• Home
 • »
 • News
 • »
 • lifestyle
 • »
 • Health: ಒಂದೇ ಕಾಲಲ್ಲಿ ಬ್ಯಾಲೆನ್ಸ್‌ ಮಾಡಿ ನಿಲ್ಲಲು ಆಗುತ್ತಿಲ್ಲವೇ? ಮಧ್ಯವಯಸ್ಕರಿಗೆ ಇದು ಎಚ್ಚರಿಕೆ ಗಂಟೆ!

Health: ಒಂದೇ ಕಾಲಲ್ಲಿ ಬ್ಯಾಲೆನ್ಸ್‌ ಮಾಡಿ ನಿಲ್ಲಲು ಆಗುತ್ತಿಲ್ಲವೇ? ಮಧ್ಯವಯಸ್ಕರಿಗೆ ಇದು ಎಚ್ಚರಿಕೆ ಗಂಟೆ!

ಒಂದೇ ಕಾಲಲ್ಲಿ ಬ್ಯಾಲೆನ್ಸ್‌ ಮಾಡಿ ನಿಲ್ಲಲು ಆಗುತ್ತಿಲ್ಲವೇ?

ಒಂದೇ ಕಾಲಲ್ಲಿ ಬ್ಯಾಲೆನ್ಸ್‌ ಮಾಡಿ ನಿಲ್ಲಲು ಆಗುತ್ತಿಲ್ಲವೇ?

ಶರೀರದ ಸಮತೋಲನ ವಿಷಯದಲ್ಲಿ ಸಂಶೋಧಕರು ಹೊಸ ಅಧ್ಯಯನ (Study) ಕೈಗೊಂಡಿದ್ದಾರೆ. ಆದರೆ ಅಧ್ಯಯನದಿಂದ ಹೊರಬಂದಿರುವ ಹೊಸ ವಿಷಯ ನಮ್ಮೆಲ್ಲರನ್ನ ಚಕಿತಗೊಳಿಸುತ್ತೆ.

 • Share this:

  ಉತ್ತಮ ಆರೋಗ್ಯಕ್ಕಾಗಿ (Health) ವ್ಯಾಯಾಮ ಮಾಡಲೇಬೇಕು. ಅದರಿಂದ ಅದೆಷ್ಟೋ ರೋಗಗಳನ್ನು ತಡೆಗಟ್ಟಬಹುದು. ಹೆಚ್ಚು ವರ್ಷ ಆರೋಗ್ಯವಾಗಿ ಜೀವಿಸಬಹುದು. ಹಾಗೆಯೇ ಶರೀರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇದೇ ಶರೀರದ ಸಮತೋಲನ ವಿಷಯದಲ್ಲಿ ಸಂಶೋಧಕರು ಹೊಸ ಅಧ್ಯಯನ (Study) ಕೈಗೊಂಡಿದ್ದಾರೆ. ಆದರೆ ಅಧ್ಯಯನದಿಂದ ಹೊರಬಂದಿರುವ ಹೊಸ ವಿಷಯ ನಮ್ಮೆಲ್ಲರನ್ನ ಚಕಿತಗೊಳಿಸುತ್ತೆ.


  ಯೋಗದಲ್ಲಿ ಒಂದೇ ಕಾಲಿನಲ್ಲಿ ಬ್ಯಾಲೆನ್ಸ್‌ ಮಾಡಿ ನಿಲ್ಲುವ ತಾಡಾಸನದಂಥ ಆಸನಗಳು ಮುಖ್ಯವಾಗಿವೆ. ಇವು ನಮ್ಮ ಶರೀರದಲ್ಲಿರುವ ಸಮತೋಲನವನ್ನು ತೋರಿಸುತ್ತವೆ. ಆದ್ರೆ ಹೀಗೆ ಒಂದೇ ಕಾಲಿನಲ್ಲಿ ಬ್ಯಾಲೆನ್ಸ್‌ ಮಾಡೋಕೆ ಸಾಧ್ಯವಾಗಿಲ್ಲ ಅಂದ್ರೆ ನೀವು ಅದನ್ನು ಅಸಡ್ಡೆ ಮಾಡೋ ಹಾಗಿಲ್ಲ. ಅದರಲ್ಲೂ 50 ವರ್ಷ ಹಾಗೂ ಅದಕ್ಕೂ ಮೆಲ್ಪಟ್ಟವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎನ್ನುತ್ತೆ ಈ ಹೊಸ ಸಂಶೋಧನೆ.


  10 ಸೆಕೆಂಡುಗಳ ಲೆಗ್‌ ಬ್ಯಾಲೆನ್ಸ್‌ ಎಚ್ಚರಿಕೆ ಗಂಟೆ!


  ಹೌದು.. ಹೊಸ ಅಧ್ಯಯನದ ಪ್ರಕಾರ ನೀವು ಹಾಗೆ ಒಂದೇ ಕಾಲಿನಲ್ಲಿ 10 ಸೆಕೆಂಡುಗಳ ಕಾಲ ನಿಲ್ಲೋದಿಕ್ಕೆ ಆಗಿಲ್ಲ ಅಂದರೆ ನಿಮಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಅಂತ ಅರ್ಥ. ಮಧ್ಯ ವಯಸ್ಕರು ಅಥವಾ 50 ವರ್ಷ ಮೇಲ್ಪಟ್ಟರು ಇದನ್ನು ಮಾಡಲಾಗದೇ ಹೋದರೆ ಮುಂದಿನ 10 ವರ್ಷಗಳಲ್ಲಿ ಸಾಯುವ ಸಾಧ್ಯತೆ 2 ಪಟ್ಟು ಹೆಚ್ಚು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.


  ಈ ಅಧ್ಯಯನದ ಪ್ರಕಾರ ಒಂದೇ ಕಾಲಿನಲ್ಲಿ ನಿಲ್ಲುವ ಸಾಮರ್ಥ ಹೊಂದಿರದೇ ಇರುವವರು ರುವವರು ಪಾರ್ಶ್ವವಾಯುವಿಗೆ ಸಿಲುಕುವ ಅಪಾಯವೂ ಹೆಚ್ಚು. ಇದಲ್ಲದೆ, ಅಂತಹ ಜನರು ಅರಿವಿನ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ. ಇದು ಮಾನಸಿಕ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಇದು ಒಬ್ಬ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು, ಯೋಚಿಸಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸವಾಲಾಗುವಂತೆ ಮಾಡುತ್ತದೆ.


  ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯು ಈ ಅಂಶಗಳನ್ನು ಸ್ಪಷ್ಟಪಡಿಸಿದೆ. 12 ವರ್ಷಗಳ ಕಾಲ ಅಧ್ಯಯನ ಕಾಲ ಅಂದರೆ 2008 ರಿಂದ 2020 ರವರೆಗೆ ಈ ಅಧ್ಯಯನ ನಡೆದಿದೆ. ಅಧ್ಯಯನದಲ್ಲಿ 51 ರಿಂದ 75 ವಷರ್‌ ವಯಸ್ಸಿನ 1,702 ಜನರನ್ನು ಬಳಸಿಕೊಳ್ಳಳಾಗಿದೆ. ಅಧ್ಯಯನದಲ್ಲಿ ಭಾಗವಹಿಸುವವರಿಗೆ ಒಂದೇ ಕಾಲಿನಲ್ಲಿ ಮಾಡುವ ತಾಡಾಸನದಂಥ ಆಸನಗಳನ್ನು ಮಾಡುವಂತೆ ಹೇಳಲಾಯ್ತು. ಆಗ ಭಾಗವಹಿಸಿದ ಐವರಲ್ಲಿ ಒಬ್ಬರು ಅಂದರೆ ಶೇ. 21 ರಷ್ಟು ಜನರು ಪರೀಕ್ಷೆಯಲ್ಲಿ ವಿಫಲರಾದರು. ಮುಂದಿನ ದಶಕದಲ್ಲಿ ಅಂದರೆ 10 ವರ್ಷಗಳ ನಂತರ ಸುಮಾರು 123 ಜನರು ವಿವಿಧ ಕಾರಣಗಳಿಂದ ನಿಧನರಾದರು.ಒಂದೇ ಕಾಲಿನಲ್ಲಿ ಬ್ಯಾಲೆನ್ಸ್‌ ಮಾಡುವುದರ ಪ್ರಯೋಜನಗಳು ಕೇವಲ ಇದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸಕ್ರಿಯ ಜೀವನಶೈಲಿಯನ್ನು ಹೊಂದಿರುವುದು ಸಹ ಪ್ರಮುಖ ವ್ಯತ್ಯಾಸವನ್ನು ಮಾಡಬಹುದು.


  ಸ್ತನ ಕ್ಯಾನ್ಸರ್‌ ಗೆ ಕಾರಣವಾಗಬಹುದು ಅನಾರೋಗ್ಯಕರ ಜೀವನಶೈಲಿ!


  ಇತ್ತೀಚಿಗೆ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಸಕ್ರಿಯವಾಗಿರುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಸ್ತನ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಯೂರೋಪಿಯನ್ ಸಂತತಿಯ 130,957 ಮಹಿಳೆಯರಿಂದ ಸಂಗ್ರಹಿಸಿದ ಮಾಹಿತಿಯು ವ್ಯಾಯಾಮ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು 40 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಈ ವಂಶವಾಹಿಗಳನ್ನು ಹೊಂದಿರುವ ಜನರು ದೀರ್ಘಕಾಲದವರೆಗೆ ಕುಳಿತುಕೊಳ್ಳುವುದನ್ನು ಸೂಚಿಸುವ ಟ್ರಿಪಲ್-ಋಣಾತ್ಮಕ ಸ್ತನ ಕ್ಯಾನ್ಸರ್ನ ಅಪಾಯವು 104 ಪ್ರತಿಶತದಷ್ಟು ಹೆಚ್ಚಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.


  ಸಂಶೋಧನೆಗಳ ಪ್ರಕಾರ ಹಾರ್ಮೋನ್-ಋಣಾತ್ಮಕ ಗೆಡ್ಡೆಯ ಪ್ರಕಾರಗಳಲ್ಲಿ ಬೆಳೆಯುತ್ತದೆ. ಇದು ಈಸ್ಟ್ರೊಜೆನ್ ಅಥವಾ ಪ್ರೊಜೆಸ್ಟರಾನ್ ಗ್ರಾಹಕಗಳೊಂದಿಗೆ ಸ್ತನ ಕ್ಯಾನ್ಸರ್‌ ಗಳಿಗಿಂತ ವೇಗವಾಗಿ ಬೆಳೆಯುತ್ತದೆ. ಹೆಚ್ಚು ದೈಹಿಕ ಚಟುವಟಿಕೆ ಮತ್ತು ಕಡಿಮೆ ಕುಳಿತುಕೊಳ್ಳುವ ಸಮಯವು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಇದು 'ಬಲವಾದ ಪುರಾವೆ'ಯನ್ನು ಒದಗಿಸುತ್ತದೆ ಎಂದು ಸಂಶೋಧನೆ ಹೇಳುತ್ತೆ.


  ಒಟ್ಟಾರೆ, ಆರೋಗ್ಯವಾಗಿರಲು ನಾವು ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕಷ್ಟೇ. ವ್ಯಾಯಾಮ ಹಾಗೂ ಹಿತಮಿತ ಆಹಾರದಿಂದ ಮಾತ್ರ ಇದು ಸಾಧ್ಯ.

  Published by:Precilla Olivia Dias
  First published: