Turmeric: ಅರಿಶಿನವನ್ನು ಮನೆಯ ಬಳಿಯೇ ಬೆಳೆಸಲು ಇಲ್ಲಿದೆ ಸಕತ್‌ ಐಡಿಯಾ...!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರಿಶಿನವು ಬೆಳೆಯಲು ಸರಳವಾದ ಸಸ್ಯವಾಗಿದೆ. ಸಾವಯವ ಗೊಬ್ಬರ ಬಳಸಿ ಮತ್ತು ಕಳೆ ಮುಕ್ತವಾಗಿರುವಂತೆ ನೋಡಿಕೊಂಡು ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಬಹುದು

  • Share this:

ಅರಿಶಿನ ಹಲವು ಮನೆಮದ್ದುಗಳ (Home Remedies) ಒಡೆಯ. ಅಡುಗೆಗೂ (Cooking Medicine) ಬೇಕು, ಔಷಧಿಗೂ ಬೇಕು, ಆರೋಗ್ಯಕ್ಕೂ ಅರಿಶಿನ(Turmeric) ಬೇಕು. ನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿಯೇ ಮಾಡಿಕೊಳ್ಳುವ ಚರ್ಮದ ಆರೈಕೆಯಲ್ಲಿ (Skin Care) ಅರಿಶಿನದ್ದು ದೊಡ್ಡ ಪಾಲು. ಭಾರತೀಯರ (Indians) ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ. ಪ್ರತಿ ಅಡುಗೆಗೂ ಅರಿಶಿನ ಹಾಕೇ ಹಾಕುತ್ತೇವೆ. ಮನೆ ಮದ್ದಿನ ರೂಪದಲ್ಲಿ ಅರಿಶಿನವನ್ನು ಬಳಸುತ್ತೇವೆ.


ಇದು 300ಕ್ಕೂ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ. ಕರ್ಕುಮಾ ಲಾಂಗಾ ಎಂಬುದು ಅರಿಶಿನದ ವೈಜ್ಞಾನಿಕ ಹೆಸರು. ಅರಿಶಿನ ಬಳಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದೋ ಹಾಗೆಯೇ ಅದನ್ನು ಕೃಷಿ ಮಾಡುವುದರಿಂದ ಕೂಡ ಅಷ್ಟೇ ಲಾಭಗಳಿವೆ. ನೀವು ಮನೆಯಲ್ಲಿಯೂ ಸಹ ಬೆಳೆಯನ್ನು ಬೆಳೆಯಬಹುದು. ಹಾಗೆಯೇ ಜಮೀನಿನಲ್ಲೂ ಬೆಳೆಯುವುದರಿಂದ ಅನೇಕ ಲಾಭ ಪಡೆಯಬಹುದು. ಹಾಗಾದರೆ ಅರಿಶಿನ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.


ಅರಿಶಿನ ಬೆಳೆಯಲು ಪ್ರಮುಖ 7 ಕಾರಣ


1) ಉತ್ತಮ ಹೂಡಿಕೆ
ನಿಮ್ಮಲ್ಲಿ ಹೆಚ್ಚುವರಿ ಜಾಗವಿದ್ದರೆ ನೀವು ಅಲ್ಲಿ ಅರಿಶಿನ ಬೆಳೆಯಬಹುದು. ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದ್ದು, ಲಾಭ ತಂದುಕೊಡುತ್ತದೆ. ಅರಿಶಿನವು ಹಾಕಿ ಕೃಷಿ ಮಾಡಿದ ಬಳಿಕ 6 ತಿಂಗಳುಗಳ ನಂತರ ಕಟಾವು ಮಾಡಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕೊಯ್ಲು ಮಾಡಬಹುದು. ಇದನ್ನು ಒಣ ಪ್ರದೇಶದಲ್ಲಿ ಇರಿಸಿ ಗಾಳಿಯಾಡದಂತೆ ಮತ್ತು ಶೇಖರಣೆ ಮಾಡಿದ್ದಲ್ಲಿ ಅದನ್ನು ತದನಂತರ ಕೂಡ ಬಿತ್ತನೆ ಇಲ್ಲ ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ಹಸಿ ಮತ್ತು ಒಣ ಅರಿಶಿನಕ್ಕೆ ಒಳ್ಳೆಯ ಬೇಡಿಕೆ ಇದೆ.


ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ


2) ಲಾಭದಾಯಕ ಮತ್ತು ಆರೋಗ್ಯಕರ ಬೆಳೆ
ನಮಗೆ ಬೇಕಿರುವ ಅರಿಶಿನವನ್ನು ಅಂಗಡಿಯಿಂದ ಖರೀದಿಸುವ ಬದಲು ಮನೆಯಲ್ಲಿ ಬೆಳೆಯಬಹುದು. ಸಣ್ಣ ಕುಂಡದಲ್ಲೂ ಕೂಡ ಮನೆ ಬಳಕೆಗೆ ಸಾಕಾಗುವಷ್ಟು ಬೆಳೆ ಬೆಳೆಯಬಹುದು. ಹೆಚ್ಚು ಜಮೀನಿದ್ದರೆ ಅಲ್ಲಿ ಕೃಷಿ ಮಾಡಿ ಲಾಭ ಪಡೆಯಬಹುದು. ಇದು ಆರೋಗ್ಯಕ್ಕೂ ಉತ್ತಮವಾಗಿದ್ದು ಅರಿಶಿನವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಚರ್ಮ ಸಂಬಂಧಿ ಕಾಯಿಲೆಗಳ ನಿವಾರಣೆಗೆ ಸಹಕಾರಿಯಾಗಿದೆ.


3) ಮಣ್ಣಿನಲ್ಲಿರುವ ಆರ್ಸೆನಿಕ್ ಅಂಶ ತೆಗೆದು ಹಾಕುತ್ತದೆ
ಮಣ್ಣಿನಲ್ಲಿರುವ ಆರ್ಸೆನಿಕ್ ಅಂಶವು ಕ್ಯಾನ್ಸರ್ ಕಾರಕವಾಗಿದೆ. ಇದು ನಾವು ಸೇವಿಸುವ ಆಹಾರದಲ್ಲಿ ಸೇರಿಕೊಂಡು ಕ್ಯಾನ್ಸರ್ ತರುತ್ತದೆ. ಮಣ್ಣಿನಲ್ಲಿರುವ ಈ ಆರ್ಸೆನಿಕ್ ಅಂಶವನ್ನು ಅರಿಶಿನ ತೆಗೆದು ಹಾಕುವ ಸಾಮರ್ಥ್ಯ ಹೊಂದಿದೆ. ಮಣ್ಣಿನಿಂದ ಆರ್ಸೆನಿಕ್ ತೊಡೆದುಹಾಕಲು ಅರಿಶಿನವನ್ನು ಬೆಳೆಯುವುದು ಅತ್ಯಂತ ಪರಿಣಾಮಕಾರಿ ತಂತ್ರವಾಗಿದೆ. ಕ್ಯಾರೆಟ್, ಆಲೂಗಡ್ಡೆ ಮತ್ತು ಇತರ ಬೇರು ತರಕಾರಿಗಳೊಂದಿಗೆ ಅರಿಶಿನ ಬೇರುಗಳನ್ನು ಮಧ್ಯದಲ್ಲಿ ನೆಡುವುದರಿಂದ ಆರ್ಸೆನಿಕ್ ಅಂಶವು ತರಕಾರಿಗಳಲ್ಲಿ ಸೇರಿಕೊಳ್ಳುವುದನ್ನು ತಡೆಯಬಹುದು.


4) ಶೀತ ವಾತಾವರಣದಲ್ಲಿ ಬೆಳೆಯಬಹುದು
ಯಾವುದೇ ಹವಮಾನಕ್ಕೂ ಈ ಬೆಳೆ ಹೊಂದಿಕೊಳ್ಳುತ್ತದೆ. ಶೀತವಿರುವ ಪ್ರದೇಶದಲ್ಲೂ ಇದನ್ನು ಬೆಳೆಯಬಹುದು. ಇದಲ್ಲದೆ, ಇತರ ಸಸ್ಯಗಳಿಗೆ ಹೋಲಿಸಿದರೆ ಅರಿಶಿನವು ವೇಗದಲ್ಲಿ ಬೆಳೆಯುತ್ತದೆ.ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಿತಿನ್ ಗಡ್ಕರಿ ಅವರು ಎ ಎಸ್ ಅಗ್ರಿ ಮತ್ತು ಆಕ್ವಾ ಎಲ್‌ಎಲ್‌ಪಿ, ಎಂಬ ಯೋಜನೆಯನ್ನು ಉದ್ಘಾಟಿಸಿದರು. ಅಲ್ಲಿ ಲಂಬ ಕೃಷಿ ಮೂಲಕ ಅರಿಶಿನವನ್ನು ಬೆಳೆಯುವ ಬಗ್ಗೆ ತಿಳಿಸಲಾಯಿತು.


5) ವರ್ಷಕ್ಕೆ ಎರಡು ಬೆಳೆ
ವರ್ಷಕ್ಕೆ ಎರಡು ಬಾರಿ ಅರಿಶಿನವನ್ನು ಕೊಯ್ಲು ಮಾಡಬಹುದು. 6 ತಿಂಗಳಿಗೊಮ್ಮೆ ಸಮೃದ್ಧ ಫಲ ಸಿಗುವುದರಿಂದ ಈ ಬೆಳೆಯನ್ನು ಎರಡು ಸಾರಿ ಬಿತ್ತನೆ ಮಾಡಿ ಇಳುವರಿ ಪಡೆಯಬುಹುದು.


ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು


6) ಕೈ ಹಿಡಿಯುವ ಬೆಳೆ
ಅರಿಶಿನ ಕೃಷಿ ಮಾಡಿ ಯಶಸ್ಸು ಕಂಡವರ ಪ್ರಮಾಣವು ಹೆಚ್ಚಾಗಿದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಅರಿಶಿನವನ್ನು ಮಸಾಲೆ ಮತ್ತು ನೈಸರ್ಗಿಕ ಔಷಧವಾಗಿ ಬಳಸಲಾಗಿದೆ. ಅರಿಶಿನ ಹೊಂದಿರುವ ಚಿಕಿತ್ಸಕ ಗುಣಲಕ್ಷಣಗಳಿಂದಲೇ ಅದು ಪ್ರಖ್ಯಾತಿ. ಹೀಗಾಗಿ ಬಳಕೆ ಹೆಚ್ಚಿದ್ದು, ಇದನ್ನು ಬೆಳೆದವರು ಎಂದು ನಷ್ಟ ಅನುಭವಿಸಲ್ಲ.


7) ಸರಳ ಕೃಷಿ ವಿಧಾನ
ಅರಿಶಿನವು ಬೆಳೆಯಲು ಸರಳವಾದ ಸಸ್ಯವಾಗಿದೆ. ಸಾವಯವ ಗೊಬ್ಬರ ಬಳಸಿ ಮತ್ತು ಕಳೆ ಮುಕ್ತವಾಗಿರುವಂತೆ ನೋಡಿಕೊಂಡು ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯಬಹುದು.

top videos
    First published: