• Home
  • »
  • News
  • »
  • lifestyle
  • »
  • Health Tips: ಸಂಸ್ಕರಿಸಿದ ಆಹಾರಗಳಿಂದ ಮೆದುಳಿಗೆ ಹೆಚ್ಚು ಹಾನಿಯಂತೆ, ಅಧ್ಯಯನದಲ್ಲಿ ಬಹಿರಂಗ

Health Tips: ಸಂಸ್ಕರಿಸಿದ ಆಹಾರಗಳಿಂದ ಮೆದುಳಿಗೆ ಹೆಚ್ಚು ಹಾನಿಯಂತೆ, ಅಧ್ಯಯನದಲ್ಲಿ ಬಹಿರಂಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ultra Processed Foods: ಸಿದ್ಧ ಆಹಾರಗಳು ದೇಹಕ್ಕೆ ವಯಸ್ಸಾದಂತೆ ಅರಿವಿನ ಮಟ್ಟವನ್ನು ಕುಂಠಿತಗೊಳಿಸಬಹುದು ಹಾಗೂ ಇಂತಹ ಆಹಾರಗಳನ್ನು ಹೆಚ್ಚು ತಿನ್ನಿ ಇಲ್ಲವೇ ಕಡಿಮೆ ತಿನ್ನಿ ಇದರಿಂದ ಉಂಟಾಗುವ ಅಪಾಯಗಳ ಪ್ರಮಾಣ ಒಂದೇ ಸಮನಾಗಿರುತ್ತದೆ

  • Share this:

ನಮ್ಮ ಆರೋಗ್ಯ (Health)  ನಾವು ಸೇವಿಸುವ ಆಹಾರದ (Food) ಮೇಲೆ ಅವಲಂಬಿತವಾಗಿರುತ್ತದೆ. ನಾವು ಆರೋಗ್ಯಕರವಾದ ಆಹಾರ ಪದ್ಧತಿಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಷ್ಟೂ ಕಾಯಿಲೆಗಳಿಂದ ದೂರ ಉಳಿಯುತ್ತೇವೆ ಹಾಗೂ ಆರೋಗ್ಯಕರ ಜೀವನವನ್ನು (Life)  ನಡೆಸಬಹುದಾಗಿದೆ. ಆದರೆ ಇಂದಿನ ಜೀವನ ಪದ್ಧತಿಯಲ್ಲಿ ಪ್ರತಿಯೊಬ್ಬರೂ ಕುರುಕಲು ತಿಂಡಿ, ಪಿಜಾ, ಬರ್ಗರ್, ಕೋಕ್, ಚಿಪ್ಸ್ ಮೊದಲಾದ ಬಾಯಿಗೆ ರುಚಿ ಎನಿಸುವ ತಿಂಡಿತಿನಿಸುಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದಾರೆ. ತಿಂದಷ್ಟೂ ಇನ್ನೂ ತಿನ್ನಬೇಕೆಂಬ ಚಪಲವನ್ನುಂಟು ಮಾಡುವ ಈ ಆಹಾರಗಳು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದು ಅಕ್ಷರಶಃ ಸತ್ಯವಾಗಿದೆ.


ಇದೀಗ ಇನ್ನೊಂದು ಅಧ್ಯನಗಳ ಪ್ರಕಾರ ಅಲ್ಟ್ರಾಪ್ರೊಸೆಸ್ಡ್ ಆಹಾರಗಳ ಸೇವನೆಯು ಉರಿಯೂತದ ಕರುಳಿನ ಕಾಯಿಲೆ, ಕ್ಯಾನ್ಸರ್, ಸ್ಥೂಲಕಾಯತೆ ಮತ್ತು ಆರಂಭಿಕ ಸಾವಿನ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿವೆ ಎಂದು ವರದಿ ಮಾಡಿದೆ.


ಅಲ್ಟ್ರಾಪ್ರೊಸೆಸ್ಡ್ ಆಹಾರಗಳು ಎಂದರೇನು?


ಅಲ್ಟ್ರಾಪ್ರೊಸೆಸ್ಡ್ ಆಹಾರಗಳು ಇಲ್ಲವೇ ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥಗಳೆಂದರೆ ಸಕ್ಕರೆ, ಕೊಬ್ಬು, ಉಪ್ಪು, ಕೃತಕ ಬಣ್ಣ ಅಥವಾ ಸಂರಕ್ಷಕಗಳಂತಹ ಅನೇಕ ಬೆರಕೆ ಪದಾರ್ಥಗಳನ್ನು ಒಳಗೊಂಡಿರುವ ಖಾದ್ಯಗಳಾಗಿವೆ.


ಇವುಗಳನ್ನು ಹೆಚ್ಚಾಗಿ ಕೊಬ್ಬು, ಪಿಷ್ಟ, ಸಕ್ಕರೆ ಹಾಗೂ ಹೈಡ್ರೋಜನೀಕರಿಸಿದ ಕೊಬ್ಬುಗಳಂತಹ ಆಹಾರಗಳಿಂದ ಹೊರತೆಗೆಯಲಾದ ಪದಾರ್ಥಗಳಿಂದ ಹೆಚ್ಚು ತಯಾರಿಸಲಾಗುತ್ತದೆ.


ಉದಾಹರಣೆಗಳಾವುವು?


ಇಂತಹ ಆಹಾರ ಪದಾರ್ಥಗಳಿಗೆ ಉದಾಹರಣೆಗಳೆಂದರೆ ಫ್ರೋಜನ್ ಮೀಲ್ಸ್ (ಹೆಪ್ಪುಗಟ್ಟಿಸಿದ ಊಟ), ತಂಪು ಪಾನೀಯಗಳು, ಹಾಟ್ ಡಾಗ್ಸ್, ಕೋಲ್ಡ್ ಕಟ್ಸ್, ಫಾಸ್ಟ್ ಫುಡ್, ಪ್ಯಾಕೇಜ್ ಮಾಡಿರುವ ಬಿಸ್ಕತ್ತುಗಳು, ಕೇಕ್‌, ಉಪ್ಪುಭರಿತ ಸ್ನ್ಯಾಕ್ಸ್




ಅಪಾಯಗಳೇನು?


ಇಂತಹ ಸಿದ್ಧ ಆಹಾರಗಳು ದೇಹಕ್ಕೆ ವಯಸ್ಸಾದಂತೆ ಅರಿವಿನ ಮಟ್ಟವನ್ನು ಕುಂಠಿತಗೊಳಿಸಬಹುದು ಹಾಗೂ ಇಂತಹ ಆಹಾರಗಳನ್ನು ಹೆಚ್ಚು ತಿನ್ನಿ ಇಲ್ಲವೇ ಕಡಿಮೆ ತಿನ್ನಿ ಇದರಿಂದ ಉಂಟಾಗುವ ಅಪಾಯಗಳ ಪ್ರಮಾಣ ಒಂದೇ ಸಮನಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.


ಅಮೆರಿಕಾದಲ್ಲಿ 73% ಕ್ಕಿಂತ ಹೆಚ್ಚು ಅಲ್ಟ್ರಾಪ್ರೊಸೆಸ್ ಆಹಾರ ಬಳಕೆ


ಅಧ್ಯಯನವು ತಿಳಿಸಿರುವಂತೆ ದಿನಕ್ಕೆ ಸೇವಿಸಬಹುದಾದ 2,000 ಕ್ಯಾಲೊರಿಗಳಲ್ಲಿ 20% ಇಂತಹ ಆಹಾರಗಳ ಸೇವನೆ ಎಂದಾದಲ್ಲಿ ಅಪಾಯ ಇದ್ದೇ ಇದೆ ಹಾಗೂ ಇದು ಮೆಕ್‌ಡೊನಾಲ್ಡ್‌ನ 530 ಕ್ಯಾಲೊರಿಗಳ ಚೀಸ್‌ಬರ್ಗರ್ ಹಾಗೂ ಸಣ್ಣ ಫ್ರೈಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದೆ.


ಇದನ್ನೂ ಓದಿ: ಭಾರತದಲ್ಲಿ ತಯಾರಾದ ಮೊದಲ ಕ್ರಿಸ್‌ಮಸ್ ಕೇಕ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ


ಅಮೆರಿಕಾದಲ್ಲಿ ಆಹಾರ ಪೂರೈಕೆಯ 73% ಕ್ಕಿಂತ ಹೆಚ್ಚು ಅಲ್ಟ್ರಾಪ್ರೊಸೆಸ್ ಆಗಿದೆ ಎಂದು ನಿರ್ಧರಿಸಲಾಗಿದೆ.


ಅಧ್ಯಯನ ಏನು ತಿಳಿಸಿದೆ?


ಅಧ್ಯಯನಕಾರರು ಸಂಶೋಧನೆ ನಡೆಸಲು ಅಧ್ಯಯನದಲ್ಲಿ 10,775 ಭಾಗವಹಿಸುವವರನ್ನು ಸೇರ್ಪಡೆಗೊಳಿಸಿದ್ದರು. ಕಡಿಮೆ ಪ್ರಮಾಣದ ಅಲ್ಟ್ರಾಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವ ಜನರಿಗೆ ಹೋಲಿಸಿದರೆ ಈ ಪ್ರಕಾರದ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದ ಜನರು 28% ಅರಿವಿನ ಮಟ್ಟದಲ್ಲಿ ಕುಸಿತ ಹಾಗೂ 25% ದಷ್ಟು ಅಂಗಗಳ ಕಾರ್ಯನಿರ್ವಹಣೆಯಲ್ಲಿ ಕುಂಠಿತವನ್ನು ಕಂಡುಕೊಂಡಿದ್ದಾರೆ.


ಅರಿವಿನ ಕುಂಠಿತ


ಈ ಅಧ್ಯಯನವನ್ನು ಕೆಲವೊಂದು ಅಂಶಗಳನ್ನು ಖಾತ್ರಿಪಡಿಸಲು ನಡೆಸಲಾಗಿದೆ ಅದre ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ದೇಹದಲ್ಲಿ ಉಂಟಾಗುವ, ಕಾರಣ ಹಾಗೂ ಪರಿಣಾಮವನ್ನು ಸಾಬೀತುಪಡಿಸಲು ನಡೆಸಲಾಗಿಲ್ಲ ಎಂದು ಅಧ್ಯಯನಕಾರರಾದ ಡೇವಿಡ್ ಕಾಟ್ಜ್ ತಿಳಿಸಿದ್ದಾರೆ.


ಅರಿವಿನ ಮಟ್ಟದಲ್ಲಿ ಉಂಟಾಗುವ ಕುಸಿತಕ್ಕೆ ಪ್ರಮುಖ ಕಾರಣ ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಅಧಿಕವಾಗಿ ಸೇವಿಸುವುದೇ ಕಾರಣವಾಗಿದೆ ಎಂಬುದು ಡೇವಿಡ್ ಅಭಿಪ್ರಾಯವಾಗಿದೆ.


ಪ್ರೋಟೀನ್ ಕೊರತೆ ಇರುತ್ತದೆ


ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಂಶಗಳು ಹೆಚ್ಚಿರುತ್ತವೆ ಹಾಗೂ ಪ್ರೋಟೀನ್ ಇರುವುದಿಲ್ಲ. ಇದರಿಂದ ತೂಕ ಏರಿಕೆ ವೇಗವಾಗಿ ನಡೆಯುತ್ತದೆ.


ಸ್ಥೂಲಕಾಯತೆಯನ್ನು ತಡೆಗಟ್ಟಲು ಮತ್ತು ಇದಕ್ಕಿರುವ ಚಿಕಿತ್ಸೆ ಎಂದರೆ ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಸೀಮಿತಗೊಳಿಸುವುದು ಪರಿಣಾಮಕಾರಿ ತಂತ್ರವಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


ಇದನ್ನೂ ಓದಿ: ದೇಹದಲ್ಲಿಯ ಅತ್ಯಧಿಕ ಕೊಬ್ಬನ್ನು ಬೇಗ ಕರಗಿಸುವ ಹಸಿರು ಆಹಾರಗಳು


ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ಮೆದುಳಿಗೆ ಹೆಚ್ಚು ಹಾನಿಯುಂಟಾಗುವುದು ಖಚಿತ ಎಂಬುದನ್ನು ತೀರ್ಮಾನಿಸಲು ಈ ಅಧ್ಯಯನಗಳೇ ಸಾಕು ಎಂದು ಡೇವಿಟ್ ಅಭಿಪ್ರಾಯಪಟ್ಟಿದ್ದಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು