Breast Cancer: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

ಮಾರಕ ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಹೊರ ಬರುವುದು ಯುದ್ಧದಿಂದ ಜೀವಂತವಾಗಿ ಹಿಂತಿರುಗಿದಂತೆ. ಹೀಗಿರುವಾಗ ನಟಿ ಛಾವಿ ಮಿತ್ತಲ್ ತಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ತಾರೆ ಎಂಬುದನ್ನು ತಿಳಿಸಿದ್ದಾರೆ. ಇತ್ತೀಚೆಗೆ ಛಾವಿ ಮಿತ್ತಲ್ ಅವರು ನಿಯಮಿತವಾಗಿ ತಿನ್ನುವ ಕೆಲವು ಸೂಪರ್‌ ಫುಡ್‌ಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚೆಗೆ ಸ್ತನ ಕ್ಯಾನ್ಸರ್ನೊಂದಿಗೆ ಹೋರಾಡಿ ಗೆದ್ದವರು ಕಿರುತೆರೆ ನಟಿ ಛವಿ ಮಿತ್ತಲ್. ಅವರಿಗೆ 42 ವರ್ಷ ವಯಸ್ಸು. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದಾಗಿದೆ. WHO ಪ್ರಕಾರ 2020 ರಲ್ಲಿ ಜಾಗತಿಕವಾಗಿ 2.3 ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅದರಲ್ಲಿ 6,85,000 ಮಹಿಳೆಯರು ಮೃತಪಟ್ಟಿದ್ದಾರೆ. 2020 ರ ಅಂತ್ಯದ ವೇಳೆಗೆ, ಕಳೆದ 5 ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ರೋಗ ನಿರ್ಣಯ ಮಾಡಿದ 7.8 ಮಿಲಿಯನ್ ಮಹಿಳೆಯರು ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ.

  ಮಾರಕ ಸ್ತನ ಕ್ಯಾನ್ಸರ್ ಕಾಯಿಲೆ

  ಹಾಗಾಗಿ ಈ ಮಾರಕ ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಹೊರ ಬರುವುದು ಯುದ್ಧದಿಂದ ಜೀವಂತವಾಗಿ ಹಿಂತಿರುಗಿದಂತೆ. ಹೀಗಿರುವಾಗ ನಟಿ ಛಾವಿ ಮಿತ್ತಲ್ ತಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ತಾರೆ ಎಂಬುದನ್ನು ತಿಳಿಸಿದ್ದಾರೆ. ಇತ್ತೀಚೆಗೆ ಛಾವಿ ಮಿತ್ತಲ್ ಅವರು ನಿಯಮಿತವಾಗಿ ತಿನ್ನುವ ಕೆಲವು ಸೂಪರ್‌ ಫುಡ್‌ಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಶೇರ್ ಮಾಡಿದ್ದಾರೆ.

  ವೀಡಿಯೊದ ಶೀರ್ಷಿಕೆಯಲ್ಲಿ ಆಹಾರದ ವಿಷಯದಲ್ಲಿ ತಾನು ಉತ್ತಮ ಆಹಾರ ಸೇವಿಸುತ್ತೇನೆ ಎಂದು ಹೇಳಿದ್ದಾರೆ. ತಾವು ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ ಮತ್ತು ಆ ಸೂಪರ್‌ ಫುಡ್‌ಗಳ ಪಟ್ಟಿ ಯಾವುದೆಂದು ತಿಳಿಸಿದ್ದಾರೆ.

  ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

  ಆಮ್ಲಾ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ಬೆಳಿಗ್ಗೆ ಮೊದಲು ಆಮ್ಲಾ ಜ್ಯೂಸ್ ಸೇವಿಸುತ್ತೇನೆ. ಇದು ಹಲವು ಪ್ರಯೋಜನಗಳನ್ನು ಹೊಂದಿದೆ ಎಂದಿರುವ ನಟಿ ಛವಿ, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮತ್ತು ಆಮ್ಲೀಯತೆ ನಿವಾರಿಸುತ್ತದೆ ಎಂದು ಹೇಳಿದರು.

  ಬೀಜಗಳು ಚಯಾಪಚಯ ಕ್ರಿಯೆಗೆ ಉತ್ತಮ ಅಂಶವಾಗಿವೆ

  ನಿಮ್ಮ ಆಹಾರದಲ್ಲಿ ಬೀಜಗಳನ್ನು ಸೇರಿಸಲು ಕ್ಯಾನ್ಸರ್ ಸರ್ವೈವಲ್ ನಟಿ ಶಿಫಾರಸು ಮಾಡುತ್ತಾರೆ. ಬಾದಾಮಿ, ವಾಲ್‌ನಟ್ಸ್, ಅಂಜೂರದ ಹಣ್ಣುಗಳು, ಕಪ್ಪು ಒಣದ್ರಾಕ್ಷಿ ಮತ್ತು ಖರ್ಜೂರ ಸೇರಿದಂತೆ ನೆನೆಸಿದ ಬೀಜಗಳ ಸೇವನೆಗೆ ತಿಳಿಸಿದ್ದಾರೆ.

  ವಾಸ್ತವದಲ್ಲಿ ಬೀಜಗಳು ಸೂಕ್ಷ್ಮ ಪೋಷಕಾಂಶಗಳು, ಖನಿಜಗಳು, ಫೈಬರ್ ಮತ್ತು ಉತ್ತಮ ಮೊನೊಸ್ಯಾಚುರೇಟೆಡ್ ಕೊಬ್ಬು ಹೊಂದಿವೆ. ಅವರು ನಿಮ್ಮ ತೂಕ ಮತ್ತು ಚಯಾಪಚಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆರೋಗ್ಯಕರ ತಿಂಡಿ ಆಗಿದೆ.

  ಬೆರ್ರಿ ಹಣ್ಣುಗಳು ಚರ್ಮವನ್ನು ಯವ್ವನವಾಗಿರಿಸುತ್ತದೆ

  ಸ್ತನ ಕ್ಯಾನ್ಸರ್ ಅನ್ನು ಸೋಲಿಸಿದ ನಟಿ ಛಾವಿ ಮಿತ್ತಲ್, ಅನೇಕ ರೀತಿಯ ಬೆರಿಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಬೆರ್ರಿ ಉತ್ಕರ್ಷಣ ನಿರೋಧಕ ಮತ್ತು ವಯಸ್ಸಾದ ವಿರೋಧಿ ಗುಣಲಕ್ಷಣ ಹೊಂದಿದೆ.

  ಕ್ಯಾಲ್ಸಿಯಂಗಾಗಿ ಮೊಸರು ತಿನ್ನಿರಿ

  ಮೊಸರು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಕ್ಯಾಲ್ಸಿಯಂ ಹೊಂದಿದೆ. ಊಟದೊಂದಿಗೆ ಮೊಸರನ್ನು ಸೇವಿಸುವುದಿಲ್ಲ. ಎರಡು ಗಂಟೆಗಳ ನಂತರ ಅದಕ್ಕೆ ಬೀಜಗಳು ಮತ್ತು ಹಣ್ಣುಗಳನ್ನು ಸೇರಿಸಿ ಪ್ರತ್ಯೇಕವಾಗಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.

  ಹಸಿರು ಎಲೆಗಳ ತರಕಾರಿಗಳಿಂದ ಸಮೃದ್ಧ ವಿಟಮಿನ್ ಸೇವಿಸುತ್ತೀರಿ

  ಎಲ್ಲಾ ವೈದ್ಯರು ಹಸಿರು ಎಲೆಗಳ ತರಕಾರಿಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಈ ಎಲೆಗಳ ತರಕಾರಿಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ.

  ಸತ್ತು ಶಕ್ತಿ ನೀಡುತ್ತದೆ

  ಸಟ್ಟುವನ್ನು ನೀರಿನೊಂದಿಗೆ ಬೆರೆಸಿ ಅಥವಾ ಲಡ್ಡೂಸ್ ಮತ್ತು ಪ್ಯಾನ್‌ಕೇಕ್‌ಗಳ ರೂಪದಲ್ಲಿ ಸೇವಿಸಬಹುದು. ಸಟ್ಟು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ, ಜೊತೆಗೆ ಇದು ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇಡುತ್ತದೆ.

  ತೆಂಗಿನೆಣ್ಣೆ ಆರೋಗ್ಯಕ್ಕೆ ಬೆಸ್ಟ್

  ನಟಿ ಪ್ರತಿದಿನ ತೆಂಗಿನ ಎಣ್ಣೆ ಬಳಸುತ್ತಾರೆ. ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇವಿಸಿ. ನಿಮ್ಮ ಕಾಫಿ ಅಥವಾ ಸ್ಮೂಥಿಗೆ ಸೇರಿಸಿ. ಇದು ವಯಸ್ಸಾದ ವಿರೋಧಿ ಗುಣಲಕ್ಷಣ ಹೊಂದಿದೆ. ಮತ್ತು ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ನಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

  ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಹೆಚ್ಚುತ್ತಿರುವ ತೂಕಕ್ಕೆ ಮದ್ದು ಅರೆಯಬಹುದು!

  ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು, ತುಳಸಿ ಬೀಜಗಳು, ಚಿಯಾ ಬೀಜಗಳು, ಎಳ್ಳು ಬೀಜಗಳು, ಅಗಸೆ ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿ. ಇವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  Published by:renukadariyannavar
  First published: