ಬಹುತೇಕ ಎಲ್ಲಾ ಮಾಂಸಾಹಾರಿಗಳಿಗೆ (Non Vegetarians) ಚಿಕನ್ ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ತಂದೂರಿ ಚಿಕನ್ (Chicken) ಅಂದ ಕೂಡಲೇ ಬಾಯಲ್ಲಿ ನೀರೂರುತ್ತೆ. ಚಿಕನ್ ತಿನ್ನುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ರುಚಿ (Taste) ಹಾಗೂ ಇದು ಪೋಷಕಾಂಶಗಳ (Nutrients) ಅತ್ಯುತ್ತಮ ಮೂಲ ಆಗಿದೆ. ಆದರೆ ಚಿಕನ್ ಪ್ರಯೋಜನ (Benefits) ದೇಹಕ್ಕೆ ಸಿಗಬೇಕು ಅಂದ್ರೆ ಅದನ್ನ ಯಾವ ರೀತಿ ತಯಾರಿಸುತ್ತೀರಿ ಎಂಬ ವಿಧಾನದ ಮೇಲೆ ಅವಲಂಬಿತವಾಗಿದೆ. ಯಾಕಂದ್ರೆ ಕೋಳಿ ಮಾಂಸವನ್ನು ಇತ್ತೀಚೆಗೆ ಸಾಕಷ್ಟು ಅನಾರೋಗ್ಯಕರ ರೀತಿಯಲ್ಲಿ ಬೇಯಿಸಲಾಗುತ್ತದೆ. ಇದು ಚಿಕನ್ ನಲ್ಲಿರುವ ನೈಜ ಪೋಷಕಾಂಶಗಳನ್ನು ತೆಗೆದು ಹಾಕುತ್ತದೆ. ಹಾಗಾಗಿ ದೇಹಕ್ಕೆ ಅದ್ರಿಂದ ಯಾವುದೇ ಪೋಷಕಾಂಶ ಸಿಗಲ್ಲ.
ಚಿಕನ್ ತಯಾರಿಸುವ ಅನಾರೋಗ್ಯಕರ ವಿಧಾನದಿಂದ ಆರೋಗ್ಯಕ್ಕೆ ಹಾನಿ
ಚಿಕನ್ ತಯಾರಿಸುವ ಅನಾರೋಗ್ಯಕರ ವಿಧಾನದಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಅಂತಾರೆ ತಜ್ಞರು. ಅಡುಗೆ ವಿಧಾನ ಸರಿಯಿರದೇ ಹೋದರೆ ಕೋಳಿ ಮಾಂಸ ಸೇವನೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ನೀವು ಚಿಕನ್ ಪ್ರೇಮಿಗಳಾಗಿದ್ದರೆ ಅದನ್ನು ಸರಿಯಾಗಿ ಬೇಯಿಸುವ ವಿಧಾನ ತಿಳಿಯುವುದು ತುಂಬಾ ಮುಖ್ಯ. ಇಲ್ಲಿ ನಾವು ಮೋಳಿ ಮಾಂಸ ಬೇಯಿಸುವ ಸರಿಯಾದ ಮತ್ತು ಅನಾರೋಗ್ಯಕರ ವಿಧಾನ ಮತ್ತು ಕೆಲ ವಿಷಯಗಳನ್ನು ತಿಳಿಯೋಣ.
ಕೋಳಿ ಮಾಂಸ ಪೋಷಕಾಂಶಗಳ ಉತ್ತಮ ಮೂಲ
ಚಿಕನ್ ಬಗ್ಗೆ ಫುಡ್ ಡಾಟಾ ಸೆಂಟ್ರಲ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ಚಿಕನ್ ನಲ್ಲಿ ಪ್ರೋಟೀನ್, ಸೆಲೆನಿಯಮ್, ರಂಜಕ, ವಿಟಮಿನ್ ಬಿ6, ವಿಟಮಿನ್ ಬಿ12, ಪೊಟ್ಯಾಸಿಯಮ್ ಸೇರಿ ಹಲವು ಪೋಷಕಾಂಶ ಹೊಂದಿದೆ.
ಚಿಕನ್ ಆರೋಗ್ಯಕ್ಕೆ ಪ್ರಯೋಜನಕಾರಿ
ಕೋಳಿ ಮಾಂಸದಲ್ಲಿ ಪ್ರೋಟೀನ್ ಇದೆ. ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಸ್ನಾಯುಗಳನ್ನು ನಿರ್ಮಿಸಲು ಅಗತ್ಯವಾಗಿದೆ. ಸರಿಯಾದ ಪ್ರಮಾಣದ ಪ್ರೋಟೀನ್ ಸೇವನೆ ಮೂಳೆ ಖನಿಜ ಸಾಂದ್ರತೆ ಕಾಪಾಡುತ್ತದೆ. ಚಿಕನ್ ಸೇವನೆ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೂಳೆಗಳ ಆರೋಗ್ಯಕ್ಕೂ ಪ್ರಯೋಜನಕಾರಿ.
ತೂಕ ನಿಯಂತ್ರಣಕ್ಕೆ ಸಹಕಾರಿ
ಕೋಳಿ ಮಾಂಸವು ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ದೀರ್ಘಕಾಲದವರೆಗೆ ತೃಪ್ತಿಪಡಿಸುತ್ತದೆ. ಇದು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ. ತೂಕ ನಿಯಂತ್ರಿಸಲು ಸಹಕಾರಿ. ಆರೋಗ್ಯಕರ ತೂಕವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ತಡೆಯುತ್ತದೆ.
ಚಿಕನ್ ಖಾದ್ಯ ಅಥವಾ ಅಡುಗೆ ಮಾಡುವ ಆರೋಗ್ಯಕರ ವಿಧಾನ ಯಾವುದು?
ಸ್ಟೀಮ್ ಅಂದ್ರೆ ಬೇಯಿಸುವುದು
ಸ್ಟೀಮ್ ನಲ್ಲಿ ಚಿಕನ್ ಬೇಯಿಸಿ. ಆಹಾರದಲ್ಲಿ ಸೇರಿಸಲು ಇದು ಆರೋಗ್ಯಕರ ಆಯ್ಕೆ. ಚಿಕನ್ಗೆ ಕರಿಮೆಣಸು, ಉಪ್ಪು ಮತ್ತು ಇತರ ಆರೋಗ್ಯಕರ ಪದಾರ್ಥ ಬಳಸಬಹುದು. ನಂತರ ಅದನ್ನು ಸ್ಟ್ರೀಮರ್ ನಲ್ಲಿ ಹಾಕಿ ಸ್ಟೀಮ್ ಮಾಡಿ. ಚಿಕನ್ ಅನ್ನು ಆಹಾರದಲ್ಲಿ ಸೇರಿಸಲು ಇದು ಆರೋಗ್ಯಕರ ಮಾರ್ಗವಾಗಿದೆ.
ಬೇಯಿಸಿದ ಚಿಕನ್
ಆಹಾರದಲ್ಲಿ ಬೇಯಿಸಿದ ಚಿಕನ್ ಅನ್ನು ಸೇರಿಸುವುದು ಉತ್ತಮ ಆಯ್ಕೆ. ಬೇಯಿಸಿದ ಕೋಳಿ ಸಂಪೂರ್ಣವಾಗಿ ಆರೋಗ್ಯಕರ. ಇದು ವಿಭಿನ್ನ ಪರಿಮಳವನ್ನು ಹೊಂದಿರುತ್ತದೆ. ಇದು ಉತ್ತಮ ರುಚಿ ನೀಡುತ್ತದೆ. ಇದಕ್ಕಾಗಿ ನೀವು ನೀರನ್ನು ಕುದಿಸಬೇಕು. ನಂತರ ಅದರಲ್ಲಿ ನಿಂಬೆ ಮತ್ತು ಬೆಳ್ಳುಳ್ಳಿ ಹಾಕಿ ಮತ್ತು ಅದರಲ್ಲಿ ಚಿಕನ್ ಹಾಕಿ, ನಂತರ ಅದನ್ನು ಅರ್ಧ ಘಂಟೆಯವರೆಗೆ ಕುದಿಸಿ. ಈ ಅಡುಗೆ ವಿಧಾನವು ಕೋಳಿಗೆ ನಿಂಬೆ ಮತ್ತು ಬೆಳ್ಳುಳ್ಳಿಯ ವಿಶಿಷ್ಟ ಪರಿಮಳ ನೀಡುತ್ತದೆ. ಸಲಾಡ್ ಅಥವಾ ಸ್ಯಾಂಡ್ವಿಚ್ ಜೊತೆ ತಿನ್ನಬಹುದು.
ಪ್ರೆಶರ್ ಕುಕ್ಕಿಂಗ್
ಚಿಕನ್ ಬೇಯಿಸಲು ಪ್ರೆಶರ್ ಕುಕ್ಕಿಂಗ್ ಆರೋಗ್ಯಕರ ವಿಧಾನವಾಗಿದೆ. ಈ ಅಡುಗೆ ವಿಧಾನದ ಸಹಾಯದಿಂದ ಯಾವುದೇ ಮಾಂಸವನ್ನು ಬೇಯಿಸುವುದು ಅದರ ಆಕ್ಸಿಡೀಕರಣ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಆಕ್ಸಿಡೀಕೃತ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆ ಹೆಚ್ಚಿಸುತ್ತದೆ.
ಇದನ್ನೂ ಓದಿ: ಪ್ರತಿದಿನ ಕೇವಲ ಅರ್ಧ ಗಂಟೆ ವಾಕಿಂಗ್ ಮಾಡಿ, ಅದರಿಂದಾಗುವ ಲಾಭ ನೋಡಿ
ಚಿಕನ್ ತಯಾರಿಸಲು ಯಾವ ಅಡುಗೆ ವಿಧಾನ ತಪ್ಪಿಸಬೇಕು?
ಬಾರ್ಬೆಕ್ಯೂ, ಗ್ರಿಲ್ಲಿಂಗ್, ಆಳವಾಗಿ ಎಣ್ಣೆಯಲ್ಲಿ ಕರಿಯುವಿಕೆ, ಹುರಿಯುವುದು, ಹೊಗೆಯಲ್ಲಿ ಬೇಯಿಸುವುದು, ಬೆಂಕಿಯಲ್ಲಿ ಬೇಯಿಸುವ ವಿಧಾನ ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ