• Home
 • »
 • News
 • »
 • lifestyle
 • »
 • Weight Loss: ತಮ್ಮ ವೇಯ್ಟ್ ಲಾಸ್ ಜರ್ನಿಯ ಗುಟ್ಟು ಬಿಚ್ಚಿಟ್ಟ ನಟಿ ಛವಿ ಮಿತ್ತಲ್

Weight Loss: ತಮ್ಮ ವೇಯ್ಟ್ ಲಾಸ್ ಜರ್ನಿಯ ಗುಟ್ಟು ಬಿಚ್ಚಿಟ್ಟ ನಟಿ ಛವಿ ಮಿತ್ತಲ್

ನಟಿ ಛಾವಿ ಮಿತ್ತಲ್

ನಟಿ ಛಾವಿ ಮಿತ್ತಲ್

ಕ್ಯಾಲೋರಿಗಳನ್ನು ಎಣಿಸುವುದು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಅಂತ ಅನೇಕರು ತಿಳಿದಿದ್ದಾರೆ. ಆದರೆ ಈ ನಟಿ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ಇದು ಹೆಚ್ಚಿನ ಜನರು ಮಾಡುವ ಒಂದು ದೊಡ್ಡ ತಪ್ಪು ಅಂತ ಹೇಳುತ್ತಾರೆ.

 • Share this:

  ದೇಹದ ತೂಕವನ್ನು ಕಡಿಮೆ ( Weight Loss) ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ ಅಂತ ಬಹುತೇಕರಿಗೆ ಗೊತ್ತಿದೆ. ಕಠಿಣ ತರಬೇತಿ ಮತ್ತು ಕಟ್ಟುನಿಟ್ಟಾದ ಆಹಾರ ಪದ್ಧತಿಗಳೊಂದಿಗೆ ( Weight Loss Diet) ಸಹ ಎಷ್ಟೋ ಬಾರಿ ನಿಮ್ಮ ಫಿಟ್ನೆಸ್ ಗುರಿಗಳನ್ನು (Fitness Goals) ತಲುಪುವುದು ಅಸಾಧ್ಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ ಅಂತ ಹೇಳಬಹುದು. ಇತ್ತೀಚೆಗೆ, ಟಿವಿ ನಟಿ ಮತ್ತು ಸ್ತನ ಕ್ಯಾನ್ಸರ್ ನಿಂದ ಬದುಕುಳಿದಿರುವ ಛಾವಿ ಮಿತ್ತಲ್ ಅವರು ಯೂಟ್ಯೂಬ್ ನಲ್ಲಿ ಶ್ರಮವನ್ನು ಹಾಕಿದ ನಂತರವೂ ನಾವು ಏಕೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲಾಗುವುದಿಲ್ಲ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ ನೋಡಿ.


  1. ಸರಿಯಾಗಿ ನಿದ್ರೆ ಮಾಡದಿರುವುದು


  ಮಿತ್ತಲ್ ಅವರ ಪ್ರಕಾರ, ಕಳಪೆ ನಿದ್ರೆಯ ಮಾದರಿಗಳು ನಮ್ಮ ತೂಕ ಇಳಿಸುವ ಪ್ರಕ್ರಿಯೆಗೆ ಅಡ್ಡಿಪಡಿಸುವ ಅತಿದೊಡ್ಡ ಕಾರಣ ಅಂತ ಹೇಳಿದ್ದಾರೆ. "ನಾವು ಸರಿಯಾಗಿ ನಿದ್ರೆ ಮಾಡದಿದ್ದರೆ, ನಾವು ಏನೇ ವ್ಯಾಯಾಮ ಮಾಡಿದರೂ ಮತ್ತು ನಮ್ಮ ಆಹಾರದ ಬಗ್ಗೆ ನಾವು ಎಷ್ಟು ಗಮನ ಹರಿಸಿದರೂ, ನಮ್ಮ ದೇಹದ ಚಯಾಪಚಯ ಕ್ರಿಯೆ ಹೆಚ್ಚಾಗುವುದಿಲ್ಲ" ಎಂದು ನಟಿ ವಿವರಿಸುತ್ತಾರೆ. ನಿಮ್ಮ ಆಹಾರವು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ದೇಹವು ಕೊಬ್ಬನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ" ಎಂದು ಹೇಳುತ್ತಾರೆ.


  TV actress Chhavi Mittal who has won the fight against breast cancer here her diet plan
  ಸಾಂದರ್ಭಿಕ ಚಿತ್ರ


  2. ಸದಾ ಒತ್ತಡದಲ್ಲಿರುವುದು


  ಟಿವಿ ಸೆಲೆಬ್ರೆಟಿಯ ಪ್ರಕಾರ, ಒತ್ತಡದ ಪರಿಣಾಮ ನಮ್ಮ ಮನಸ್ಸು ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ನಮ್ಮ ದೈಹಿಕ ಯೋಗಕ್ಷೇಮದ ಮೇಲೂ ಬೀರುತ್ತದೆ. "ನಮ್ಮಲ್ಲಿ ಈ ರೀತಿಯ ಒತ್ತಡವು ಹೆಚ್ಚಾದಾಗ, ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಸಹ ಹೆಚ್ಚಾಗುತ್ತದೆ. ನಮ್ಮ ದೇಹವು ಏನೋ ತುಂಬಾ ಭಾರವಾಗಿದೆ ಅಂತ ಅನ್ನಿಸಲು ಪ್ರಾರಂಭಿಸುತ್ತದೆ. ತಕ್ಷಣವೇ, ದೇಹವು ಕೊಬ್ಬನ್ನು ಹಿಡಿದಿಟ್ಟುಕೊಳ್ಳಲು ಪ್ರಾರಂಭಿಸುತ್ತದೆ, ಆಹಾರವನ್ನು ಜೀರ್ಣಿಸುವುದನ್ನು ನಿಲ್ಲಿಸುತ್ತದೆ. ಏಕೆಂದರೆ ದೇಹವು ಆ ಬದುಕುಳಿಯುವ ವಿಧಾನಕ್ಕೆ ಸಜ್ಜಾಗುತ್ತಿದೆ ಮತ್ತು ಇದು ಚಯಾಪಚಯ ಕ್ರಿಯೆಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ" ಎಂದು ಅವರು ವಿವರಿಸುತ್ತಾರೆ.


  ಇದನ್ನೂ ಓದಿ: Anita Hassanandani Reddy: ಡಯೆಟ್‌ ಮಾಡದೇ ತೂಕ ಇಳಿಸಿಕೊಂಡ ನಟಿ ಅನಿತಾ ಹಸನಂದಾನಿ, ಇದು ಹೇಗೆ ಸಾಧ್ಯ ಆಯ್ತು ಗೊತ್ತಾ?

  3. ಊಟವನ್ನು ಬಿಟ್ಟುಬಿಡುವುದು


  ಮಿತ್ತಲ್ ಅವರು ಎತ್ತಿ ತೋರಿಸುವ ಮತ್ತೊಂದು ಅಂಶವೆಂದರೆ ನಿಮ್ಮ ಕಾರ್ಯನಿರತ ವೇಳಾಪಟ್ಟಿಗಳ ನಡುವೆ ತಿನ್ನಲು ನಿಮಗೆ ಸಮಯವಿಲ್ಲದ ಕಾರಣ ಊಟವನ್ನು ಮರೆತು ಬಿಡುವುದು ಅಥವಾ ಉದ್ದೇಶಪೂರ್ವಕವಾಗಿ ಊಟವನ್ನು ಬಿಟ್ಟು ಬಿಡುವುದು. "ಮೂಲತಃ, ನೀವು ನಿಮ್ಮನ್ನು ಹಸಿವಿನಿಂದ ಬಳಲಿಸಿಕೊಳ್ಳುವುದು" ಎಂದು ನಟಿ ಹೇಳುತ್ತಾರೆ.


  ಅವರ ಪ್ರಕಾರ, ಹಸಿವು ಒಬ್ಬರ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಮತ್ತು ದೇಹದ ಚಯಾಪಚಯ ದರವಾದ ಬಿಎಂಆರ್ ಅನ್ನು ಕುಸಿಯಲು ಕಾರಣವಾಗಬಹುದು. ಅದಕ್ಕಾಗಿಯೇ ನಟಿ ನಿಯಮಿತ ಮಧ್ಯಂತರಗಳಲ್ಲಿ ತಿನ್ನಲು ಮತ್ತು ಆರೋಗ್ಯಕರ ತಿಂಡಿಯನ್ನು ಒಯ್ಯಲು ಶಿಫಾರಸು ಮಾಡುತ್ತಾರೆ. ಇದರಿಂದ ದೇಹಕ್ಕೆ ಆಗಾಗ್ಗೆ ಹಸಿವು ಅಂತ ಅನ್ನಿಸುವುದಿಲ್ಲ.
  4. ಕ್ಯಾಲೋರಿಗಳನ್ನು ಎಣಿಸುವುದು


  ಕ್ಯಾಲೋರಿಗಳನ್ನು ಎಣಿಸುವುದು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಅಂತ ಅನೇಕರು ತಿಳಿದಿದ್ದಾರೆ. ಆದರೆ ಈ ನಟಿ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ಇದು ಹೆಚ್ಚಿನ ಜನರು ಮಾಡುವ ಒಂದು ದೊಡ್ಡ ತಪ್ಪು ಅಂತ ಹೇಳುತ್ತಾರೆ. "ಒಂದು ಸೇಬಿನಲ್ಲಿ 50 ಕ್ಯಾಲೋರಿಗಳು ಮತ್ತು ಡಯಟ್ ಸೋಡಾದಲ್ಲಿ 0 ಕ್ಯಾಲೋರಿಗಳಿದ್ದರೆ, ನೀವು ಸೇಬನ್ನೆ ತಿನ್ನುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಕ್ಯಾಲೋರಿಗಳನ್ನು ಎಣಿಸುವುದನ್ನು ನಿಲ್ಲಿಸಿ ಮತ್ತು ಆರೋಗ್ಯಕರವಾಗಿ ತಿನ್ನಲು ಪ್ರಾರಂಭಿಸಿ" ಎಂದು ಅವರು ಹೇಳಿದರು.


  ತೂಕ ಕಡಿಮೆ ಮಾಡಿಕೊಳ್ಳಲು ಏನೆಲ್ಲಾ ಮಾಡಬೇಕು ಅಂತಾರೆ ನಟಿ?


  ಇಂತಹ ತಪ್ಪುಗಳನ್ನು ಮಾಡುವುದನ್ನು ಬಿಟ್ಟು ಇನ್ನೂ ಏನೆಲ್ಲಾ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತೆ ಅಂತ ಹೇಳಿದ್ದಾರೆ ನಟಿ ಛಾವಿ ಮಿತ್ತಲ್ ನೋಡಿ.


  - ಮೊದಲನೆಯದಾಗಿ, ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು ಅಥವಾ ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಂತಹ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರು ಶಿಫಾರಸು ಮಾಡುತ್ತಾರೆ. ಅಲ್ಲದೆ ನಿದ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮತ್ತು ಉತ್ತಮ ನಿದ್ರೆಯ ಅಭ್ಯಾಸಗಳನ್ನು ಅನುಸರಿಸಲು ಸಲಹೆ ನೀಡಿದ್ದಾರೆ.


  - "ಧ್ಯಾನ ಮಾಡುವುದು ಹೇಗೆಂದು ನಿಮಗೆ ತಿಳಿದಿಲ್ಲದಿದ್ದರೂ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಕೆಲಸ, ಮಕ್ಕಳು ಅಥವಾ ಇನ್ನಾವುದರ ಬಗ್ಗೆಯೂ ಯೋಚಿಸಬೇಡಿ. ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲವಾದರೂ ಹೀಗೆ ಮಾಡಿ" ಎಂದು ನಟಿ ಹೇಳಿದರು.


  - ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡುವುದು ತುಂಬಾ ಮುಖ್ಯವಾಗುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಹಾರ್ಮೋನುಗಳು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಒತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ ಅಂತ ನಟಿ ಹೇಳಿದರು.

  Published by:Kavya V
  First published: