Skin Problem: ಚೆಂಡು ಹೂವಿಗೆ ನಿಮ್ಮ ಚರ್ಮದ ಎಲ್ಲಾ ಸಮಸ್ಯೆ ಗುಣಪಡಿಸೋ ಶಕ್ತಿ ಇದೆ, ಕಜ್ಜಿ-ತುರಿಕೆ ಕ್ಷಣದಲ್ಲೇ ಮಾಯ!

Skin Care Tips: ಹಲವಾರು ಮಂದಿ ಹುಳಕಡ್ಡಿ, ತುರಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುತ್ತಾರೆ. ಇದಕ್ಕೆಲ್ಲ ಇದೀಗ ಒಂದೇ ಪರಿಹಾರವೆಂದರೆ ಮಾರಿಗೋಲ್ಡ್ ಹೂವುಗಳು ಮತ್ತು ಎಲೆಗಳು. ಮಾರಿಗೋಲ್ಡ್ ಹೂವು ಅಂದರೆ ಚೆಂಡು ಹೂ. ಈ ಹೂವುಗಳು ಭಾರತೀಯ ಸಂಸ್ಕೃತಿಯಲ್ಲಿ ಅಗ್ರಸ್ಥಾನ ಪಡೆದಿವೆ.

ಚಂಡು ಹೂವು

ಚಂಡು ಹೂವು

 • Share this:
  ನಮ್ಮ ದೇಹದ ಒಳಗಿನ ಮೂಳೆ(Bone) - ಮಾಂಸಗಳಿಗೆ ಹೊದಿಕೆಯಾಗಿರುವ ಮೇಲಿನ ಚರ್ಮ(Skin) ಎಷ್ಟು ಸದೃಢವಾಗಿರುತ್ತದೋ ಅಷ್ಟೇ ಸೂಕ್ಷ್ಮವಾಗಿರುತ್ತದೆ ಕೂಡ. ಯಾವುದೇ ಬಗೆಯಲ್ಲಿ ಎದುರಾಗುವ ಸಣ್ಣ ಪುಟ್ಟ ಸೋಂಕುಗಳು(Infections) ಚರ್ಮದ ಮೇಲೆ ಕಜ್ಜಿ(Itch), ತುರಿಕೆ(Itching), ಹುಳುಕಡ್ಡಿ(Rashes), ದದ್ದುಗಳು, ಗುಳ್ಳೆಗಳು ಇತ್ಯಾದಿ ಚರ್ಮ ಸಂಬಂಧಿತ ವ್ಯಾಧಿಗಳನ್ನು ಉಂಟು ಮಾಡಬಹುದು. ಅದರಲ್ಲೂ ನಿಮ್ಮ ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬಂದರೆ ಇದನ್ನು ಹುಳುಕಡ್ಡಿ ಅಥವಾ ಹುಳುಕಡ್ಡಿ ಎಂದು ಕರೆಯುತ್ತಾರೆ.

  ಇದು ಶಿಲೀಂಧ್ರ ಸೋಂಕಿನಿಂದ ಬರುತ್ತದೆ. ಟಿನಿಯಾ ಎಂಬ ಒಂದು ರೀತಿಯ ಶಿಲೀಂಧ್ರದಿಂದ ಹುಳುಕಡ್ಡಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ನಿಮ್ಮ ಚರ್ಮದ ಸತ್ತ ಅಂಗಾಂಶಗಳು, ಕೂದಲು ಮತ್ತು ಉಗುರುಗಳ ಮೇಲೆ ವಾಸಿಸುತ್ತದೆ. ಈ ಸೋಂಕು ನಿಮ್ಮ ಮುಖ ಸೇರಿದಂತೆ ನಿಮ್ಮ ಚರ್ಮದ ಮೇಲೆ ಎಲ್ಲಿಯಾದರೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಈ ಹುಳುಕಡ್ಡಿ ಹಾಗೂ ತುರಿಕೆಗೆ ಪ್ರತಿಯೊಂದಕ್ಕೂ ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ದುಬಾರಿ ಆಯಿಂಟ್ಮೆಂಟ್ ಗಳು ಕೆಲಸ ಮಾಡುತ್ತವೆ ಎಂದು ನಂಬಿ ಕೂರುವುದು ಕಷ್ಟ. ಹಾಗಾಗಿ ಕೆಲವೊಂದು ಮನೆ ಮದ್ದುಗಳ ಮೂಲಕ ನಮ್ಮ ಸಮಸ್ಯೆಯನ್ನು ನಾವೇ ಸುಲಭವಾಗಿ ಬಗೆಹರಿಸಿಕೊಳ್ಳಬಹುದು.

  ಹುಳಕಡ್ಡಿ, ತುರಿಕೆಗೆ ಮನೆಯಲ್ಲಿ ಇದೆ ಮದ್ದು

  ಹಲವಾರು ಮಂದಿ ಹುಳಕಡ್ಡಿ, ತುರಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುತ್ತಾರೆ. ಇದಕ್ಕೆಲ್ಲ ಇದೀಗ ಒಂದೇ ಪರಿಹಾರವೆಂದರೆ ಮಾರಿಗೋಲ್ಡ್ ಹೂವುಗಳು ಮತ್ತು ಎಲೆಗಳು. ಮಾರಿಗೋಲ್ಡ್ ಹೂವು ಅಂದರೆ ಚೆಂಡು ಹೂ. ಹೂವುಗಳು ಭಾರತೀಯ ಸಂಸ್ಕೃತಿಯಲ್ಲಿ ಅಗ್ರಸ್ಥಾನ ಹೊಂದಿವೆ. ಇವುಗಳಿಲ್ಲದೆ ಯಾವುದೇ ಸಭೆ ಸಮಾರಂಭಗಳು ಪೂರ್ಣವಾಗುವುದಿಲ್ಲ. ಈ ಹೂವುಗಳಲ್ಲಿ ಪ್ರಮುಖವಾದದ್ದು ಎಂದರೆ ಚೆಂಡು ಹೂ. ಭಾರತದಲ್ಲಿ ಈ ಹೂವನ್ನು ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ . ಇದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಹಲವಾರು ಉಪಯೋಗಗಳನ್ನು ಹೊಂದಿದೆ.

  ಇದನ್ನೂ ಓದಿ: ಬರದ ನಾಡಿನಲ್ಲಿ ರೈತನ ಬಾಳನ್ನ ಬಂಗಾರವಾಗಿಸಿದ ಚೆಂಡು ಹೂವಿನ ಬೆಳೆ

  ಅಲರ್ಜಿಕ್ ಗುಣಲಕ್ಷಣಗಳನ್ನು ಹೊಂದಿರುವ ಮಾರಿಗೋಲ್ಡ್

  ಚೆಂಡು ಹೂವು ಫ್ಲೇವೊನಾಯ್ಡ್ ಮತ್ತು ಕರೋಟಿನಾಯ್ಡ್ ಎಂಬ ರೋಗ ನಿರೋಧಕಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹೂವಿನ ದಳಗಳು ಸಾಕಷ್ಟು ರೋಗನಿರೋಧಕ ಮತ್ತು ಕ್ಯಾಲೆಂಡ್ರಿಕ್ ಮತ್ತು ಲಿನೋಲಿಸ್ ಎಂಬ ಕೊಬ್ಬಿನಾಮ್ಲಗಳ ಅಂಶಗಳನ್ನು ಹೊಂದಿದೆ. ಅಲ್ಲದೇ ಹೂವಿನ ಎಲೆಗಳು ಸಹ ಬೆಟಾ ಕರೋಟಿನ್ (ವಿಟಮಿನ್ ಎ) ಎಂಬರೋಗ ನಿರೋಧಕ ಗುಣವನ್ನು ಹೊಂದಿದೆ. ಹೀಗಾಗಿ ಆಯುರ್ವೇದದ ಪ್ರಕಾರ, ಮಾರಿಗೋಲ್ಡ್ ಅನೇಕ ಆಂಟಿ ಫಂಗಲ್ ಮತ್ತು ಅಲರ್ಜಿಕ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಹುಳಕಡ್ಡಿ, ಸ್ಕೇಬೀಸ್ ಅಥವಾ ಬೇರಿನ ತುರಿಕೆ ಮುಂತಾದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದರಿಂದ ತುರಿಕೆ ಸಮಸ್ಯೆ ದೂರವಾಗುತ್ತದೆ ಹಾಗೂ ಚರ್ಮದ ಮೇಲೆ ಗೋಚರಿಸುವ ಕೆಂಪು ಕಲೆಗಳನ್ನು ಸಹ ತೆಗೆದುಹಾಕಲಾಗುತ್ತದೆ.

  ಚರ್ಮದ ಸಮಸ್ಯೆಗಳಿಗೆ ಚಂಡು ಹೂವಿನ ಬಳಕೆ ಹೇಗೆ..?

  ಮೊದಲನೆಯದಾಗಿ ಚಂಡು ಹೂವಿನ ರಸವನ್ನು ತೆಗೆದುಕೊಂಡು ಅದನ್ನು ಪೇಸ್ಟ್ ರೂಪದಲ್ಲಿ ತಯಾರಿಸಬೇಕು. ಬಳಿಕ ಚಂಡು ಹೂವಿನ ಎಲೆಯ ರಸವನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಎರಡನ್ನು ಬೆರೆಸಬೇಕು. . ನಂತರ ಈ ಪೇಸ್ಟ್ ಅನ್ನು ಹುಳಕಡ್ಡಿ, ಸ್ಕೇಬೀಸ್, ತುರಿಕೆ ಇರುವ ಜಾಗಗಳಿಗೆ ಹಚ್ಚಿ. ನಾಲ್ಕೈದು ದಿನ ನಿರಂತರವಾಗಿ ಹೀಗೆ ಮಾಡಿದರೆ ಇಂತಹ ಸಮಸ್ಯೆಗಳು ದೂರವಾಗುತ್ತವೆ.

  ಇದನ್ನೂ ಓದಿ: ಕ್ಯಾನ್ಸರ್, ಡಯಾಬಿಟಿಸ್ ರೋಗಿಗಳಿಗೆ ಮದ್ದು ಮನೆಯಂಗಳದಲ್ಲಿ ಬೆಳೆಯುವ ಈ ಹೂವು..!

  ಮತ್ತೊಂದು ರೀತಿಯ ವಿಧಾನ

  ಇನ್ನೊಂದು ರೀತಿಯಲ್ಲಿ, ಮಾರಿಗೋಲ್ಡ್ ಎಲೆಗಳನ್ನು ನೀರಿನಲ್ಲಿ ಕುದಿಸಿ. ಕುದಿಸಿದ ನಂತರ ತಣ್ಣಗಾಗಲು ಬಿಡಿ. ನಂತರ ಅದನ್ನು ಹುಳಕಡ್ಡಿ, ಸ್ಕೇಬೀಸ್ ಅಥವಾ ಬೇರಿನ ತುರಿಕೆ ಇರುವ ಭಾಗದಲ್ಲಿ ಲೇಪಿಸಿ. ಕೆಲವೇ ದಿನಗಳಲ್ಲಿ ರಿಸಲ್ಟ್‌ ನಿಮಗೆ ತಿಳಿಯುತ್ತದೆ. ಈ ವಿಧಾನದಲ್ಲಿ ನೀವು ಮನೆಯಲ್ಲಿಯೇ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
  Published by:ranjumbkgowda1 ranjumbkgowda1
  First published: