Upsc Job: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು, ತಮ್ಮ ಮೂಲ ದಾಖಲೆಗಳೊಂದಿಗೆ ಆನ್​ಲೈನ್​ ಅರ್ಜಿ ಪ್ರತಿಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

news18-kannada
Updated:December 5, 2019, 2:45 PM IST
Upsc Job: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ನೇಮಕಾತಿಗೆ ಅರ್ಜಿ ಆಹ್ವಾನ
Upsc Job: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ನೇಮಕಾತಿಗೆ ಅರ್ಜಿ ಆಹ್ವಾನ
  • Share this:
ಕೇಂದ್ರ ಲೋಕಸೇವಾ ಆಯೋಗವು, ಕೇಂದ್ರ ಸರ್ಕಾರದ ವಿವಿಧ ನಿರ್ದೇಶನಾಲಯಗಳು, ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮಾಹಿತಿ ತಿಳಿದು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ, ಹೆಸರು, ಅಗತ್ಯ ಶೈಕ್ಷಣಿಕ ಅರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಕೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ:

ಅಸಿಸ್ಟಂಟ್ ರಿಜಿಸ್ಟ್ರಾರ್ (ಟ್ರೇಡ್ ಮಾರ್ಕ್‌ ಮತ್ತು ಜಿಯೋಗ್ರಾಫಿಕಲ್ ಇಂಡಿಕೇಷನ್) : 11

ಸೀನಿಯರ್ ಎಕ್ಸಾಮೀನರ್ (ಟ್ರೇಡ್ ಮಾರ್ಕ್‌ ಮತ್ತು ಜಿಯೋಗ್ರಾಫಿಕಲ್ ಇಂಡಿಕೇಷನ್) : 10

ಅಸಿಸ್ಟಂಟ್ ಡೈರೆಕ್ಟರ್ (ಬ್ಯಾಂಕಿಂಗ್) : 3

ಅಸಿಸ್ಟಂಟ್ ಡೈರೆಕ್ಟರ್ (ಕ್ಯಾಪಿಟಲ್ ಮಾರ್ಕೆಟ್) : 1ಪ್ರಿನ್ಸಿಪಲ್ ಡಿಸೈನ್ ಆಫೀಸರ್ (ಕಂಸ್ಟ್ರಕ್ಷನ್) :4

ಸೀನಿಯರ್ ಡಿಸೈನ್ ಆಫೀಸರ್ ಗ್ರೇಡ್-1 (ಕಂಸ್ಟ್ರಕ್ಷನ್) : 4

ಸೀನಿಯರ್ ಟೆಕ್ನಿಕಲ್ ಆಫೀಸರ್ (ಡಿಸೈನ್) : 2

ಸೀನಿಯರ್ ಡಿಸೈನ್ ಆಫೀಸರ್ ಗ್ರೇಡ್-1 (ಎಲೆಕ್ಟ್ರಿಕಲ್) : 6

ಡೈರೆಕ್ಟರ್ (ಸೇಫ್ಟಿ) : 7

ಆಯ್ಕೆ ಪ್ರಕ್ರಿಯೆ:

ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ. ವಿದ್ಯಾರ್ಹತೆ ಆಧಾರದ ಮೇಲೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

ವಿದ್ಯಾರ್ಹತೆ:

ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಅಂಗೀಕೃತವಾಗಿರುವ ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ, ಸ್ನಾತಕೋತ್ತರ ಪದವಿ, ಚಾಟೆಡ್​ ಅಕೌಂಟೆಂಟ್​, ಕಾಸ್ಟ್​​​​ ಮತ್ತು ಮ್ಯಾನೇಜ್​ಮೆಂಟ್​ ಅಕೌಂಟೆಂಟ್​, ಕಂಪೆನಿ ಸೆಕ್ರೆಟರಿ, ಚಾರ್ಟರ್ಡ್​ ಅನಾಲಿಸ್ಟ್​​​, ಪಿಜಿ ಡಿಪ್ಲೊಮೊ-ಮ್ಯಾನೇಜ್ಮೆಂಟ್​​, ಬಿಸಿನೆಸ್​​ ಎಕನಾಮಿಕ್ಸ್​​, ಎಂ.ಕಾಂ ಪದವಿಯನ್ನು ಪಡೆದಿರಬೇಕು.

ಪ್ರಿನ್ಸಿಪಲ್​ ಆಫೀಸರ್​ ಹುದ್ದೆಗಳಿಗಾಗಿ ಸಂವಂಧಿಸಿದ ಎಂಜಿನಿಯರ್​ ಪದವಿ ಪಡೆದಿರಬೇಕು. ಡೈರೆಕ್ಟರ್​​ ಹುದ್ದೆಗಳಿಗಾಗಿ ಮೆಕ್ಯಾನಿಕಲ್​, ಎಲೆಕ್ಟ್ರಿಕ್​, ಕೆಮಿಕಲ್​ ವಿಭಾಗದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ:

-ಗರಿಷ್ಠ  50/45/40/45/30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

-ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

-ಹಿಂದುಲೀದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕ:

ಅರ್ಹ ಆಭ್ತರ್ಥಿಗಳು ಆನ್​ಲೈನ್​ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿ. 12, 2019

ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು, ತಮ್ಮ ಮೂಲ ದಾಖಲೆಗಳೊಂದಿಗೆ ಆನ್​ಲೈನ್​ ಅರ್ಜಿ ಪ್ರತಿಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ವೆಬ್​ ಸೈಟ್​ಗೆ https://upsconline.nic.in/ ಭೇಟಿ ನೀಡಿ ಆನ್​ಲೈನ್​ ಅರ್ಜಿ ಮತ್ತು ಶುಲ್ಕ ಸಲ್ಲಿಸಬೇಕು. ಎಸ್​ಸಿ. ಎಸ್​​ಟಿ, ಅಂಗವಿಕಲ ಅಭ್ಯರ್ಥಿಗಳಿಗೆ, ಮಹಿಳಾ ಆಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: Odeya: ‘ಒಡೆಯ‘ನ ಆಫರ್; ಸಿನಿಮಾ ನೋಡಿ ಸ್ಟೈಲಿಶ್ ಬೈಕ್ ಗೆಲ್ಲಿ!

ಇದನ್ನೂ ಓದಿ:  ಹುಚ್ಚ ವೆಂಕಟ್ ನಟಿಸಿರುವ ಈ ಸಿನಿಮಾ ಬರೋಬ್ಬರಿ 2500 ಕೋಟಿ ಗಳಿಕೆ ಮಾಡಿದೆಯಂತೆ!?

 
First published: December 5, 2019, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading