• Home
  • »
  • News
  • »
  • lifestyle
  • »
  • Coconut Milk Upma: ಉಪ್ಪಿಟ್ಟು ತಿನ್ನಲ್ಲ ಅನ್ನೋರಿಗೂ ಇಷ್ಟವಾಗುತ್ತೆ ಕೊಕೋನಟ್ ಮಿಲ್ಕ್ ಉಪ್ಮಾ: ಇಲ್ಲಿದೆ ಕೇರಳ ಶೈಲಿಯ ರೆಸಿಪಿ

Coconut Milk Upma: ಉಪ್ಪಿಟ್ಟು ತಿನ್ನಲ್ಲ ಅನ್ನೋರಿಗೂ ಇಷ್ಟವಾಗುತ್ತೆ ಕೊಕೋನಟ್ ಮಿಲ್ಕ್ ಉಪ್ಮಾ: ಇಲ್ಲಿದೆ ಕೇರಳ ಶೈಲಿಯ ರೆಸಿಪಿ

ಉಪ್ಮಾ

ಉಪ್ಮಾ

ಇಂದು ಈ ಎರಡು ಪದಾರ್ಥ ಬಳಸಿ ಕೊಕೊನಟ್ ಮಿಲ್ಕ್ ಉಪ್ಮಾ ಹೇಗೆ ತಯಾರು ಮಾಡಲಾಗುತ್ತೆ ಎಂಬುದರ ರಸಿಪಿ ಇಲ್ಲಿದೆ.

  • Share this:

ಬಹುತೇಕರು ಉಪ್ಪಿಟ್ಟು (Uppittu/ Upma) ಅಂದ್ರೆ ಸಾಕು ಮುಖ ಸಿಂಡರಿಸಿಕೊಂಡು ತಾಯಿಯ ಮುಂದೆ ಉಗ್ರ ಹೋರಾಟ ಮಾಡೋಕೆ ಮುಂದಾಗುತ್ತಾರೆ. ಆದ್ರೆ ಉಪ್ಪಿಟ್ಟು ರುಚಿ ಮತ್ತು ಆರೋಗ್ಯಕರಯಾದ ತಿಂಡಿಯಾಗಿದ್ದು (Tasty And Healthy Breakfast), ಮಕ್ಕಳ ಹೊಟ್ಟೆ ತುಂಬುವ ಆಹಾರ ಪದಾರ್ಥವಾಗಿದೆ. ಇನ್ನು ಉಪ್ಪಿಟ್ಟು  ಆಯಾ ಭಾಗದಲ್ಲಿ ತನ್ನ ರುಚಿಯನ್ನು ಬದಲಿಸಿಕೊಂಡಿದೆ. ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಜನರು ಉಪ್ಪಿಟ್ಟು (Uppittu Recipe) ಮಾಡುವಾಗ ಅದಕ್ಕೆ ವಿವಿಧ ಕಾಳುಗಳನ್ನು ಸೇರಿಸುತ್ತಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ರುಚಿಯಾದ ಮತ್ತು ಘಮ ಘಮಿಸುವ ಉಪ್ಪಿಟ್ಟು ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿಸಲಾಗಿದೆ. ಇಂದು ನಾವು ಕೇರಳ ಶೈಲಿಯ ತೆಂಗಿನಕಾಯಿ ಮಿಲ್ಕ್ ಉಪ್ಪಿಟ್ಟು (Coconut Milk Upma Recipe) ಹೇಗೆ ತಯಾರಿಸುರತ್ತಾರೆ ಎಂಬುದನ್ನು ನೋಡೋಣ.


ಕೇರಳ ಭಾಗದ ಜನರು ತಮ್ಮ ಪ್ರತಿಯೊಂದು ಅಡುಗೆಯಲ್ಲಿ ಹಸಿ ಕೊಬ್ಬರಿ ತುರಿ ಬಳಸುತ್ತಾರೆ. ಅದರ ಜೊತೆಗೆ ಒಗ್ಗರಣೆಗೆ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಕೊಬ್ಬರಿ ಎಣ್ಣೆ ಬಳಕೆ ಮಾಡೋದರಿಂದ ರುಚಿಯ ಬದಲಾಗುತ್ತದೆ. ಇಂದು ಈ ಎರಡು ಪದಾರ್ಥ ಬಳಸಿ ಕೊಕೋನಟ್ ಮಿಲ್ಕ್ ಉಪ್ಮಾ ಹೇಗೆ ತಯಾರು ಮಾಡಲಾಗುತ್ತೆ ಎಂಬುದರ ರಸಿಪಿ ಇಲ್ಲಿದೆ.


ಕೊಕೋನಟ್ ಮಿಲ್ಕ್ ಉಪ್ಮಾ ಮಾಡಲು ಬೇಕಾಗುವ ಸಾಮಾಗ್ರಿಗಳು


ಚಿರೋಟಿ ರವೆ: 100 ಗ್ರಾಂ/ ಒಂದು ಕಪ್


ಹಸಿ ತೆಂಗಿನ ತುರಿ: ಅರ್ಧ ಕಪ್


ತೆಂಗಿನ ಹಾಲು: ಒಂದು ಕಪ್


ಈರುಳ್ಳಿ: ಒಂದು (ಚಿಕ್ಕದು)


ಟೊಮಾಟೋ: ಒಂದು (ಚಿಕ್ಕದು)


ಹಸಿಮೆಣಸಿಕಾಯಿ: 2 ರಿಂದ 3


ಎಣ್ಣೆ: 4 ರಿಂದ 5 ಟೀ ಸ್ಪೂನ್


ತುಪ್ಪು; 1 ಟೀ ಸ್ಪೂನ್


ಗೋಡಂಬಿ: 4 ರಿಂದ 5


ಕಡಲೆಬೀಜ: 5 ರಿಂದ 6


ಕರಿಬೇವು: 5 ರಿಂದ 6 ಎಲೆ


ಸಾಸವೆ ಮತ್ತು ಜೀರಿಗೆ; ಒಂದು ಟೀ ಸ್ಪೂನ್


ಕೋತಂಬರಿ ಸೊಪ್ಪು


ಉಪ್ಪು: ರುಚಿಗೆ ತಕ್ಕಷ್ಟು


ಕೊಕೊನಟ್ ಮಿಲ್ಕ್ ಉಪ್ಮಾ ಮಾಡುವ ವಿಧಾನ


*ಮೊದಲಿಗೆ ರವೆಯನ್ನು ಸ್ವಚ್ಛ ಮಾಡಿಕೊಂಡು ಒಂದು ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಹುರಿದುಕೊಳ್ಳಿ.


*ಈಗ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮಾಟೋ ಮತ್ತು ಕೊತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.


ಇದನ್ನೂ ಓದಿ:  Breakfast Recipe: ಬೇಡ ಬೇಡ ಅನ್ನೋರು ಸಹ ಚಪ್ಪರಿಸಿಕೊಂಡು ತಿಂತಾರೆ ‘ಮಜ್ಜಿಗೆ ಉಪ್ಪಿಟ್ಟು’; ಇಲ್ಲಿದೆ ಸ್ಪೆಷಲ್ ರೆಸಿಪಿ


*ತದನಂತರ ದೊಡ್ಡದಾದ ಪ್ಯಾನ್ ಒಲೆ ಮೇಲೆ ಇರಿಸಿಕೊಂಡು ಸ್ಟೌವ್ ಆನ್ ಮಾಡಿಕೊಳ್ಳಿ. ಪ್ಯಾನ್ ಬಿಸಿಯಾಗುತ್ತಿದ್ದಂತೆ ಕೊಬ್ಬರಿ ಎಣ್ಣೆ  ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ. ಸಾಸವೆ ಸಿಡಿಯುತ್ತಿದ್ದಂತೆ ಕರಿಬೇವು, ಗೋಡಂಬಿ ಮತ್ತು ಕಡಲೆಬೀಜ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.


*ಕಡಲೆಬೀಜ ಮತ್ತು ಗೋಡಂಬಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಸಿಮೆಣಸಿನಕಾಯಿ ಮತ್ತು ಟೊಮಾಟೋ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.


*ತದನಂತರ ಕೊಬ್ಬರಿ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಈ ವೇಳೆ ಕೊಬ್ಬರಿಯ ಪರಿಮಳ ಬರುತ್ತಿದ್ದಂತೆ ರವೆ ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.


*ರವೆ ಎಲ್ಲಾ ಮಸಾಲೆಯೊಂದಿಗೆ ಬೆರೆಯುತ್ತಿದ್ದಂತೆ ಒಂದೂವರೆ ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿ. ರವೆ ಕೊತ ಕೊತ ಎಂದು ಕುದಿಯುತ್ತಿರುವಾಗ, ಈಗ ಕೊಬ್ಬರಿ ಹಾಲು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ  ಕೋತಂಬರಿ ಸೊಪ್ಪು ಉದುರಿಸಿ ಮುಚ್ಚಳ ಮುಚ್ಚಿ ಸ್ಟೌವ್ಅಫ್ ಮಾಡಿ. 5 ರಿಂದ 6 ನಿಮಿಷದ ಬಳಿಕ ಮುಚ್ಚಳ ತೆಗೆದ್ರೆ ಕೊಕೊನಟ್ ಮಿಲ್ಕ್ ಉಪ್ಮಾ ಸವಿಯಲು ಸಿದ್ಧ.


ಇದನ್ನೂ ಓದಿ: Breakfast Recipe: ಉಪ್ಪಿಟ್ಟನ್ನು ಮತ್ತಷ್ಟು ರುಚಿಯಾಗಿಸಲು ಈ ಪದಾರ್ಥಗಳನ್ನ ಬಳಿಸಿ


ಗಮನಿಸಿ: ನಿಮಗೆ ಕೊಬ್ಬರಿ ಹಾಲಿ ಮಾಡಿಕೊಳ್ಳಲು ಬರದಿದ್ರೆ ಅಂಗಡಿಯಲ್ಲಿ ಸಿಗುವ ಕೊಕೊನಟ್ ಮಿಲ್ಕ್ ಬಳಸಬಹುದು. ಒಗ್ಗರಣೆ ಹಾಕುವಾಗ ಕೊಬ್ಬರಿ ಎಣ್ಣೆ ಬದಲಾಗಿ ಸಾಧಾರಣ ಎಣ್ಣೆ ಸಹ ಬಳಸಬಹುದು.

Published by:Mahmadrafik K
First published: