Beauty Tips: ಚರ್ಮ ಸುಕ್ಕು ಸುಕ್ಕಾಗುತ್ತಿದೆಯೇ? ಹಾಗಾದ್ರೆ ಗ್ರೀನ್ ಕಾಫಿಯ ಬಗ್ಗೆ ನೀವು ತಿಳಿಯಲೇಬೇಕು

ಗ್ರೀನ್ ಕಾಫಿಯ ಈ ಪ್ರಯೋಜನಗಳನ್ನು ಅರ್ಥಮಾಡಿಕೊಂಡಿರುವ ಹಲವಾರು ಆಯುರ್ವೇದ ಆಧಾರಿತ ಮತ್ತು ಸಾವಯವ ಕಂಪನಿಗಳು ತ್ವಚೆಗೆ ಸಂಬಂಧಪಟ್ಟ ಉತ್ಪನ್ನಗಳನ್ನು ಮತ್ತು ಪಾನೀಯವನ್ನು  ತಯಾರಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಯಾರಿಗೆ ತಾನೇ ಇಷ್ಟವಿರಲ್ಲ. ಪ್ರತಿಯೊಬ್ಬರೂ ಒಂದೆಲ್ಲ ಒಂದು ರೀತಿಯಲ್ಲಿ ತಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಹೆಣಗಾಡುತ್ತಾರೆ.  ಏನೆಲ್ಲ ವಸ್ತುಗಳನ್ನು ಬಳಕೆ ಮಾಡುತ್ತಾರೆ, ಆ ಕ್ರೀಮ್, ಈ ಕಂಪನಿ ಬಿ ಬಿ ಕ್ರೀಮ್ ಹೀಗೆ. ಅದೆಲ್ಲದರ ಜೊತೆಗೆ ಮನೆ ಮದ್ದುಗಳನ್ನು ಸಹ ಪ್ರಯತ್ನಿಸುವವರು ಕೆಲವರಿದ್ದಾರೆ.  ಪ್ರತಿಯೊಬ್ಬರಿಗೂ ಎಲ್ಲ ಮನೆ ಮದ್ದುಗಳು ಗೊತ್ತಿರಬೇಕೆಂದಿಲ್ಲ. ನಾವು ದಿನನಿತ್ಯ ಬಳಸುವ ಅದೆಷ್ಟೋ ವಸ್ತುಗಳ ಆರೋಗ್ಯ ಪ್ರಾಮುಖ್ಯತೆ ಅರಿವು ನಮಗಿರುವುದಿಲ್ಲ. ಕೆಲವೊಂದು ವಿಚಾರಗಳ ಅರಿವು ನಿಧಾನವಾಗಿ ಆದರೂ ಕೂಡ ಅದರ ಪ್ರಯೋಜನ ನೋಡಿದಾಗ ಸಂತೋಷವಾಗುತ್ತದೆ. ಇಂಥಹದೆ ವಸ್ತುಗಳಲ್ಲಿ ಗ್ರೀನ್ ಕಾಫಿ.  ಗ್ರೀನ್ ಕಾಫಿ ನಿಖರವಾಗಿ ಅದರ ಹೆಸರೇ ಅದರ ಗುಣವನ್ನು ಹೇಳುತ್ತದೆ. ಹುರಿಯದ ಕಾಫಿ ಬೀಜ.  ದುರದೃಷ್ಟವಶಾತ್ ನಾವೆಲ್ಲರೂ ಹುರಿದ ಕಾಫಿ ಬೀಜದ ಕಾಫಿಯನ್ನು ಸೇವಿಸುತ್ತೇವೆ.  ಆದರೆ ಹುರಿಯುವ ಪ್ರಕ್ರಿಯೆಯಲ್ಲಿ ನಿಮ್ಮ ಆರೋಗ್ಯ, ಚರ್ಮ ಮತ್ತು ಕೂದಲಿಗೆ  ಬೇಕಾಗುವ ಪ್ರಯೋಜನಕಾರಿಯಾದ ಆರೋಗ್ಯಕರ ಪೋಷಕಾಂಶಗಳ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಗ್ರೀನ್ ಕಾಫಿ ಕೂಡ, ಹುರಿದ ಕಾಫಿಯ ರುಚಿಯನ್ನು ಹೊಂದಿರುತ್ತದೆ. ಗ್ರೀನ್ ಕಾಫಿಯಲ್ಲಿರುವ ಆರೋಗ್ಯಕರ ಅಂಶಗಳ ಪಟ್ಟಿ ಇಲ್ಲಿದೆ.

ಈ ದಿನಗಳಲ್ಲಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುವ ಅತ್ಯಂತ  ಮುಖ್ಯ ಪದಾರ್ಥ ಈ ಗ್ರೀನ್ ಕಾಫಿ. ಇದರ ಬಗ್ಗೆ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ಬೆಳೆಯುತ್ತದೆ.

ಗ್ರೀನ್ ಕಾಫಿ ಶಕ್ತಿಯುತವಾದ ಅಂಶವಾಗಿದೆ.  ಏಕೆಂದರೆ ಇದು ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಚರ್ಮವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮಕ್ಕೆ ಬೇಗ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಶಕ್ತಿ ಈ ಗ್ರೀನ್ ಕಾಫಿಗಿದೆ. ಇದರ ಜೊತೆಯಲ್ಲಿ, ಕ್ಲೋರೊಜೆನಿಕ್ ಆಮ್ಲವಿರುವುದರಿಂದ ಚರ್ಮದ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಪ್ರತಿದಿನ ಸೂರ್ಯನ  ಕಿರಣಗಳಿಂದ  ಚರ್ಮ ಹಾನಿಯಾಗುವುದನ್ನ ತಡೆಯುತ್ತದೆ. ಗ್ರೀನ್ ಕಾಫಿ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ. ಅದು ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೇ, Young ಕಾಣುವಂತೆ ಮಾಡುತ್ತದೆ. ಇದು ಚರ್ಮ ಸುಕ್ಕಾದಂತೆ ತಡೆಯುತ್ತದೆ.
ಇದನ್ನೂ ಓದಿ: ಕೂಲ್​ ಡ್ರಿಂಕ್ಸ್​ ಬಳಸಿ ಆಮ್ಲೆಟ್​ ಮಾಡಿದ ವಿಡಿಯೋ ವೈರಲ್‌: ಟ್ವಿಟ್ಟರ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..!

ಗ್ರೀನ್ ಕಾಫಿಯ ಈ ಪ್ರಯೋಜನಗಳನ್ನು ಅರ್ಥಮಾಡಿಕೊಂಡಿರುವ ಹಲವಾರು ಆಯುರ್ವೇದ ಆಧಾರಿತ ಮತ್ತು ಸಾವಯವ ಕಂಪನಿಗಳು ತ್ವಚೆಗೆ ಸಂಬಂಧಪಟ್ಟ ಉತ್ಪನ್ನಗಳನ್ನು ಮತ್ತು ಪಾನೀಯವನ್ನು  ತಯಾರಿಸಿವೆ.

ಅನೇಕ ಜನರು ಇದನ್ನು ಪಾನೀಯವಾಗಿ ಮಾತ್ರ ಬಳಸುತ್ತಾರೆ. ಆದರೆ ಹಲ್ಕ್ ಗ್ರೀನ್ ಕಾಫಿ ಬಾಡಿ ಸ್ಕ್ರಬ್ ಮತ್ತು ಬಾಡಿ ವಾಶ್ ನಂತಹ ಉತ್ಪನ್ನಗಳನ್ನು ನೀವು ದಿನನಿತ್ಯ ಬಳಸುವುದರಿಂದ ಹೆಚ್ಚಿನ ಪ್ರಯೋಜನೆಗಳನ್ನು ಪಡೆಯಬಹುದು.

ಅಲ್ಲದೇ ಗ್ರೀನ್ ಕಾಫಿ ಬೀಜಗಳ ಪುಡಿ ಮೊಡವೆಗಳಿಗೆ ಉತ್ತಮ ಪರಿಹಾರ. ಅಲ್ಲದೇ ಮೊಡವೆಗಳಿಂದ ಉಂಟಾಗುವ ಕಲೆ ಹೋಗಲಾಡಿಸುವಲ್ಲಿ ಮತ್ತು ರಂಧ್ರಗಳನ್ನು ಮುಚ್ಚುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ನಿಮ್ಮ ದೈನಂದಿನ ಮಾಯಿಶ್ಚರೈಸರ್ ಬಳಸುವ  ಮೊದಲು ಹಸಿರು ಕಾಫಿ ಸೀರಮ್  ಬಳಸುವುದು ನಿಮ್ಮ ಚರ್ಮವನ್ನು  ಮತ್ತು ಅದರ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಕೊಬ್ಬಿನ ಅಂಶವನ್ನು ತೆಗೆದು , ಮುಖದ ಯೌವನವನ್ನು ಹೆಚ್ಚಿಸುತ್ತದೆ.

ಹೆಚ್ಚುವರಿ ಹಸಿರು ಕಾಫಿಯಿಂದ ತಯಾರಿಸಿರುವ ಯಾವುದೇ ಕ್ರೀಮ್ ಮತ್ತು ಮಾಯಿಶ್ಚರೈಸರ್ ಅನ್ನು ಬಳಸಿದರೆ  ಸೂರ್ಯನ  ಕಿರಣದಿಂದ ಉಂಟಾಗುವ ಎಲ್ಲ ಚರ್ಮ ರೋಗಗಳನ್ನು ಹೋಗಲಾಡಿಸುತ್ತದೆ.  ನಿಮ್ಮ ಚರ್ಮವದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಈ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮದ ಗುಣಮಟ್ಟ, ವಿನ್ಯಾಸ ಮತ್ತು ಹೊಳಪು ಸುಧಾರಿಸಿದೆ ಎಂದು ಅನೇಕರು ಅನುಭವ ಹಂಚಿಕೊಂಡಿದ್ದಾರೆ.
Published by:Sandhya M
First published: