• Home
  • »
  • News
  • »
  • lifestyle
  • »
  • Lip Care Tips: ತುಟಿಯ ಮೇಲ್ಭಾಗದ ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸೂಪರ್ ಟಿಪ್ಸ್!

Lip Care Tips: ತುಟಿಯ ಮೇಲ್ಭಾಗದ ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸೂಪರ್ ಟಿಪ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಮಹಿಳೆಯರು ಮೇಲಿನ ತುಟಿ ಪ್ರದೇಶದಲ್ಲಿ ಬೆವರು ಹೊಂದುತ್ತಾರೆ. ಇದು ತುಟಿಯ ಮೇಲ್ಭಾಗದ ಪ್ರದೇಶವನ್ನು ಕಪ್ಪಾಗಿ ಕಾಣುವಂತೆ ಮಾಡುತ್ತದೆ. ಜನರು ಸಾಮಾನ್ಯವಾಗಿ ತುಟಿಗಳನ್ನು ಗುಲಾಬಿ ಬಣ್ಣಕ್ಕೆ ತರಲು ಅನೇಕ ರೀತಿಯ ಪರಿಹಾರ ಹಾಗೂ ಮನೆಮದ್ದು ಮಾಡಲು ಪ್ರಯತ್ನಿಸುತ್ತಾರೆ.

  • Share this:

    ಸ್ಕಿನ್ ಕೇರಿಂಗ್ (Skin Caring) ಮಾಡುವುದು ಎಲ್ಲಾ ಋತುಮಾನಗಳಲ್ಲಿ ತುಂಬಾ ಸುಲಭ (Very Easy). ಆದರೆ ಚಳಿಗಾಲದಲ್ಲಿ (Winter) ನೀವು ಚರ್ಮದ ಆರೈಕೆ (Skin Care) ಮಾಡುವುದು ತುಂಬಾ ಮುಖ್ಯವಾದ ವಿಚಾರ ಆಗಿದೆ. ತ್ವಚೆಯ ಆರೈಕೆಗೆ ಚಳಿಗಾಲದ ಗಾಳಿ ತ್ವಚೆಯನ್ನು ಬಿರಿಯುವಂತೆ ಮತ್ತು ಒಣಗಲು (Dry) ಕಾರಣ ಆಗುತ್ತದೆ. ಅದಾಗ್ಯೂ ನಿಮ್ಮ ಮುಖವು (Face) ಹೊಳೆಯುತ್ತಿದ್ದು, ನಿಮ್ಮ ಮೇಲಿನ ತುಟಿಯ ಚರ್ಮ ಕಪ್ಪಾಗಿದ್ದರೆ ನೀವು ಹೆಚ್ಚು ಒತ್ತಡ ಅನುಭವಿಸುತ್ತೀರಿ. ಯಾಕಂದ್ರೆ ತುಟಿಯ ಮೇಲ್ಭಾಗವು ಕಪ್ಪಾಗುವುದು, ಮುಖವನ್ನು ಚೆನ್ನಾಗಿ ಕಾಣದಂತೆ ತಡೆಯುತ್ತದೆ. ಇದರಿಂದ ನಿಮ್ಮ ಮುಖವು ವಿಚಿತ್ರವಾಗಿ ಕಾಣಲು ಶುರುವಾಗಲು ಕಾರಣ ಆಗುತ್ತದೆ.


    ತುಟಿಯ ಮೇಲ್ಭಾಗದ ಪ್ರದೇಶದ ಕಾಳಜಿ


    ಅನೇಕ ಮಹಿಳೆಯರು ಮೇಲಿನ ತುಟಿ ಪ್ರದೇಶದಲ್ಲಿ ಮೇಣ ಹೊಂದುತ್ತಾರೆ. ಮತ್ತು ಬೆವರು ಕೂಡ ಇಲ್ಲಿ ಹೆಚ್ಚು ಬರುತ್ತದೆ. ಇದು ತುಟಿಯ ಮೇಲ್ಭಾಗದ ಪ್ರದೇಶವನ್ನು ಕಪ್ಪಾಗಿ ಕಾಣುವಂತೆ ಮಾಡುತ್ತದೆ. ಜನರು ಸಾಮಾನ್ಯವಾಗಿ ತುಟಿಗಳನ್ನು ಗುಲಾಬಿ ಬಣ್ಣಕ್ಕೆ ತರಲು ಅನೇಕ ರೀತಿಯ ಪರಿಹಾರ ಹಾಗೂ ಮನೆಮದ್ದು ಮಾಡಲು ಪ್ರಯತ್ನಿಸುತ್ತಾರೆ.


    ಇಂದು ನಾವು ತುಟಿಗಳ ಮೇಲಿನ ಪಿಗ್ಮೆಂಟೇಶನ್ ನ್ನು ತೊಡೆದು ಹಾಕಲು ಇಲ್ಲಿ ಕೆಲವು ಸಲಹೆ ಬಗ್ಗೆ ತಿಳಿಯೋಣ. ಮೇಲ್ತುಟಿಯ ಪಿಗ್ಮೆಂಟೇಶನ್ ನ್ನು ಹೇಗೆ ತೆಗೆದು ಹಾಕುವುದು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ಪಿಗ್ಮೆಂಟೇಶನ್ ಎಂದರೇನು?


    ಪಿಗ್ಮೆಂಟೇಶನ್ ಎಂದರೆ ಚರ್ಮದ ಮೇಲಿನ ಕಪ್ಪು ಕಲೆಗಳು. ಅಥವಾ ಚರ್ಮದ ಮೇಲಿನ ಒಂದು ಪ್ರದೇಶದ ಬಣ್ಣ ಕಳೆಗುಂದುವುದು, ಕಪ್ಪಾಗುವುದು ಅಥವಾ ಇತರ ಪ್ರದೇಶಕ್ಕಿಂತ ಗಾಢವಾಗಿ ಇರುವುದು ಆಗಿದೆ. ಹೀಗೆ ಉಂಟಾಗುವ ಪಿಗ್ಮೆಂಟೇಶನ್ ಉಂಟಾಗಲು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅವಶ್ಯಕ.


    ಇಲ್ಲದೇ ಹೋದ್ರೆ ಮೇಲ್ತುಟಿಯ ಪ್ರದೇಶ ಕಾಲಾನಂತರದಲ್ಲಿ ಹೆಚ್ಚು ಗಾಢ ಆಗುತ್ತದೆ. ಆದರೆ ಇದಕ್ಕಾಗಿ ನೀವು ಪಾರ್ಲರ್‌ ಹೋಗಿ ದುಬಾರಿ ಪ್ಯಾಕೇಜ್‌ ಪಡೆಯುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲೇ ಸಿಂಪಲ್ ಪರಿಹಾರ ಮಾಡಿ. ಇದು ಮೇಲಿನ ತುಟಿಯ ಪಿಗ್ಮೆಂಟೇಶನ್ ಸಮಸ್ಯೆಗೆ ಪರಿಹಾರ ನೀಡುತ್ತದೆ.


    ನಿಮ್ಮ ತುಟಿಯ ಮೇಲ್ಭಾಗದ ಪ್ರದೇಶ ಮತ್ತು ಕಪ್ಪು ತುಟಿಗಳನ್ನು ತಿಳಿಗೊಳಿಸುವ ಟಿಪ್ಸ್ ಹೀಗಿದೆ


    ನಿಂಬೆ ಮತ್ತು ಸಕ್ಕರೆ ಜೊತೆ ಸ್ಕ್ರಬ್ ಮಾಡಿ


    ತುಟಿಗಳ ಮೇಲಿನ ಕಪ್ಪು ಬಣ್ಣ ತೆಗೆದು ಹಾಕಲು ನೀವು ನಿಂಬೆ ಮತ್ತು ಸಕ್ಕರೆ ಸ್ಕ್ರಬ್ ಅನ್ನು ಪ್ರಯತ್ನಿಸಬಹುದು. ನಿಂಬೆಯಲ್ಲಿ ಸಿಟ್ರಿಕ್ ಆಸಿಡ್ ಗುಣವಿದೆ. ತ್ವಚೆಯ ಮೇಲಿನ ಕಪ್ಪನ್ನು ಕಡಿಮೆ ಮಾಡುತ್ತದೆ ಮತ್ತು ಸಕ್ಕರೆ ಚರ್ಮವನ್ನು ತೇವಗೊಳಿಸುತ್ತದೆ.


    ನಿಂಬೆ ಮತ್ತು ಸಕ್ಕರೆಯನ್ನು ಹೀಗೆ ಬಳಸಿ


    ತುಟಿಗಳ ಮೇಲಿನ ಕಪ್ಪು ಬಣ್ಣ ತೆಗೆದು ಹಾಕಲು ನೀವು ಒಂದು ಬಟ್ಟಲಿನಲ್ಲಿ ಅರ್ಧ ಟೀಚಮಚ ಸಕ್ಕರೆಯಲ್ಲಿ ಅರ್ಧ ನಿಂಬೆ ರಸ ಮಿಶ್ರಣ ಮಾಡಬೇಕು. ಮತ್ತು ಮೇಲಿನ ತುಟಿಯ ಪ್ರದೇಶದಲ್ಲಿ ಲಘುವಾದ ಕೈಗಳಿಂದ 2 ರಿಂದ 3 ನಿಮಿಷದವರೆಗೆ ಮಸಾಜ್ ಮಾಡಿ. ಮತ್ತು ನಂತರ ಅದನ್ನು ಸರಳ ನೀರಿನಿಂದ ತೊಳೆಯಿರಿ.


    ಆಲೂಗಡ್ಡೆ ರಸ ಅದ್ಭುತ ಪರಿಹಾರ


    ಆಲೂಗಡ್ಡೆ ರಸವು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಇದನ್ನು ತುಟಿಗಳ ಮೇಲಿನ ಭಾಗದಿಂದ ವರ್ಣದ್ರವ್ಯ ತೆಗೆದು ಹಾಕಲು ಬಳಸುವ ಪದಾರ್ಥ ಆಗಿದೆ.


    ಆಲೂಗಡ್ಡೆ ರಸವನ್ನು ಹೀಗೆ ಬಳಸಿ


    ತಾಜಾ ಆಲೂಗಡ್ಡೆ ರಸವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮೇಲಿನ ತುಟಿಗೆ ಹಚ್ಚಿ ಮತ್ತು ಸುಮಾರು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ಸ್ವಚ್ಛಗೊಳಿಸಿ.


    ಅರಿಶಿನವು ಔಷಧೀಯ ಗುಣ ಮತ್ತು ಪಿಗ್ಮೆಂಟೇಶನ್ ಗೆ ಪರಿಹಾರ ನೀಡುತ್ತದೆ


    ಅರಿಶಿನವು ಯಾವಾಗಲೂ ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ ಆಗಿದೆ. ಮತ್ತು ತುಟಿಗಳ ಮೇಲಿನ ಭಾಗದಲ್ಲಿ ಕಪ್ಪು ಕಲೆ ತೆಗೆದು ಹಾಕಲು ಸಹ ಬಳಕೆ ಮಾಡಲಾಗುತ್ತದೆ.


    ಅರಿಶಿನವನ್ನು ಹೀಗೆ ಬಳಸಿ


    ಒಂದು ಚಮಚ ತಾಜಾ ಟೊಮೆಟೊ ರಸದಲ್ಲಿ ಒಂದು ಪಿಂಚ್ ಅರಿಶಿನ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಪೀಡಿತ ಪ್ರದೇಶಕ್ಕೆ ಸುಮಾರು 10 ನಿಮಿಷ ಅನ್ವಯಿಸಿ. ಮತ್ತು ನಂತರ ಅದನ್ನು ಸರಳ ನೀರಿನಿಂದ ತೊಳೆಯಿರಿ.


    ಕಿತ್ತಳೆ ಸಿಪ್ಪೆ ಪರಿಣಾಮಕಾರಿ ಆಗಿದೆ


    ವಿಟಮಿನ್ ಸಿ ಕಿತ್ತಳೆಯಲ್ಲಿ ಹೇರಳವಾಗಿದೆ. ಕಿತ್ತಳೆ ಸಿಪ್ಪೆಯು ತುಟಿಗಳ ಮೇಲಿನ ಕಪ್ಪು ಬಣ್ಣ ಕಡಿಮೆ ಮಾಡಲು ಪರಿಣಾಮಕಾರಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ 


    ಕಿತ್ತಳೆ ಸಿಪ್ಪೆ ಹೀಗೆ ಬಳಸಿ


    ಒಂದು ಬಟ್ಟಲಿನಲ್ಲಿ ಅರ್ಧ ಚಮಚ ಕಿತ್ತಳೆ ಸಿಪ್ಪೆ ಪುಡಿ ಮತ್ತು ಅರ್ಧ ಚಮಚ ಮೊಸರನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮೇಲಿನ ತುಟಿ ಪ್ರದೇಶಕ್ಕೆ ಹಚ್ಚಿ. ಹದಿನೈದು ನಿಮಿಷಗಳ ನಂತರ ತಣ್ಣೀರಿನಿಂದ ಮುಖ ಸ್ವಚ್ಛಗೊಳಿಸಿ.

    Published by:renukadariyannavar
    First published: