UTI And Health: ನೀವು ಮಾಡೋ ಈ ತಪ್ಪುಗಳು ಮೂತ್ರನಾಳ ಸೋಂಕಿಗೆ ಕಾರಣವಾಗುತ್ತೆ! ತಡೆಯೋದು ಹೇಗೆ?

ಮಹಿಳೆಯರ ಮೂತ್ರನಾಳ ಪುರುಷರಿಗಿಂತ ವಿಭಿನ್ನವಾಗಿದೆ. ಅದಕ್ಕಾಗಿ ಯುಟಿಐ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ. ಮಹಿಳಾ ಆರೋಗ್ಯ ಕಚೇರಿ ವರದಿ ಪ್ರಕಾರ ಮಹಿಳೆಯರಲ್ಲಿ ಯುಟಿಐ ಸೋಂಕು ಹೆಚ್ಚಾಗಿ ಕಂಡು ಬರುತ್ತವೆ. ಮೂತ್ರಪಿಂಡದ ಕಲ್ಲುಗಳು ಯುಟಿಐ ಉಂಟಾಗುವ ಸಾಮಾನ್ಯ ಅಪಾಯಕಾರಿ ಅಂಶ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮೂತ್ರನಾಳದ ಸೋಂಕು (UTI) ನಿಮ್ಮ ಮೂತ್ರದ (Urine) ವ್ಯವಸ್ಥೆಯ ಭಾಗದಲ್ಲಿ ಹರಡುವ ಸೋಂಕು (Virus) ಆಗಿದೆ. ಅದು ನಿಮ್ಮ ಮೂತ್ರಪಿಂಡಗಳು (Kidneys), ಮೂತ್ರಕೋಶ, ಮೂತ್ರನಾಳವನ್ನು ಒಳಗೊಂಡಿದೆ. ಮಹಿಳೆಯರು ಪುರುಷರಿಗಿಂತ ಮೂತ್ರನಾಳ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದು ಮಹಿಳೆಯರಲ್ಲಿ ಹರಡುವ ಎರಡನೇ ಸಾಮಾನ್ಯ ಸೋಂಕು. ಎನ್‌ಸಿಬಿಐ ವರದಿ ಪ್ರಕಾರ, ಪ್ರತೀ ಮೂವರಲ್ಲಿ ಒಬ್ಬರು 24 ವರ್ಷ ವಯಸ್ಸಿನೊಳಗೆ ಮೂತ್ರನಾಳ ಸೋಂಕಿಗೆ ತುತ್ತಾಗುತ್ತಾರೆ. ಸುಮಾರು 50 ಪ್ರತಿಶತ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೂತ್ರನಾಳ ಸೋಂಕು ಅನುಭವಿಸುತ್ತಾರೆ. ಪುರುಷರಿಗಿಂತ ಮಹಿಳೆಯರು ಯುಟಿಐಗೆ ಏಕೆ ಹೆಚ್ಚು ತುತ್ತಾಗುತ್ತಾರೆ ಎಂಬುದು ಪ್ರಮುಖ ಪ್ರಶ್ನೆ.

    ಮೂತ್ರನಾಳ ಸೋಂಕು ಹರಡುವ ಅಪಾಯಕಾರಿ ಅಂಶಗಳು ಯಾವುವು?

    ಮಹಿಳೆಯರ ಮೂತ್ರನಾಳ ಪುರುಷರಿಗಿಂತ ವಿಭಿನ್ನವಾಗಿದೆ. ಅದಕ್ಕಾಗಿ ಯುಟಿಐ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ. ಮಹಿಳಾ ಆರೋಗ್ಯ ಕಚೇರಿ ವರದಿ ಪ್ರಕಾರ, ಮಹಿಳೆಯರಲ್ಲಿ ಯುಟಿಐ ಸೋಂಕು ಹೆಚ್ಚಾಗಿ ಕಂಡು ಬರುತ್ತವೆ. ಯಾಕಂದ್ರೆ ಮಹಿಳೆಯರ ಮೂತ್ರನಾಳ ಪುರುಷರಿಗಿಂತ ಚಿಕ್ಕದಾಗಿದೆ. ಇದು ಬ್ಯಾಕ್ಟೀರಿಯಾ ಮೂತ್ರಕೋಶ ಪ್ರವೇಶಿಸಲು ಸುಲಭ ಆಗುತ್ತದೆ.

    ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಯುಟಿಐ ಉಂಟಾಗುತ್ತದೆ

    ಮೂತ್ರಪಿಂಡದ ಕಲ್ಲುಗಳು ಯುಟಿಐ ಉಂಟಾಗುವ ಸಾಮಾನ್ಯ ಅಪಾಯಕಾರಿ ಅಂಶ ಆಗಿದೆ. ಇದು ನಿಮ್ಮ ಮೂತ್ರನಾಳವನ್ನು ನಿರ್ಬಂಧಿಸುತ್ತದೆ. ನಿಮ್ಮ ಎಲ್ಲಾ ಮೂತ್ರ ಹೊರ ಹಾಕಲು ಕಷ್ಟ ಆಗುತ್ತದೆ. ಮತ್ತು ಪರಿಣಾಮ ಬ್ಯಾಕ್ಟೀರಿಯಾ ಬೆಳೆಯುತ್ತವೆ.

    ಇದನ್ನೂ ಓದಿ: ಕೂದಲು, ನೆತ್ತಿಯ ರಕ್ಷಣೆಗೆ ಎಳ್ಳೆಣ್ಣೆಯ ಮಸಾಜ್! ಎಷ್ಟು ಪರಿಣಾಮಕಾರಿ?

    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಮತ್ತು ಕಿಡ್ನಿ ಡಿಸೀಸ್ (NIDDK) ಪ್ರಕಾರ, ಕಲ್ಲುಗಳ ರಚನೆ ಆನುವಂಶಿಕ. ಆದರೆ ಚೆನ್ನಾಗಿ ಹೈಡ್ರೀಕರಿಸಿದ ಸ್ಥಿತಿಯಲ್ಲಿರುತ್ತದೆ. ಹೆಚ್ಚು ಸೋಡಿಯಂ ನ್ನು ತಪ್ಪಿಸುವುದು ಮತ್ತು ನೀವು ಸೇವಿಸುವ ಪ್ರಾಣಿ ಪ್ರೋಟೀನ್ ನ್ನು ಮಿತಿಗೊಳಿಸುವುದು ಅವುಗಳನ್ನು ಪಡೆಯುವುದು ತಪ್ಪಿಸಲು ಸಹಾಯ ಮಾಡುತ್ತದೆ.

    ಲೈಂಗಿಕ ಕ್ರಿಯೆ ಮತ್ತು ಯುಟಿಐ ಅಪಾಯ

    ಸಂಭೋಗದಿಂದ ದೈಹಿಕ ದ್ರವಗಳು ಒಂದಕ್ಕೊಂದು ಬೆರೆಯುತ್ತವೆ. ಲೈಂಗಿಕವಾಗಿ ಬ್ಯಾಕ್ಟೀರಿಯಾಗಳು ಯೋನಿಯಿಂದ ಮೂತ್ರನಾಳಕ್ಕೆ ಚಲಿಸುತ್ತವೆ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಯುಟಿಐಗೆ ಹೆಚ್ಚಾಗಿ ತುತ್ತಾಗುತ್ತಾರೆ.

    ಯುಟಿಐ ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸೌಮ್ಯವಾದ ಸೋಪ್ ಮತ್ತು ನೀರಿನಿಂದ ಪ್ರದೇಶವನ್ನು ಸ್ವಚ್ಛವಾಗಿರಿಸುವುದು. ಮತ್ತು ಲೈಂಗಿಕತೆಯ ನಂತರ ಮೂತ್ರ ವಿಸರ್ಜನೆ ಮಾಡುವುದು.

    ಟಾಯ್ಲೆಟ್ ಪೇಪರ್ ತಪ್ಪಾದ ಬಳಕೆ ಮತ್ತು ಯುಟಿಐ ಅಪಾಯ

    ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಪ್ರಾಕ್ಟೀಸ್‌ನಲ್ಲಿ ಪ್ರಕಟವಾದ 2021 ರ ಅಧ್ಯಯನದ ಪ್ರಕಾರ, 719 ಮಹಿಳೆಯರಲ್ಲಿ 61.9 ಪ್ರತಿಶತ ಯುಟಿಐ ತಡೆಗಟ್ಟುವ ಮಾರ್ಗವಾಗಿ, ಟಾಯ್ಲೆಟ್ ಪೇಪರ್ ಅನ್ನು ಹೇಗೆ ಬಳಸುತ್ತೀರಿ ಎಂಬುದು ಸೋಂಕಿನ ಅಪಾಯ ಹೆಚ್ಚಿಸುತ್ತದೆ.

    ಮೂತ್ರವನ್ನು ದೀರ್ಘಕಾಲ ಹಿಡಿದಿಡುವುದು

    ನೀವು ಹೆಚ್ಚಿನ ಸಮಯ ಮೂತ್ರ ವಿಸರ್ಜನೆ ಹಿಡಿದಿಡುವುದು ನೀವು ಯಾವುದೇ ಸಮಯದಲ್ಲಿ ಯುಟಿಐ ಸೋಂಕಿಗೆ ಒಳಗಾಗುವಂತೆ ಮಾಡುತ್ತದೆ. ಕಾಲಕಾಲಕ್ಕೆ ಮೂತ್ರ ಖಾಲಿ ಮಾಡುವುದು ನಿಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಅಂತಹ ಸ್ಥಿತಿಯಲ್ಲಿ 3 ಗಂಟೆಗೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ತಡೆಯದಂತೆ ಸೂಚಿಸುತ್ತಾರೆ.

    ಅನಿಯಂತ್ರಿತ ಮಧುಮೇಹ ಮತ್ತು ಯುಟಿಐ ಅಪಾಯ

    ಮಧುಮೇಹ ರೋಗಿಗಳು ರಕ್ತದ ಸಕ್ಕರೆ ನಿಯಂತ್ರಿಸುವುದು ಮೂತ್ರದ ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ. ಮಧುಮೇಹ ಇರುವವರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಮೂತ್ರಕೋಶದ ರಕ್ತನಾಳಗಳಿಗೆ ರಕ್ತದ ಹರಿವು ಕಡಿಮೆಯಾಗುವುದು ಇದಕ್ಕೆ ಕಾರಣ. ಹಾಗಾಗಿ ಮೂತ್ರಕೋಶವು ಸರಿಯಾಗಿ ಸಂಕುಚಿತಗೊಳ್ಳಲು ಮತ್ತು ಅದನ್ನು ಸಂಪೂರ್ಣವಾಗಿ ಖಾಲಿ ಮಾಡಲು ಕಷ್ಟ.

    ಬಿಗಿಯಾದ ಒಳ ಉಡುಪು ಧರಿಸುವುದು

    ಬಿಗಿಯಾದ ಒಳ ಉಡುಪು, ವಿಶೇಷವಾಗಿ ಸ್ಪ್ಯಾಂಡೆಕ್ಸ್ ಅಥವಾ ನೈಲಾನ್ ಒಳ ಉಡುಪು ತೇವಾಂಶ ಉಂಟು ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಬೆಳೆಯುವಂತೆ ಮಾಡುತ್ತದೆ. ಆಗ ಹತ್ತಿ ಒಳ ಉಡುಪುಗಳ ಬಳಕೆ ಅಪಾಯ ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ತೂಕ ಇಳಿಸಲು ಈ ಡಯಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು ಎಚ್ಚರ!

    ದೇಹದಲ್ಲಿ ನೀರಿನ ಕೊರತೆ

    ನೀವು ಹೆಚ್ಚು ಬಾರಿ ಮೂತ್ರ ವಿಸರ್ಜಿಸಬೇಕಾದಾಗ ದೇಹವನ್ನು ಚೆನ್ನಾಗಿ ಹೈಡ್ರೇಟೆಡ್ ಆಗಿಡುವುದು ಯುಟಿಐ ಅಪಾಯ ಕಡಿಮೆ ಮಾಡುತ್ತದೆ. ನಿಯಮಿತ ಮೂತ್ರ ವಿಸರ್ಜನೆ ಬ್ಯಾಕ್ಟೀರಿಯಾ ಹೊರ ಹಾಕುತ್ತದೆ.
    Published by:renukadariyannavar
    First published: