ಯಾವುದಕ್ಕೂ ಟೈಮಿಲ್ಲ ಗುರು..ಬೈಕ್​ನಲ್ಲೇ ಸ್ನಾನ..ವಿಡಿಯೋ ವೈರಲ್

ಈ ವಿಡಿಯೋ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿತ್ತು. ಅಲ್ಲದೆ ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲೆಡೆ ಈ ವಿಡಿಯೋ ಹರಿದಾಡುತ್ತಿದೆ.

zahir | news18-kannada
Updated:January 29, 2020, 3:48 PM IST
ಯಾವುದಕ್ಕೂ ಟೈಮಿಲ್ಲ ಗುರು..ಬೈಕ್​ನಲ್ಲೇ ಸ್ನಾನ..ವಿಡಿಯೋ ವೈರಲ್
Viral video
  • Share this:
ಆಧುನಿಕ ಜೀವನ ಶೈಲಿಯಲ್ಲಿ ಎಲ್ಲರೂ ಬ್ಯುಸಿ. ಪರಸ್ಪರ ನಿಂತು ಮಾತನಾಡಲೂ ಸಹ ಪುರುಸೋತಿಲ್ಲ. ಅಷ್ಟೇ ಯಾಕೆ ಟಾಯ್ಲೆಟ್​ಗೂ ಹೋಗೋಕೂ  ಟೈಮಿಲ್ಲ ಅನ್ನುವ ಗೊಣಗಾಟ ಸಾಮಾನ್ಯವಾಗಿಬಿಟ್ಟಿದೆ. ಇಂತಹ ಅನಿವಾರ್ಯತೆಗಳ ನಡುವೆಯೂ ಜೀವನವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಹೀಗೆ ಬ್ಯಾಲೆನ್ಸ್​ ಮಾಡಲೋದ ಇಬ್ಬರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಯುವಕರಿಬ್ಬರು ಆಫೀಸ್​ಗೆ ಹೋಗುವಾಗ ಬೈಕ್​ನಲ್ಲೇ ಸ್ನಾನ ಮಾಡುತ್ತಾ ಹೋಗುತ್ತಿದ್ದಾರೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

ಇಬ್ಬರು ಸವಾರರು ಚಾಲನೆ ವೇಳೆ ಸೋಪ್ ಹಾಕಿ ಸ್ನಾನ ಮಾಡುತ್ತಿರುವ ವಿಡಿಯೋ ಅದು. ಹಿಂಬದಿ ಸವಾರ ಬಕೆಟ್​ ಇರಿಸಿ ಬೈಕ್ ಚಾಲಕನನ್ನು ಸ್ನಾನ ಮಾಡಿಸುತ್ತಾ, ತಾನು ಸ್ನಾನ ಮಾಡುತ್ತಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ಏಪ್ರಿಲ್ ಧಮಾಕಾ: ಬಾಕ್ಸಾಫೀಸ್​ನಲ್ಲಿ ಬಿಗ್ ಸ್ಟಾರ್​​ಗಳ ಮುಖಾಮುಖಿ

ಈ ವಿಡಿಯೋ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿತ್ತು. ಈ ವೈರಲ್ ಇದೀಗ ವಿಯೆಟ್ನಾಂ ಪೊಲೀಸರಿಗೂ ತಲುಪಿದೆ. ಅದರಂತೆ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಅಲ್ಲದೆ ಇವರನ್ನು ಬಂಧಿಸಿ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

First published:January 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading