Unbelievably Weird Food of India| ಕೆಂಪು ಇರುವೆ ಚಟ್ನಿ, ನಾಯಿ ಮಾಂಸ ಇಲ್ಲಿನವರ ಮೋಸ್ಟ್ ಫೇವರೇಟ್ ಆಹಾರವಂತೆ

ಇಂದಿನ ಲೇಖನದಲ್ಲಿ ಕೆಲವೊಂದು ಆಶ್ಚರ್ಯಕರ ಮತ್ತು ಸ್ವಾದಿಷ್ಟವೆಂದೇ ಮಾನ್ಯತೆ ಪಡೆದಿರುವ ಕೆಲವೊಂದು ತಿಂಡಿತಿನಿಸುಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕೆಂಪು ಇರುವೆಯ ಚಟ್ನಿಯಿಂದ ಹಿಡಿದು ಬೇಬಿ ಶಾರ್ಕ್ ಕರಿ ಕೂಡ ಈ ಖಾದ್ಯದಲ್ಲಿದೆ.

ಕೆಂಪು ಇರುವೆ.

ಕೆಂಪು ಇರುವೆ.

  • Share this:
ಭಾರತವು ತನ್ನದೇ ಆದ ಸಂಸ್ಕೃತಿ, ಭಾಷೆ,ಆಹಾರ ಪದ್ಧತಿ, ಸಂಸ್ಕೃತಿಗೆ ಹೆಸರುವಾಸಿಯಾ ಗಿದೆ. ಭಾರತದ ಪಾಕಪದ್ಧತಿಗೆ ವಿಶ್ವವ್ಯಾಪಿ ಮನ್ನಣೆ ಇದೆ. ಕೆಲವೊಂದು ಪ್ರದೇಶಗಳಲ್ಲಿ ಆಹಾರವೇ ಅವರ ಗುರುತಾಗಿದೆ. ಇಂದಿನ ಲೇಖನದಲ್ಲಿ ಕೆಲವೊಂದು ಆಶ್ಚರ್ಯಕರ ಮತ್ತು ಸ್ವಾದಿಷ್ಟವೆಂದೇ ಮಾನ್ಯತೆ ಪಡೆದಿರುವ ಕೆಲವೊಂದು ತಿಂಡಿತಿನಿಸುಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕೆಂಪು ಇರುವೆಯ ಚಟ್ನಿಯಿಂದ ಹಿಡಿದು ಬೇಬಿ ಶಾರ್ಕ್ ಕರಿ ಕೂಡ ಈ ಖಾದ್ಯದಲ್ಲಿದೆ. ಹಾಗಿದ್ದರೆ ಈ ವಿಶೇಷ ತಿಂಡಿತಿನುಗಳ ವಿಶೇಷತೆ ಮತ್ತು ಪ್ರಾಮುಖ್ಯತೆಯ ಕುರಿತು ಮತ್ತಷ್ಟು ವಿವರ ಅರಿತುಕೊಳ್ಳೋಣ.

ರೇಷ್ಮೆಹುಳುವಿನ ಪ್ಯೂಪಾ ಅಸ್ಸಾಂ

ರೇಷ್ಮೆಹುಳುವಿನಿಂದ ತಯಾರಿಸಲಾದ ಈ ಖಾದ್ಯ ಅಸ್ಸಾಮಿಗರ ಅಚ್ಚುಮೆಚ್ಚಿನದ್ದು. ರೇಷ್ಮೆಹುಳುವಿನ ಗೂಡಿನಿಂದ ರೇಷ್ಮೆಯನ್ನು ತೆಗೆಯಲಾಗುತ್ತದೆ ಮತ್ತು ಸ್ಥಳೀಯ ಮಸಾಲೆ ಪದಾರ್ಥಗಳನ್ನು ಬಳಸಿ ಹುಳುವನ್ನು ಹುರಿಯಲಾಗುತ್ತದೆ. ಬಾಯಲ್ಲಿ ನೀರೂರಿಸುವ ಈ ಖಾದ್ಯ ಅಲ್ಲಿನವರ ಮೋಸ್ಟ್ ಫೇವರೇಟ್ ಡಿಶ್ ಆಗಿದೆ.

ಚಾಪ್ರಾ ಅಥವಾ ಕೆಂಪು ಇರುವೆ ಚಟ್ನಿ ಚತ್ತೀಸ್‌ಘಡ್

ಚತ್ತೀಸ್‌ಘಡ್‌ನ ಬುಡಕಟ್ಟು ಜನಾಂಗದವರ ಮೆಚ್ಚಿನ ತಿನಿಸಾಗಿದೆ ಕೆಂಪು ಇರುವೆ ಚಟ್ನಿ. ಒಣಗಿಸಿದ ಕೆಂಪು ಇರುವೆ ಮತ್ತು ಅದರ ಮೊಟ್ಟೆಗಳನ್ನು ಸ್ಥಳೀಯ ಮಸಾಲೆಗಳನ್ನು ಬಳಸಿ ಚಟ್ನಿ ರುಬ್ಬಲಾಗುತ್ತದೆ.

ಕಪ್ಪೆಯ ಕಾಲುಗಳು, ಸಿಕ್ಕೀಂ

ಸಿಕ್ಕೀಂನ ಸ್ಥಳೀಯರಿಗೆ ಕಪ್ಪೆಯ ಕಾಲುಗಳಿಂದ ತಯಾರಿಸಲಾದ ಖಾದ್ಯವೆಂದರೆ ಬಹಳ ಅಚ್ಚುಮೆಚ್ಚಿನದಂತೆ. ಸಿಕ್ಕೀಂನ ಲೆಪ್ಚಾ ಸಮುದಾಯ ಈ ತಿನಿಸನ್ನು ತಯಾರಿಸುತ್ತಾರೆ. ಅವರ ನಂಬಿಕೆಯಂತೆ ಕಪ್ಪೆಯ ಕಾಲುಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಹೊಟ್ಟೆಗೆ ಸಂಬಂಧಿತವಾದ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದಾಗಿದೆ.

ಹುರಿದ ಬಸವನಹುಳು, ಒರಿಸ್ಸಾ

ಹುರಿದ ಬಸವನಹುಳುವಿನ ಖಾದ್ಯವನ್ನು ಎಂದಾದರೂ ತಿಂದಿರುವಿರಾ? ಹಾಗಿದ್ದರೆ ಒರಿಸ್ಸಾದಲ್ಲಿ ನೀವಿದನ್ನು ಪಕ್ಕ ಸವಿಯಬಹುದಾಗಿದೆ. ಇಲ್ಲಿರುವ ಹೆಚ್ಚಿನ ಬುಡಕಟ್ಟು ಸಮುದಾಯದವರು ಬಸವನಹುಳುವನ್ನು ಹುರಿದು ಖಾದ್ಯವನ್ನು ತಯಾರಿಸುತ್ತಾರೆ. ಇವರು ಪ್ರಾಕೃತಿಕ ಆಹಾರವನ್ನೇ ಹೆಚ್ಚಾಗಿ ಸವಿಯುತ್ತಾರೆ.

ನಾಯಿ ಮಾಂಸ ನಾಗಾಲ್ಯಾಂಡ್

ನಂಬಿದರೆ ನಂಬಿ ಬಿಟ್ಟರೆ ಬಿಡಿ ನಾಯಿ ಮಾಂಸ ನಾಗಾಲ್ಯಾಂಡ್‌ನವರ ಮೆಚ್ಚಿನ ಆಹಾರವಾಗಿದೆ. ನಾಗಾಲ್ಯಾಂಡ್‌ನ ಬುಡಕಟ್ಟು ಸಮುದಾಯವರ ಜನಪ್ರಿಯ ಆಹಾರವಾಗಿದೆ ನಾಯಿ ಮಾಂಸ. ನಾಯಿ ಮಾಂಸದಿಂದ ರುಚಿಕರವಾದ ಖಾದ್ಯಗಳನ್ನು ಅವರು ತಯಾರಿಸುತ್ತಾರೆ.

ಬೇಬಿ ಶಾರ್ಕ್ ಕರಿ ಗೋವಾ

ಗೋವಾದಲ್ಲಿ ಸಮುದ್ರಾಹಾರ ಹೆಚ್ಚು ಜನಪ್ರಿಯ ತಿನಿಸಾಗಿದೆ. ಮೆನು ಲಿಸ್ಟ್‌ನಲ್ಲಿ ಬೇಬಿ ಶಾರ್ಕ್ ಕರಿ ಹೆಸರನ್ನು ನೋಡಿದರೆ ಶಾಕ್ ಆಗಬೇಡಿ. ಈ ಕರಿಯನ್ನು ಅವರು ಬೇರೆ ಬೇರೆ ಸಾಸ್ ಬಳಸಿ ತಯಾರಿಸುತ್ತಾರೆ.

ಇದನ್ನೂ ಓದಿ: Tirath Singh Rawat Resign| ಅಧಿಕಾರ ವಹಿಸಿಕೊಂಡ 4 ತಿಂಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉತ್ತರಾಖಂಡ ಸಿಎಂ!

ಹೀಗೆ ಭಾರತದಲ್ಲಿರುವ ಅನೇಕ ಬುಡಕಟ್ಟು ಜನಾಂಗದವರು ಕಾಡಿನಲ್ಲಿರುವ ನೈಸರ್ಗಿಕವಾಗಿ ದೊರೆಯುವುದನ್ನು ಬಳಸಿಕೊಂಡು ತಮ್ಮ ಹೊಟ್ಟೆತುಂಬಿಸಿಕೊಳ್ಳುತ್ತಾರೆ. ಇವರು ಮಾಡುವ ತಿನಿಸುಗಳು ಈಗ ಕೆಲವೊಂದು ಸ್ಥಳಗಳಲ್ಲಿ ಪಟ್ಟಣಗಳಲ್ಲಿ ಕೂಡ ಜನಪ್ರಿಯವಾಗಿದೆ. ಕೆಲವೊಂದು ದೇಶಗಳಲ್ಲಿ ಈ ತಿನಿಸುಗಳು ಅವರ ಮುಖ್ಯ ಮೆನುವಿನಲ್ಲಿ ಕೂಡ ಒಂದಾಗಿದೆ. ಇಲ್ಲಿ ನೀಡಿರುವ ತಿನಿಸುಗಳು ಆ ಪ್ರದೇಶದ ಗೌರವವಾಗಿದೆ ಮತ್ತು ಅಲ್ಲಿನವರು ಗುರುತಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: