ಯುಗಾದಿ ಹಬ್ಬವನ್ನು (Ugadi Festival) ಸಂಭ್ರಮಿಸಲು ಸಿಹಿತಿಂಡಿ (Sweet) ಏನು ಮಾಡಬೇಕು ಅಂತ ಯೋಚಿಸುತ್ತಿದ್ದರೆ, ಬೇಳೆ ಹೋಳಿಗೆ (Holige/ obbattu) ನಿಮ್ಮ ಆಯ್ಕೆಯಾಗಿರಲಿ. ಪೂರಣ್ ಪೋಳಿ (Puran Poli) ಎಂದೂ ಕರೆಯಲ್ಪಡುವ ಬೇಳೆ ಹೋಳಿಗೆಯು ಹಬ್ಬಕ್ಕಾಗಿಯೇ ತಯಾರಿಸಲಾದ ಆಕರ್ಷಕವಾದ ಸ್ಟಫ್ಡ್ ಸಿಹಿ ತಿಂಡಿಯಾಗಿದೆ. ಇದನ್ನು ಯುಗಾದಿಯಂದು ವಿಶೇಷವಾಗಿ ತಯಾರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ (South India)ಜನಪ್ರಿಯ ಭಕ್ಷ್ಯವಾಗಿದೆ. ಪೂರಣ್ ಪೋಳಿ ಮಹಾರಾಷ್ಟ್ರಕ್ಕೆ (Maharashtra) ಸ್ಥಳೀಯವಾಗಿದೆ ಮತ್ತು ಇದು ಮರಾಠಿ ಪಾಕಪದ್ಧತಿಗೆ ಸೇರಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದಾಗ್ಯೂ, ಅವುಗಳಲ್ಲಿ ಹೆಚ್ಚಿನವು ಕರ್ನಾಟಕ(Karnataka)ಕ್ಕೆ ಸ್ಥಳೀಯವಾಗಿದೆ ಮತ್ತು ಸಾಮಾನ್ಯವಾಗಿ ಬೇಳೆ ಒಬ್ಬಟ್ಟು ಅಥವಾ ಬೇಳೆ ಹೋಳಿಗೆ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ, ಇದನ್ನು ವಿವಿಧ ರೀತಿಯ ಹೂರ್ಣದೊಂದಿಗೆ ತಯಾರಿಸಲಾಗುತ್ತದೆಯಾದರೂ, ಕರ್ನಾಟಕದಲ್ಲಿ ಬೇಳೆಯಿಂದ ಮಾಡುವ ಹೋಳಿಗೆ ಹೆಚ್ಚು ಪ್ರಸಿದ್ಧಿ ಹೊಂದಿದೆ.
ಪರಾಠವನ್ನು ಮೈದಾ ಬಳಸಿ ತಯಾರಿಸಲಾಗುತ್ತದೆ ಮತ್ತು ಸ್ಟಫಿಂಗ್ ಅನ್ನು ಚನಾ ದಾಲ್ ಮತ್ತು ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ. ಬೇಳೆ ಹೋಳಿಗೆಯು ಮುಂಬರುವ ಹಬ್ಬದ ಋತುವಿನಲ್ಲಿ ತಯಾರಿಸಲು ಸರಳವಾದ, ರುಚಿಕರವಾದ ಖಾದ್ಯವಾಗಿದೆ.
ನೀವು ಆರೋಗ್ಯ ದೃಷ್ಟಿಯಿಂದ ಮಾಡಲು ಬಯಸಿದರೆ ನೀವು ಮೈದಾವನ್ನು ಗೋಧಿ ಹಿಟ್ಟಿನೊಂದಿಗೆ ಬದಲಾಯಿಸಬಹುದು. ಈ ಹೋಳಿಗೆ ಬೆಲ್ಲ ಮತ್ತು ತುಪ್ಪದ ಪೌಷ್ಠಿಕ ಅಂಶವನ್ನು ನೀಡುವುದರಿಂದ ಇದು ಸಾಕಷ್ಟು ಆರೋಗ್ಯಕರವಾಗಿರುತ್ತದೆ. ಆದ್ದರಿಂದ, ಯುಗಾದಿಗೆ ಈ ರುಚಿಕರವಾದ ಸ್ಟಫ್ಡ್ ಹೋಳಿಗೆ ತಯಾರಿಸಿ ಅವುಗಳನ್ನು ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಆನಂದಿಸಿ.
ಬೆಲ್ಲದ ಹೋಳಿಗೆ ಮಾಡಲು ಬೇಕಾಗಿರುವ ಪದಾರ್ಥಗಳು
(ಸ್ಟಪ್ಡ್/ಹೂರ್ಣ ಮಾಡಲು)
1/2 ಕಪ್ ಕಡ್ಲೆ ಬೇಳೆ
1 1/2 ಕಪ್ ನೀರು
1/2 ಕಪ್ ಪುಡಿ ಮಾಡಿದ ಬೆಲ್ಲ
1 ಚಿಟಿಕೆ ಅರಿಶಿನ
1 ಚಮಚ ತುಪ್ಪ
ಹಿಟ್ಟು ತಯಾರಿಸಿಕೊಳ್ಳಲು ಬೇಕಾಗಿರುವ ಪದಾರ್ಥಗಳು
1/2 ಕಪ್ ಮೈದಾ ಹಿಟ್ಟು
1/4 ಟೀ ಚಮಚ ಅರಿಶಿನ
2 ಚಮಚ ಎಣ್ಣೆ
1 ಪಿಂಚ್ ಉಪ್ಪು
ಅಗತ್ಯವಿರುವಂತೆ ನೀರು
4 ಟೀ ಚಮಚ ತುಪ್ಪ
ಬೆಲ್ಲದ ಹೋಳಿಗೆ ಮಾಡುವ ವಿಧಾನ
* ಹಿಟ್ಟನ್ನು ತಯಾರಿಸಿ
ಅಗತ್ಯವಿರುವಂತೆ ಮೈದಾ ಹಿಟ್ಟು, ಅರಿಶಿನ, ಉಪ್ಪು ಮತ್ತು ನೀರನ್ನು ಬೆರೆಸಿ ಹಿಟ್ಟನ್ನು ಒರೆದುಕೊಳ್ಳುವ ಹದಕ್ಕೆ ತಯಾರಿಸಿ. ಹಿಟ್ಟನ್ನು ಸಿದ್ಧಪಡಿಸಿದ ನಂತರ, ಅದನ್ನು ಮುಚ್ಚಿ ಮತ್ತು 30 ನಿಮಿಷಗಳ ಕಾಲ ನೆನೆಯಲು ಬಿಡಿ.
ಇದನ್ನೂ ಓದಿ: Ugadi: ನಾವಿರೋದು 2022ರಲ್ಲಿ ಅಲ್ಲ, 2079ರಲ್ಲಿ! ಹಿಂದೂ ಕ್ಯಾಲೆಂಡರ್ನಲ್ಲಿದೆ ಕುತೂಹಲಕಾರಿ ಮಾಹಿತಿ
*ಕಡ್ಲೆ ಬೇಳೆ ಬೇಯಿಸಿ
ಪ್ರೆಶರ್ ಕುಕ್ಕರ್ನಲ್ಲಿ 1-2 ಕಪ್ ನೀರಿನೊಂದಿಗೆ ಕಡ್ಲೆ ಬೇಳೆ, ಅರಿಶಿನ ಪುಡಿಯನ್ನು ಸೇರಿಸಿ, ಬೇಯಿಸಿ. ನಂತರ ಮುಚ್ಚಳ ತೆಗೆದು ಹೆಚ್ಚುವರಿ ನೀರನ್ನು ಸೋಸಿಕೊಳ್ಳಿ ಮತ್ತು ಬೇಯಿಸಿದ ಬೇಳೆಯನ್ನು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ.
*ಸ್ಟಫಿಂಗ್/ಹೂರ್ಣ ತಯಾರಿಸಿ
ಸ್ಟಫಿಂಗ್ ತಯಾರಿಸಲು, ಸಣ್ಣ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ. ಬಾಣಲೆಗೆ 1 ಚಮಚ ತುಪ್ಪ ಸೇರಿಸಿ, ಬೆಲ್ಲ ಸೇರಿಸಿ ಮತ್ತು ಸಂಪೂರ್ಣವಾಗಿ ಕರಗಲು ಬಿಡಿ. ಬೇಯಿಸಿದ ಚನಾ ದಾಲ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ದಪ್ಪವಾದ ನಂತರ, ನಯವಾದ ಸ್ಟಫಿಂಗ್ ಅನ್ನು ತಯಾರಿಸಲು ಚೆನ್ನಾಗಿ ಮ್ಯಾಶ್ ಮಾಡಿ.
*ಸ್ಟಫ್ಡ್ ಮೈದಾ ಬಾಲ್ಗಳನ್ನು ತಯಾರಿಸಿ
ಈಗ ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಮತ್ತು ಅವುಗಳನ್ನು ಸಿದ್ಧಪಡಿಸಿದ ಹೂರ್ಣದ ಮಿಶ್ರಣದಿಂದ ತುಂಬಿಸಿ. ನಂತರ ಸ್ಟಫ್ಡ್ ಮೈದಾ ಬಾಲ್ಗಳನ್ನು ರೋಲಿಂಗ್ ಪಿನ್ ಬಳಸಿ ಅವುಗಳನ್ನು ಒರೆದುಕೊಳ್ಳಿ.
ಇದನ್ನೂ ಓದಿ: Ramadan Fasting: ಪವಿತ್ರ ರಂಜಾನ್ ತಿಂಗಳಲ್ಲಿ ಗರ್ಭಿಣಿಯರು ಉಪವಾಸ ಮಾಡಬೇಕಾ? ಅವರಿಗೆ ಇರುವ ವಿನಾಯಿತಿಗಳ ವಿವರ ಇಲ್ಲಿದೆ
*ತವಾವನ್ನು ಬಿಸಿ ಮಾಡಿ
ತವಾ ಬಿಸಿ ಮಾಡಿ ಸುತ್ತಿಕೊಂಡ ಹೋಳಿಗೆಯನ್ನು ಮಧ್ಯಮ ಉರಿಯಲ್ಲಿ ಬೇಯಿಸಿ ಮತ್ತು ಅದರ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ. ಎರಡೂ ಬದಿಗಳಿಂದ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ ಮತ್ತು ಬಿಸಿಬಿಸಿಯಾಗಿ ಬಡಿಸಿ.
ಈ ಹೋಳಿಗೆಯು ತುಪ್ಪ ಅಥವಾ ಹಾಲು, ಕಾಯಿ ಹಾಲಿನ ಜೊತೆ ಸೇವಿಸಲು ಇನ್ನಷ್ಟು ರುಚಿಯಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ