• Home
  • »
  • News
  • »
  • lifestyle
  • »
  • Health Care: ಯಕೃತ್ತು ಮತ್ತು ಕರುಳಿನ ಆರೋಗ್ಯ ಕಾಪಾಡಲು ಈ ತರಕಾರಿ ಸೇವನೆ ಪರಿಣಾಮಕಾರಿ!

Health Care: ಯಕೃತ್ತು ಮತ್ತು ಕರುಳಿನ ಆರೋಗ್ಯ ಕಾಪಾಡಲು ಈ ತರಕಾರಿ ಸೇವನೆ ಪರಿಣಾಮಕಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ತರಕಾರಿಗಳು ಮಾರುಕಟ್ಟೆಯಲ್ಲಿ ಇರುತ್ತವೆ. ಆದರೆ ಅವುಗಳ ಬಗ್ಗೆ ನಿಮಗೆ ಮಾಹಿತಿ ಇರುವುದಿಲ್ಲ. ಚಳಿಗಾಲದಲ್ಲಿ ಸಿಗುವ ಟರ್ನಿಪ್ ತರಕಾರಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇದರ ಹೆಸರೂ ಸಹ ಗೊತ್ತಿಲ್ಲ! ಆದರೆ ಈ ಟರ್ನಿಪ್ ತರಕಾರಿ ಆರೋಗ್ಯ ಪ್ರಯೋಜನ ನೀಡುತ್ತದೆ.

  • Share this:

    ಆಯಾ ಕಾಲಕ್ಕೆ ಸಿಗುವ ಹಣ್ಣು ಮತ್ತು ತರಕಾರಿಗಳ (Seasonal Fruits And Vegetables) ಸೇವನೆ ಮಾಡುವುದು ಆರೋಗ್ಯ (Health) ವೃದ್ಧಿಗೆ ಸಹಾಯ ಮಾಡುತ್ತದೆ. ಯಾವುದೇ ಸೀಸನ್ ಇರಲಿ, ಆಯಾ ಸೀಸನ್ ನಲ್ಲಿ ಸಿಗುವ ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡುವುದು ಆರೋಗ್ಯ ಕಾಪಾಡಲು ಮತ್ತು ಕಾಲೋಚಿತ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತವೆ. ಅದರಲ್ಲೂ ವಿಂಟರ್ ಸೀಸನ್ ನಲ್ಲಿ ನೀವು ದೇಹವನ್ನು (Body) ಕಾಯಿಲೆಗಳಿಂದ (Diseases) ರಕ್ಷಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾಗುತ್ತದೆ. ಕೆಲವು ತರಕಾರಿಗಳು ಮಾರುಕಟ್ಟೆಯಲ್ಲಿ ಕಾಣಿಸುತ್ತವೆ. ಆದರೆ ಅವುಗಳ ಬಗ್ಗೆ ನಿಮಗೆ ಮಾಹಿತಿ ಇರುವುದಿಲ್ಲ. ಆದರೆ ತುಂಬಾ ವಿರಳವಾಗಿ ಕಾಣಿಸುವ ಈ ತರಕಾರಿಗಳು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ತಂದು ಕೊಡುತ್ತವೆ.


    ಆಯಾ ಕಾಲದ ತರಕಾರಿ ಟರ್ನಿಪ್ ಪ್ರಯೋಜನಗಳು


    ಕೆಲವು ತರಕಾರಿಗಳು ಸುಲಭ, ಸರಳವಾಗಿ ಸಿಗುವುದಿಲ್ಲ. ಕೆಲವು ತರಕಾರಿಗಳ ಹೆಸರೂ ಸಹ ಜನರಿಗೆ ಗೊತ್ತಿರುವುದಿಲ್ಲ. ಇಂದು ನಾವು ಚಳಿಗಾಲದಲ್ಲಿ ಸಿಗುವ ತರಕಾರಿ ಟರ್ನಿಪ್ ಹೇಗೆ ಆರೋಗ್ಯಕ್ಕೆ ಪ್ರಯೋಜನ ತಂದು ಕೊಡುತ್ತದೆ ಅಂತಾ ತಿಳಿಯೋಣ.


    ಚಳಿಗಾಲದಲ್ಲಿ ಸಿಗುವ ಟರ್ನಿಪ್ ತರಕಾರಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಇದರ ಹೆಸರೂ ಸಹ ಗೊತ್ತಿಲ್ಲ ಈ ಟರ್ನಿಪ್ ತರಕಾರಿ ಆರೋಗ್ಯ ಪ್ರಯೋಜನ ನೀಡುತ್ತದೆ. ಟರ್ನಿಪ್‌ ಬೆಚ್ಚಗಿನ ಸ್ವಭಾವ ಹೊಂದಿರುವ ತರಕಾರಿಗಳು.


    ಇದು ಬಿಳಿ ನೇರಳೆ ಬಣ್ಣದ ಅನೇಕ ಬಣ್ಣಗಳು ಮತ್ತು ವಿವಿಧ ಗಾತ್ರಗಳಲ್ಲಿ ಕಂಡು ಬರುತ್ತದೆ. ಮಾರುಕಟ್ಟೆಯಲ್ಲಿ ಈ ಬಿಳಿ ನೇರಳೆ ಬಣ್ಣದ ಟರ್ನಿಪ್ ಬೆಲೆ ಕಡಿಮೆ ಇದೆ. ಆದರೆ ಇದು ದುಪ್ಪಟ್ಟು ಆರೋಗ್ಯ ಪ್ರಯೋಜನ ನೀಡುತ್ತದೆ.




    ಇದು ಅತ್ಯಂತ ಪೌಷ್ಟಿಕಾಂಶ ತರಕಾರಿಗಳ ಪಟ್ಟಿಗೆ ಸೇರುತ್ತದೆ. ಅಷ್ಟೇ ಅಲ್ಲದೇ ಟರ್ನಿಪ್ ನೋಡಲು ಗಡ್ಡೆಯಾಗಿದೆ. ಇದರ ಎಲೆಗಳು ಸಹ ಪ್ರಯೋಜನ ನೀಡುತ್ತವೆ.


    ಟರ್ನಿಪ್ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೋಲೇಟ್, ಫೈಬರ್, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಸಿ, ವಿಟಮಿನ್ ಇ ನಂತಹ ಪೋಷಕಾಂಶ ಹೊಂದಿದೆ.


    ಟರ್ನಿಪ್ ಅನ್ನು ಯಾರು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡುತ್ತಾರೋ ಅವರು ಕ್ಯಾನ್ಸರ್, ಹೃದಯ-ಯಕೃತ್ತಿನ ಕಾಯಿಲೆ ಸೇರಿ ಹಲವು ಆರೋಗ್ಯ ಸಮಸ್ಯೆಯಿಂದ ರಕ್ಷಣೆ ಪಡೆಯಲು ಸಹಕಾರಿ ಆಗಿದೆ.


    ಟರ್ನಿಪ್ ಸೇವನೆಯ ಪ್ರಯೋಜನಗಳು


    ಟರ್ನಿಪ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


    ಒಂದು ಅಧ್ಯಯನದ ಪ್ರಕಾರ, ಟರ್ನಿಪ್ ತರಕಾರಿಯು ರೋಗ ನಿರೋಧಕ ಗುಣಲಕ್ಷಣ ಹೊಂದಿದೆ. ಇದು ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು ವಿಟಮಿನ್ ಸಿ ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.


    ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ


    ಅಧ್ಯಯನವೊಂದರ ಪ್ರಕಾರ, ಟರ್ನಿಪ್‌ ಗಡ್ಡೆ ಫ್ಲೇವನಾಯ್ಡ್‌ ಮತ್ತು ಫೈಟೊನ್ಯೂಟ್ರಿಯೆಂಟ್‌ ಹೊಂದಿದೆ. ಈ ಅಂಶಗಳು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ, ಇದು ಹೃದಯದ ಆರೋಗ್ಯ ಕಾಪಾಡುತ್ತದೆ.


    ಕ್ಯಾನ್ಸರ್ ಬೆಳವಣಿಗೆ ತಡೆಯುತ್ತದೆ


    ಟರ್ನಿಪ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ವಿರೋಧಿ ಗುಣಲಕ್ಷಣ ಹೊಂದಿದೆ. ಮಾರಣಾಂತಿಕ ಗೆಡ್ಡೆಗಳ ಬೆಳವಣಿಗೆ ತಡೆಯುತ್ತದೆ.


    ಸಾಂದರ್ಭಿಕ ಚಿತ್ರ


    ಮಧುಮೇಹ ನಿಯಂತ್ರಿಸುತ್ತದೆ


    ಟರ್ನಿಪ್ ಆಂಟಿ ಡಯಾಬಿಟಿಕ್ ಗುಣಲಕ್ಷಣ ಹೊಂದಿದೆ. ಇದು ಮಧುಮೇಹ ನಿಯಂತ್ರಿಸುತ್ತದೆ. ಪ್ರತಿದಿನ ತಿಂದರೆ ದೇಹದಲ್ಲಿ ಇನ್ಸುಲಿನ್ ವೇಗವಾಗಿ ರೂಪುಗೊಳ್ಳುತ್ತದೆ. ರಕ್ತದ ಸಕ್ಕರೆ ಮಟ್ಟ ಕಾಪಾಡುತ್ತದೆ.


    ಯಕೃತ್ತು ಮತ್ತು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ


    ಟರ್ನಿಪ್ ಫೈಬರ್ ಹೊಂದಿದೆ. ಇದು ಕರುಳು ಆರೋಗ್ಯ ಕಾಪಾಡುತ್ತದೆ. ಪಟೊಪ್ರೊಟೆಕ್ಟಿವ್ ಗುಣಲಕ್ಷಣವು ಯಕೃತ್ತನ್ನು ಕಾಪಾಡುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


    ಮೂಳೆಗಳ ಆರೋಗ್ಯ ಬಲಪಡಿಸುತ್ತದೆ


    ಮೂಳೆ ನೋವು ಮತ್ತು ಊತ ಕಡಿಮೆ ಮಾಡುತ್ತದೆ. ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಟರ್ನಿಪ್ ನ್ನ ಸಲಾಡ್, ತರಕಾರಿ ಮತ್ತು ಉಪ್ಪಿನಕಾಯಿ ರೂಪದಲ್ಲಿ ಸೇವಿಸಬಹುದು.

    Published by:renukadariyannavar
    First published: