Benefits of Millets: ಮಧುಮೇಹಿಗಳ ಆರೋಗ್ಯಕ್ಕೆ ಬೆಸ್ಟ್ ಫುಡ್ ಅಂತೆ ಸಿರಿ ಧಾನ್ಯ

ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು.

ಸಿರಿಧಾನ್ಯಗಳು

ಸಿರಿಧಾನ್ಯಗಳು

  • Share this:
    ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ (Diet) ನಲ್ಲಿ ಸೇರಿಸಿಕೊಂಡರೆ ಆರೋಗ್ಯ (Health) ವೃದ್ಧಿಯಾಗುತ್ತದೆ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು (Millets) ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ (Calories). ನಿಮ್ಮ ದೇಹದ ತೂಕವನ್ನು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ. ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು.

    ಸಿರಿಧಾನ್ಯಗಳಲ್ಲಿ ಹಲವು ವೆರೈಟಿಗಳಿವೆ

    ಜೋಳ, ರಾಗಿ, ಸಜ್ಜೆ, ಬರಗು, ನವಣೆ, ಅರಕ, ಸಾಮೆ, ಕೊರಲೆ, ಊದಲು, ಮಡಿಕೆ ಇತ್ಯಾದಿಗಳು ಸಿರಿಧಾನ್ಯಗಳಾಗಿ ಗುರುತಿಸಿಕೊಂಡಿವೆ. ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇರುತ್ತವೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿದ್ದರೆ, ಇನ್ನೂ ಕೆಲವು ಧಾನ್ಯಗಳಲ್ಲಿ ಅಕ್ಕಿ ಮತ್ತು ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮತ್ತು ಖನಿಜಗಳು ಇರುತ್ತವೆ. ಪ್ರತಿ ಧಾನ್ಯಗಳು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

    ಮಧುಮೇಹಿಗಳಿಗೆ ಸಿರಿಧಾನ್ಯ ಬೆಸ್ಟ್‌

    ಈ ಆಹಾರ ನಿಧಾನವಾಗಿ ಪಚನವಾಗುವ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚಾದಂತೆ ಸಿರಿಧಾನ್ಯದಿಂದ ಮಾಡಿದ ಆಹಾರಗಳಿಗೆ ಇದಕ್ಕಿದ್ದಂತೆ ಬೇಡಿಕೆ ಕಂಡು ಬಂತು. ಆದ್ದರಿಂದ ಸಿರಿಧಾನ್ಯ ಮಧುಮೇಹಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

    ಇದನ್ನೂ ಓದಿ: Cherry Benefits: ಮಧುಮೇಹ ಇದ್ರೆ ಸಿಹಿಯಾಗಿರೋ ಚೆರ್ರಿ ತಿನ್ನಬಹುದಾ?

     ತೂಕ ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ

    ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ. ನಿಮ್ಮ ದೇಹದ ತೂಕವನ್ನು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.

    ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು. ನಿಮ್ಮ ಇಡೀ ದಿನ ಚುರುಕುತನದಿಂದ ಕೂಡಿರಲು ಮತ್ತು ನಿಮ್ಮ ದೇಹ ಸದೃಢತೆಯಿಂದ ನಡೆದುಕೊಳ್ಳಲು ಸಿರಿ ಧಾನ್ಯಗಳು ತುಂಬಾ ಸಹಕಾರಿ.

    ರೋಗ - ನಿರೋಧಕ ಶಕ್ತಿ ಹೆಚ್ಚಾಗುತ್ತದೆ

    ನಿಮಗೆ ರೋಗ - ನಿರೋಧಕ ಶಕ್ತಿ ಕಡಿಮೆ ಇದ್ದಷ್ಟೂ ಹೆಚ್ಚು ಅನಾರೋಗ್ಯಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಯಾಗಿ ಹೇಳಬೇಕೆಂದರೆ ದಿನ ಬೆಳಗಾದರೆ ನೀವೇ ನೋಡುತ್ತಿದ್ದೀರಿ. ಯಾರಿಗೆ ರೋಗ - ನಿರೋಧಕ ಶಕ್ತಿ ಕಡಿಮೆ ಇದೆ ಅವರಿಗೆ ಕೊರೋನಾ ಜೀವ ಹಿಂಡುತ್ತಿದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಸಿರಿ ಧಾನ್ಯಗಳನ್ನು ನೀವು ಸೇವಿಸುವುದು ಒಳ್ಳೆಯದು.

    ಇದನ್ನೂ ಓದಿ: Watermelon Benefits: ವ್ಯಾಯಾಮದ ನಂತ್ರ ಕಲ್ಲಂಗಡಿ ಹಣ್ಣು ಯಾಕೆ ಬೆಸ್ಟ್? ವಾಟರ್​ಮೆಲನ್ ಅದ್ಭುತ ಆರೋಗ್ಯ ಗುಣಗಳಿವು

    ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ

    ಇತ್ತೀಚಿನ ಕೆಲವು ಸಂಶೋಧನೆಗಳು ಕೂಡ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ. ರಾಗಿ ಮಕ್ಕಳ ಮೆದುಳಿನ ಬೆಳವಣಿಗೆಗೆ ಬೆಸ್ಟ್. ಅರ್ಕ ರಕ್ತ ಶುದ್ಧೀಕರಣ ಮತ್ತು ಮಲಬದ್ಧತೆ ನಿವಾರಣೆಗೆ ಒಳ್ಳೆಯದು. ಸಾಮೆ ಫಲವಂತಿಕೆ ಹೆಚ್ಚಿಸುತ್ತದೆ.

    ಥೈರಾಯ್ಡ್, ರಕ್ತದೊತ್ತಡ, ಸಂಧಿವಾತ, ಬೊಜ್ಜು ನಿವಾರಣೆಗೆ ಉತ್ತಮ. ಊದಲು ಜಾಂಡೀಸ್, ಲಿವರ್ ಮತ್ತು ಕಿಡ್ನಿ ಸಮಸ್ಯೆಗಳನ್ನು ನಿವಾರಿಸುತ್ತದೆ. ನವಣೆ ನರಗಳಿಗೆ ಶಕ್ತಿ ತುಂಬುತ್ತದೆ. ಸಜ್ಜೆ ಹೃದಯದ ಆರೋಗ್ಯ ಹೆಚ್ಚಿಸುತ್ತದೆ.
    Published by:Swathi Nayak
    First published: