Hepatitis Disease: ಹೆಪಟೈಟಿಸ್ ಯಾವ ರೀತಿ ಮಾರಣಾಂತಿಕ ಕಾಯಿಲೆ ಉಂಟು ಮಾಡುತ್ತವೆ?

ಯಕೃತ್ತಿನಲ್ಲಿ ಉಂಟಾಗುವ ಉರಿಯೂತ ಇಡೀ ದೇಹದ ಕಾರ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಏಕೆಂದರೆ ಅದು ಪೋಷಕಾಂಶಗಳನ್ನು ಸಂಸ್ಕರಿಸುತ್ತದೆ, ರಕ್ತವನ್ನು ಫಿಲ್ಟರ್ ಮಾಡುತ್ತದೆ. ಮತ್ತು ಸೋಂಕಿನ ವಿರುದ್ಧ ಹೋರಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೆಪಟೈಟಿಸ್ (Hepatitis) ಒಂದು ರೀತಿಯ ವೈರಸ್ (Virus) ಆಗಿದೆ. ಅದು ದೇಹವನ್ನು (Body) ತಲುಪಿ ಯಕೃತ್ತಿನಲ್ಲಿ (Liver) ಉರಿಯೂತ ಉಂಟು ಮಾಡುತ್ತದೆ. ಯಕೃತ್ತು ನಿಮ್ಮ ದೇಹದ ಪ್ರಮುಖ ಭಾಗವಾಗಿದೆ, ಆದ್ದರಿಂದ ಯಕೃತ್ತಿನಲ್ಲಿ ಉಂಟಾಗುವ ಉರಿಯೂತ ಇಡೀ ದೇಹದ ಕಾರ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಏಕೆಂದರೆ ಅದು ಪೋಷಕಾಂಶಗಳನ್ನು ಸಂಸ್ಕರಿಸುತ್ತದೆ, ರಕ್ತವನ್ನು ಫಿಲ್ಟರ್ ಮಾಡುತ್ತದೆ. ಮತ್ತು ಸೋಂಕಿನ ವಿರುದ್ಧ ಹೋರಾಡುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆ, ಕಲುಷಿತ ರಕ್ತ, ವೀರ್ಯದಂತಹ ವಿಷಕಾರಿ ವಸ್ತುಗಳು ಮತ್ತು ಕೆಲವು ಔಷಧಿಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳು ಹೆಪಟೈಟಿಸ್‌ಗೆ ಕಾರಣ ಆಗುತ್ತದೆ.

  ಹೆಪಟೈಟಿಸ್ ವೈರಸ್ ನ ವಿಧಗಳು ಯಾವುವು?

  ಹೆಪಟೈಟಿಸ್‌ನಲ್ಲಿ ಐದು ವಿಧಗಳಿವೆ - ಎ, ಬಿ, ಸಿ, ಡಿ ಮತ್ತು ಇ. ಇವುಗಳಲ್ಲಿ, ಬಿ ಮತ್ತು ಸಿ ಅತ್ಯಂತ ಅಪಾಯಕಾರಿ ಮತ್ತು ದೀರ್ಘಕಾಲದ ಹೆಪಟೈಟಿಸ್ ಎಂದು ಹೇಳಲಾಗಿದೆ. ಆದರೆ ಎ ಮತ್ತು ಇ ಹೆಚ್ಚು ಅಪಾಯಕಾರಿ ಅಲ್ಲ.

  ಸಂಸ್ಕರಿಸದ ಹೆಪಟೈಟಿಸ್ ಯಕೃತ್ತಿನ ವೈಫಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು. ಹೆಪಟೈಟಿಸ್ ವೈರಸ್ ಎಚ್ಐವಿಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

  ಈ ವೈರಸ್ ಸೋಂಕಿಗೆ ಒಳಗಾದಾಗ ಅನೇಕ ಬಾರಿ ಯಾವುದೇ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಕಣ್ಣುಗಳು ಮತ್ತು ಚರ್ಮದ ಹಳದಿ ಬಣ್ಣ, ಕಪ್ಪು ಮೂತ್ರ, ಹೊಟ್ಟೆ ನೋವು, ಹಸಿವಿನ ಕೊರತೆ, ಜ್ವರ, ವಾಕರಿಕೆ, ಸುಸ್ತು ಮತ್ತು ಅತಿಸಾರ ಉಂಟಾಗುತ್ತದೆ.

  ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

  ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 350 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೈರಲ್ ಹೆಪಟೈಟಿಸ್‌ನಿಂದ ಬಳಲುತ್ತಿದ್ದಾರೆ. ಮತ್ತು ಪ್ರತಿ 30 ಸೆಕೆಂಡಿಗೆ ಕನಿಷ್ಠ ಒಬ್ಬ ವ್ಯಕ್ತಿ ಯಕೃತ್ತಿನ ವೈಫಲ್ಯ, ಸಿರೋಸಿಸ್ ಮತ್ತು ಕ್ಯಾನ್ಸರ್ ಸೇರಿದಂತೆ ಹೆಪಟೈಟಿಸ್-ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಾರೆ. ಇತ್ತೀಚೆಗೆ WHO ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿದೆ. ಇದರಲ್ಲಿ ಹೆಪಟೈಟಿಸ್ ತಡೆಗೆ  ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಸಲಹೆ ನೀಡಲಾಗಿದೆ.

  ಸ್ಟೆರೈಲ್ ಬಳಕೆ

  ಇಂಜೆಕ್ಷನ್ ಮೂಲಕ ಸೋಂಕು ಹರಡುವಿಕೆ ತಡೆಯಲು ಸ್ಟೆರೈಲ್ ಬಳಸಲಾಗುತ್ತದೆ. ಇಬ್ಬರು ವ್ಯಕ್ತಿಗಳ ನಡುವೆ ಸೂಜಿ ಅಥವಾ ಸಿರಿಂಜ್‌ ಮರುಬಳಕೆ ಮಾಡಿದರೆ ಅಥವಾ ಆಕಸ್ಮಿಕವಾಗಿ ಸೂಜಿ ಚುಚ್ಚಿದರೆ HIV ಮತ್ತು ಹೆಪಟೈಟಿಸ್‌ನಂತಹ ರಕ್ತದಿಂದ ಹರಡುವ ರೋಗಗಳು ಹರಡುವ ಅಪಾಯ ಹೆಚ್ಚುತ್ತದೆ. ಚುಚ್ಚುಮದ್ದನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಬೇಡಿ.

  ಸಂಭೋಗದ ವೇಳೆ ರಕ್ಷಣಾತ್ಮಕ ಬಳಸಿ

  ಕಲುಷಿತ ಆಹಾರ ತಿನ್ನುವ ಮೂಲಕ ಅಥವಾ ಕೊಳಕು ಹೈಪೋಡರ್ಮಿಕ್ ಸೂಜಿ ಹಂಚಿಕೊಳ್ಳುವ ಮೂಲಕ ವೈರಲ್ ಹೆಪಟೈಟಿಸ್ ಹರಡಬಹುದು. ಆದರೆ ಕೆಲವೊಮ್ಮೆ ಲೈಂಗಿಕ ಸಂಪರ್ಕ ಯಕೃತ್ತಿನ ರೋಗ ಹರಡುತ್ತದೆ. ಹಾಗಾಗಿ ಸಂಭೋಗ ಮಾಡುವಾಗ ರಕ್ಷಣೆ ಬಳಸಿ.

  ಯಾರೊಂದಿಗೂ ಬ್ಲೇಡ್ ಅಥವಾ ರೇಜರ್ಶೇರ್ ಮಾಡಬೇಡಿ

  ಸೂಜಿ ಮತ್ತು ಸಿರಿಂಜ್, ಬ್ಲೇಡ್ ಸಹ ಸೋಂಕು ಉಂಟು ಮಾಡುತ್ತದೆ. ಹಾಗಾಗಿ ಬಳಸಿದ ಬ್ಲೇಡ್ ಅಥವಾ ರೇಜರ್ ಅನ್ನು ಬಳಸಲು ತಜ್ಞರು ಶಿಫಾರಸು ಮಾಡಲ್ಲ. ಬಳಸಿದ ಬ್ಲೇಡ್ HIV ಮತ್ತು ಹೆಪಟೈಟಿಸ್‌ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚಿಸುತ್ತದೆ.

  ಹಚ್ಚೆ ಹಾಕಿಸುವಾಗ ಜಾಗ್ರತೆ ವಹಿಸಿ

  ಟ್ಯಾಟೂ ಅಥವಾ ಚುಚ್ಚುವಿಕೆ ಹೆಪಟೈಟಿಸ್ ಮತ್ತು ಎಚ್ಐವಿ ಸೋಂಕು ಉಂಟು ಮಾಡುತ್ತವೆ. ಹಚ್ಚೆ ಅಥವಾ ಚುಚ್ಚುವಿಕೆಗೆ ಬಳಸುವ ಉಪಕರಣಗಳು, ಇದು ವಾಸ್ತವವಾಗಿ ಸೂಜಿಯಾಗಿದೆ. ಅಂತಹ ಸ್ಥಿತಿಯಲ್ಲಿ ಅದನ್ನು ಮತ್ತೆ ಬಳಸುವ ಮೊದಲು ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸೋಂಕಿನ ಅಪಾಯ ಉಂಟಾಗುತ್ತದೆ.

  ಹೆಪಟೈಟಿಸ್ ಕಾಯಿಲೆಗೆ ಲಸಿಕೆ ಪಡೆಯಿರಿ

  ಹೆಪಟೈಟಿಸ್ ತಡೆಗೆ ಉತ್ತಮ ಮಾರ್ಗವೆಂದರೆ ಲಸಿಕೆ ಹಾಕುವುದು. ಎಲ್ಲಾ ರೀತಿಯ ಹೆಪಟೈಟಿಸ್‌ಗೆ ಲಸಿಕೆ ಲಭ್ಯವಿಲ್ಲ. ಆದರೂ ಅತ್ಯಂತ ಮಾರಣಾಂತಿಕ ಹೆಪಟೈಟಿಸ್ ಬಿ ಲಸಿಕೆ ಲಭ್ಯವಿದೆ.

  ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

  ಕಾಲಕಾಲಕ್ಕೆ ಹೆಪಟೈಟಿಸ್ ಪರೀಕ್ಷೆ ಮಾಡಿಸಿ

  ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿ ತಡೆಯಲು, ಪತ್ತೆ ಹಚ್ಚಲು ಕಾಲ ಕಾಲಕ್ಕೆ ಪರೀಕ್ಷೆಗೆ ಒಳಗಾಗಿ. ಇದು ಯಾವುದೇ ಗಂಭೀರ ಕಾಯಿಲೆ ಮಾರಣಾಂತಿಕ ಅಪಾಯ ಕಡಿಮೆ ಮಾಡುತ್ತದೆ. ಹೆಪಟೈಟಿಸ್ ಅನ್ನು ರಕ್ತ ಪರೀಕ್ಷೆ ಮೂಲಕ ಕಂಡು ಹಿಡಿಯಬಹುದು.
  Published by:renukadariyannavar
  First published: