ಬೆಳಗ್ಗೆಯಿಂದ ಸಂಜೆಗೆ ಮನಸ್ಥಿತಿ ಬದಲು : ಟ್ವೀಟ್​ನ ಅಧ್ಯಯನದಿಂದ ಬಯಲು

news18
Updated:June 23, 2018, 5:45 PM IST
ಬೆಳಗ್ಗೆಯಿಂದ ಸಂಜೆಗೆ ಮನಸ್ಥಿತಿ ಬದಲು : ಟ್ವೀಟ್​ನ ಅಧ್ಯಯನದಿಂದ ಬಯಲು
news18
Updated: June 23, 2018, 5:45 PM IST
ನ್ಯೂಸ್​ 18 ಕನ್ನಡ
ಸಾಮಾಜಿಕ ಜಾಲತಾಣಗಳು ಯಾವ ಮಟ್ಟಕ್ಕೆ ಯುವಪೀಳಿಗೆಯನ್ನು ಆಕರ್ಷಿಸುತ್ತಿದೆಯೆಂದರೆ ಬೆಳಗ್ಗೆ ಎದ್ದಕೂಡಲೆ ಒಮ್ಮೆ ಟ್ವಿಟ್ಟರ್​, ಫೇಸ್ಬುಕ್​, ವಾಟ್ಸಾಪ್ ಆ್ಯಪ್​ಗಳನ್ನು ಓಪನ್​ ಮಾಡದಿದ್ದರೆ ಹಲವರಿಗೆ ನೆಮ್ಮದಿಯೇ ಇರುವುದಿಲ್ಲ. ಆದರೆ, ಹಾಗೆ ನೀವು ಪೋಸ್ಟ್​ ಮಾಡುವ ಟ್ವೀಟ್​ ಕೂಡ ನಿಮ್ಮ ಮನಸ್ಥಿತಿಯನ್ನು ಹೇಳಬಲ್ಲದು. ಹೇಗೆ ಅಂತೀರಾ?

ಬೆಳಗಿನಿಂದ ಮಧ್ಯಾಹ್ನದವರೆಗೆ ಮಾಡುವ ಟ್ವೀಟ್​ಗಳು ಗಹನವಾದ ವಿಷಯಗಳನ್ನು ಒಳಗೊಂಡಿರುತ್ತವೆ, ಸಂಜೆ ಮತ್ತು ರಾತ್ರಿ ಮಾಡುವ ಟ್ವೀಟ್​ಗಳು ಅತಿಯಾದ ಭಾವನಾತ್ಮಕವಾಗಿರುತ್ತದೆ ಎಂದು ಅಂಶವನ್ನು ಅಧ್ಯಯನವೊಂದು ಹೊರಗೆಡವಿದೆ. 800 ಮಿಲಿಯನ್​ ಟ್ವೀಟ್​ಗಳನ್ನು ಅಧ್ಯಯನ ಮಾಡಿದ ನಂತರ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಒಂದೊಂದು ಕಾಲಾವಧಿಯಲ್ಲಿ ನಮ್ಮ ಮನಸು ಮತ್ತು ಮೂಡ್​ ಬದಲಾಗುತ್ತಿರುತ್ತದೆ ಎಂದು ಹೇಳಲಾಗಿದೆ.

ಮಾಧ್ಯಮದ ಬಳಕೆಯಲ್ಲಿ ನಮ್ಮ ಆಗಿನ ಮನಸ್ಥಿತಿ ಹೇಗಿರುತ್ತದೋ ಅದರ ಆಧಾರದಲ್ಲಿ ನಮ್ಮ ಭಾಷೆಯೂ ಅಭಿವ್ಯಕ್ತಿಯಾಗುತ್ತದೆ. ಪ್ಲಸ್​ ಒನ್​ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ 800 ಮಿಲಿಯನ್​ ಟ್ವೀಟ್​ಗಳಲ್ಲಿ ಬಳಕೆಯಾಗಿರುವ 7 ಬಿಲಿಯನ್​ ಪದಗಳನ್ನು ಆಧರಿಸಿ ಅವರ ಮನಸ್ಥಿತಿಯನ್ನು ನಿರ್ಣಯಿಸಲಾಯಿತು.

ಬೆಳಗಿನ ಜಾವ 5ರಿಂದ 6ರವರೆಗೆ ಪೋಸ್ಟ್​ ಮಾಡಲಾಗುವ ಟ್ವೀಟ್​ನಲ್ಲಿ ಹೆಸರುಗಳು, ಲೇಖನಗಳು, ಕ್ರಿಯಾವಾಚಕಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಆದರೆ, ಸಂಜೆಯ ವೇಳೆಗೆ ಭಾವನಾತ್ಮಕವಾದ ಪದಗಳನ್ನು ಜೋಡಿಸಿ ಟ್ವೀಟ್​ ಮಾಡುವವರ ಸಂಖ್ಯೆ ಹೆಚ್ಚು. ಈ ಅಧ್ಯಯನ ನಮ್ಮ ಭಾಷೆ ಯಾವ ರೀತಿಯಲ್ಲಿ ಆಯಾ ಕಾಲಕ್ಕನುಗುಣವಾಗಿ ಬದಲಾಗುತ್ತದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...