Health tips: ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ದೀರ್ಘಾಯುಷ್ಯ ಗ್ಯಾರಂಟಿಯಂತೆ, ನೀವೂ ಅಭ್ಯಾಸ ಮಾಡ್ಕೊಳಿ!

ನೀವು ಎಷ್ಟು ಆರೋಗ್ಯವಂತರಾಗುತ್ತೀರೋ ಅಷ್ಟು ಕಾಲ ಬದುಕುತ್ತೀರಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜನರು ತಮ್ಮ ಆಯುಷ್ಯ ಹೆಚ್ಚಿಸಿಕೊಳ್ಳಲು ಅನೇಕ ಆಹಾರ ಕ್ರಮಗಳನ್ನು ಮತ್ತು ತಾಲೀಮುಗಳನ್ನು ಮಾಡುತ್ತಲೇ ಇರುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾರಿಗೆ ತಾನೇ ಹೆಚ್ಚು ವರ್ಷಗಳ ಕಾಲ ಬದುಕಿರಬೇಕು( longevity) ಎಂದೆನಿಸುವುದಿಲ್ಲ ನೀವೇ ಹೇಳಿ, ಒಂದು ವೇಳೆ ನಿಮಗೆ ಯಾರಾದರೂ ಬಂದು ನಿಮ್ಮ ಇಚ್ಚೆ ಏನು ಅಂತ ಕೇಳಿದರೆ ಬಹುತೇಕರು ದೀರ್ಘಾಯುಷಿ ಆಗಲು ಬಯಸುವುದುಂಟು. ಜೀವನದ ಪ್ರತಿ ಕ್ಷಣವನ್ನು ಪೂರ್ಣವಾಗಿ ಆನಂದಿಸಲು ಮತ್ತು ನಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂಬುದು ಬಹುತೇಕರ ಬಯಕೆಯಾಗಿರುತ್ತದೆ. ಆದರೆ ನಾವು ಎಷ್ಟು ಕಾಲ ಬದುಕಿರುತ್ತೇವೆ ಎಂದು ಯಾರೂ ಊಹಿಸಲು (Predict) ಸಾಧ್ಯವಿಲ್ಲವಾದರೂ, ಆರೋಗ್ಯಕರ ಅಭ್ಯಾಸಗಳನ್ನು(Healthy habits) ಅನುಸರಿಸುವ ಮೂಲಕ ಖಂಡಿತವಾಗಿಯೂ ಅವರ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಬಹುದು(Definitely increase) ಎಂದು ನಾವು ಈಗಾಗಲೇ ಬಹಳಷ್ಟು ಬಾರಿ ಕೇಳಿರುತ್ತೇವೆ.

ನೀವು ಎಷ್ಟು ಆರೋಗ್ಯವಂತರಾಗುತ್ತೀರೋ ಅಷ್ಟು ಕಾಲ ಬದುಕುತ್ತೀರಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಜನರು ತಮ್ಮ ಆಯುಷ್ಯ ಹೆಚ್ಚಿಸಿಕೊಳ್ಳಲು ಅನೇಕ ಆಹಾರ ಕ್ರಮಗಳನ್ನು ಮತ್ತು ತಾಲೀಮುಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವು ಅಸಾಮಾನ್ಯ ಅಭ್ಯಾಸಗಳು ಸಹ ನಿಮ್ಮ ಆಯುಷ್ಯವನ್ನು ಹೆಚ್ಚು ಮಾಡಬಲ್ಲದು, ಅವುಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇದನ್ನೂ ಓದಿ: Health tips: ತೂಕ ಹೆಚ್ಚು ಮಾಡಬಹುದಾದ ಕೆಲ ಆಹಾರಗಳ ಬಗ್ಗೆ ಇರಲಿ ಸ್ವಲ್ಪ ಎಚ್ಚರಿಕೆ..!

1. ಪರ್ವತದ ಮೇಲೆ ಸಮಯ ಕಳೆಯಿರಿ
ನಿಮ್ಮ ಬಿಡುವಿಲ್ಲದ ದಿನಚರಿಯಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಯಾವುದಾದರೂ ಹತ್ತಿರದ ಪರ್ವತದ ಮೇಲೆ ಸಮಯ ಕಳೆಯಿರಿ. ಇತರರಿಗೆ ಹೋಲಿಸಿದರೆ ಹೆಚ್ಚಿನ ಎತ್ತರದಲ್ಲಿ ಸಮಯ ಕಳೆಯುವ ಜನರು ಹೆಚ್ಚು ಕಾಲ ಬದುಕುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಅವರು ಹೃದಯಾಘಾತದ ಕಡಿಮೆ ಅಪಾಯ ಹೊಂದಿರುತ್ತಾರೆ ಮತ್ತು ರಮಣೀಯ ಸೌಂದರ್ಯ, ಶುದ್ಧ ಗಾಳಿ ಮತ್ತು ಶುದ್ಧವಾದ ನೀರು ನಿಮ್ಮ ಆಯುಷ್ಯವನ್ನು ಹೆಚ್ಚು ಮಾಡುತ್ತದೆ. ಪರ್ವತಗಳಲ್ಲಿ ವಾಸಿಸುವುದು ಎಂದರೆ ಹೆಚ್ಚು ದೈಹಿಕ ಚಟುವಟಿಕೆ, ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.

2. ನೀವು ಸಮಾಜದೊಡನೆ ಬೆರೆಯಿರಿ
ನೀವು ತುಂಬಾನೇ ಅಂತರ್ಮುಖಿಯಾಗಿದ್ದು, ಆಗೊಮ್ಮೆ ಈಗೊಮ್ಮೆ ಜನರೊಂದಿಗೆ ಬೆರೆಯುತ್ತಾ ಇದ್ದರೂ ನಿಮಗೆ ಖುಷಿಯನ್ನು ನೀಡುತ್ತದೆ. ವಾಸ್ತವವಾಗಿ, ಇದು ಆರೋಗ್ಯಕರ, ಸಂತೋಷ ಮತ್ತು ಸದೃಢವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವುದು ನಿಮ್ಮ ಮನಸ್ಸನ್ನು ಸಕ್ರಿಯವಾಗಿರಿಸುತ್ತದೆ ಮತ್ತು ಅರಿವಿನ ಪ್ರಚೋದನೆಯನ್ನು ಪ್ರೇರೇಪಿಸುತ್ತದೆ. ನೀವು ಹೊರಗೆ ಹೋಗಿ ಸ್ನೇಹಿತರನ್ನು ಮಾಡಿಕೊಳ್ಳಿ ಮತ್ತು ನಿಮ್ಮ ಜೀವನ ಆನಂದಿಸಿ.

3. ನಿಮ್ಮ ಸಂಗಾತಿಯೊಂದಿಗೆ ಆಪ್ತವಾಗಿರಿ
ನೀವು ನಿಮ್ಮ ಸಂಗಾತಿಯೊಂದಿಗೆ ಆಪ್ತವಾಗಿರಿ ಮತ್ತು ಸಂತೋಷದಿಂದ ಇರಿ, ಇದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ನಿಮ್ಮ ಆಯುಷ್ಯ ಹೆಚ್ಚಿಸಬಹುದು. ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ತುಂಬಾನೇ ಆಪ್ತವಾಗಿರಿಸಿಕೊಳ್ಳಿರಿ ಮತ್ತು ಅವರೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯುವುದನ್ನು ಮಿಸ್ ಮಾಡಿಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಅಥವಾ ಹಸ್ತಮೈಥುನ ಮಾಡಿಕೊಳ್ಳುವುದು ಸಹ ಮಾನಸಿಕ ಯೋಗಕ್ಷೇಮಕ್ಕೆ ತುಂಬಾ ಒಳ್ಳೆಯದು. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮನ್ನು ಸಂತೋಷವಾಗಿರಿಸಬಹುದು.

4. ನಗುತ್ತಾ ಇರಿ
ನಿಮ್ಮ ಮುಖವನ್ನು ನೀವು ಕೋಪದಿಂದ ತುಂಬಾನೇ ಗಂಭೀರವಾಗಿಟ್ಟುಕೊಂಡರೆ ನಿಮ್ಮ ಯಾವುದೇ ಕೆಲಸಗಳು ನಿಮಗೆ ತೃಪ್ತಿ ನೀಡುವುದಿಲ್ಲ. ಆದರೆ ನೀವು ದೀರ್ಘಾಯುಷಿ ಆಗಬೇಕೆಂದರೆ ಹೆಚ್ಚು ನಗಲು ಪ್ರಯತ್ನಿಸಿ. ನಗುವುದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಅಂತಿಮವಾಗಿ ಕಾರ್ಟಿಸೋಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದ ರೋಗಗಳನ್ನು ಅಭಿವೃದ್ಧಿಪಡಿಸುವ ಅಪಾಯ ಕಡಿಮೆ ಮಾಡುತ್ತದೆ. ನಗುವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಎಂಡಾರ್ಫಿನ್‌ಗಳನ್ನು ಹೆಚ್ಚಿಸುತ್ತದೆ.

5. ನಿಮ್ಮ ಹಲ್ಲುಗಳಲ್ಲಿರುವ ಸಂದಿಗಳನ್ನು ಸ್ವಚ್ಛ ಮಾಡಿಕೊಳ್ಳಿ
ನಿಮ್ಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಸಹ ನೀವು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ನೀವು ನಿಮ್ಮ ಹಲ್ಲುಗಳ ಮಧ್ಯದಲ್ಲಿ ಒಂದು ದಾರದಿಂದ ಸ್ವಚ್ಛ ಮಾಡಿಕೊಳ್ಳಿ ಮತ್ತು ಇದು ವಿಶೇಷವಾಗಿ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ನಿಯಮಿತವಾಗಿ ಫ್ಲೋಸಿಂಗ್ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಷ್ಟಪಟ್ಟು ಇಳಿಸಿಕೊಂಡ ತೂಕವನ್ನು ಹಾಗೇ ಮೇಂಟೇನ್ ಮಾಡೋದು ಹೇಗೆ? ಇಲ್ಲಿವೆ ಟಿಪ್ಸ್

6. ಹೆಚ್ಚು ಶಾಪಿಂಗ್ ಮಾಡಿ
ಜರ್ನಲ್ ಆಫ್ ಎಪಿಡೆಮಿಯಾಲಜಿ ಅಂಡ್ ಕಮ್ಯುನಿಟಿ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚಾಗಿ ಶಾಪಿಂಗ್ ಮಾಡುವವರು ಸುಮಾರು ಶೇಕಡಾ 25ರಷ್ಟು ಸಾವಿನ ಅಪಾಯ ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ನೀವು ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸಿದಾಗ ಮಾತ್ರ ಇದು ಕೆಲಸ ಮಾಡುತ್ತದೆ. ಆನ್‌ಲೈನ್ ಶಾಪಿಂಗ್ ಮಾಡುವುದರಿಂದ ನಿಮಗೆ ಈ ಆರೋಗ್ಯ ಪ್ರಯೋಜನಗಳು ಒದಗುವುದಿಲ್ಲ. ಆದ್ದರಿಂದ, ಹೊರಗೆ ಹೋಗಿ ಸ್ವಲ್ಪ ಶಾಪಿಂಗ್ ಮಾಡಿ ಹಣವನ್ನು ಖರ್ಚು ಮಾಡಿ
Published by:vanithasanjevani vanithasanjevani
First published: