Weight Loss: ಕೇವಲ 40 ನಿಮಿಷದಲ್ಲಿ ದೇಹ ತೂಕ ಇಳಿಸೋ ಟ್ರೀಟ್ಮೆಂಟ್ ಬಂದಿದ್ಯಂತೆ, ಇದು ಎಷ್ಟು ಸುರಕ್ಷಿತ?

ಡಾ. ಆರ್. ಅಹ್ಮದ್ ಈಗಾಗಲೇ 80 ಮಂದಿ ಸ್ವಯಂಸೇವಕರಿಗೆ ಬೇರಿಯಾಟ್ರಿಕ್ ವಿಧಾನದ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ "ಹಸಿವಿನ ಹಾರ್ಮೋನ್" ಎಂದೇ ಅಡ್ಡ ಹೆಸರು ಹೊಂದಿರುವ ಘ್ರೆಲಿನ್ ಹಾರ್ಮೋನ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಥೂಲಕಾಯ (Obesity) ಇತ್ತೀಚಿನ ಪ್ರಮುಖ ಆರೋಗ್ಯ ಸಮಸ್ಯೆಗಳ ಪೈಕಿ ಒಂದಾಗಿ ಬದಲಾಗಿದೆ. ಅತಿಯಾದ ಆಹಾರ ಸೇವನೆ, ( Excessive Diet) ಶ್ರಮರಹಿತ ಕೆಲಸ, ಒತ್ತಡದ ಜೀವನ ಸ್ಥೂಲ ಕಾಯಕ್ಕೆ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ. ಯೂರೋಪ್ ಹಾಗೂ ಅಮೆರಿಕದಲ್ಲಿ (Europe and America) ಇದು ಗಂಭೀರ ಸಮಸ್ಯೆಯ ಸ್ವರೂಪ ತಾಳಿದೆ. ಭಾರತದಲ್ಲೂ ಈ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೀಗ ತಮ್ಮ ಸ್ಥೂಲ ಕಾಯಇಳಿಸಿಕೊಳ್ಳಲು ಹೆಣಗುತ್ತಿರುವವರು ಆಸೆಗಣ್ಣಿನಿಂದ ನೋಡುವಂತೆ ಬ್ರಿಟನ್ ವೈದ್ಯರೊಬ್ಬರು ಕೇವಲ 40 ನಿಮಿಷಗಳಲ್ಲಿ(Just 40 minutes) ದೇಹ ತೂಕ ಇಳಿಯುವಂತಹ ಶಸ್ತ್ರಚಿಕಿತ್ಸೆಯನ್ನು(Weight loss surgery) ತಾನು ಕಂಡು ಹಿಡಿದಿರುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಸಾಧಕ ಬಾಧಕಗಳ ಬಗ್ಗೆ ವೈದ್ಯಕೀಯ ವಲಯದಲ್ಲಿ ಭಾರಿ ಜಿಜ್ಞಾಸೆ ಶುರುವಾಗಿದೆ.

ಸ್ಥೂಲ ಕಾಯ ಏರಿಕೆ
ಜಗತ್ತಿನಲ್ಲಿ ಸ್ಥೂಲ ಕಾಯದಿಂದ ಬಳಲುತ್ತಿರುವವರ ಶೇಕಡಾವಾರು ಸಂಖ್ಯೆ ಸ್ಥಿರವಾಗಿ ಏರಿಕೆಯಾಗುತ್ತಿದ್ದು, ಅದರಿಂದ ಉಂಟಾಗುವ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಸ್ಫೋಟಕ ಸ್ಥಿತಿ ತಲುಪಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ನೀವೇನಾದರೂ ಮಿತ ಆಹಾರ ಸೇವನೆ, ಉಪವಾಸ, ದಿನಚರಿ ವ್ಯಾಯಾಮ ಹಾಗೂ ರೋಗಗಳ ಭಯದಿಂದ ಬಳಲುತ್ತಿದ್ದೀರಾ? ಹಾಗಾದರೆ ನೀವು ಬೇರಿಯಾಟ್ರಿಕ್ ವಿಧಾನದ ಮೂಲಕ ಹಸಿವಿನ ಕಾರಣವಾಗುವ ಘ್ರೆಲಿನ್ ಹಾರ್ಮೋನ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ಅತಿಯಾದ ಆಹಾರ ಸೇವನೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತೀರಾ?

ಇದನ್ನೂ ಓದಿ: Salt: ಒಂದು ದಿನಕ್ಕೆ ಒಬ್ಬ ವ್ಯಕ್ತಿ ಎಷ್ಟು ಉಪ್ಪು ತಿನ್ನಬೇಕು? ಅಡುಗೆಗೆ ಎಷ್ಟು ಉಪ್ಪು ಬಳಸೋದು ಸರಿ? ತಜ್ಞರು ವಿವರಿಸಿದ್ದಾರೆ

ಬ್ರಿಟನ್‌ನ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ
ಜಗತ್ತಿನಲ್ಲಿ ದೊಡ್ಡ ಪ್ರಮಾಣದ ಜನಸಂಖ್ಯೆಯು ಸ್ಥೂಲ ಕಾಯ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಬ್ರಿಟನ್‌ನ ಪ್ರಮುಖ ಆರೋಗ್ಯ ಸಂಸ್ಥೆ ಎನ್‌ಎಚ್‌ಎಸ್‌ ಪ್ರಕಾರ ಸ್ಥೂಲಕಾಯಕ್ಕೆ ಅತಿಯಾದ ಆಹಾರ ಸೇವನೆ ಹಾಗೂ ಕಡಿಮೆ ಪ್ರಮಾಣದ ಓಡಾಟ ಕಾರಣ ಎಂದು ಗುರುತಿಸಲಾಗಿದೆ. ನೀವು ಅಧಿಕ ಪ್ರಮಾಣದ ಆಹಾರ ಸೇವಿಸಿ-ಮುಖ್ಯವಾಗಿ ಕೊಬ್ಬು ಹಾಗೂ ಸಕ್ಕರೆಭರಿತ ಆಹಾರಗಳು-ಅದನ್ನು ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳ ಮೂಲಕ ದಹಿಸದಿದ್ದರೆ ಹೆಚ್ಚುವರಿ ಆಹಾರವನ್ನು ಶರೀರದಲ್ಲಿ ಕೊಬ್ಬಾಗಿ ಶೇಖರಿಸಿಡಲ್ಪಸುತ್ತದೆ.

ತಪ್ಪು ಸಮಯದಲ್ಲಿ ಆಹಾರ ಸೇವನೆ
ಓರ್ವ ಕ್ರಿಯಾಶೀಲ ಪುರುಷನಿಗೆ ದಿನವೊಂದಕ್ಕೆ 2500 ಕ್ಯಾಲೊರಿ ಇಂಧನದ ಅಗತ್ಯವಿದ್ದರೆ, ಕ್ರಿಯಾಶೀಲ ಮಹಿಳೆಗೆ ಪ್ರತಿ ದಿನ 2000 ಕ್ಯಾಲೊರಿ ಇಂಧನದ ಅಗತ್ಯವಿರುತ್ತದೆ. ಆದರೆ ನಮ್ಮಲ್ಲಿ ಬಹುತೇಕರು ಕ್ಯಾಲೋರಿ ಸೇವನೆ ಹಾಗೂ ಕ್ಯಾಲೊರಿ ದಹನದ ವಿಚಾರದಲ್ಲಿ ಅವಘಡ ಮಾಡಿಕೊಳ್ಳುತ್ತೇವೆ. ಬಹುತೇಕರು ದೈಹಿಕ ಚಟುವಟಿಕೆ ಹೊಂದಿಲ್ಲದಿರುವುದರಿಂದ ಅವರು ದೊಡ್ಡ ಪ್ರಮಾಣದಲ್ಲಿ ಸೇವಿಸುವ ಕ್ಯಾಲೋರಿ ದಹನಗೊಳ್ಳದೆ ದೇಹದಲ್ಲಿ ಕೊಬ್ಬಾಗಿ ಶೇಖರಿಸಲ್ಪಡುತ್ತದೆ. ತಪ್ಪು ಆಹಾರ ಸೇವನೆ (ಕ್ಯಾಲೊರಿ ಹೆಚ್ಚು ಮತ್ತು ಪೌಷ್ಟಿಕಾಂಶ ರಹಿತ ಆಹಾರ)ಯಲ್ಲದೆ, ತಪ್ಪು ಸಮಯದಲ್ಲಿ ಆಹಾರ ಸೇವನೆ ಮಾಡುವುದಿಂದ ಸ್ಥೂಲಕಾಯ ವ್ಯಕ್ತಿಗಳು ಅಗತ್ಯಕ್ಕಿಂತ ಹೆಚ್ಚು ಸೇವಿಸುವುದನ್ನು ಕಾಣಬಹುದು.

ಹಸಿವಿನ ಹಾರ್ಮೋನ್
ಸದ್ಯ, ಮಿತ ಆಹಾರ ಸೇವನೆ ಹಾಗೂ ವ್ಯಾಯಾಮವಿಲ್ಲದೆ "ಹಸಿವಿನ ಹಾರ್ಮೋನ್" ಸ್ಥಗಿತಗೊಳಿಸುವ ಮೂಲಕ ಸ್ಥೂಲ ಕಾಯವನ್ನು ನಿಯಂತ್ರಿಸಬಹುದು ಎಂದು ಬ್ರಿಟನ್ ಶಸ್ತ್ರಚಿಕಿತ್ಸಕರೊಬ್ಬರು ಭರವಸೆ ನೀಡಿದ್ದಾರೆ. ಈ ಕುರಿತು ತಾರ್ಕಿಕ ಪ್ರಯೋಗವೊಂದು ಶುರುವಾಗಿದ್ದು, ಈ ಪ್ರಯೋಗವು ಅತಿಯಾದ ಆಹಾರ ಸೇವಿಸುವ ಇಚ್ಛೆಯನ್ನು ಹದ್ದುಬಸ್ತಿನಲ್ಲಿರಿಸಿ ಕೇವಲ 40 ನಿಮಿಷಗಳಲ್ಲಿ ಸ್ಥೂಲ ಕಾಯವನ್ನು ಇಳಿಸಲು ಸಾಧ್ಯವೇ ಎಂಬುದರ ಕುರಿತು ತನಿಖೆ ನಡೆಸಲಿದೆ. ಈ ಶಸ್ತ್ರಚಿಕಿತ್ಸೆಗೆ ಕೇವಲ 1500 ಪೌಂಡ್ ತಗುಲಲಿದ್ದು, ಸಾಮಾನ್ಯ ಸ್ಥೂಲಕಾಯ ಇಳಿಕೆ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಅದರ ಕಾಲು ಭಾಗದಷ್ಟು ಮಾತ್ರ ತಗುಲಲಿದೆ ಎಂದು ಬ್ರಿಟನ್‌ನ Sun.com ವರದಿ ಮಾಡಿದೆ.

ಲಂಡನ್‌ನ ಸೇಂಟ್ ಮೇರೀಸ್ ಆಸ್ಪತ್ರೆಯಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸಕರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಆರ್. ಅಹ್ಮದ್ ಈಗಾಗಲೇ 80 ಮಂದಿ ಸ್ವಯಂಸೇವಕರಿಗೆ ಬೇರಿಯಾಟ್ರಿಕ್ ವಿಧಾನದ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ "ಹಸಿವಿನ ಹಾರ್ಮೋನ್" ಎಂದೇ ಅಡ್ಡ ಹೆಸರು ಹೊಂದಿರುವ ಘ್ರೆಲಿನ್ ಹಾರ್ಮೋನ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ
ಈ ಕುರಿತು ಮೇಲ್ಆನ್‌ಲೈನ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಡಾ‌. ಅಹ್ಮದ್, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ದಿನಚರಿ ವಿದ್ಯಮಾನವಾಗಿ ಬದಲಾಗಿದ್ದು, ರೋಗಿಗಳನ್ನು ಕೇವಲ 2 ಗಂಟೆ ಅವಧಿಯೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ರೋಗಿಯು ಹಸಿವಿನ ಸಮಸ್ಯೆಯೊಂದಿಗೆ ಶಸ್ತ್ರಚಿಕಿತ್ಸೆಗೊಳಗಾಗಿ ಹಸಿವು ರಹಿತ ಸ್ಥಿತಿಯೊಂದಿಗೆ ಹೊರಬರುತ್ತಾನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Health tips: ತೂಕ ಹೆಚ್ಚು ಮಾಡಬಹುದಾದ ಕೆಲ ಆಹಾರಗಳ ಬಗ್ಗೆ ಇರಲಿ ಸ್ವಲ್ಪ ಎಚ್ಚರಿಕೆ..!

ಈ ವಿಧಾನದ ವೇಗದಿಂದ ಸ್ಥೂಲ ಕಾಯ ಚಿಕಿತ್ಸೆಯ ವೆಚ್ಚ ಕಡಿಮೆಯಾಗಿ ಹೆಚ್ಚು ಸ್ಥೂಲಕಾಯರು ಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಿದ್ದೂ ಪೂರ್ಣಗೊಳ್ಳಬೇಕಿರುವ ಪ್ರಾಯೋಗಿಕ ಚಿಕಿತ್ಸೆಯು ನಿಶ್ಚಿತವಾಗಿ ಪರಿಣಾಮಕಾರಿ ಎಂಬುದು ದೃಢಪಡಬೇಕಿದೆ. ಅಲ್ಲದೆ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳು ಚಿಕಿತ್ಸೆಯ ನಂತರ ದೀರ್ಘಕಾಲ ಜೀವಿಸಿತ್ತಾರೆಯೇ ಎಂಬ ಅಂಶ ಪರೀಕ್ಷೆಗೊಳಗಾಗಬೇಕಿದೆ.
Published by:vanithasanjevani vanithasanjevani
First published: