• Home
  • »
  • News
  • »
  • lifestyle
  • »
  • Room Decoration: ಗೆಸ್ಟ್ ರೂಮ್ ವಿನ್ಯಾಸಗೊಳಿಸಲು ನಟಿ ಟ್ವಿಂಕಲ್ ಕೊಟ್ರು ಸಿಂಪಲ್ ಟಿಪ್ಸ್

Room Decoration: ಗೆಸ್ಟ್ ರೂಮ್ ವಿನ್ಯಾಸಗೊಳಿಸಲು ನಟಿ ಟ್ವಿಂಕಲ್ ಕೊಟ್ರು ಸಿಂಪಲ್ ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಸ್ತುತ ವರ್ಕ್ ಫ್ರಮ್ ಹೋಮ್ ಸನ್ನಿವೇಶದ ನಡುವೆ ಕೆಲಸ ಮಾಡಲು ನಮಗೆ ಒಂದು ಕೋಣೆಯ ಅಗತ್ಯವಿದ್ದಾಗ ಇದು ಬಳಕೆಗೆ ಬರುತ್ತದೆ ಎಂದು ಅನ್ನಿಸಿರುತ್ತದೆ. ಹೀಗಾಗಿ, ನಮ್ಮ ಮನೆಯಲ್ಲಿರುವ ಆ ಹೆಚ್ಚುವರಿ ಕೋಣೆಯನ್ನು ಅಚ್ಚುಕಟ್ಟಾಗಿರಿಸಿಕೊಳ್ಳುವುದು ಮಾತ್ರವಲ್ಲದೆ, ಕ್ರಿಯಾತ್ಮಕವಾಗಿಯೂ ಇರಿಸಿಕೊಳ್ಳುವುದು ತುಂಬಾನೇ ಅತ್ಯಗತ್ಯವಾಗುತ್ತದೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ನಮ್ಮೆಲ್ಲರ ಮನೆಯಲ್ಲಿ (House) ಒಂದು ಹೆಚ್ಚುವರಿ ಕೋಣೆ (Room) ಇರುತ್ತದೆ ಮತ್ತು ಅದರಲ್ಲಿ ಹೆಚ್ಚಾಗಿ ಅಗತ್ಯವಲ್ಲದ ವಸ್ತುಗಳನ್ನು ಹಾಕಿ ತುಂಬಿಸಿರುತ್ತೇವೆ. ಆದರೆ ಯಾರಾದರೂ ಅನಿರೀಕ್ಷಿತವಾಗಿ ಮನೆಗೆ ಅತಿಥಿಗಳು ಭೇಟಿ ನೀಡಿದಾಗ ನಮಗೆ ‘ಅರೆರೇ.. ಅದೊಂದು ಕೋಣೆಯನ್ನು ಸ್ವಚ್ಚವಾಗಿರಿಸಿಕೊಂಡಿದ್ದರೆ, ಅದರಲ್ಲಿ ಅತಿಥಿಗಳನ್ನು (Guest) ಇರಿಸಬಹುದಾಗಿತ್ತು’ ಎಂದು ಅನ್ನಿಸುತ್ತದೆ. ಪ್ರಸ್ತುತ ವರ್ಕ್ ಫ್ರಮ್ ಹೋಮ್ (Work From Home) ಸನ್ನಿವೇಶದ ನಡುವೆ ಕೆಲಸ ಮಾಡಲು ನಮಗೆ ಒಂದು ಕೋಣೆಯ ಅಗತ್ಯವಿದ್ದಾಗ ಇದು ಬಳಕೆಗೆ ಬರುತ್ತದೆ ಎಂದು ಅನ್ನಿಸಿರುತ್ತದೆ. ಹೀಗಾಗಿ, ನಮ್ಮ ಮನೆಯಲ್ಲಿರುವ ಆ ಹೆಚ್ಚುವರಿ ಕೋಣೆಯನ್ನು ಅಚ್ಚುಕಟ್ಟಾಗಿರಿಸಿಕೊಳ್ಳುವುದು ಮಾತ್ರವಲ್ಲದೆ, ಕ್ರಿಯಾತ್ಮಕವಾಗಿಯೂ ಇರಿಸಿಕೊಳ್ಳುವುದು ತುಂಬಾನೇ ಅತ್ಯಗತ್ಯವಾಗುತ್ತದೆ.


ಮಲ್ಟಿಟಾಸ್ಕಿಂಗ್ ಗೆಸ್ಟ್ ರೂಮ್ ಅನ್ನು ವಿನ್ಯಾಸ ಗೊಳಿಸುವುದು ಹೇಗೆ?
ಇಡೀ ಕೋಣೆಯನ್ನು ನೀವೇ ಅಲಂಕರಿಸಲು ಕಷ್ಟವೆಂದು ತೋರುತ್ತದೆಯಾದರೂ, ನಟಿ ಟ್ವಿಂಕಲ್ ಖನ್ನಾ ಅವರು "ಮಲ್ಟಿಟಾಸ್ಕಿಂಗ್ ಗೆಸ್ಟ್ ರೂಮ್" ಅನ್ನು ವಿನ್ಯಾಸಗೊಳಿಸಲು ಕೆಲವು ಸರಳ ಸಲಹೆಗಳನ್ನು ಹಂಚಿಕೊಂಡಿರುವುದರಿಂದ ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಟ್ವಿಂಕಲ್ ಖನ್ನಾ ಅವರು ಟ್ವೀಕ್ ಇಂಡಿಯಾ ಪೋಸ್ಟ್ ಮಾಡಿದ ವೀಡಿಯೋದಲ್ಲಿ "ಮಲ್ಟಿಟಾಸ್ಕಿಂಗ್ ಗೆಸ್ಟ್ ರೂಮ್" ಅನ್ನು ವಿನ್ಯಾಸಗೊಳಿಸಲು ಕೆಲವು ಸರಳ ಸಲಹೆಗಳನ್ನು ಹಂಚಿ ಕೊಂಡಿದ್ದಾರೆ ನೋಡಿ.


"ನೀವು ಮೊದಲು ಕೋಣೆಯನ್ನು ಪೂರ್ತಿಯಾಗಿ ಖಾಲಿ ಮಾಡುವ ಮೂಲಕ ಪ್ರಾರಂಭಿಸಿ, ಆಗಾಗ್ಗೆ ಬಳಸದ ವಸ್ತುಗಳನ್ನು ಪ್ಯಾಕ್ ಮಾಡುವ ಮೂಲಕ ಮತ್ತು ನೀವು ಇನ್ನು ಮುಂದೆ ಬಳಸದ ವಸ್ತುಗಳನ್ನು ದಾನ ಮಾಡುವ ಅಥವಾ ಅವುಗಳನ್ನು ಮಾರಾಟ ಮಾಡುವ ಮೂಲಕ ಪ್ರಾರಂಭಿಸಿ" ಎಂದು ಅವರು ಹೇಳಿದರು.


ಕೊಠಡಿಗೆ ಪೀಠೋಪಕರಣ ಹೀಗಿರಬೇಕು
ನಿಮ್ಮ ಆ ಕೊಠಡಿಗೆ ಪೀಠೋಪಕರಣಗಳನ್ನು ಖರೀದಿಸುವಾಗ, ನಿಖರವಾದ ಅಳತೆಗಳನ್ನು ನೀವು ತಿಳಿದುಕೊಳ್ಳಿರಿ ಎಂದು ಟ್ವಿಂಕಲ್ ಸಲಹೆ ನೀಡಿದರು. "ಜನರು ಮಾಡುವ ಒಂದು ತಪ್ಪು ಎಂದರೆ ಆ ಪೀಠೋಪಕರಣಗಳು ಕೋಣೆಗೆ ಸರಿ ಹೊಂದುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದೆ ಖರೀದಿಸುವುದು.


ಇದನ್ನೂ ಓದಿ:  Fashion Tips: ಟ್ರೆಂಡ್ ಹಾಗೂ ಸ್ಟೈಲಿಶ್ ಬಟ್ಟೆ ಖರೀದಿಸುವ ಮೊದಲು ನಿಮ್ಮ ಆಕಾರ ಹಾಗೂ ಲುಕ್ ನೆನಪಿಟ್ಟುಕೊಳ್ಳಿ


ನಿಮ್ಮ ಪೀಠೋಪಕರಣಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಹೊಂದಿಸಲು ಸಹಾಯ ಮಾಡುವ ಅನೇಕ ಅಪ್ಲಿಕೇಶನ್ ಗಳು ಈಗ ಆನ್ಲೈನ್ ನಲ್ಲಿವೆ. ನೀವು ಹಳೆಯ ಶೈಲಿಯ ಮಾರ್ಗವನ್ನು ಪ್ರಯತ್ನಿಸಬಹುದು ಮತ್ತು ನೆಲದ ಮೇಲೆಯೇ ಸೀಮೆಸುಣ್ಣದ ಗುರುತುಗಳನ್ನು ಎಳೆಯಬಹುದು.


ಸೋಫಾ ಕಮ್ ಬೆಡ್ ಅನ್ನು ಬಳಸಿ
ಸೋಫಾ ಕಮ್ ಬೆಡ್ ಖರೀದಿಸಲು ಟ್ವಿಂಕಲ್ ಅವರು ಸಲಹೆ ನೀಡಿದರು. "ಹೆಚ್ಚಿನ ಸ್ಥಳಾವಕಾಶವಿಲ್ಲದ ಭಾರತೀಯ ಮನೆಗಳಿಗೆ ಇದು ಸ್ಮಾರ್ಟ್ ಹೂಡಿಕೆಯಾಗಿದೆ" ಎಂದು ಅವರು ಹೇಳಿದರು. ಒಳಾಂಗಣ ವಿನ್ಯಾಸಕ್ಕೆ ನೀವು ಹೊಸಬರಾಗಿದ್ದರೆ, ಕೋಣೆಯುದ್ದಕ್ಕೂ ಒಂದೇ ಬಣ್ಣದ ಪ್ಯಾಲೆಟ್ ಗೆ ಅಂಟಿಕೊಳ್ಳಲು ಮರೆಯದಿರಿ" ಎಂದು ಅವರು ಸಲಹೆ ನೀಡಿದರು. ನಂತರ, ನೀವು ಒಂದೆರಡು ಸೈಡ್ ಟೇಬಲ್ ಗಳನ್ನು ಸಹ ಸೇರಿಸಬಹುದು ಮತ್ತು ಅವುಗಳ ಮೇಲೆ ಕೆಲವು ಶೋಪೀಸ್ ಗಳನ್ನು ಅಳವಡಿಸಬಹುದು.


“ಹೆಚ್ಚಿನ ಒಳಾಂಗಣ ವಿನ್ಯಾಸಕರು ಇಷ್ಟಪಡುವ ರಹಸ್ಯ ಸುಳಿವು ಎಂದರೆ ಲೇಯರಿಂಗ್ ವಿನ್ಯಾಸಗಳು" ಎಂದು ಟ್ವಿಂಕಲ್ ಬಹಿರಂಗಪಡಿಸಿದರು. "ನಾನು ಈ ಜಾಗದಲ್ಲಿ ಕೆಲವು ನೈಸರ್ಗಿಕ ಅಂಶಗಳನ್ನು ಪರಿಚಯಿಸಲು ಬಯಸಿದ್ದೆ, ಆದ್ದರಿಂದ ನಾನು ಈ ವರ್ಣರಂಜಿತ ಸೆಣಬಿನ ಬುಟ್ಟಿಗಳನ್ನು ಆನ್ಲೈನ್ನಲ್ಲಿ ಖರೀದಿಸಿದೆ. ಅವುಗಳು ಈ ಸಮಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ ಮತ್ತು ಸಾಕಷ್ಟು ಅಗ್ಗವಾಗಿವೆ" ಎಂದು ನಟಿ ಹೇಳಿದರು.


 ಟೇಬಲ್ ಗಳ ಬಳಕೆ ಹೀಗಿರಲಿ 
ನಂತರ, ಟ್ವಿಂಕಲ್ ಒಂದು ಟೇಬಲ್ ಅನ್ನು ಸ್ಟಡಿ ಟೇಬಲ್ ಅಥವಾ ವರ್ಕ್ ಸ್ಟೇಷನ್ ಆಗಿ ಬಳಸಬಹುದಾದ ಟೇಬಲ್ ಅನ್ನು ಜೋಡಿಸಲು ಸಲಹೆ ನೀಡಿದರು. ಅವರು ಅದರ ಮೇಲೆ ಪುಸ್ತಕಗಳು, ಸಸ್ಯಗಳು, ಮೇಣದ ಬತ್ತಿಗಳು ಮತ್ತು ಸಣ್ಣ ಶೋಪೀಸ್ ಗಳಿಂದ ತುಂಬಿದ್ದರು. "ಪರಿಮಳಯುಕ್ತ ಮೇಣದಬತ್ತಿಯನ್ನು ಆ ಟೇಬಲ್ ಮೇಲೆ ಇರಿಸುವುದು ನಿಜವಾಗಿಯೂ ಐಷಾರಾಮಿ ಎಂದು ಭಾವಿಸಲು ಸುಲಭವಾದ ಮಾರ್ಗವಾಗಿದೆ. ನೀವು ಅದನ್ನು ಬೆಳಗಿಸುವ ಮೊದಲು ಬತ್ತಿಯನ್ನು ಟ್ರಿಮ್ ಮಾಡಿ ಮತ್ತು ಅದನ್ನು ಗೋಡೆಗಳಿಂದ ದೂರವಿಡಿ" ಎಂದು ಅವರು ಹೇಳಿದರು.


ಇದನ್ನೂ ಓದಿ: Men-Women Relation: ಸಂಶೋಧನೆ ಬಹಿರಂಗ ಪಡಿಸಿದೆ ಮಹಿಳೆಯರ ಸೂಪರ್​ ಸೀಕ್ರೆಟ್! ಪುರುಷರು ಬೇಗನೇ ತಿಳ್ಕೊಳ್ಳಿ


ಈ ಸುಂದರವಾದ ಸ್ಥಳದಲ್ಲಿ ನೀವು ಯಾವ ರೀತಿಯ ಪುಸ್ತಕಗಳನ್ನು ಇಡಬೇಕು? "ಓದಲು ಸುಲಭವಾದ ಮತ್ತು ನಿಮ್ಮ ಮನಸ್ಸಿಗೆ ಮುದ ನೀಡುವ ಪುಸ್ತಕಗಳನ್ನು ಇಟ್ಟುಕೊಳ್ಳಿ" ಎಂದು ಟ್ವಿಂಕಲ್ ಹೇಳಿದರು.

Published by:Ashwini Prabhu
First published: