ಸಮಸ್ಯೆಗೆ ನೈಸರ್ಗಿಕ ಎಣ್ಣೆ ಉತ್ತಮ​ ಪರಿಹಾರ
news18
Updated: June 18, 2018, 6:38 PM IST
ನ್ಯೂಸ್​18 ಕನ್ನಡ

ಬೆಂಗಳೂರು : (ಜೂನ್ 18) :  ಮಳೆಗಾಲ ಬಂತು ಅಂದ್ರೆ ಸಾಕು ಮಹಿಳೆಯರಿಗೆ ಬ್ಯೂಟಿಯ ಚಿಂತೆ ಹೆಚ್ಚಾಗತೊಡಗುತ್ತೆ. ಮಳೆಯಲ್ಲಿ ನೆಂದರೆ ಮೇಕಪ್​ ನಿಲ್ಲೋದಿಲ್ಲ, ಕೂದಲು ಒದ್ದೆಯಾದರೆ ಉದುರುತ್ತೆ, ಕಾಸ್ಟ್ಲಿ ಡ್ರೆಸ್​ ಹಾಕೊಂಡು ಹೋಗೋಕಾಗಲ್ಲ ಹೀಗೆ ಹಲವಾರು ಟೆನ್ಷನ್​ಗಳಿರುತ್ತವೆ. ಅದಕ್ಕಾಗಿಯೇ ಹತ್ತಾರು ಸೌಂದರ್ಯ ವರ್ಧಕಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಯಾವುದನ್ನು ನಂಬೋದು ಅನ್ನೋದೇ ಟೀನೇಜ್​ನವರಿಗೆ ತಲೆನೋವಿನ ಸಂಗತಿ.

ಮಳೆಗಾಲ ಮತ್ತು ಚಳಿಗಾಲದಲ್ಲಿ ತಲೆಯ ಕೂದಲು ತುಸು ಹೆಚ್ಚೇ ಉದುರುತ್ತದೆ. ಕೂದಲ ಬುಡ ಸಡಿಲವಾಗುವುದರಿಂದ ಕೂದಲಿಗೆ ಸ್ವಲ್ಪ ಡ್ಯಾಮೇಜ್​ ಆದರೂ ಬುಡಸಮೇತ ಕಿತ್ತುಬರುತ್ತದೆ. ಹಳ್ಳಿಗಳಲ್ಲಿ ಇಂದಿಗೂ ತಾಜಾ ಕೊಬ್ಬರಿ ಎಣ್ಣೆ, ಆಯುರ್ವೇದ ಗಿಡಮೂಲಿಕೆಗಳ ಎಣ್ಣೆಯನ್ನೇ ಬಳಸಲಾಗುತ್ತದೆ. ಆದರೆ, ನಗರದವರಿಗೆ ಬ್ರ್ಯಾಂಡೆಡ್​ ಹೇರ್​ಆಯಿಲ್​ಗಳ ಬಗ್ಗೆ ನಂಬಿಕೆ ಜಾಸ್ತಿ.

ನಿಮ್ಮ ನಂಬಿಕೆಗಳೇನೇ ಇರಲಿ, ನಗರದಲ್ಲಿ ಬೀಳುವ ಮಳೆನೀರು ಕೂದಲಿಗೆ ತಾಗಿದರೆ ಶುಷ್ಕವಾದಂತೆ ಕಾಣುವುದು ಖಂಡಿತ. ಇದರಿಂದ ಕೂದಲು ಉದುರುವಿಕೆಯೂ ಹೆಚ್ಚುತ್ತದೆ. ಇದಕ್ಕೆಲ್ಲ ನ್ಯಾಚುರಲ್​ ಹೇರ್​ ಆಯಿಲ್​ ಬೆಸ್ಟ್​ ಥೆರಪಿ ಅನ್ನುತ್ತಾರೆ ವೈದ್ಯರು.ಮಳೆಗಾಲದಲ್ಲಿ ಅಂಟು ಅಂಟಾಗಿ ಗಂಟಾಗುವ ಕೂದಲು ಮಾಮೂಲು. ಇದಕ್ಕೆ ತಾಜಾ ಕೊಬ್ಬರಿ ಎಣ್ಣೆ, ಹರಳೆಣ್ಣೆ ಅಥವಾ ಮನೆಯಲ್ಲೇ ತಯಾರಿಸಿದ ಆಯುರ್ವೇದಿಕ್​ ತೈಲವನ್ನು ಬಳಸುವುದು ಉತ್ತಮ. ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚಿ ತುದಿಯವರೆಗೂ ಗಂಟನ್ನು ಬಿಡಿಸುತ್ತಿದ್ದರೆ ಸ್ವಲ್ಪವಾದರೂ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.

ಉದ್ದ ಕೂದಲಿರಲಿ, ಗಿಡ್ಡ ಕೂದಲಿರಲಿ. ಚೆನ್ನಾಗಿ ಎಣ್ಣೆ ಹಚ್ಚಿ ಬಳಿಕ ಶಾಂಪೂವಿನಿಂದ ತೊಳೆಯಬೇಕು. ಕೂದಲು ಬಿರುಕು ಬಿಡುವುದನ್ನು ತಡೆಯಲು ಕೂದಲಿಗೆ ಮಾಯಿಶ್ಚರೈಸರ್​ ನೀಡಬೇಕು. ಮಳೆಯಲ್ಲಿ ಕೂದಲು ಒದ್ದೆಯಾದರೆ ಅದನ್ನು ಸರಿಯಾಗಿ ಒಣಗಿಸಿಕೊಳ್ಳಲು ಮರೆಯಬಾರದು. ಇಲ್ಲವಾದರೆ ಹಸಿಕೂದಲು ಬಹುಬೇಗ ಕಟ್​ ಆಗುವುದರಿಂದ ತುಂಡುಕೂದಲು ಹೆಚ್ಚಾಗುತ್ತದೆ. ನೈಸರ್ಗಿಕವಾಗಿ ತಯಾರಿಸಿರುವ, ಉತ್ತಮ ಗುಣಮಟ್ಟದ ಹೇರ್​ ಆಯಿಲ್​ ಹಚ್ಚುವುದು ಒಳ್ಳೆಯದು. ಇವು ಕೇವಲ ಬ್ಯಾಕ್ಟೀರಿಯಗಳನ್ನು ಕಂಟ್ರೋಲ್​ ಮಾಡುವುದಲ್ಲದೆ ಕೂದಲು ಚೆನ್ನಾಗಿ ಬೆಳೆಯಲು ಕೂಡ ಸಹಾಯ ಮಾಡುತ್ತದೆ ಎಂದು ಆರ್​ಎಎಸ್​ ಲಕ್ಷುರಿ ಆಯಿಲ್ಸ್​ನ ಸಹ ಸಂಸ್ಥಾಪಕರಾದ ಸಂಗೀತಾ ಜೈನ್​, ಶುಭಿಕಾ ಜೈನ್​ ಸಲಹೆ ನೀಡಿದ್ದಾರೆ.
Loading...

ದಾಳಿಂಬೆ ಆಯಿಲ್​ ಬೆಸ್ಟ್ : ದಾಳಿಂಬೆಯಿಂದ ಮಾಡಲಾದ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್​ ಮತ್ತು ಕೂದಲ ಆಳಕ್ಕೆ ಇಳಿದು ಮಾಯಿಶ್ಚರೈಸರ್​ ನೀಡುವ ಗುಣ ಹೆಚ್ಚಿರುತ್ತದೆ. ಕೂದಲಿನ ತೇವಾಂಶವನ್ನು ಮತ್ತೆ ಬರುವಂತೆ ಮಾಡುವ ಈ ಆಯಿಲ್​ನಲ್ಲಿರುವ ದಾಳಿಂಬೆ ಹಣ್ಣಿನ ಅಂಶ ಒಣ ಕೂದಲಿಗೆ ಹೊಸ ಹೊಳಪನ್ನು ತರುತ್ತದೆ.

ಅರ್ಗಾನ್​ ಎಣ್ಣೆ : ವಿಟಮಿನ್​ ಇ, ಖನಿಜಾಂಶ ಮತ್ತು ಆ್ಯಂಟಿಆಕ್ಸಿಡೆಂಟ್​ನ್ನೊಳಗೊಂಡಿರುತ್ತದೆ. ಇದು ಚರ್ಮದ ನೆರಿಗೆಗಳನ್ನು ಕಡಿಮೆ ಮಾಡುವುತ್ತದೆ. ಇದನ್ನು ಕೂದಲಿಗೆ ಹಚ್ಚಿದರೆ ಸಿಲ್ಕಿಯಾಗಿ ಕಾಣುತ್ತದೆ.
ಕೂದಲು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳಬೇಕೆಂದರೆ ಹೊರಹೋಗುವಾಗ ಕೂದಲನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲು ಮರೆಯಬೇಡಿ. ಬಿಡುವು ಸಿಕ್ಕಾಗ ಹೇರ್​ಸ್ಪಾಗಳಿಗೆ ಭೇಟಿ ನೀಡಿ ಮಸಾಜ್​ ಮಾಡಿಸಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗುತ್ತದೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...