• Home
  • »
  • News
  • »
  • lifestyle
  • »
  • Study Report: ಆಸ್ತಿ ಕಾಪಾಡಿಕೊಳ್ಳೋದೇ ಯುವಕರಿಗೆ ದೊಡ್ಡ ಚಿಂತೆಯಂತೆ! ನೀವು ಈ ವಿಚಾರದಲ್ಲಿ ಏನ್ಮಾಡ್ತಿದ್ದೀರಾ?

Study Report: ಆಸ್ತಿ ಕಾಪಾಡಿಕೊಳ್ಳೋದೇ ಯುವಕರಿಗೆ ದೊಡ್ಡ ಚಿಂತೆಯಂತೆ! ನೀವು ಈ ವಿಚಾರದಲ್ಲಿ ಏನ್ಮಾಡ್ತಿದ್ದೀರಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿಯೊಬ್ಬ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಪುರುಷ ತನ್ನ ಬಾಲ್ಯಾವಸ್ಥೆ, ಕಾಲೇಜು ಶಿಕ್ಷಣ ಮುಗಿಸಿದ ತರುವಾಯ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವಂತಹ ಪರಿಸ್ಥಿತಿಗೆ ತಳ್ಳಲ್ಪಡುತ್ತಾನೆ. ಈ ನಿಟ್ಟಿನಲ್ಲಿ ಆ ಯುವ ತರುಣ ತನ್ನ ಹಲವಾರು ಆಸೆ ಆಕಾಂಕ್ಷೆಗಳನ್ನು ಬಲಿ ನೀಡಬೇಕಾಗುತ್ತದೆ. ಇದೀಗ ಈ ನಿಟ್ಟಿನಲ್ಲಿ ನಡೆದಿರುವ ಸಮೀಕ್ಷೆಯೊಂದು ಇದೇ ರೀತಿಯ ಅಂಶಗಳನ್ನು ಹೊರಹಾಕಿದೆ. ರೋಹಿಣಿ ನಿಲೇಕಣಿ ಅವರ ನೇತೃತ್ವದಲ್ಲಿ ನಗರ ಜೀವನಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ಕೈಗೊಂಡಿದ್ದಾರೆ. 

ಮುಂದೆ ಓದಿ ...
  • Share this:

ಜೀವನ (Life) ಎಂಬುದು ಎಷ್ಟು ಸುಮಧುರ ಎಂದು ಒಮ್ಮೊಮ್ಮೆ ಅನಿಸುತ್ತದೆಯೋ ಅದು ಅಷ್ಟೇ ಜವಾಬ್ದಾರಿಯುತವೂ (Responsible) ಆಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಯೊಬ್ಬ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಪುರುಷ ತನ್ನ ಬಾಲ್ಯಾವಸ್ಥೆ, ಕಾಲೇಜು ಶಿಕ್ಷಣ (Education) ಮುಗಿಸಿದ ತರುವಾಯ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವಂತಹ ಪರಿಸ್ಥಿತಿಗೆ ತಳ್ಳಲ್ಪಡುತ್ತಾನೆ. ಈ ನಿಟ್ಟಿನಲ್ಲಿ ಆ ಯುವ ತರುಣ ತನ್ನ ಹಲವಾರು ಆಸೆ ಆಕಾಂಕ್ಷೆಗಳನ್ನು ಬಲಿ ನೀಡಬೇಕಾಗುತ್ತದೆ. ಇದೀಗ ಈ ನಿಟ್ಟಿನಲ್ಲಿ ನಡೆದಿರುವ ಸಮೀಕ್ಷೆಯೊಂದು (Survey) ಇದೇ ರೀತಿಯ ಅಂಶಗಳನ್ನು ಹೊರಹಾಕಿದೆ. ರೋಹಿಣಿ ನಿಲೇಕಣಿ ಅವರ ನೇತೃತ್ವದಲ್ಲಿ ನಗರ ಜೀವನಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ಕೈಗೊಂಡಿದ್ದಾರೆ. 


ಅದರ ಪ್ರಕಾರವಾಗಿ ನಗರ ಜೀವನಶೈಲಿಯಲ್ಲಿರುವ ಯುವ ಪುರುಷರು ತಮ್ಮ ಕುಟುಂಬದ ಹಾಗೂ ಇತರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಒತ್ತಡಕ್ಕೆ ಸಿಲುಕಿ ತಮ್ಮ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಇಟ್ಟುಕೊಳ್ಳುತ್ತಾರೆಂದು ತಿಳಿದುಬಂದಿದೆ.


ಸಮೀಕ್ಷಾ ಅಧ್ಯಯನದಲ್ಲಿ ತಿಳಿದುಬಂದಿರುವುದೇನು?
ಈ ಸಮೀಕ್ಷಾ ಅಧ್ಯಯನವನ್ನು ಇಂದಿನ ಯುವ ಸಮುದಾಯದವರು ಜೀವನದಲ್ಲಿ ಬರುವ ಹಲವು ಅಡ್ಡಿ-ಆತಂಕಗಳನ್ನು ಹೇಗೆ ನಿಭಾಯಿಸುತ್ತಾರೆ, ಸಂಬಂಧಗಳನ್ನು ಹೇಗೆ ನಿರ್ವಹಿಸುತ್ತಾರೆ ಹಾಗೂ ಆ ಸಂಬಂಧ ಅವರು ಏನೆಲ್ಲ ಅನುಭವಿಸುತ್ತಾರೆ ಎಂಬಂಶಗಳನ್ನು ಕೇಂದ್ರೀಕರಿಸಿ ನಡೆಸಲಾಗಿದೆ.


ಸದ್ಯ ಅಧ್ಯಯನದ ಅನುಸಾರ, ಹೇಗೆ ಒಂದು ಸಮಾಜದಲ್ಲಿ ಹೆಣ್ಣು ಹಲವು ಕಟ್ಟುಪಾಡುಗಳನ್ನು ಅನುಭವಿಸುತ್ತಾಳೋ ಅದೇ ರೀತಿಯಲ್ಲಿ ಯುವ ಪುರುಷರೂ ಸಹ ಸಣ್ಣ ವಯಸ್ಸಿನಲ್ಲೇ ಕುಟುಂಬದ ಹಲವು ಗುರುತರ ಜವಾಬ್ದಾರಿಗಳಿಗೆ ಒಳಗಾಗುತ್ತಾರೆ. ಪ್ರಾಥಮಿಕವಾಗಿ ಹುಡುಗರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ತರುವಾಯ ಕುಟುಂಬದಲ್ಲಿ ಅವರು ತಮ್ಮ ತಂದೆಯಂತೆಯೇ ಕುಟುಂಬಕ್ಕೆ ಆಧಾರ ಅಥವಾ ನೆರವಾಗುವಂತೆ ಆದಾಯಗಳಿಸುವುದನ್ನು ಅಪೇಕ್ಷಿಸಲಾಗುತ್ತದೆ. ಇದು ಆರ್ಥಿಕವಾಗಿ ಕಡಿಮೆ ಸ್ತರದಲ್ಲಿರುವ ಕುಟುಂಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.


ಯುವಕರ ಅಭಿಪ್ರಾಯ
ಈ ನಿಟ್ಟಿನಲ್ಲಿ ಹಲವು ಯುವಕರನ್ನು ಸಂದರ್ಶಿಸಲಾಗಿದ್ದು ಅವರು ವ್ಯಕ್ತಪಡಿಸಿರುವ ಅಭಿಪ್ರಾಯದಂತೆ, ಹಿಂದೆ ಹದಿಹರೆಯದವರಾಗಿದ್ದಾಗ ಅವರು ಅನುಭವಿಸುತ್ತಿದ್ದ ಸ್ವಾತಂತ್ರ್ಯ ಇದೀಗ ಕ್ರಮೇಣ ಕಡಿಮೆಯಾಗಿದೆ. ಕುಂಟುಂಬಕ್ಕೆ ಆಧಾರ ಹಾಗೂ ಅದ್ರಲ್ಲಿ ಅವರ ಪಾತ್ರ ಮತ್ತು ಅದಕ್ಕೂ ಮಿಗಿಲಾಗಿ ತಾವು ಪುರುಷರಾಗಿರುವ ಕಾರಣ ನಿರೀಕ್ಷಿಸುವ ಅಪೇಕ್ಷೆಗಳು ಹೆಚ್ಚಾಗಿರುತ್ತವೆ ಎಂದು ಇಂಡಿಯಾ ಡೆವೆಲಪ್ಮೆಂಟ್ ರಿವ್ಯೂನಲ್ಲಿ ಪ್ರಕಟಿಸಲಾದ ಅಧ್ಯಯನದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ:  Sleeping Habits: ನಿದ್ರೆ ಮಾಡುವಾಗ ಉಂಟಾಗುವ ಸಮಸ್ಯೆಗಳು ಆರೋಗ್ಯಕ್ಕೆ ಅಪಾಯಕಾರಿ


ಒತ್ತಡ
ಹುಡುಗರಲ್ಲಿ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಅವರು ಈ ಸ್ಪರ್ಧಾತ್ಮಕ ಕಾಲದಲ್ಲಿ ಅಗತ್ಯವಾಗಿರುವ ಶಿಕ್ಷಣ ಪಡೆದು ಉದ್ಯೋಗ ಪಡೆಯಲೇ ಬೇಕೆಂತಿರುತ್ತದೆ. ಬಹಳಷ್ಟು ಕುಟುಂಬಗಳು ಹುಡುಗರಿಗೆ ಆಸಕ್ತಿಕರವಾಗಿರುವ ಕ್ಷೇತ್ರಗಳಲ್ಲಿ ಅವರ ಭವಿಷ್ಯವನ್ನು ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ ಕಲೆ ಹಾಗೂ ದೇಹದಾರ್ಢ್ಯತೆಯಂತಹ ಕ್ಷೇತ್ರಗಳಲ್ಲಿ ಯಾವುದೇ ಭವಿಷ್ಯವಿಲ್ಲ ಎಂಬುದೇ ಬಹುತೇಕ ಕುಟುಂಬಗಳ ನಿಲುವಾಗಿರುತ್ತದೆ ಆದರೆ, ಅದಕ್ಕೆ ವಿರುದ್ಧವಾಗಿ ಆ ಹುಡುಗರಿಗೆ ಆ ಕ್ಷೇತ್ರಗಳಲ್ಲಿ ಸಾಕಷ್ಟು ಆಸಕ್ತಿ ಇರುತ್ತದೆ.


ಭಾವನೆಗಳ ಮೇಲೆ ನಿರ್ಬಂಧ
ಅಧ್ಯಯನದ ಪ್ರಕಾರ, ಹುಡುಗರಿಗೆ ಸಹಜವಾಗಿ ತಮ್ಮ ಭಾವನೆಗಳಾದ ದುಖ, ಅಸಹಾಯಕತೆಗಳಂತಹವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೂ ಅನೇಕ ಅಡ್ಡಿಗಳಿವೆ, ಹಾಗಾಗಿ ಅವರು ಅದನ್ನು ಒಳಗೊಳಗೆ ನುಂಗುತ್ತಲೇ ಇರಬೇಕು. ಕೊನೆಯಲ್ಲೊಮ್ಮೆ ಇದು ಅವರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಉಂಟಾಗಿ ಅವರು ಕೋಪ, ಹತಾಶೆ ವ್ಯಕ್ತಪಡಿಸುವಂತಾಗುತ್ತದೆ. ಅಲ್ಲದೆ, ಬರೆಯದೆ ಚಾಲ್ತಿಯಲ್ಲಿರುವಂತಹ ಸಮಾಜದ ಕೆಲ ಅಲಿಖಿತ ನಿಯಮಗಳಾದ ಇವನು ಪುರುಷ, ಇವನು ಗಂಡಸು ಎಂಬ ಬಿಗುಮಾನದ ಅಂಶಗಳು ಹುಡುಗರಿಗೆ ಮುಕ್ತವಾಗಿ ತಮ್ಮ ಭಯ-ಆತಂಕಗಳನ್ನು ವ್ಯಕ್ತಪಡಿಸುವಲ್ಲೂ ಬಾಧಕಗಳಾಗುತ್ತವೆ.


ಮದುವೆಯಾಗಿ ನೆಲೆಸುವ ನಿರೀಕ್ಷೆ
ಇನ್ನು ಕುಟುಂಬಗಳು ತಮ್ಮ ಮನೆಯ ಹುಡುಗ ಓದಿ, ಉದ್ಯೋಗ ಪಡೆದು ಮದುವೆಯಾಗಿ ನೆಲೆಸಬೇಕೆಂಬ ಅತಿಯಾದ ನಿರೀಕ್ಷೆ ಇಟ್ಟುಕೊಂಡಿರುತ್ತವೆ. ಇದಕ್ಕನುಗುಣವಾಗಿ ಸಂದರ್ಶಿಸಿದ ಹುಡುಗರು ಹೇಳಿಕೊಂಡಂತೆ ಅವರ ಪ್ರಥಮ ಹಾಗೂ ಆದ್ಯತೆಯ ಗುರಿ ಎಂದರೆ ಒಳ್ಳೆಯ ನೌಕರಿ ಪಡೆದು, ಮದುವೆಯಾಗಿ ಸಮಾಜದಲ್ಲಿ ಘನತೆಯುಕ್ತವಾಗಿ ಬದುಕುವುದೇ ಆಗಿದೆ.


ಇದನ್ನೂ ಓದಿ:  Vikram Betal: ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಿದ್ರೂ ಬದುಕಿಗೆ ಉರುಳಾಗಬಹುದು, ಕಥೆ ಹಿಂದಿದೆ ನೂರು ಅರ್ಥ


ಇನ್ನೂ ಕೆಲ ಸಂದರ್ಭಗಳಲ್ಲಿ ಮದುವೆಯಾಗುತ್ತಿರುವ ಹುಡುಗ ತನ್ನ ಸಂಗಾತಿ ಗಳಿಸುತ್ತಿರುವ ಆದಾಯಕ್ಕಿಂತಲೂ ಹೆಚ್ಚಿನ ಆದಾಯಗಳಿಸುತ್ತಿರಬೇಕೆಂಬ ಮಾನಸಿಕ ಒತ್ತಡದಿಂದ ಸಾಕಷ್ಟು ಬಳಲುತ್ತಾರೆ ಎಂದು ಅಧ್ಯಯನ ತಿಳಿಸುತ್ತದೆ. ಅಲ್ಲದೆ, ಹುಡುಗರು ಮದುವೆಯಾಗ ಬಯಸಿದಾಗ ಅದಕ್ಕೆ ಪಡೆಯಬೇಕಾಗಿರುವ ಕೆಲವು ಮೂಲಭೂತ ಅರ್ಹತೆಗಳಾದಂತಹ ಉತ್ತಮ ಉದ್ಯೋಗ, ಹೆಚ್ಚಿನ ಸಂಬಳ, ಉತ್ತಮ ಬಡಾವಣೆಯಲ್ಲಿ ವಾಸ್ತವ್ಯ, ಕಾರನ್ನು ಹೊಂದಿರುವುದು ಮುಂತಾದ ಅಂಶಗಳು ಹುಡುಗರು ಹೆಚ್ಚಿನ ಒತ್ತಡ ಅನುಭವಿಸುವಂತೆ ಮಾಡುತ್ತವೆ.


ನಿರೀಕ್ಷೆ ಹಿಂದಿನ ಸಮಯಕ್ಕಿಂತಲೂ ಇಂದು ಹೆಚ್ಚು
ಮದುವೆ ವಿಷಯಕ್ಕೆ ಬಂದಾಗ ಹಿಂದಿನ ತಲೆಮಾರಿನಲ್ಲೂ ಹುಡುಗ ಏನಾದರೂ ಒಂದು ಉದ್ಯೋಗ ಮಾಡಿಕೊಂಡಿರಬೇಕು, ತನ್ನ ಕುಟುಂಬಕ್ಕೆ ಆಹಾರ ಉಣಿಸಲು ಸಮರ್ಥನಾಗಿರಬೇಕು ಎಂಬ ನಿರೀಕ್ಷೆಗಳಿದ್ದವು. ಆದರೆ, ಅವು ಇಂದಿನ ದಿನಮಾನಗಳಲ್ಲಿದ್ದಂತೆ ಇರಲಿಲ್ಲ. ಇಂದು ನಿರೀಕ್ಷೆಗಳು ಮುಗಿಲಾಚೆ ದಾಟಿ ಹೋಗಿವೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಉದ್ಯೋಗ ಜಗತ್ತಿನಲ್ಲಿ ಸ್ಪರ್ಧಾತ್ಮಕತೆಯೂ ಹೆಚ್ಚಿರುವುದರಿಂದ ಹುಡುಗರು ಹೆಚ್ಚು ಹೆಚ್ಚು ಓದಿ ಒಳ್ಳೆಯ ಉದ್ಯೋಗಗಿಟ್ಟಿಸಿಕೊಳ್ಳುವ ಒತ್ತಡ ಅವರ ಮೇಲಿದೆ.


"ಈಗ ವ್ಯಕ್ತಿ ಅಥವಾ ಪುರುಷ ಶ್ರಮಜೀವಿ ಹಾಗೂ ತನ್ನೆಲ್ಲ ಕರ್ತವ್ಯ ನಿರ್ವಹಿಸುತ್ತಾನೆ ಎಂಬುದಷ್ಟೇ ಸಾಕಾಗುವುದಿಲ್ಲ, ಬದಲಾಗಿ ಅವನು ಮಾಡುವ ಎಲ್ಲ ಕೆಲಸಗಳಲ್ಲೂ ಯಶಸ್ವಿ ಆಗಲೇಬೇಕು, ಸಿರಿವಂತಿಕೆಯನ್ನು ಪಡೆಯಲೇ ಬೇಕು. ಹಾಗಾದಾಗ ಮಾತ್ರವೇ ಅವನು ಕುಟುಂಬದ ಇತರ ಸದಸ್ಯರ ವಿಶ್ವಾಸಕ್ಕೆ ಅರ್ಹನಾಗುತ್ತಾನೆ. ಕೇವಲ ಯಶಸ್ಸೊಂದೇ ಅಲ್ಲದೆ ಪ್ರತಿಷ್ಠೆ, ಗೌರವಗಳೂ ಸಮಾಜದಲ್ಲಿ ಇರಬೇಕು, ಆಗಲೇ ಆತ ಒಬ್ಬ ಫ್ಯಾಮಿಲಿ ಮ್ಯಾನ್" ಎಂದೆನಿಸಿಕೊಳ್ಳುತ್ತಾನೆ.


ಬಾಹ್ಯ ಲಕ್ಷಣಗಳು
ಇವುಗಳಲ್ಲದೆ, ಸಾಕಷ್ಟು ಮನೆ ಹಿರಿಯರು ಅದರಲ್ಲೂ ಪೋಷಕರು ತಮ್ಮ ಮಗನ ಬಾಹ್ಯ ಲಕ್ಷಣಗಳು ಹೀಗೆ ಇರಬೇಕು ಎಂದು ಬಯಸುತ್ತಾರೆ. ಅದು ಅವರ ಕೂದಲ ಶೈಲಿಯಿಂದ ಹಿಡಿದು ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು ಎಂಬುದರವರೆಗೂ ಇರುತ್ತದೆ. ಅಲ್ಲದೆ ಅವರು ಯಾವ ರೀತಿಯ ಸ್ನೇಹಿತರನ್ನು ಹೊಂದಿದ್ದಾರೆ ಎಂಬುದನ್ನೂ ಸಹ ಪೋಷಕರು ಹಾಗೂ ಶಿಕ್ಷಕರಿಂದ ಕಠಿಣವಾಗಿ ಗಮನಿಸಲಾಗುತ್ತದೆ.


ಇದನ್ನೂ ಓದಿ:  Dry Eye Remedy: ಒಣಕಣ್ಣು ಕಿರಿ ಕಿರಿ ಮಾಡ್ತಿದ್ರೆ ಮನೆಯಲ್ಲಿದೆ ಸಮಸ್ಯೆಗೆ ಪರಿಹಾರ


ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಅದೆಷ್ಟೋ ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಸಾಕಷ್ಟು ಬಾರಿ ಇಂತಹ ವಿಷಯಗಳಲ್ಲಿ ಅವರು ತಮ್ಮ ಪಾಲಕರಿಂದ ಹಾಗೂ ಶಿಕ್ಷಕರಿಂದ ಶಿಕ್ಷೆಯನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಧ್ಯಯನ ವರದಿಯು, "ಇದು ಸಾಮಜಿಕ ಚೌಕಟ್ಟಿನಲ್ಲಿ ಎಷ್ಟೊಂದು ಆಳವಾಗಿದೆ ಎಂದರೆ ಹಲವರು ಮಕ್ಕಳಿಗೆ ದೈಹಿಕ ಶಿಕ್ಷೆಯೇ ಸರಿಯಾದುದೆಂದು ಭಾವಿಸುತ್ತಾರೆ. ಅವರು ಈ ಕ್ರಮವನ್ನು ತಮ್ಮ ಅಸಮರ್ಥತೆಗಳನ್ನು ಮುಚ್ಚುವುದಕ್ಕಾಗಿ ಬಳಸುತ್ತಾರೆ" ಎಂದು ಹೇಳಿದೆ.

Published by:Ashwini Prabhu
First published: