ಕಪ್ಪು ಕಲೆಗಳು (Dark Spot) ಮುಖದ ಅಂದವನ್ನು (Face Beauty) ಹಾಳು ಮಾಡುತ್ತವೆ. ಎಷ್ಟೇ ಸುಂದರವಾಗಿದ್ದರೂ, ಮುಖದಲ್ಲಿ ಕಾಣುವ ಕಪ್ಪು ಕಲೆಗಳು, ಕಲೆ ಮತ್ತು ಮೊಡವೆ (Acne) ಸೌಂದರ್ಯವನ್ನು ಕುಗ್ಗಿಸುತ್ತದೆ. ಸಾಮಾನ್ಯವಾಗಿ ಹಾರ್ಮೋನ್ ಅಸಮತೋಲನ, ಬಲವಾದ ಸೂರ್ಯನ ಬೆಳಕು ಅಥವಾ ಧೂಳಿನಿಂದಾಗಿ ಮುಖದ ಮೇಲೆ ಮೊಡವೆ ಸಮಸ್ಯೆ ಹೆಚ್ಚುತ್ತದೆ. ಮೊಡವೆಗಳು ಕಪ್ಪು ಕಲೆಗಳಾಗಿ ಮಾರ್ಪಡುತ್ತವೆ. ಅವುಗಳನ್ನು ತೊಡೆದು ಹಾಕುವುದು ಸುಲಭವಲ್ಲ. ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಸುಲಭವಾದ ಮನೆಮದ್ದುಗಳನ್ನು ನೀವು ಬಳಸಬಹುದು. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಮೊಡವೆ ಮತ್ತು ಅಲರ್ಜಿ ಸಾಮಾನ್ಯ. ಅವುಗಳನ್ನು ತೊಡೆದು ಹಾಕಲು ನೀವು ಮನೆಮದ್ದು ಬಳಸಿ.
ಮನೆಮದ್ದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ಚರ್ಮದ ಮೇಲಿನ ಕಲೆಗಳನ್ನು ತೆಗೆದು ಹಾಕಲು ನೀವು ಮನೆಯಲ್ಲಿ ಅಲೋವೆರಾ ಮತ್ತು ಅಕ್ಕಿ ನೀರನ್ನು ಬಳಸಬಹುದು. ಅದನ್ನು ಹೇಗೆ ತಯಾರಿಸುವುದು ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಅಕ್ಕಿ ನೀರನ್ನು ಮಾಡುವುದು ಹೇಗೆ?
ಅಕ್ಕಿ ನೀರನ್ನು ತಯಾರಿಸಲು ಮೊದಲು ಅರ್ಧ ಕಪ್ ಹಸಿ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಅಕ್ಕಿಯನ್ನು ಮೂರು ಕಪ್ ನೀರಿನಲ್ಲಿ ನೆನೆಸಿ 30 ನಿಮಿಷಗಳ ಕಾಲ ಬಿಡಿ. ನಂತರ ಅಕ್ಕಿ ನೀರನ್ನು ಶುದ್ಧವಾದ ಪಾತ್ರೆಯಲ್ಲಿ ಫಿಲ್ಟರ್ ಮಾಡಿ. ಈಗ ನಿಮ್ಮ ಅಕ್ಕಿ ನೀರು ಸಿದ್ಧವಾಗಿದೆ.
ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ
ಅಲೋವೆರಾ ಮತ್ತು ಅಕ್ಕಿ ನೀರನ್ನು ತಯಾರಿಸುವುದು ಹೇಗೆ?
ಅಲೋವೆರಾ ಜೆಲ್ ತೆಗೆದುಕೊಳ್ಳಿ. ಜೊತೆಗೆ ಅಕ್ಕಿ ನೀರು. ಇದಕ್ಕಾಗಿ ಎರಡೂ ವಸ್ತುಗಳನ್ನು ಮಿಶ್ರಣ ಮಾಡಿ. ನಂತರ ಅದನ್ನು ಐದು ನಿಮಿಷ ಮಿಶ್ರಣವನ್ನು ಹಾಗೇ ಬಿಡಿ. ಈಗ ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒರೆಸಿಕೊಳ್ಳಿ. ನಂತರ ಈ ನೀರನ್ನು ಮುಖಕ್ಕೆ ಹಚ್ಚಿ ಮತ್ತು ಲಘು ಕೈಗಳಿಂದ ಮಸಾಜ್ ಮಾಡಿ. ಮತ್ತು ಅನ್ವಯಿಸಿದ ನಂತರ ಹಾಗೇ ಬಿಟ್ಟು ಬಿಡಿ. ನಂತರ ಮರುದಿನ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ ಇದನ್ನೂ ಪ್ರತಿದಿನ ರಾತ್ರಿ ಅನ್ವಯಿಸಿ.
ಅಲೋವೆರಾ ಮತ್ತು ಅಕ್ಕಿ ನೀರಿನ ಫೇಸ್ ಪ್ಯಾಕ್ ಪ್ರಯೋಜನಗಳು
ಅಕ್ಕಿ ನೀರು ಮುಖಕ್ಕೆ ಒಳ್ಳೆಯದು. ಅಕ್ಕಿ ನೀರು ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ. ಜೊತೆಗೆ ಇದು ವಿಟಮಿನ್ ಇ, ಉತ್ಕರ್ಷಣ ನಿರೋಧಕ ಮತ್ತು ಫೆರುಲಿಕ್ ಆಮ್ಲ ಹೊಂದಿದೆ. ಇದು ನಿಮ್ಮ ಮೈಬಣ್ಣವನ್ನು ಟೋನ್ ಮಾಡಲು, ಬಿಗಿಗೊಳಿಸಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ. ಅಲೋವೆರಾ ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ್ದು, ಮುಖಕ್ಕೆ ಉತ್ತಮವಾಗಿದೆ.
ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಮನೆಮದ್ದು
3 ಸ್ಪೂನ್ ರುಬ್ಬಿದ ಬಾದಾಮಿಯನ್ನು ಅರ್ಧ ಕಪ್ ಮೊಸರಿನಲ್ಲಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. 15 ನಿಮಿಷಗಳ ನಂತರ ಲಘುವಾಗಿ ಉಜ್ಜುವ ಮೂಲಕ ತೊಳೆಯಿರಿ. ಈ ಪ್ಯಾಕ್ ಸನ್ ಟ್ಯಾನ್ ಹೋಗಲಾಡಿಸಿ ಮುಖದ ಅಂದವನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಬಳಸುವುದು ನಿಮ್ಮ ತ್ವಚೆಯು ಕಾಂತಿಯುತವಾಗುವಂತೆ ಮಾಡುತ್ತದೆ.
ನಿಮ್ಮ ತ್ವಚೆ ಒಣಗಿದ್ದರೆ ಸ್ವಲ್ಪ ಹಾಲಿಗೆ ಅರ್ಧ ಚಮಚ ಎಳ್ಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿರಿ. ನಂತರ 15 ನಿಮಿಷ ನಂತರ, ನೀರಿನಲ್ಲಿ ನೆನೆಸಿದ ಹತ್ತಿಯಿಂದ ಮುಖವನ್ನು ಚೆನ್ನಾಗಿ ಒರೆಸಿ. ಎಳ್ಳೆಣ್ಣೆ ಸೂರ್ಯನ ಕಿರಣಗಳಿಂದ ತ್ವಚೆಗೆ ಆದ ಹಾನಿಗೆ ಅತ್ಯುತ್ತಮ ಪರಿಹಾರ ನೀಡುತ್ತದೆ. ಇದು ಕ್ರಮೇಣ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಮತ್ತು ಚರ್ಮ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ
ಸನ್ ಟ್ಯಾನ್ ಆಗಿರುವ ಚರ್ಮದ ಮೇಲೆ ತಣ್ಣನೆಯ ಹಾಲನ್ನು ಹಚ್ಚುವುದು ತುಂಬಾ ಪ್ರಯೋಜನಕಾರಿ. ಹತ್ತಿಯನ್ನು ತಣ್ಣಗಿನ ಹಾಲಿನಲ್ಲಿ ಅದ್ದಿ ಚರ್ಮಕ್ಕೆ ಹಚ್ಚಿ. ಇದು ಆಳವಾಗಿ ಸ್ವಚ್ಛಗೊಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ