ಎಚ್ಚರಿಕೆ: ನಿದ್ರಾಹೀನತೆಯಿಂದ ಅಸ್ತಮಾ ಬಂದೀತು!

news18
Updated:September 3, 2018, 5:36 PM IST
ಎಚ್ಚರಿಕೆ: ನಿದ್ರಾಹೀನತೆಯಿಂದ ಅಸ್ತಮಾ ಬಂದೀತು!
news18
Updated: September 3, 2018, 5:36 PM IST
-ನ್ಯೂಸ್ 18 ಕನ್ನಡ

ಆಧುನಿಕ ಜೀವನ ಶೈಲಿಯಿಂದಾಗಿ ನಿದ್ದೆ ಬರದಿರುವುದೇ ದೊಡ್ಡ ಸಮಸ್ಯೆ. ಅಂತದರಲ್ಲಿ ನಿದ್ರಾಹೀನತೆಯಿಂದ  ಮತ್ತಷ್ಟು ಸಮಸ್ಯೆ ಇದೆ ಎಂದರೆ ಯಾರಿಗೆ ತಾನೆ ನಿದ್ದೆ ಬರುತ್ತದೆ. ಕೆಲಸದ ಒತ್ತಡ, ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ ನಿದ್ದೆ ಎಂಬುದು ಹಲವರಿಗೆ ಮರೀಚಿಕೆಯಾಗಿ ಉಳಿದಿದೆ. ಹೀಗೆ ನಿದ್ರೆ ಬರದಿರುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ನಾರ್ವೆಜಿಯನ್ ಯುನಿವರ್ಸಿಟಿ ಆಫ್ ಲೈಫ್ ಸೈನ್ಸ್​ ನಡೆಸಿದ ಸಮೀಕ್ಷೆ ಪ್ರಕಾರ ನಿದ್ದೆ ಬರದಿರುವುದರಿಂದ ಅಸ್ತಮಾ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕವಾಗುವ ರೋಗಗಳು ಕಾಣಿಸಿಕೊಳ್ಳಬಹುದು. ಒತ್ತಡ ಮತ್ತು ನಿದ್ರಾಹೀನತೆಯಿಂದ ಅಸ್ತಮಾ ರೋಗ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಸಂಶೋಧಕರು ಎಚ್ಚರಿಸಿದ್ದಾರೆ.ಈ ಸಮೀಕ್ಷೆಗಾಗಿ 20 ರಿಂದ 65 ವಯಸ್ಸಿನ 17 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿರುವವರಲ್ಲಿಅಸ್ತಮಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಅದರಲ್ಲೂ ಪ್ರತಿನಿತ್ಯ ಕಡಿಮೆ ನಿದ್ರಿಸುವ ಶೇ.95 ರಷ್ಟು ಮಂದಿಗೆ ಅಸ್ತಮಾ ಉಂಟಾಗುವ ಸಾಧ್ಯತೆಗಳು ಹೆಚ್ಚಿರುವುದು ಪತ್ತೆಯಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ. ನಿದ್ರಾಹೀನತೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಜ್ಞರನ್ನು ಭೇಟಿಯಾದರೆ ಇಂತಹ ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...