Turmeric: ಅಬ್ಬಬ್ಬಾ ಅರಿಶಿನದಲ್ಲಿ ಎಷ್ಟೊಂದು ಬಗೆಯ ವಿಧಗಳಿವೆ ಗೊತ್ತಾ...?

Turmeric Types: ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯ ಸೇರಿದಂತೆ ಸೌಂದರ್ಯದ ವಿಷಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅರಿಶಿನ ಅಥವಾ ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ

ಅರಿಶಿನ

ಅರಿಶಿನ

  • Share this:
    ವೈಜ್ಞಾನಿಕವಾಗಿ ಅರಿಶಿನದ(Turmeric) ಉಪಯೋಗ ಒಳ್ಳೆಯದು ಎಂದು ಸಾಭೀತಾಗಿದೆ. ಇದು ಶುಂಠಿ (GingerLಜಾತಿಗೆ ಸೇರಿದ ಗೆಡ್ಡೆ. ಅಂದರೆ ಇದು ಭೂಮಿಯ(Earth)ಒಳಗೆ ಬೆಳೆಯುವ ಕಾರಣ ಇದನ್ನು ಆಯುರ್ವೇದದಲ್ಲಿ(Ayurveda), ಮನೆ ಮದ್ದುಗಳಲ್ಲಿ(Home )ಹೆಚ್ಚಾಗಿ ಬಳಸುತ್ತಾರೆ ಇದು ಗಾಯವಾದ ಜಾಗಕ್ಕೆ ಹಚ್ಚಬಹುದು. ಚರ್ಮದ (Skin)ಕೆಲವು ಖಾಯಿಲೆಗಳಿಗೆ ಅರಶಿನ ರಾಮಬಾಣ. ಭಾರತದಲ್ಲಿ ಅರಶಿನವನ್ನು ಆಹಾರದಲ್ಲಿ ಬಳಸುತ್ತಾರೆ. ಇದು ಆಹಾರಕ್ಕೆ ಬಣ್ಣ ಕೊಡುತ್ತದೆ. ಸ್ವಲ್ಪ ಬಳಸಿದಲ್ಲಿ, ಆಹಾರದ ರುಚಿಯಲ್ಲಿ ಬದಲಾವಣೆ ಕಾಣಲ್ಲ .ಹೆಚ್ಚು ಬಳಸಿದಲ್ಲಿ ಅರಶಿನದ ಒಂದು ಒಗರು ಇರುತ್ತದೆ. ಇನ್ನು ಅಡುಗೆ ಮನೆಯಲ್ಲಿ ಅರಿಶಿನವು ಭಾರತೀಯ ಅಡುಗೆಯ ಅವಿಭಾಜ್ಯ ಅಂಗವಾಗಿದೆ. ಸಾರು, ಸಾಂಬಾರು ದಾಲ್‌, ಸಬ್ಜಿ ಎಂದು ಎಲ್ಲಾ ಅಡುಗೆಯಲ್ಲೂ ಅರಿಶಿನವನ್ನು ಸೇರಿಸಲಾಗುತ್ತದೆ. ಆರ್ಯುವೇದದಲ್ಲಿಯೂ ಅರಿಶಿನಕ್ಕೆ ಹೆಚ್ಚಿನ ಮಹತ್ವವಿದ್ದು, ಹಲವು ಔಷಧಿಗಳ ತಯಾರಿಗೂ ಇದನ್ನು ಬಳಸಲಾಗುತ್ತದೆ.

    ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಶಿನದಲ್ಲಿರುವ ಕುರ್ಕುಮಿನ್‌ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಇನ್ನು ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯ ಸೇರಿದಂತೆ ಸೌಂದರ್ಯದ ವಿಷಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅರಿಶಿನ ಅಥವಾ ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಇಂಥಹ ಅರಿಶಿನದಲ್ಲಿ ಎಷ್ಟೆಲ್ಲಾ ವಿಧಗಳಿವೆ. ಇದರಲ್ಲಿ ಯಾವುದು ಹೆಚ್ಚು ಉಪಯುಕ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

    1)ಲಕಾಡಾಂಗ್: ಅರಿಶಿನವು ಮೇಘಾಲಯ ರಾಜ್ಯದಲ್ಲಿ ನೆಲೆಗೊಂಡಿರುವ ಲಕಡಾಂಗ್ ಗ್ರಾಮಕ್ಕೆ ಸೇರಿದ್ದಾಗಿದೆ., ಇದನ್ನು ಮೇಘಾಲಯದ ಜೈನ್ತಿಯಾ ಹಿಲ್ಸ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಲಕಾಡಾಂಗ್ ಅರಿಶಿನವು ಕರ್ಕ್ಯುಮಿನ್ ಪೌಡರ್, ಎಣ್ಣೆ ಮತ್ತು ಒಲಿಯೊರೆಸಿನ್ ಸೇರಿದಂತೆ ರಫ್ತು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜೊತೆಗೆ ವಿಶ್ವದ ಅತ್ಯುತ್ತಮ ಅರಿಶಿನ ರೂಪಾಂತರ ಎಂದು ಗುರುತಿಸಿಕೊಂಡಿದೆ.. ಸಾಮಾನ್ಯವಾಗಿ, ಅರಿಶಿನವು ಸುಮಾರು 2-4% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಆದರೆ ಲಕಾಡಾಂಗ್‌ನ ಸಾಂದ್ರತೆಯು 7-12% ವರೆಗೆ ಇರುತ್ತದೆ.

    ಇದನ್ನೂ ಓದಿ: ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲದೇ ತೂಕ ಇಳಿಸಲು ಸಹಕಾರಿ ಈ ಅರಿಶಿನ

    2)ಅಲೆಪ್ಪಿ ಅರಿಶಿನ: ಅಲೆಪ್ಪಿಯು ಕೇರಳದ ಒಂದು ಸಣ್ಣ ಪಟ್ಟಣವಾಗಿದ್ದು, ಪ್ರಕೃತಿಯ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಹಾಗೆಯೇ ಅಲೆಪ್ಪಿಯಲ್ಲಿ ಹೆಚ್ಚನ ಪ್ರಮಾಣದಲ್ಲಿ ಅರಿಶಿನವನ್ನು ಬೆಳೆಯುತ್ತಾರೆ. ಅಲೆಪ್ಪಿ ಅರಿಶಿನವು ಸುಮಾರು 5% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಮತ್ತು ಹಲವಾರು ಮನೆಮದ್ದುಗಳು ಮತ್ತು ಆಯುರ್ವೇದ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.

    3)ಮದ್ರಾಸ್‌: ಮದ್ರಾಸ್ ತಳಿಯ ಅರಿಶಿನವು ದಕ್ಷಿಣ ಭಾರತದಲ್ಲಿ ಕಂಡುಬರುವ ಮತ್ತೊಂದು ಅರಿಶಿನವಾಗಿದೆ. ಈ ಅರಿಶಿನವು ಸೂಪರ್ಮಾರ್ಕೆಟ್ಗಳಲ್ಲಿ ಕಂಡುಬರುವ ಸಾಮಾನ್ಯ ವಿಧವಾಗಿದೆ. ಇದು ತಿಳಿ ಹಳದಿ ಬಣ್ಣ ಮತ್ತು ಸರಾಸರಿ 3.5% ರಷ್ಟು ಕರ್ಕ್ಯುಮಿನ್ ಶೇಕಡಾವಾರು ಹೊಂದಿದೆ.

    4)ಈರೋಡ್ :  ಮಾರ್ಚ್ 2019ರಲ್ಲಿ ಈರೋಡ್ ಅರಿಶಿನವು ತನ್ನ GI ಟ್ಯಾಗ್ ಅನ್ನು ಪಡೆದುಕೊಂಡಿದೆ. GI ಟ್ಯಾಗ್ ಅಥವಾ ಭೌಗೋಳಿಕ ಟ್ಯಾಗ್ ಎನ್ನುವುದು ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಿ ಉತ್ಪಾದಿಸಲ್ಪಡುವ, ಅಲ್ಲಿನ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಆಹಾರ ಉತ್ಪನ್ನಗಳಿಗೆ ನೀಡುವ ಟ್ಯಾಗ್ ಆಗಿದೆ. ಈರೋಡ್ ತಮಿಳುನಾಡಿನ ಒಂದು ಸಣ್ಣ ನಗರವಾಗಿದ್ದು, ಇಲ್ಲಿ ಈ ಅರಿಶಿನವನ್ನು ಉತ್ಪಾದಿಸಲಾಗುತ್ತದೆ.

    5)ಸಾಂಗ್ಲಿ:  ಸಾಂಗ್ಲಿ ಅರಿಶಿನವು ಅದರ ವಿಶಿಷ್ಟ ಗುಣಲಕ್ಷಣಗಳಿಂದಾಗಿ 2018ರಲ್ಲಿ ಅದರ GI ಟ್ಯಾಗ್ ಅನ್ನು ಪಡೆದುಕೊಂಡಿದೆ. ಇದನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉತ್ಪಾದಿಸಲಾಗುತ್ತದೆ. ದೇಶದಲ್ಲಿ 70%ಕ್ಕಿಂತ ಹೆಚ್ಚು ಅರಿಶಿನ ಉತ್ಪಾದನೆಯ ಮಹಾರಾಷ್ಟ್ರ ರಾಜ್ಯದಿಂದಾಗಿದೆ. ಸಾಂಗ್ಲಿ ಅರಿಶಿನವು ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಈ ಅರಿಶಿನವನ್ನು ಹೆಚ್ಚಾಗಿ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

    ಇದನ್ನೂ ಓದಿ: ಈ ಖಾಯಿಲೆ ಇರುವವರು ಅರಿಶಿನವನ್ನು ಮುಟ್ಟಲೇಬಾರದು, ಎಲ್ರಿಗೂ ಒಳ್ಳೆಯದಲ್ಲ ಅರಿಶಿನ!

    6)ನಿಜಾಮಾಬಾದ್: ಜನಪ್ರಿಯ ಭಾರತೀಯ ಅರಿಶಿನ ವಿಧದಲ್ಲಿ ನಿಜಾಮಾಬಾದ್ ಕೂಡಾ ಒಂದು. ತೆಲಂಗಾಣದ ನಿಜಾಮಾಬಾದ್ ನಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದು ಸರಾಸರಿ 2-4% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಮತ್ತು ಗಾಢ ಹಳದಿ ಬಣ್ಣವನ್ನು ಹೊಂದಿರುತ್ತದೆ
    Published by:ranjumbkgowda1 ranjumbkgowda1
    First published: