Face Care: ಮುಖದ ಕ್ಲೆನ್ಸಿಂಗ್ ಗೆ ದುಬಾರಿ ವಸ್ತುಗಳ ಮೊರೆ ಹೋಗುವುದು ಬಿಡಿ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೋಡಿ

ಮುಖ ಸ್ವಚ್ಛಗೊಳಿಸಲು ಹಸಿ ಹಾಲನ್ನು ಬಳಸಬಹುದು. ಇದರಿಂದ ತ್ವಚೆಯಲ್ಲಿ ಸಂಗ್ರಹವಾಗಿರುವ ಕೊಳೆ ನಿವಾರಣೆಯಾಗುತ್ತದೆ. ಹಸಿ ಹಾಲನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆಯಲ್ಲಿ (Summer) ಮೊಡವೆ (Acne) ಸಮಸ್ಯೆ (Problem) ಹೋಗಲಾಡಿಸಲು, ನಿಮ್ಮ ತ್ವಚೆಯನ್ನು (Skin) ಸ್ವಚ್ಛವಾಗಿರಿಸಿಕೊಳ್ಳುವುದು (Cleaning) ತುಂಬಾ ಮುಖ್ಯ. ಚರ್ಮ ಶುದ್ಧವಾಗಿದ್ದರೆ ಅನೇಕ ಸಮಸ್ಯೆಗಳು ಉಂಟಾಗುವುದಿಲ್ಲ. ವಿಶೇಷವಾಗಿ ಬೇಸಿಗೆಯಲ್ಲಿ ಮುಖದ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ತ್ವಚೆ ಸ್ವಚ್ಛ ಮತ್ತು ಸುಂದರವಾಗಿಸುವ ಅನೇಕ ವಸ್ತುಗಳನ್ನು ನೀವು ಮನೆಯಲ್ಲಿ ಬಳಕೆ ಮಾಡಬಹುದು. ನೈಸರ್ಗಿಕ ವಸ್ತುಗಳು ಅನ್ವಯಿಸುವುದರಿಂದ ಮೈಬಣ್ಣವು ಹೊಳಪಾಗುತ್ತದೆ. ಕಲೆ, ಮೊಡವೆ ಸಮಸ್ಯೆ ದೂರವಾಗುತ್ತದೆ. ನಿಯಮಿತವಾಗಿ ಮುಖವನ್ನು ಶುಚಿಗೊಳಿಸುವುದು ಮುಚ್ಚಿ ಹೋಗಿರುವ ಚರ್ಮದ ರಂಧ್ರಗಳನ್ನು ಓಪನ್ ಮಾಡಲು ಸಹಕಾರಿ. ಕೊಳಕು ಹೊರ ಬರಲು ಸಹಕಾರಿ.

    ಶುಚಿಗೊಳಿಸುವಿಕೆ ಚರ್ಮದ ಮೇಲಿನ ಧೂಳು, ಮಣ್ಣು ಮತ್ತು ಮಾಲಿನ್ಯದ ಕಣಗಳನ್ನು ತೆರವುಗೊಳಿಸುತ್ತದೆ. ಪ್ರತಿ ದಿನ ಮನೆಗೆ ಬರುವ ಮೊದಲು ಅಥವಾ ರಾತ್ರಿ ಮಲಗುವ ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.

    ಹಸಿ ಹಾಲು

    ಮುಖ ಸ್ವಚ್ಛಗೊಳಿಸಲು ಹಸಿ ಹಾಲನ್ನು ಬಳಸಬಹುದು. ಇದರಿಂದ ತ್ವಚೆಯಲ್ಲಿ ಸಂಗ್ರಹವಾಗಿರುವ ಕೊಳೆ ನಿವಾರಣೆಯಾಗುತ್ತದೆ. ಹಸಿ ಹಾಲನ್ನು ತೆಗೆದುಕೊಂಡು ಅದನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ. ಒಣಗಿದ ನಂತರ ಒಮ್ಮೆ ಅಥವಾ ಎರಡು ಬಾರಿ ಮತ್ತೆ ಅನ್ವಯಿಸಿ ಮತ್ತು ನಂತರ ನೀರಿನಿಂದ ತೊಳೆಯಿರಿ.

    ಇದನ್ನೂ ಓದಿ: ಅಸ್ತಮಾ ಇದ್ದೋರು ಹಾಲು ಕುಡಿಯಬಹುದಾ? ಅವರಿಗೆ ಈ 2 ಐಟಂಗಳಿಗಿಂತ ದೊಡ್ಡ ಮದ್ದೇ ಇಲ್ಲ

    ಸೌತೆಕಾಯಿ

    ಸೌತೆಕಾಯಿ ರಸ ಮುಖಕ್ಕೆ ಹಚ್ಚುವುದರಿಂದ ಸ್ಕಿನ್ ಸುಧಾರಿಸುತ್ತದೆ. ಸೌತೆಕಾಯಿ ತುರಿದು ಅದರ ತಿರುಳನ್ನು ಮುಖಕ್ಕೆ ಹಚ್ಚಿ. ಬೇಕಿದ್ದರೆ ಸೌತೆಕಾಯಿ ರಸದಲ್ಲಿ ಮೊಸರನ್ನು ಬೆರೆಸಿ. ಹಚ್ಚಿದ ಸುಮಾರು 10 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆಯಿರಿ.

    ಮೊಸರು ಮತ್ತು ಜೇನುತುಪ್ಪ

    ಮುಖವನ್ನು ಸ್ವಚ್ಛಗೊಳಿಸಲು ಮೊಸರು ಮತ್ತು ಜೇನುತುಪ್ಪ ಬಳಸಿ. ಮುಖಕ್ಕೆ ಹೊಳಪು ಬರುತ್ತದೆ. ಸುಮಾರು 1 ಚಮಚ ಮೊಸರನ್ನು ತೆಗೆದುಕೊಂಡು, ಅದರಲ್ಲಿ ಜೇನುತುಪ್ಪ ಬೆರೆಸಿ ಪೇಸ್ಟ್‌ ಮಾಡಿ. ಈಗ ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 5 ನಿಮಿಷಗಳ ನಂತರ ತೊಳೆಯಿರಿ.

    ಟೊಮೇಟೊ

    ಟೊಮೆಟೊದಿಂದ ಮುಖ ಸ್ವಚ್ಛಗೊಳಿಸಿ. ಒಂದು ಚಮಚ ಹಾಲು ಮತ್ತು ನಿಂಬೆ ರಸದೊಂದಿಗೆ ಟೊಮೆಟೊ ಬೆರೆಸಿ ಪೇಸ್ಟ್ ಮಾಡಿ. ಈಗ ಅದನ್ನು ಉಜ್ಜುವ ಮೂಲಕ ನಿಮ್ಮ ಮುಖ ತೊಳೆಯಿರಿ. ಇದರಿಂದ ಮುಖಕ್ಕೆ ಹೊಳಪು ಬರುತ್ತದೆ.

    ರೋಸ್ ವಾಟರ್

    ರಾತ್ರಿ ಮಲಗುವ ಮುನ್ನ ರೋಸ್ ವಾಟರ್ ಬಳಸಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚುವುದರಿಂದ ಕೊಳೆ ಸ್ವಚ್ಛವಾಗುತ್ತದೆ. ಇದರ ನಂತರ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಇದರೊಂದಿಗೆ ನಿಮಗೆ ಫೇಸ್ ವಾಶ್ ಅಥವಾ ಸೋಪ್ ಅಗತ್ಯವಿಲ್ಲ.

    ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ತೊಡೆದು ಹಾಕಿ

    ಹಂತ 1: ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮತ್ತು ಅದನ್ನು ಸ್ವಚ್ಛಗೊಳಿಸಿ. ನಂತರ ಕ್ಲೆನ್ಸಿಂಗ್ ಹಾಲನ್ನು ಹಚ್ಚಿ ಮತ್ತು ಲಘುವಾಗಿ ಮಸಾಜ್ ಮಾಡಿ.

    ಹಂತ 2: ಸ್ವಲ್ಪ ಗೋಧಿ ಹಿಟ್ಟು ಮತ್ತು ಸ್ವಲ್ಪ ತಣ್ಣನೆಯ ಮೊಸರು ಸೇರಿಸಿ ಮುಖಕ್ಕೆ ಸ್ಕ್ರಬ್ ಮಾಡಿ. ನಂತರ ಅದಕ್ಕೆ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಉಜ್ಜಿ ಸ್ವಚ್ಛಗೊಳಿಸಿ. ಇದು ಚರ್ಮದ ಟ್ಯಾನಿಂಗ್ ತೆಗೆದು ಹಾಕುತ್ತದೆ.

    ಹಂತ 3: ಮುಖದ ರಂಧ್ರಗಳು ತೆರೆದಿದ್ದರೆ, ಅವುಗಳನ್ನು ಮುಚ್ಚಲು ಮುಖದ ಮೇಲೆ ರೋಸ್ ವಾಟರ್ ಅನ್ವಯಿಸಿ. ಇದು ತುಂಬಾ ಪರಿಣಾಮಕಾರಿಯಾಗಿದೆ.

    ಇದನ್ನೂ ಓದಿ: ದೃಷ್ಟಿಗೆ ನೆಲ್ಲಿಕಾಯಿ ಎಷ್ಟು ಪ್ರಯೋಜನಕಾರಿ ಗೊತ್ತೇ? ಬೆಟ್ಟದ ನೆಲ್ಲಿಯ ಸೂಪರ್ ಹೆಲ್ತ್ ಪವರ್

    ಹಂತ 4: ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಮುಖಕ್ಕೆ ಅನ್ವಯಿಸಿ. ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ನಿಂದ ತ್ವಚೆ ಬಿಗಿಯಾಗಿ ಮುಖ ಕ್ಲೀನ್ ಆಗುತ್ತದೆ. ಕೊನೆಯದಾಗಿ ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿ.
    Published by:renukadariyannavar
    First published: