• Home
  • »
  • News
  • »
  • lifestyle
  • »
  • Social Media Effect: ಸೋಷಿಯಲ್ ಮೀಡಿಯಾ ಹೆಚ್ಚು ಬಳಸೋದು ನಿದ್ರಾಹೀನತೆಗೆ ಕಾರಣವಂತೆ

Social Media Effect: ಸೋಷಿಯಲ್ ಮೀಡಿಯಾ ಹೆಚ್ಚು ಬಳಸೋದು ನಿದ್ರಾಹೀನತೆಗೆ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Usage of Social Media: ನಮ್ಮ ಆರೋಗ್ಯ ಮತ್ತು ವಿವೇಚನಾ ಶಕ್ತಿ ಉತ್ತಮವಾಗಿರಲು ಉತ್ತಮ ನಿದ್ರೆ ಅವಶ್ಯಕವಾಗಿರುತ್ತದೆ. ನಿದ್ರಾಹೀನತೆ ಸಮಸ್ಯೆ ಹೊಂದಿದವರು ಹೆಚ್ಚು ಯೋಚನೆ ಮಾಡುವುದರಿಂದಾಗಿ ಅವರಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ.

  • Share this:

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ರೆ (Sleep) ಬರುತ್ತದೆ ಎಂದು ಗಾದೆ ಮಾತಿದೆ. ಇನ್ನು, ನಿದ್ರೆ ಕೂಡ ಉತ್ತಮ ಆರೋಗ್ಯದ (Health) ಒಂದು ಭಾಗ.ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಸ್ಕ್ರೀನ್ ಟೈಮಿಂಗ್ (Screen Timing) ಹೆಚ್ಚಾಗಿದೆ. ಇಂಟರ್ನೆಟ್ ಬ್ರೌಸ್ (Internet) ಮಾಡುವುದು, ಸಂಗೀತವನ್ನು ಕೇಳುವುದು, ಚಲನಚಿತ್ರಗಳು, ಟಿವಿ ಶೋಗಳು ಅಥವಾ ಯೂಟ್ಯೂಬ್ ವೀಡಿಯೊಗಳನ್ನು (You tube video)  ನೋಡುವಂತಹ ಮಾಧ್ಯಮ ಬಳಕೆಯು ಮಲಗುವ ಮುನ್ನ ಸಾಮಾನ್ಯವಾಗಿದೆ. ಆದರೆ ಇದು, ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಶೋಧನೆಯೊಂದು ನಡೆದಿದ್ದು, ಅದರ ಮಾಹಿತಿ ಇಲ್ಲಿದೆ.


ಸೋಷಿಯಲ್ ಮೀಡಿಯಾ ಬಳಕೆ ನಿದ್ರೆ ಸಮಸ್ಯೆ ಉಂಟು ಮಾಡುತ್ತದೆ


ಜರ್ನಲ್ ಆಫ್ ಸ್ಲೀಪ್ ರಿಸರ್ಚ್' (ಜರ್ನಲ್ ಆಫ್ ಸ್ಲೀಪ್ ರಿಸರ್ಚ್) ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಫಲಿತಾಂಶಗಳ ಮೂಲಕ, ಬೆಡ್‌ಟೈಮ್ ಮೀಡಿಯಾ ಯೂಸೇಜ್ ನಮ್ಮ ನಿದ್ರೆಯನ್ನು ಹೇಗೆ ಹಾಳು ಮಾಡುತ್ತದೆ ಎಂದು ತಿಳಿಯಬಹುದು.  ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕದ ನಂತರ, ಜನರು ನಿದ್ರಾಹೀನತೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಮತ್ತು ಅದರ ಬಗ್ಗೆ ಹೆಚ್ಚು ಚಿಂತಿಸುವುದನ್ನು ನಾವು ಕಂಡಿದ್ದೇವೆ.


ಆರೋಗ್ಯದ ವಿಚಾರದಲ್ಲಿ ನಿದ್ರಾಹೀನತೆ ಸಹ ನಿಮಗೆ ಅಪಾಯವನ್ನು ಉಂಟು ಮಾಡಬಹುದು.  ಲಾಕ್​ ಡೌನ್​ ಸಮಯದಲ್ಲಿ ಚಲನಚಿತ್ರಗಳು ಅಥವಾ ವೆಬ್ ಸರಣಿಗಳನ್ನು ವೀಕ್ಷಿಸಲು ಅಥವಾ ಸಾಮಾಜಿಕ ಮಾಧ್ಯಮ ಸೈಟ್‌ಗಳನ್ನು ಸ್ಕ್ರೋಲಿಂಗ್ ಮಾಡಲು ಹೆಚ್ಚು ಸಮಯವನ್ನು ಮೀಸಲಿಡಲಾಗಿತ್ತು.


ಅದೇ ಅಭ್ಯಾಸ ಈಗ ಸಹ ಮುಂದುವರೆದಿದೆ. ಲಾಕ್‌ಡೌನ್‌ಗಳ ಸಮಯದಲ್ಲಿ, ಹೊರಗೆ ಹೋಗುತ್ತಿರಲಿಲ್ಲ ಮತ್ತು ಒಳಾಂಗಣದಲ್ಲಿ ಮಾಡಲು ಯಾವುದೇ ಕೆಲಸವಿರಲಿಲ್ಲ. ಹಾಗಾಗಿ ಈ "ಹೊಸ ಅಭ್ಯಾಸಗಳು" ಏನು ಅನಿಸಲಿಲ್ಲ. ಆದರೆ ಈಗ  ನಮ್ಮ ದೇಹದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಅರಿವಾಗುತ್ತಿರಬಹುದು.


ಇದನ್ನೂ ಓದಿ: ನಿಮ್ಮ ತ್ವಚೆಯ ಸೌಂದರ್ಯದ ರಹಸ್ಯ ಈ 5 ಹಣ್ಣುಗಳಲ್ಲಿದೆಯಂತೆ


ಅಧ್ಯಯನದಲ್ಲಿ ಹೊಸ ಮಾಹಿತಿ ಬಹಿರಂಗ


ಈ ಅಧ್ಯಯನದಲ್ಲಿ, 58 ವಯಸ್ಕರಿಗೆ ದೈನಂದಿನ ಡೈರಿಗಳನ್ನು ಇರಿಸಿಕೊಳ್ಳಲು ಕೇಳಲಾಯಿತು. ಅದೇನೆಂದರೆ, ಮಲಗುವ ಮುನ್ನ ಮೇಲೆ ಹೇಳಿದ 'ಮಾಧ್ಯಮ'ಗಳೊಂದಿಗೆ ಕಳೆದ ಸಮಯ, ಅವುಗಳ ಬಳಕೆಯ ಸ್ಥಳ ಮತ್ತು ಇತರ ವಿಚಾರಗಳನ್ನು ಡೈರಿಗಳಲ್ಲಿ ದಾಖಲಿಸಲು ಹೇಳಲಾಗಿತ್ತು.  ಈ ಅಧ್ಯಯನವು ಎಲೆಕ್ಟ್ರೋಎನ್ಸೆಫಾಲೋಗ್ರಫಿ ಅನ್ನು ಸಹ ಒಳಗೊಂಡಿದೆ, ಇದು ನಿದ್ರೆಯ ಸಮಯ, ಒಟ್ಟು ನಿದ್ರೆಯ ಸಮಯ ಮತ್ತು ನಿದ್ರೆಯ ಗುಣಮಟ್ಟವನ್ನು ಅಳೆಯಲು ನೆತ್ತಿಯ ಮೇಲೆ ಜೋಡಿಸಲಾದ ಸಣ್ಣ ಲೋಹದ ಡಿಸ್ಕ್ಗಳನ್ನು ಬಳಸಿಕೊಂಡು ಮೆದುಳಿನ ವಿದ್ಯುತ್ ಚಟುವಟಿಕೆಯನ್ನು ಅಳೆಯುತ್ತದೆ.


ಈ ಅಧ್ಯಯನದ ಮೂಲಕ, ಮಲಗುವ ಮುನ್ನ ಕೆಲ ಗಂಟೆಗಳ ಮೊದಲು ಸೋಷಿಯಲ್ ಮೀಡಿಯಾ ಬಳಸುವುದು ನಿದ್ರೆಯ ಸಮಯದೊಂದಿಗೆ ಸಂಬಂಧಿಸಿದೆ ಎಂದು ಸಾಬೀತಾಗಿದೆ. ಅಲ್ಲದೇ,  ಮಲಗುವ ಮುನ್ನ ಹೆಚ್ಚಿನ ಜನರು ಕೇವಲ ಸೋಷಿಯಲ್ ಮೀಡಿಯಾ ಮಾತ್ರ ಅಲ್ಲ ಸಿನಿಮಾ, ಹಾಗೂ ವೆಬ್​ ಸರಣಿ ನೋಡುವುದರಿಂದ ಹೆಚ್ಚು ಸಮಯ ವ್ಯಯವಾಗುತ್ತಿದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಬಹಳ ಉತ್ತಮ ಎಂದು ವೈದ್ಯರು ಸಹ ಹೇಳುತ್ತಾರೆ.
ನಮ್ಮ ಆರೋಗ್ಯ ಮತ್ತು ವಿವೇಚನಾ ಶಕ್ತಿ ಉತ್ತಮವಾಗಿರಲು ಉತ್ತಮ ನಿದ್ರೆ ಅವಶ್ಯಕವಾಗಿರುತ್ತದೆ. ನಿದ್ರಾಹೀನತೆ ಸಮಸ್ಯೆ ಹೊಂದಿದವರು ಹೆಚ್ಚು ಯೋಚನೆ ಮಾಡುವುದರಿಂದಾಗಿ ಅವರಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಕರಾತ್ಮಕವಾಗಿ ಯೋಚನೆ ಮಾಡಿ, ಜೀವನವನ್ನು ಜಿಗುಪ್ಸೆಯಿಂದ ಕಳೆಯುತ್ತಾರೆ.


ಇದನ್ನೂ ಓದಿ: ಪ್ರತಿದಿನ 4 ಪಿಸ್ತಾ ತಿಂದ್ರೆ ನಿಮ್ಮ ಒತ್ತಡ ಕಡಿಮೆಯಾಗುತ್ತೆ


ಈ ಕಾರಣದಿಂದಾಗಿಯೂ ರಾತ್ರಿ ವೇಳೆ ನಿದ್ರೆ ಭಂಗಕ್ಕೆ ಕಾರಣವಾಗುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ. ನಿದ್ರೆ ಸಮಸ್ಯೆ ಹೊಂದಿದವರು ಸಕರಾತ್ಮಕವಾಗಿ ಯೋಚನೆ ಜೊತೆಗೆ ಉತ್ತಮ ಜೀವನಕ್ರಮವನ್ನು ಅಳವಡಿಸಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು. ನಿಮ್ಮ ಜ್ಞಾಪಕ ಶಕ್ತಿಯನ್ನು ಕೂಡ ವೃದ್ಧಿಸಿಕೊಳ್ಳಬಹುದು ಎಂದು ಹಲವು ಸಂಶೋಧನೆಗಳಿಂದ ಬಹಿರಂಗವಾಗಿದೆ.

Published by:Sandhya M
First published: