UPSC CAPF 2020: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಉದ್ಯೋಗವಕಾಶ

ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಬಯಸುವವರು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್​ ಆಗಿರಬೇಕು. ಮತ್ತು ಅಧಿಕೃತ ದಾಖಲೆಯನ್ನು ಹೊಂದಿರಬೇಕು.

JOB

JOB

  • Share this:
    ಕೇಂದ್ರ ಸಶಸ್ತ್ರ ಪೊಲೀಸ್​ ಪಡೆ ಖಾಲಿ ಇರುವ (ಅಸಿಸ್ಟೆಂಟ್ ಕಮಾಂಡಂಟ್​)​​ ಹುದ್ದೆಗಳನ್ನು ಭರ್ತಿ ಮಾಡಲು ನೊಟೀಸ್​ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ವಿವರಗಳನ್ನು ಪರೀಕ್ಷಿಸಿ ನಂತರ ಅರ್ಜಿ ಸಲ್ಲಿಬೇಕಾಗಿ ತಿಳಿಸಿದೆ.

    ಹುದ್ದೆಗಳ ವಿವರ:

    ಯೂನಿಯನ್​ ಪಬ್ಲಿಕ್​ ಸರ್ವೀಸ್​​ ಕಮಿಷನ್ ಅಡಿಯಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್​ ಇಲಾಖೆ 209 ಖಾಲಿ ಇರುವ ಅಸಿಸ್ಟೆಂಟ್ ಕಮಾಂಡಂಟ್​​ ಹುದ್ದೆಗಳನ್ನು ಕರೆದಿದೆ

    ವಿದ್ಯಾರ್ಹತೆ:

    ಅರ್ಜಿ ಸಲ್ಲಿಸಲು ಬಯಸುವವರು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್​ ಆಗಿರಬೇಕು. ಮತ್ತು ಅಧಿಕೃತ ದಾಖಲೆಯನ್ನು ಹೊಂದಿರಬೇಕು.

    ವಯೋಮಿತಿ:

    ಆಸಕ್ತ ಅಭ್ಯರ್ಥಿಗಳು ವಯೋಮಿತಿ  ಕನಿಷ್ಠ 20 ವರ್ಷ, ಗರಿಷ್ಠ 25 ವರ್ಷಕ್ಕೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

    ಅರ್ಜಿ ಶುಲ್ಕ:

    ಸಾಮಾನ್ಯ ಅಭ್ಯರ್ಥಿಗಳು ರೂ. 200 ಅರ್ಜಿ ಶುಲ್ಕ ಪಾವತಿಸಬೇಕು. ಎಸ್​ಸಿ/ಎಸ್​ಟಿ/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಎಸ್​ಬಿಐ ಬ್ಯಾಂಕ್​​ , ನೆಟ್​​ಬ್ಯಾಂಕಿಂಗ್​, ಅಥವಾ ಆನ್​ಲೈನ್​ ಪೇಮೆಂಟ್​ ಮೋಡ್​ನಲ್ಲಿ ಪಾವತಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.09.2020

    ಅರ್ಜಿ ಹಿಂಪಡೆಯಲು ಕೊನ ದಿನಾಂಕ: 14ರಿಂದ 29.2020

    ಆನ್​ಲೈನ್​ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07.09.2020

    ಲಿಖಿತ ಪರೀಕ್ಷೆ: 20.12.2020
    Published by:Harshith AS
    First published: