Weight Loss Tips: ಮನೆಯಲ್ಲಿ ಏಲಕ್ಕಿ ಇದೆಯಾ? ಹಾಗಿದ್ರೆ ಸುಲಭವಾಗಿ ತೂಕ ಇಳಿಸಬಹುದು!

ಏಲಕ್ಕಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರತಿಯೊಬ್ಬ ಭಾರತೀಯರ ಅಡುಗೆ ಮನೆಯಲ್ಲೂ ಏಲಕ್ಕಿಗೆ ಸ್ಥಾನ ಇದ್ದೇ ಇರುತ್ತದೆ. ಸುವಾಸನೆಯಿಂದ ಆಕರ್ಷಿಸೋ ಏಲಕ್ಕಿಯ ಔಷಧೀಯ ಗುಣವೂ ಅಪಾರ. ನಿಮ್ಮ ಅಡುಗೆಮನೆಯಲ್ಲಿರುವ ಏಲಕ್ಕಿಯಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು ಅಂತ ನಿಮಗೆ ಗೊತ್ತಾ?

ಏಲಕ್ಕಿ

ಏಲಕ್ಕಿ

  • Share this:
    ನೀವು ನಿಮ್ಮ ದೇಹದ ತೂಕದ (Body Weight) ಬಗ್ಗೆ ಟೆನ್ಶನ್ (Tension) ಆಗಿದ್ದೀರಾ? ದೇಹ ಬಲೂನ್ (Balloon) ತರ ಊದಿಕೊಳ್ಳುತ್ತಿದೆ, ಹೆಂಗಪ್ಪಾ ಕರಗಿಸೋದು ಅಂತ ಚಿಂತೆ ಮಾಡ್ತೀದ್ದೀರಾ? ವರ್ಕ್ ಫ್ರಂ ಹೋಮ್ (Work From Home) ಮಾಡ್ತಾ ಇದ್ದೀನಿ, ಮನೆಯಲ್ಲೂ ವ್ಯಾಯಾಮ (Exercise) ಮಾಡೋಕೆ ಟೈಮ್ (Time) ಇಲ್ಲ, ಹೆಚ್ಚುತ್ತಿರೋ ತೂಕವನ್ನು ಕಂಟ್ರೋಲ್ (Control) ಮಾಡೋದು ಹೇಂಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ರೆ ಚಿಂತೆ ಬಿಟ್ಟಾಕಿ, ‘ಬಿ ಹ್ಯಾಪಿ, ನೋ ಬಿಪಿ..’ (Be Happy, No BP) ಸೀದಾ ಅಡುಗೆ ಮನೆಗೆ (Kitchen) ಹೋಗಿ, ಅಲ್ಲಿ ಏಲಕ್ಕಿ (cardamom) ಇದೆಯಾ ನೋಡಿ. ಇದೆ ತಾನೇ, ಯಾಕೆಂದ್ರೆ ಪ್ರತಿಯೊಬ್ಬ ಭಾರತೀಯರ ಅಡುಗೆ ಮನೆಯಲ್ಲೂ ಏಲಕ್ಕಿಗೆ ಸ್ಥಾನ ಇದ್ದೇ ಇರುತ್ತದೆ. ಸುವಾಸನೆಯಿಂದ ಆಕರ್ಷಿಸೋ ಏಲಕ್ಕಿಯ ಔಷಧೀಯ ಗುಣವೂ ಅಪಾರ. ನಿಮ್ಮ ಅಡುಗೆಮನೆಯಲ್ಲಿರುವ ಏಲಕ್ಕಿಯಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು ಅಂತ ನಿಮಗೆ ಗೊತ್ತಾ? ಗೊತ್ತಿಲ್ಲಾ ಅಂದ್ರೆ ಮುಂದೆ ಓದಿ…

     ತೂಕ ಇಳಿಕೆಗೆ ಏಲಕ್ಕಿ ನೀರು ಸಹಕಾರಿ

    ಏಲಕ್ಕಿ ನೀರನ್ನು ನೀವು ಸೇವಿಸುವುದರಿಂದ ನಿಮ್ಮ ದೇಹದ ತೂಕ ಇಳಿಕೆ ಆಗುತ್ತದೆ. ಒಂದು ಲೋಟ ಬಿಸಿ ನೀರಿಗೆ ಕೆಲವೇ ಕೆಲವು ಏಲಕ್ಕಿ ಕಾಳುಗಳನ್ನು ಸೇರಿಸಿ, ತುಸು ತೂಕವನ್ನು ಕರಗಿಸಲು ಸಹಾಯ ಮಾಡುತ್ತದೆ. ಏಲಕ್ಕಿಯಲ್ಲಿ ಮೆಲಟೋನಿನ್  ಪ್ರಮಾಣ ಉತ್ತಮವಾಗಿದೆ. ಈ ಪದಾರ್ಥವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.

    ಏಲಕ್ಕಿ ನೀರು ತಯಾರಿಸುವುದು ಹೇಗೆ?

    ಏಲಕ್ಕಿಯ ಈ ಸರಳವಾದ ಪಾನೀಯವನ್ನು ತಯಾರಿಸಲು, ಪ್ಯಾನ್ ತೆಗೆದುಕೊಂಡು ಅದಕ್ಕೆ ಎರಡು ಕಪ್ ನೀರು ಸೇರಿಸಿ. ನೀರು ಚೆನ್ನಾಗಿ ಕುದಿಯಲು ಪ್ರಾರಂಭಿಸಿದ ನಂತರ, ಏಲಕ್ಕಿ ಕಾಳುಗಳನ್ನು ನೀರಿಗೆ ಸೇರಿಸಿ. ನಂತರದಲ್ಲಿ ಪಾನೀಯವು ಬಿಸಿಯಾಗಿರುವಾಗ ಸೇವಿಸಲು ನಿಮಗೆ ಇಷ್ಟವಿದ್ದರೆ ಬಿಸಿಯಾಗಿರುವಾಗ ಸೇವಿಸಿ, ಇಲ್ಲವೆಂದರೆ ಪಾನಿಯವನ್ನು ಸ್ವಲ್ಪ ತಣಿಸಿ ಅನಂತರದಲ್ಲಿ ಸೇವಿಸಿ. ನೀವು ಕಡಿಮೆ ಕೊಬ್ಬಿನ ಹಾಲಿನ ಜೊತೆಗೂ ಇದನ್ನು ಪ್ರಯತ್ನಿಸಬಹುದು.

    ಇದನ್ನೂ ಓದಿ: Health Care: ಹೆಚ್ಚುತ್ತಿದೆ ಬಿಸಿಲಿನ ತಾಪ, ನಿಮ್ಮ ಆರೋಗ್ಯ ಮತ್ತು ದೇಹದ ರಕ್ಷಣೆಗೆ ಈ ಆಹಾರ ಪದಾರ್ಥಗಳ ಸೇವನೆ ಅತ್ಯಗತ್ಯ

    ರಾತ್ರಿ ಮಲಗುವ ಮನ್ನ ಏಲಕ್ಕಿ ಬಳಸಿ

    ರಾತ್ರಿ ಮಲಗುವ ಮುನ್ನ ಒಂದು ಏಲಕ್ಕಿಯನ್ನು ಅಗೆದು ತಿಂದು ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಮ್ಮ ಶರೀರಕ್ಕೆ ಯಾವುದೇ ಔಷಧಿಗಳ ಅಗತ್ಯ ಇರುವುದಿಲ್ಲ. ಇದು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸಿ ಈ ಮೂಲಕ ನಮ್ಮ ದೇಹದಲ್ಲಿ ಉತ್ಪತ್ತಿ ಆಗಿರುವ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸಲು ಏಲಕ್ಕಿ ಸಹಾಯ ಮಾಡುತ್ತದೆ.

    ಏಲಕ್ಕಿ ಹೇಗೆ ಕೆಲಸ ಮಾಡುತ್ತದೆ?

    ಏಲಕ್ಕಿಯು ಆಯುರ್ವೇದದಲ್ಲಿ ಪ್ರಾಚೀನಕಾಲದಿಂದಲೂ ಬಳಕೆಯಾಗುತ್ತಿರುವ ಸಾಂಬಾರು ಪದಾರ್ಥವಾಗಿದೆ.ಇದರಲ್ಲಿರುವ ಉತ್ತಮ ಗುಣವು ಕ್ಯಾನ್ಸರ್ ವಿರೋಧಿಯಾಗಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರ ನೀಡುತ್ತದೆ.

    ಏಲಕ್ಕಿ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ, ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವ ಮೂಲಕ ನಿಮ್ಮ ತೂಕ ನಿಯಂತ್ರಣಕ್ಕೆ ಸಹಕಾರ ನೀಡುತ್ತದೆ.ತೂಕ ಇಳಿಕೆಗೆ ಮಾತ್ರವಲ್ಲದೆ ಹೊಟ್ಟೆಯುಬ್ಬರ ಮತ್ತು ಅಸಿಡಿಟಿಯ ಸಮಸ್ಯೆಯನ್ನು ಎದುರಿಸುವವರು ಸಹ ಏಲಕ್ಕಿಯನ್ನು ಸೇವಿಸಬಹುದು.

    ಪ್ರತಿದಿನವೂ ಮಾಡಿ ಏಲಕ್ಕಿ ಬಳಕೆ

    ನೀವು ದಿನನಿತ್ಯ ಮನೆಯಲ್ಲಿ ತಯಾರಿಸುವ ಯಾವುದೇ ಆಹಾರ ಪದಾರ್ಥಕ್ಕೆ ಏಲಕ್ಕಿಯನ್ನು ಸೇರಿಸಿಕೊಳ್ಳುವ ಮೂಲಕ ಇದರ ಬಳಕೆಯನ್ನು ಹೆಚ್ಚಿಸಬಹುದು. ಇದು ಉತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

    ಇದನ್ನೂ ಓದಿ: Nails Care: ನಿಮ್ಮ ಉಗುರು ಗುಲಾಬಿ ಪಕಳೆಗಳಂತೆ ರಂಗು ರಂಗಾಗಿರಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

    ಬಾಯಿಗೆ ಹಾಕಿ ಅಗಿದರೂ ಲಾಭವಿದೆ

    ಒಂದು ವೇಳೆ ಇದನ್ನು ನೀವು ಬಳಸುವ ಯಾವುದೇ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ ಇದನ್ನು ನೇರವಾಗಿ ನಿಮ್ಮ ಬಾಯಿಗೆ ಹಾಕಿ ಚೆನ್ನಾಗಿ ಅಗಿದು ಸಹ ನೀವು ಇದನ್ನು ಬಳಸಬಹುದು. ಇದರಿಂದ ನಿಮ್ಮ ಬಾಯಿಯ ಸುವಾಸನೆಯು ಸಹ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಯೂ ಸಹ ಉತ್ತಮವಾಗಿ ಇರುತ್ತದೆ.
    Published by:Annappa Achari
    First published: