ಗರ್ಭಾವಸ್ಥೆ, ಡಯಾಬಿಟೀಸ್ ಮತ್ತು ನಿಮ್ಮ ಕಣ್ಣುಗಳ ಅಸಾಮಾನ್ಯ ಸಂಗತಿ

ಸಾಕಷ್ಟು ಜನರು ಡಯಾಬಿಟೀಸ್ ಕುರಿತು ಯೋಚಿಸುವಾಗ ಅವರು ಟೈಪ್ 1 (ಆಟೊಇಮ್ಯೂನ್) ಡಯಾಬಿಟೀಸ್ ಮತ್ತು ಟೈಪ್ 2 (ಅಡಲ್ಟ್-ಆನ್‌ಸೆಟ್ ಅಥವಾ ಆಹಾರ-ಸಂಬಂಧಿ) ಡಯಾಬಿಟೀಸ್ ಕುರಿತು ಯೋಚಿಸುತ್ತಾರೆ. ಆದರೆ ಮೂರನೇ ವಿಧದ ಡಯಾಬಿಟೀಸ್ ಸಹ ಇದ್ದು ಅದಕ್ಕೂ ಇಷ್ಟೇ ಕಾಳಜಿ ವಹಿಸುವ ಅಗತ್ಯವಿದೆ.

Pregnancy Diabetes and Eye Connection

Pregnancy Diabetes and Eye Connection

 • Share this:
  ನಿಮ್ಮ ವೈದ್ಯರ ಬಳಿ ನೀವು ಹೋದಾಗ, ನಿಮಗೆ ಡಯಾಬಿಟೀಸ್ ಅಥವಾ ಅಧಿಕ ರಕ್ತದೊತ್ತಡ ಇದೆಯೇ ಎಂದು ತಪ್ಪದೇ ಕೇಳಿರುತ್ತಾರೆ. ಇದು ಬಹುತೇಕ ದೇಹದ ಪ್ರತಿಯೊಂದು ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುವುದರಿಂದಾಗಿ ಅವರು ಇದನ್ನೆಲ್ಲಾ ವಿಚಾರಿಸುತ್ತಾರೆ. ಭಾರತದ 2019ರ ವಯಸ್ಕರ ಜನಸಂಖ್ಯೆಯಲ್ಲಿ ಡಯಾಬಿಟೀಸ್‌ನ ಸುಮಾರು 77 ಮಿಲಿಯನ್ ಪ್ರಕರಣಗಳು ಇವೆ ಎಂದು ದಿ ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ ಅಟ್ಲಾಸ್ 2019 ಅಂದಾಜು ಮಾಡಿದೆಪ್ರಮುಖವಾಗಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಗರ್ಭಿಣಿಯರಲ್ಲಿ ಉಂಟಾಗುವ ಡಯಾಬಿಟಿಕ್ ರೆಟಿನೋಪಥಿ.


  ಸಾಕಷ್ಟು ಜನರು ಡಯಾಬಿಟೀಸ್ ಕುರಿತು ಯೋಚಿಸುವಾಗ ಅವರು ಟೈಪ್ 1 (ಆಟೊಇಮ್ಯೂನ್) ಡಯಾಬಿಟೀಸ್ ಮತ್ತು ಟೈಪ್ 2 (ಅಡಲ್ಟ್-ಆನ್‌ಸೆಟ್ ಅಥವಾ ಆಹಾರ-ಸಂಬಂಧಿ) ಡಯಾಬಿಟೀಸ್ ಕುರಿತು ಯೋಚಿಸುತ್ತಾರೆ. ಆದರೆ ಮೂರನೇ ವಿಧದ ಡಯಾಬಿಟೀಸ್ ಸಹ ಇದ್ದು ಅದಕ್ಕೂ ಇಷ್ಟೇ ಕಾಳಜಿ ವಹಿಸುವ ಅಗತ್ಯವಿದೆ: ಅದು ಗರ್ಭಾವಸ್ಥೆಯ ಡಯಾಬಿಟೀಸ್. ಒಬ್ಬ ಮಹಿಳೆ ಈ ಹಿಂದೆ ಎಂದಿಗೂ ಡಯಾಬಿಟೀಸ್ ಲಕ್ಷಣಗಳನ್ನು ಹೊಂದಿಲ್ಲದಿದ್ದರೂ ಗರ್ಭಾವಸ್ಥೆಯ ಸಮಯದಲ್ಲಿ ಡಯಾಬಿಟೀಸ್ ಕಂಡುಬಂದರೆ ಆಗ ಗರ್ಭಾವಸ್ಥೆಯ ಡಯಾಬಿಟೀಸ್‌ನ ರೋಗನಿರ್ಣಯ ಮಾಡಲಾಗುತ್ತದೆ2.

  ಗರ್ಭಾವಸ್ಥೆಯ ಡಯಾಬಿಟೀಸ್ ಮತ್ತು ಡಯಾಬಿಟಿಕ್ ರೆಟಿನೋಪಥಿ
  ಗರ್ಭಾವಸ್ಥೆಯ ಅವಧಿಯಲ್ಲಿ, ಮಹಿಳೆಯ ದೇಹದೊಳಗೆ ಸಾಕಷ್ಟು ಸಂಗತಿಗಳು ನಡೆಯುತ್ತಿರುತ್ತವೆ ಹಾಗೂ ದೇಹ ತನ್ನನ್ನು ತಾನು ನಿಯಂತ್ರಿಸುವ ವಿಧಾನದೊಂದಿಗೆ ಡಯಾಬಿಟೀಸ್ ಮಧ್ಯ ಪ್ರವೇಶಿಸುತ್ತದೆ. ಸರಿಯಾಗಿ ನಿರ್ವಹಿಸದಿದ್ದರೆ ಅಥವಾ ಚಿಕಿತ್ಸೆ ಪಡೆಯದಿದ್ದರೆ ಗರ್ಭಾವಸ್ಥೆಯ ಅವಧಿಯಲ್ಲಿ ಮತ್ತು ನಂತರದಲ್ಲಿ ಈ ಗರ್ಭಾವಸ್ಥೆಯ ಡಯಾಬಿಟೀಸ್ ಎಂಬುದು ತಾಯಿ ಹಾಗೂ ಮಗುವಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಉದಾಹರಣೆಗೆ, ಗರ್ಭಾವಸ್ಥೆಯ ಡಯಾಬಿಟೀಸ್ ಗರ್ಭಾವಸ್ಥೆಯ ಅವಧಿಯ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ್ದು, ಅದು ಮಹಿಳೆಯು ಹೆರಿಗೆಯ ಸಂದರ್ಭದಲ್ಲಿ ಪಾರ್ಶ್ವವಾಯು ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಕ್ಕೆ ಒಳಗಾಗುವುದನ್ನು ಹೆಚ್ಚಿಸುತ್ತದೆ. ನಿರ್ವಹಿಸದೇ ಇರುವ ಗರ್ಭಾವಸ್ಥೆಯ ಡಯಾಬಿಟೀಸ್, ಮಗು ಜನಿಸಿದ ನಂತರ ಆ ಮಗು ಕಡಿಮೆ ಬ್ಲಡ್ ಶುಗರ್ ಹೊಂದುವುದಕ್ಕೆ ಕಾರಣವಾಗಬಹುದು.

  ಪ್ರಮುಖವಾಗಿ ಗಮನಿಸಬೇಕಾದ ಇನ್ನೊಂದು ಸಂಗತಿ ಎಂದರೆ ಗರ್ಭಿಣಿಯರಲ್ಲಿ ಉಂಟಾಗುವ ಡಯಾಬಿಟಿಕ್ ರೆಟಿನೋಪಥಿ.

  ಡಯಾಬಿಟಿಕ್ ರೆಟಿನೋಪಥಿ ಎಂಬುದು ಒಂದು ಕಣ್ಣಿನ ಸ್ಥಿತಿಯಾಗಿದ್ದು, ಚಿಕಿತ್ಸೆ ನೀಡದಿದ್ದರೆ ಅದು ದೃಷ್ಟಿಹೀನತೆ ಮತ್ತು ಸಂಪೂರ್ಣ ಅಂಧತ್ವಕ್ಕೂ ಸಹ ಕಾರಣವಾಗಬಹುದು. ಡಯಾಬಿಟೀಸ್ ಕಾಯಿಲೆಯು ರೆಟಿನೋಪಥಿಯನ್ನು ಉಂಟು ಮಾಡುತ್ತದೆ ಏಕೆಂದರೆ, ಡಯಾಬಿಟೀಸ್‌ನ ಪ್ರಮುಖ ಕಾರಣವಾಗಿರುವ - ರಕ್ತದ ಅಧಿಕ ಸಕ್ಕರೆ ಅಂಶವು ನಿಮ್ಮ ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾವನ್ನು ಬೆಂಬಲಿಸುವ ಅತ್ಯಂತ ಸಣ್ಣ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಸಮಯ ಕಳೆದಂತೆ, ಈ ಹಾನಿಯು ರಕ್ತನಾಳಗಳಲ್ಲಿ ರಕ್ತಸ್ರಾವವನ್ನು, ದ್ರವ ಸೋರಿಕೆಯನ್ನು ಉಂಟು ಮಾಡಬಹುದು ಹಾಗೂ ಕಟ್ಟಿಕೊಳ್ಳಬಹುದು5 (ಬ್ಲಾಕ್ ಆಗಬಹುದು). ಇದಕ್ಕಿಂತ ಕೆಟ್ಟ ಸಂಗತಿ ಎಂದರೆ, ಗರ್ಭಾವಸ್ಥೆಯ ಡಯಾಬಿಟೀಸ್ ಇರುವವರಲ್ಲಿ 10% ದಿಂದ 27% ವರೆಗೆ ಡಯಾಬಿಟಿಕ್ ರೆಟಿನೋಪಥಿ ಕಂಡುಬರುವ ಸಾಧ್ಯತೆ ಇದೆ ಎಂಬುದಾಗಿದೆ.

  ಭಯವಾಗುತ್ತದೆ ಅಲ್ಲವೇ? ಒಂದು ವೇಳೆ ನೀವು ಟೈಪ್ 1 ಅಥವಾ ಟೈಪ್ 2 ಡಯಾಬಿಟೀಸ್ ಇರುವ ವ್ಯಕ್ತಿಯಾಗಿದ್ದು, ಜತೆಗೆ ಗರ್ಭ ಧರಿಸಿದ್ದರೆ ಏನಾಗುತ್ತದೆ? 1922ರಲ್ಲಿ ಇನ್ಸುಲಿನ್ ಲಭ್ಯವಾಗುವ ಮೊದಲು, ಡಯಾಬಿಟೀಸ್ ಇರುವವರು ಗರ್ಭಾವಸ್ಥೆಯ ಸಮಸ್ಯೆಗಳ ಅತಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದರು6. ಗರ್ಭಾವಸ್ಥೆಯು ಡಯಾಬಿಟಿಕ್ ರೆಟಿನೋಪಥಿಯ ಮೇಲೆ ಯಾವುದೇ ರೀತಿಯ ದೀರ್ಘಾವಧಿ ಪರಿಣಾಮವನ್ನು ಹೊಂದಿಲ್ಲವಾದರೂ, ರೆಟಿನೋಪಥಿ ಬದಲಾವಣೆಗಳ ವೃದ್ಧಿಸುವಿಕೆಯು 50% - 70% ಪ್ರಕರಣಗಳಲ್ಲಿ ಕಂಡುಬರುತ್ತಿದೆ. ಈ ಸ್ಥಿತಿಯು ಉಲ್ಬಣಿಸಿದಾಗಿನ ಹೆಚ್ಚಿನ ಅಪಾಯವು ಎರಡನೇ ಟ್ರೈಮಿಸ್ಟರ್‌ನಲ್ಲಿ ಉಂಟಾಗುತ್ತದೆ ಹಾಗೂ ಆನಂತರದ 12 ತಿಂಗಳುಗಳ ಕಾಲ ಇರುತ್ತದೆ.

  ಯಾರಿಗೆ ಅಪಾಯ?
  ಟೈಪ್ 1 ಡಯಾಬಿಟೀಸ್ ಇರುವ ಮಹಿಳೆಯರು ಹೆಚ್ಚು ಅಪಾಯ ಎದುರಿಸುತ್ತಾರೆ ಎಂದು ಸಂಶೋಧನೆಯು ತೋರಿಸಿದೆ. ಇಂಡಿಯನ್ ಜರ್ನಲ್ ಆಫ್ ಆಪ್ತಾಲ್ಮಜಿಯಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ, ಟೈಪ್ 1 ಡಯಾಬಿಟೀಸ್ ಇರುವ ಮಹಿಳೆಯರಲ್ಲಿ ಮೊದಲ ತಪಾಸಣೆಯಲ್ಲಿ ಡಯಾಬಿಟಿಕ್ ರೆಟಿನೋಪಥಿ ಇರುವ ಸಾಧ್ಯತೆಯು 57% - 62% ಇದ್ದರೆ, ಟೈಪ್ 2 ಡಯಾಬಿಟೀಸ್ ಇರುವ ಮಹಿಳೆಯರಲ್ಲಿ ಆ ಪ್ರಮಾಣವು 17% - 28% ಇದೆ.

  ಟೈಪ್ 2 ಡಯಾಬಿಟೀಸ್ ಇರುವವರ ಆರಂಭಿಕ ಗರ್ಭಾವಸ್ಥೆಯಲ್ಲಿ DR ಸಂಭಾವ್ಯತೆಯು 14% ರಷ್ಟು ಇರುತ್ತದೆ ಎಂದು ವರದಿಯಾಗಿದ್ದರೆ, ಟೈಪ್ 1 ಡಯಾಬಿಟೀಸ್‌ನಲ್ಲಿ ಅದು 34% ಹಾಗೂ 72% ರ ನಡುವಿನ ಸರಾಸರಿಯಲ್ಲಿದೆ. ಒಂದು ವೇಳೆ ನೀವು ಡಯಾಬಿಟೀಸ್ ಇರುವ ಮಹಿಳೆಯಾಗಿದ್ದರೆ, ನಿಮ್ಮ ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ DR ತಪಾಸಣೆ ಮಾಡುವಂತೆ ನಿಮ್ಮ ವೈದ್ಯರಿಗೆ ಕೇಳಿ.

  ಇಂದು, ಡಯಾಬಿಟೀಸ್ ಇರುವ ಬಹುತೇಕರು, ಡಯಾಬಿಟೀಸ್ ಇಲ್ಲದೆ ಇರುವವರಂತೆಯೇ ಸುರಕ್ಷಿತ ಗರ್ಭಾವಸ್ಥೆ ಮತ್ತು ಮಗುವಿನ ಜನನವನ್ನು ಪಡೆಯುತ್ತಿದ್ದಾರೆ. ಪ್ರಮುಖವಾಗಿ ಉತ್ತಮ ಬ್ಲಡ್ ಗ್ಲುಕೋಸ್ (ಸಕ್ಕರೆ) ನಿರ್ವಹಣೆಯಿಂದಾಗಿ ಈ ಸುಧಾರಣೆಯು ಕಂಡುಬಂದಿದ್ದು, ಅದಕ್ಕೆ ಆಹಾರ ಪದ್ಧತಿಗೆ ಬದ್ಧರಾಗಿರುವುದು, ಆಗಾಗ್ಗೆ ದೈನಂದಿನ ಬ್ಲಡ್ ಗ್ಲುಕೋಸ್ ತಪಾಸಣೆ ಮತ್ತು ಆಗಾಗ್ಗೆ ಮಾಡುವ ಇನ್ಸುಲಿನ್ ಹೊಂದಿಸುವಿಕೆಯು ಅಗತ್ಯವಾಗಿದೆ.

  ನಿಮ್ಮ ಡಯಾಬಿಟಿಕ್ ರೆಟಿನೋಪಥಿ ಅಪಾಯವನ್ನು ನೀವು ಹೇಗೆ ನಿರ್ವಹಿಸಬಹುದು?
  ಬಹುತೇಕ ಕಾಯಿಲೆಗಳಂತೆಯೇ, ಡಯಾಬಿಟಿಕ್ ರೆಟಿನೋಪಥಿಯ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯು ಸೂಕ್ತ ತಪಾಸಣೆಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಪ್ರಾಥಮಿಕ ಆರೈಕೆಯ ಫಿಸಿಷಿಯನ್ ಅಥವಾ ನಿಮ್ಮ OB/GYN ಗರ್ಭಾವಸ್ಥೆಯ ಡಯಾಬಿಟೀಸ್ ತಪಾಸಣೆ ಮಾಡಬೇಕು. ಒಂದು ವೇಳೆ ನಿಮ್ಮ ತಪಾಸಣೆಯ ಫಲಿತಾಂಶವು ಪಾಸಿಟಿವ್ ಬಂದರೆ ಆಗ ನೀವು ವಿವರವಾದ ಕಣ್ಣಿನ ತಪಾಸಣೆಗಾಗಿ ಕಣ್ಣಿನ ವೈದ್ಯರನ್ನು ಭೇಟಿಯಾಗಬೇಕು. ಡಯಾಬಿಟಿಕ್ ರೆಟಿನೋಪಥಿಯು ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಯಾವುದೇ ಸೂಚನೆಗಳನ್ನು ಅಥವಾ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಆರಂಭದಲ್ಲೇ ಅದನ್ನು ಪತ್ತೆಹಚ್ಚುವುದು ಮಾತ್ರವೇ ಅದನ್ನು ತಡೆಗಟ್ಟಲು ಇರುವ ಏಕೈಕ ಅತ್ಯುತ್ತಮ ಮಾರ್ಗವಾಗಿದೆ.

  ಈ ಅಪಾಯವು ಹೆಚ್ಚಾಗಿ ತಿಳಿಯದೇ ಇರುವುದರಿಂದಾಗಿ, ಡಯಾಬಿಟೀಸ್ ರೆಟಿನೋಪಥಿಯ ಬಗ್ಗೆ, ಅದು ನಿಮ್ಮ ದೃಷ್ಟಿಯ ಮೇಲೆ ಉಂಟು ಮಾಡುವ ಅಪಾಯ ಹಾಗೂ ಡಯಾಬಿಟಿಕ್ ರೆಟಿನೋಪಥಿಯಿಂದಾಗಿ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಲು ಇರುವ ಹಲವಾರು ವಿಧಾನಗಳ ಕುರಿತು ಅರಿವು ಮೂಡಿಸಲು Novartis ಸಹಯೋಗದೊಂದಿಗೆ, Network18, 'Netra Suraksha' - ಡಯಾಬಿಟೀಸ್ ವಿರುದ್ಧ ಭಾರತ ಎಂಬ ಉಪಕ್ರಮವನ್ನು ಆರಂಭಿಸಿದೆ. ಈ ಉಪಕ್ರಮವು ದೇಶದಾದ್ಯಂತ ಸಾಕಷ್ಟು ಸಂಖ್ಯೆಯ ಜಾಗೃತಿ ಶಿಬಿರಗಳನ್ನು ಆಯೋಜಿಸಲಿದೆ.

  ಡಯಾಬಿಟಿಕ್ ರೆಟಿನೋಪಥಿ ಮತ್ತು ಅದು ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು (https://www.news18.com/netrasuraksha/) ಗೆ ಭೇಟಿ ನೀಡಿ. Netra Suraksha ಉಪಕ್ರಮದ ಕುರಿತು ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ News18.com ಅನ್ನು ಅನುಸರಿಸಿ ಮತ್ತು ಡಯಾಬಿಟಿಕ್ ರೆಟಿನೋಪಥಿ ವಿರುದ್ಧದ ಭಾರತದ ಹೋರಾಟದಲ್ಲಿ ಭಾಗವಹಿಸಲು ಸಿದ್ಧರಾಗಿರಿ.  ಉಲ್ಲೇಖ:

  1. Pradeepa R, Mohan V. Epidemiology of type 2 diabetes in India. Indian J Ophthalmol. 2021 Nov;69(11):2932-2938.

  2. Gestational Diabetes. Available [online] at URL: https://www.mayoclinic.org/diseases-conditions/gestational-diabetes/symptoms-causes/syc-20355339. Accessed on August 3rd 2022.

  3. Gestational diabetes and Pregnancy. Available [online] at URL: https://www.cdc.gov/pregnancy/diabetes-gestational.html. Accessed on August 3rd 2022.

  4. Chandrasekaran PR, Madanagopalan VG, Narayanan R. Diabetic retinopathy in pregnancy - A review. Indian J Ophthalmol 2021;69:3015-25 

  5. Diabetic Retinopathy. Available [online] at URL: https://www.nei.nih.gov/learn-about-eye-health/eye-conditions-and-diseases/diabetic-retinopathy. Accessed on August 3rd 2022.

  6. Patient education: Care during pregnancy for patients with type 1 or 2 diabetes (Beyond the Basics). Available [online] at URL: https://www.uptodate.com/contents/care-during-pregnancy-for-patients-with-type-1-or-2-diabetes-beyond-the-basics. Accessed on August 3rd 2022.

  7. Mallika P, Tan A, S A, T A, Alwi SS, Intan G. Diabetic retinopathy and the effect of pregnancy. Malays Fam Physician. 2010 Apr 30;5(1):2-5.

  Published by:Rahul TS
  First published: