• Home
  • »
  • News
  • »
  • lifestyle
  • »
  • Child Care: ಮಕ್ಕಳನ್ನು ಕಾಡುವ ಶೀತ, ಕೆಮ್ಮಿಗೆ ಈ 2 ವಸ್ತುಗಳಿದ್ರೆ ಸಾಕು ಪರಿಹಾರ ಸಿಗುತ್ತೆ

Child Care: ಮಕ್ಕಳನ್ನು ಕಾಡುವ ಶೀತ, ಕೆಮ್ಮಿಗೆ ಈ 2 ವಸ್ತುಗಳಿದ್ರೆ ಸಾಕು ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Prepare Turmeric Milk and Pepper Soup: ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಬಹಳಷ್ಟಿದೆ. ದೇಹಕ್ಕೆ ಸೇರುವ ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಇದಕ್ಕಿದೆ. ಅದೇ ರೀತಿ ಕಾಳುಮೆಣಸಿಗೆ ಅಗಾಧವಾದ ಔಷಧೀಯ ಶಕ್ತಿಯಿದೆ.

  • Share this:

ಮಳೆಗಾಲದಲ್ಲಿ (Rainy Season) ಅನೇಕ ಜನರು ಶೀತ (Cold) ಮತ್ತು ಕೆಮ್ಮಿನಿಂದ (cough)  ಬಳಲುತ್ತಿದ್ದಾರೆ. ಅದರಲ್ಲೂ ಮಕ್ಕಳಿಗೆ (Child) ಈ ಸಮಯದಲ್ಲಿ ಸಮಸ್ಯೆಗಳು ಹೆಚ್ಚು. ಅರಿಶಿನ ಹಾಲನ್ನು (Turmeric Milk) ಮಾಡಿ ಕುಡಿದರೆ ನೆಗಡಿ ಮತ್ತು ಕೆಮ್ಮಿನಿಂದ ಬೇಗ ಮುಕ್ತಿ ಪಡೆಯಬಹುದು. ಕೇವಲ ಅರಿಶಿನ ಹಾಲು ಮಾತ್ರವಲ್ಲದೇ, ಪೌಷ್ಠಿಕ ಮತ್ತು ಸಮತೋಲಿತ ಆಹಾರ ಸೇವಿಸಿ ದೇಹವನ್ನು ಆರೋಗ್ಯವಾಗಿಟ್ಟುಕೊಂಡರೆ ಮಳೆಯಾಗಲಿ ಬಿಸಿಲಿನಿಂದಾಗಲಿ ನಮ್ಮನ್ನು ಏನೂ ಮಾಡುವುದಿಲ್ಲ. ಅದಕ್ಕೆ, ಆಹಾರ ಪದ್ಧತಿಯು ಋತುಮಾನಕ್ಕೆ ಅನುಗುಣವಾಗಿರಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ, ಈ ಸಮಯದಲ್ಲಿ ಮಕ್ಕಳಿಗೆ ನೀವು ಅರಿಶಿನ ಹಾಲು ಅಥವಾ ಕಾಳುಮೆಣಸಿನ (Pepper) ಸಾರನ್ನು ಮಾಡಿಕೊಟ್ಟರೆ, ಅವರ ಆರೋಗ್ಯ (Health) ಚೆನ್ನಾಗಿರುತ್ತದೆ.  


ಸಾಮಾನ್ಯವಾಗಿ ಈ 2 ಪದಾರ್ಥಗಳನ್ನು ಹೇಗೆ ಮಾಡುವುದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ, ಅದು ನಿಜಕ್ಕೂ ಸರಿಯಾದ ವಿಧಾನವೇ ಎಂಬುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಅರಿಶಿನ ಹಾಲಿನ ವಿಚಾರದಲ್ಲಿ ಅನೇಕ ಜನರು ಈ ತಪ್ಪು ಮಾಡುತ್ತಾರೆ.  ಹಾಗಾದ್ರೆ ಮೊದಲಿಗೆ ಅರಿಶಿನ ಹಾಲು ಮಾಡುವುದು ಹೇಗೆ ಎಂಬುದು ಇಲ್ಲಿದೆ


ಅಗತ್ಯವಿರುವ ವಸ್ತುಗಳು:


ಹಾಲು - 1 1/2 ಕಪ್


ಅರಿಶಿನ ಪುಡಿ - 1/4 ಟೀಸ್ಪೂನ್


ಕಾಳುಮೆಣಸಿನ ಪುಡಿ - 1/2 ಟೀಸ್ಪೂನ್​


ಸಕ್ಕರೆ – 1 ಚಮಚ


ಅರಿಶಿನ ಹಾಲು ಮಾಡುವ ವಿಧಾನ


ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಸುರಿದು ಒಲೆಯ ಮೇಲೆ ಇಟ್ಟು, ಚೆನ್ನಾಗಿ ಕುದಿಯಲು ಬಿಡಿ. ಹಾಲು ಚೆನ್ನಾಗಿ ಕುದಿಯುತ್ತಿರುವಾಗ  ಸಕ್ಕರೆ ಹಾಕಿ ಕರಗಲು ಬಿಡಿ. ಸಕ್ಕರೆ ಕರಗಿದ ನಂತರ, ಅರಿಶಿನ ಪುಡಿಯನ್ನು ಸೇರಿಸಿ ಮತ್ತು 2 ನಿಮಿಷಗಳ ಕಾಲ ಮತ್ತೆ ಇದನ್ನು  ಕುದಿಯಲು ಬಿಡಿ.


ನಂತರ ಅದಕ್ಕೆ ಕಾಳುಮೆಣಸಿನ ಪುಡಿ ಹಾಕಿ 5 ನಿಮಿಷ ಕುದಿಸಿದರೆ, ಅರಿಶಿನ ಹಾಲು ರೆಡಿ. ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳು ಬಹಳಷ್ಟಿದೆ. ದೇಹಕ್ಕೆ ಸೇರುವ ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಇದಕ್ಕಿದೆ. ಅದೇ ರೀತಿ ಕಾಳುಮೆಣಸಿಗೆ ಅಗಾಧವಾದ ಔಷಧೀಯ ಶಕ್ತಿಯಿದೆ.




ಇದು ದೇಹದಿಂದ ವಾಯುವನ್ನು ತೆಗೆದುಹಾಕುತ್ತದೆ. ಕಾಳುಮೆಣಸಿನ ಮಸಾಲೆ ಮತ್ತು ಅರಿಶಿನದ ರೋಗನಿರೋಧಕ ಶಕ್ತಿ ದೇಹದಲ್ಲಿ ಸೇರಿಕೊಂಡರೆ ಕೆಮ್ಮು ಮತ್ತು ಕಫ ದೂರವಾಗುತ್ತದೆ.


ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಚೆಂದ ಚೆಂದದ ಈ ರಂಗೋಲಿ ಹಾಕಿ ಅಲಂಕಾರ ಮಾಡಿ


ಕಾಳುಮೆಣಸಿನ ಸಾರು ಅಥವಾ ಸೂಪ್ ಮಾಡುವುದು ಹೇಗೆ ಎಂಬುದು ಇಲ್ಲಿದೆ.  


ಅಗತ್ಯವಿರುವ ವಸ್ತುಗಳು


ಕಾಳುಮೆಣಸು: 1 ಚಮಚಮ


ಬೆಳ್ಳುಳ್ಳಿ ಎಸಳು - 3


ಟೊಮೆಟೊ - 1


ಅರಿಶಿನ ಪುಡಿ - ಸ್ವಲ್ಪ


ಈರುಳ್ಳಿ - 2


ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು - ಸ್ವಲ್ಪ


ಉಪ್ಪು - ಅಗತ್ಯವಿರುವಷ್ಟು


ತುಪ್ಪ - ಅರ್ಧ ಟೀಚಮಚ


ಕಾಳುಮೆಣಸಿನ ಸಾರು ಮಾಡುವ ವಿಧಾನ


ಮೊದಲು ಒಂದು ಪ್ಯಾನ್​ ತೆಗೆದುಕೊಳ್ಳಿ, ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ತುರಿದ ಬೆಳ್ಳುಳ್ಳಿ ಸೇರಿಸಿ, ಅದನ್ನು ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಟೊಮ್ಯಾಟೋ, ಅರಿಶಿನ ಪುಡಿ, ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


ಇದನ್ನೂ ಓದಿ: ಬೆಳಗ್ಗೆ ಎದ್ದು ಈ 5 ಕೆಲ್ಸ ಮಾಡಿದ್ರೆ 1 ತಿಂಗಳಲ್ಲಿ ತೆಳ್ಳಗಾಗ್ತೀರಿ


ಈ ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಸಿ. ಇದು ಕುದ್ದು, ಅದರ ಪ್ರಮಾಣ ಕಡಿಮೆಯಾದಾಗ ಸ್ಟವ್ ಆಫ್ ಮಾಡಿ ಅದನ್ನು ಮುಚ್ಚಿ. ಇದನ್ನು ಬೇಕಾದರೆ ಸೋಸಿಕೊಂಡು ಸಹ ನೀವು ಕುಡಿಯಬಹುದು. ಮತ್ತೊಂದು ವಿಚಾರ ಎಂದರೆ ಕೇವಲ ಇದು ಮಕ್ಕಳಿಗೆ ಮಾತ್ರವಲ್ಲದೇ, ದೊಡ್ಡವರಿಗೆ ಸಹ ಒಳ್ಳೆಯದು.

Published by:Sandhya M
First published: