• Home
  • »
  • News
  • »
  • lifestyle
  • »
  • Cough Home Remedy: ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ಅರಿಶಿಣ ಟೀ ಬೆಸ್ಟ್, ಮಾಡುವ ವಿಧಾನ ಇಲ್ಲಿದೆ

Cough Home Remedy: ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ಅರಿಶಿಣ ಟೀ ಬೆಸ್ಟ್, ಮಾಡುವ ವಿಧಾನ ಇಲ್ಲಿದೆ

ಅರಿಶಿಣ ಟೀ

ಅರಿಶಿಣ ಟೀ

ಅರಿಶಿಣ ಹಾಲು ಯಾರಿಗೆ ಗೊತ್ತಿಲ್ಲ ಹೇಳಿ.. ವಿವಿಧ ಆರೋಗ್ಯ ಕಾರಣಗಳಿಂದಾಗಿ ಹಾಲನ್ನು ತ್ಯಜಿಸುವ ಸಾಕಷ್ಟು ಜನರಿದ್ದಾರೆ. ಆದ್ದರಿಂದ ಇಂದು ನಾವು ಸರ್ವರಿಗೂ ಸಲ್ಲುವ ಅರಿಶಿಣ ಟೀ ರೆಸಿಪಿ ಬಗ್ಗೆ ನಿಮ್ಗೆ ತಿಳಿಸಿಕೊಡಲಿದ್ದೇವೆ.

  • Share this:

ಈಗ ಎಲ್ಲೆಲ್ಲೂ ಚಳಿಗಾಲದ(Winter) ಶೀತಗಾಳಿ(Cold Wave) ಬೀಸ್ತಿದೆ. ಚಳಿಗಾಲವೆಂದ್ರೆನೆ ಅದ್ಭುತ. ಈ ಚಳಿಗಾಲದ ತಣ್ಣನೆ ಅನುಭವ ಮತ್ಯಾವ ಕಾಲದಲ್ಲಿಯೂ ಸಿಗೋದಿಲ್ಲ. ತಣ್ಣನೆಯ ಈ ಚಳಿಗಾಲದಲ್ಲಿ ಯಾವಾಗಲೂ ಬಿಸಿ ಬಿಸಿಯಾಗಿರೋ(Hot) ಆಹಾರ ಪದಾರ್ಥ(Food) ಸೇವಿಸಬೇಕೆಂದು ಮನುಷ್ಯ ಸದಾ ಆಸೆ ಪಡ್ತಾನೆ. ಹಳೆ ಕಾಲದಲ್ಲಿ ಈ ಚಳಿಗಾಲದ ಸಮಯದಲ್ಲಿ ಬಿಸಿ ಕಷಾಯ ಮತ್ತು ಆರ್ಯುವೇದಿಕ್ ಟೀ ಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು.


ಈಗ ಕಾಲ ಬದಲಾಗಿದೆ. ಕೆಲವರು ಗ್ರೀನ್ ಟೀ, ಹರ್ಬಲ್ ಟೀ ಹೀಗೆ ಮುಂತಾದ ಟೀ ಗಳನ್ನು ಈ ಚಳಿಗಾಲದಲ್ಲಿ ಸದಾ ಹೀರುತ್ತಲೇ ಇರುತ್ತಾರೆ. ಆದ್ರೆ ಮನೆಲಿ ಸಿಗೋ ಅರಿಶಿಣದಿಂದ ಮಾಡುವ ಟೀ ಅನ್ನು ಸೇವನೆ ಮಾಡೋರು ಈಗ ಕಡಿಮೆ. ಆದರೆ ಚಳಿಗಾಲದಲ್ಲಿ ನಮ್ಮನ್ನು ಸದಾ ಕಾಡುವ ನೆಗಡಿ, ಕೆಮ್ಮು , ಜ್ವರದಂತಹ ಸಾಮಾನ್ಯ ರೋಗಗಳಿಂದ ಈ ಅರಿಷಿಣ ದೂರವಿಡುತ್ತೆ. ಅದು ಹೇಗೆ? ಎಂದು ಮುಂದೆ ತಿಳಿಯೋಣ.


ಬೆಸ್ಟ್ ಮಸಾಲೆ ಅರಿಶಿಣ


ಅಡುಗೆಮನೆಯ ಜನಪ್ರಿಯ ಅಡಿಗೆ ಮಸಾಲೆ, ಅರಿಶಿಣವು ಹಲವು ಯುಗಗಳಿಂದ ಸಾಂಪ್ರದಾಯಿಕ ವೈದ್ಯಕೀಯ ಅಭ್ಯಾಸದ ಒಂದು ಭಾಗವಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ತಾಯಂದಿರು ಮತ್ತು ಅಜ್ಜಿಯರು ಪ್ರತಿದಿನ ರಾತ್ರಿ ಅರಿಶಿಣ ಹಾಲನ್ನು ಮನೆಯ ಮಂದಿಗೆಲ್ಲ ಕುಡಿಯಲು ಕೊಡುತ್ತಿದ್ದರಂತೆ. ಈಗ ನಿಮ್ಮ ಪ್ರಶ್ನೆ ಏಕೆ ಎಂದಾಗಿರುತ್ತೆ ಅಲ್ವಾ..ಅದ್ಕೆ ಉತ್ತರ ತಿಳಿಯೋಣ ಬನ್ನಿ.


ಅನೇಕ ಪ್ರಯೋಜನಗಳ ಆಗರ ಅರಿಶಿಣ


ಅರಿಶಿಣವು ಒಂದು ಘಟಕಾಂಶವಾಗಿದ್ದು, ಅದರಲ್ಲಿ ಆಂಟಿ ನಿರೋಧಕಗಳು, ಆಂಟಿ-ವೈರಲ್, ಉರಿಯೂತದ ಮತ್ತು ನಂಜುನಿರೋಧಕ ಗುಣಲಕ್ಷಣಗಳಿಂದ ತುಂಬಿರುತ್ತದೆ ಅದು ನಮಗೆ ಅನೇಕ ರೋಗಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Fennel Seeds: ಸೋಂಪುಕಾಳನ್ನು ಅಡುಗೆಯಲ್ಲಿ ಹೀಗೆ ಬಳಸಿದ್ರೆ ಆರೋಗ್ಯ ಪ್ರಯೋಜನಗಳು ಹಲವಾರು


ಅರಿಶಿಣವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. DK ಪಬ್ಲಿಷಿಂಗ್‌ನ 'ಹೀಲಿಂಗ್ ಫುಡ್ಸ್' ಪುಸ್ತಕದ ಪ್ರಕಾರ, ದೇಹದಲ್ಲಿ ಸ್ವತಂತ್ರ ರಾಡಿಕಲ್ ಹಾನಿ ಮತ್ತು ಉರಿಯೂತವನ್ನು ತಡೆಯಲು ಅರಿಶಿಣವು ಸಾಕಷ್ಟು ಸಹಾಯ ಮಾಡುತ್ತದೆ.


ಅರಿಶಿಣದ ಆರೋಗ್ಯ ಪ್ರಯೋಜನಗಳು:


ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅರಿಶಿಣ ಹೇಗೆ ಸಹಾಯ ಮಾಡುತ್ತದೆ ಎನ್ನುವುದರ ಕುರಿತು ಈಗ ತಿಳಿಯೋಣ.


ಅರಿಶಿಣದಲ್ಲಿರುವ ಕರ್ಕ್ಯುಮಿನ್ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಕಾಲೋಚಿತ ರೋಗಗಳ ವಿರುದ್ಧ ರೋಗನಿರೋಧಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಸಾಮಾನ್ಯ ಶೀತ, ಚಳಿಗಾಲದ ಸೈನಸ್ ಮತ್ತು ಕೀಲು ನೋವುಗಳಿಂದ ಗುಣವಾಗಲು ಅರಿಶಿಣದಲ್ಲಿರುವ ರಾಸಾಯನಿಕಗಳು ಬಹಳಷ್ಟು ಪ್ರಯೋಜನಕಾರಿಯಾಗಿವೆ.
ಅರಿಶಿಣದ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳು ಚಳಿಗಾಲದ ಗಂಟಲುನೋವಿನಿಂದ ನಮ್ಮನ್ನು ದೂರ ಮಾಡುತ್ತದೆ.


ಅರಿಶಿಣವು ಶಾಖ-ಉತ್ಪಾದಿಸುವ ಮಸಾಲೆಯಾಗಿದ್ದು ಅದು ಅತ್ಯುತ್ತಮ ಜೀವಕೋಶದ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ದೇಹವನ್ನು ಬೆಚ್ಚಗಾಗಿಸುವ ಕಾರ್ಯವನ್ನು ಮಾಡುತ್ತದೆ.


ಈಗ ಅರಿಶಿಣದ ಪ್ರಯೋಜನಗಳನ್ನು ನಾವು ತಿಳಿದಿದ್ದೇವೆ. ಹಾಗಿದ್ರೆ ಅದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಹೇಗೆ ಎಂದು ಈಗ ತಿಳಿಯೋಣ.


ಅರಿಶಿಣ ಹಾಲು ಯಾರಿಗೆ ಗೊತ್ತಿಲ್ಲ ಹೇಳಿ.. ವಿವಿಧ ಆರೋಗ್ಯ ಕಾರಣಗಳಿಂದಾಗಿ ಹಾಲನ್ನು ತ್ಯಜಿಸುವ ಸಾಕಷ್ಟು ಜನರಿದ್ದಾರೆ. ಆದ್ದರಿಂದ ಇಂದು ನಾವು ಸರ್ವರಿಗೂ ಸಲ್ಲುವ ಅರಿಶಿಣ ಟೀ ರೆಸಿಪಿ ಬಗ್ಗೆ ನಿಮ್ಗೆ ತಿಳಿಸಿಕೊಡಲಿದ್ದೇವೆ.


ಅರಿಶಿಣ ಟೀ ಮಾಡುವುದು ಹೇಗೆ?


ಅರಿಶಿಣ ಟೀಗೆ ಬೇಕಾದ ಸಾಮಾಗ್ರಿಗಳು


ಅರಿಶಿಣ
ಶುಂಠಿ
ಕರಿಮೆಣಸು
ಜೇನುತುಪ್ಪ


ಇದನ್ನೂ ಓದಿ: Health Care: ಚಳಿಗಾಲದಲ್ಲಿ ಹೆಚ್ಚು ಲಭ್ಯವಿರುವ ಮೂಲಂಗಿ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


ಅರಿಶಿಣ ಟೀ ಮಾಡುವ ವಿಧಾನ


ಅರಿಶಿಣ, ಶುಂಠಿ, ಕರಿಮೆಣಸು ಇವೆಲ್ಲವನ್ನು ಬಿಸಿ ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿಕೊಳ್ಳಿ. ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿದರೆ ಮುಗಿಯಿತು ಅರಿಶಿಣ ಟೀ ರೆಡಿ.

Published by:Latha CG
First published: