ಬಿಯರ್ ಈ ಸಮಸ್ಯೆಗೆ ರಾಮಬಾಣವಂತೆ; ಸಂಶೋಧನೆಯಿಂದ ತಿಳಿದು ಬಂತು ಅಚ್ಚರಿಯ ಸತ್ಯ

“ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದರೆ ರಕ್ತಕ್ಕೆ ಶೇ. 0.008ರಷ್ಟು ಆಲ್ಕೋಹಾಲ್​ ಪ್ರಮಾಣ ಸೇರುತ್ತದೆ. ಇದು ದೇಹದಲ್ಲಿ ಕಾಣಿಸಿಕೊಂಡ ನೋವನ್ನು ತಡೆಯುವ ಶಕ್ತಿ ನೀಡುವುದರ ಜೊತೆಗೆ ನೋವನ್ನು ಕಡಿಮೆ ಮಾಡುತ್ತದೆ,” ಎಂಬುದು ತಜ್ಞರ ಮಾತು.

news18-kannada
Updated:February 15, 2020, 7:28 AM IST
ಬಿಯರ್ ಈ ಸಮಸ್ಯೆಗೆ ರಾಮಬಾಣವಂತೆ; ಸಂಶೋಧನೆಯಿಂದ ತಿಳಿದು ಬಂತು ಅಚ್ಚರಿಯ ಸತ್ಯ
ಬಿಯರ್
  • Share this:
ನಿಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದಾಗ, ‘ಒಂದು ಪೆಗ್​ ಬಿಯರ್​ ಹಾಕು ಎಲ್ಲವೂ ಸರಿ ಹೋಗುತ್ತದೆ’ ಎಂದು ಗೆಳೆಯರು ನಗೆ ಚಟಾಕಿ ಹಾರಿಸಿರುವುದನ್ನು ಕೇಳಿರುತ್ತೀರಿ. ಅಚ್ಚರಿ ಎಂದರೆ ಈ ವಿಚಾರ ಈಗ ನಿಜವಾಗಿದೆ! ಹೊಸ ಅಧ್ಯಯನ ಹೇಳುವ ಪ್ರಕಾರ ನೋವು ನಿವಾರಕ ಮಾತ್ರೆಗಿಂತ ಬಿಯರ್​ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡಲಿದೆಯಂತೆ.

ಬಿಯರ್​ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅಲ್ಲದೆ ಬಿಯರ್​ನಿಂದ ಸಾಕಷ್ಟು ಲಾಭಗಳಿವೆಯಂತೆ. ಗ್ರೀನ್​ವಿಚ್​ ವಿಶ್ವವಿದ್ಯಾಲಯದ ಸಂಶೋಧಕರು ಬಿಯರ್​ನಿಂದಾಗುವ ಲಾಭಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಹೇಳುವ ಪ್ರಕಾರ ದೇಹದಲ್ಲಿ ನೋವು ಕಾಣಿಸಿಕೊಂಡಾಗ ಪ್ಯಾರಸಿಟಮಾಲ್​ ಟ್ಯಾಬ್ಲೆಟ್​ ನುಂಗುವ ಬದಲು ಎರಡು ಪಿಂಟ್​ ಬಿಯರ್​ ಕುಡಿದರೆ ನೋವು ಮಾಯವಾಗುತ್ತದೆ!

“ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದರೆ ರಕ್ತಕ್ಕೆ ಶೇ. 0.008ರಷ್ಟು ಆಲ್ಕೋಹಾಲ್​ ಪ್ರಮಾಣ ಸೇರುತ್ತದೆ. ಇದು ದೇಹದಲ್ಲಿ ಕಾಣಿಸಿಕೊಂಡ ನೋವನ್ನು ತಡೆಯುವ ಶಕ್ತಿ ನೀಡುವುದರ ಜೊತೆಗೆ ನೋವನ್ನು ಕಡಿಮೆ ಮಾಡುತ್ತದೆ,” ಎಂಬುದು ತಜ್ಞರ ಮಾತು.

“ಬಿಯರ್​ ಸೇವನೆಯಿಂದ ಅಪಾಯ ಎಂದು ಅನೇಕ ಅಧ್ಯಯನ ಹೇಳಿದೆ. ಆದರೆ, ಯಾವುದಕ್ಕಾದರೂ ಮಿತಿ ಎಂಬುದಿರುತ್ತದೆ. ಮಿತವಾಗಿ ಬಿಯರ್​ ಕುಡಿದರೆ ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನೋವು ನಿವಾರಕ ಮಾತ್ರೆಗಳಿಂತ ಹೆಚ್ಚು ಪ್ರಭಾವಶಾಲಿ," ಎನ್ನುತ್ತಾರೆ ಗ್ರೀನ್​ವಿಚ್​ ವಿಶ್ವವಿದ್ಯಾಲಯದ ಸಂಶೋಧಕರು.

ಇದನ್ನೂ ಓದಿ: ಸ್ಯಾಮ್​ಸಂಗ್​ ‘ಗ್ಯಾಲಾಕ್ಸಿ ಝೆಡ್ ಫ್ಲಿಪ್‘ ಮಡಚುವ ಫೋನ್​; ಇಂದಿನಿಂದ ಮಾರಾಟ ಆರಂಭ
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ