• Home
  • »
  • News
  • »
  • lifestyle
  • »
  • Weight Loss: ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದ್ರೆ ಈ ಹಣ್ಣುಗಳಿಂದ ದೂರವಿರಿ..!

Weight Loss: ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕಾದ್ರೆ ಈ ಹಣ್ಣುಗಳಿಂದ ದೂರವಿರಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದರೆ ಆ ಹಣ್ಣುಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇಲ್ಲಿದೆ ಅಂತಹ  5 ಹಣ್ಣುಗಳ ಕುರಿತ ಮಾಹಿತಿ.

  • Share this:

ತೂಕ ಇಳಿಸಿಕೊಳ್ಳಲು ತುಂಬಾ ಜನ ಸಿಕ್ಕಾಪಟ್ಟೆ ಸರ್ಕಸ್​ ಮಾಡುತ್ತಿರುತ್ತಾರೆ. ತಿಳಿದವರು ಹೇಳಿದ ಮಾರ್ಗಗಳನ್ನೆಲ್ಲ ಅನುಸರಿಸುತ್ತಿರುತ್ತಾರೆ. ಅದರಲ್ಲೂ ಏನು ತಿನ್ನಬೇಕು ಹಾಗೂ ಯಾವುದರಿಂದ ದೂರ ಇರಬೇಕು ಎಂದೆಲ್ಲ ಪಟ್ಟಿ ಮಾಡಿಕೊಳ್ಳಲಾಗುತ್ತೆ. ಹೀಗೆ ಮಾಡಿಕೊಂಡಿರುವ ಪಟ್ಟಿಯಲ್ಲಿ ಹಣ್ಣುಗಳೂ ಇರುತ್ತವೆ. ಆದರೂ ಕೆಲವೊಬ್ಬರು ಅವಗಳಲ್ಲಿ ಸಿಗುವ ಅಂಶಗಳು ನೈಜವಾಗಿರುವ ಕಾರಣದಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಎಲ್ಲ ಹಣ್ಣುಗಳನ್ನು ಸೇವಿಸುತ್ತಾರೆ. ಹಣ್ಣುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುವುದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೆ ಕೆಲವು ಹಣ್ಣುಗಳು ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತವೆ ಎಂಬುವುದು ನಿಮಗೆ ಗೊತ್ತೇ? ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದರೆ ಆ ಹಣ್ಣುಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇಲ್ಲಿದೆ ಅಂತಹ  5 ಹಣ್ಣುಗಳ ಕುರಿತ ಮಾಹಿತಿ.


ತೂಕ ಕಡಿಮೆ ಮಾಡುವ ಪ್ರಯತ್ನದಲ್ಲಿರುವವರು ಈ ಐದು ಹಣ್ಣುಗಳನ್ನು ಸೇವಿಸದಿದ್ದರೆ ಉತ್ತಮ.


Health Tips: Consume these 5 foods to reduce your belly fat.
ಪ್ರಾತಿನಿಧಿಕ ಚಿತ್ರ


1.    ಅವಕಾಡೋ:  ಹೆಚ್ಚು ಕ್ಯಾಲರಿ ಹೊಂದಿರುವ ಯಾವುದೇ ಹಣ್ಣನ್ನು ಕಡಿಮೆ ತಿನ್ನಬೇಕು. ಅಂತಹ ಹಣ್ಣುಗಳಲ್ಲಿ ಅವಕಾಡೋ ಕೂಡ ಒಂದು. ಈ ಹಣ್ಣನ್ನು ಬೆಣ್ಣೆ ಹಣ್ಣು ಎಂದೂ ಕರೆಯಲಾಗುತ್ತದೆ. ಈ ಹಣ್ಣಿನ ಕೇವಲ 100 ಗ್ರಾಂನಷ್ಟು ಭಾಗದಲ್ಲಿ 160 ಕ್ಯಾಲರಿಗಳು ಇರುತ್ತವಂತೆ. ಹಾಗಾದರೆ ಇಡೀ ಹಣ್ಣಿನಲ್ಲಿ ಎಷ್ಟು ಕ್ಯಾಲರಿಗಳು ಇರಬಹುದು..? ನೀವೇ ಊಹಿಸಿ. ಅವಕಾಡೋ ಆರೋಗ್ಯಕರ ಕೊಬ್ಬಿನ ಮೂಲವೂ ಹೌದು, ಹಾಗಂತ ಅತಿಯಾಗಿ ತಿಂದರೆ ನಿಮ್ಮ ಹೇಹದ ತೂಕ ಹೆಚ್ಚುವುದು ಖಾತರಿ.


2.    ದ್ರಾಕ್ಷಿ: ದ್ರಾಕ್ಷಿ ಆರೋಗ್ಯಕ್ಕೆ ಒಳ್ಳೆಯದು ನಿಜ, ಆದರೆ ಅದರಲ್ಲಿ ಸಕ್ಕರೆ ಮತ್ತು ಕೊಬ್ಬು ಹೇರಳವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ, ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದ್ರಾಕ್ಷಿಯನ್ನು ದೂರ ಇಡಲೇಬೇಕು. 100 ಗ್ರಾಂ ದ್ರಾಕ್ಷಿಯಲ್ಲಿ 67 ಕ್ಯಾಲರಿ ಮತ್ತು 16 ಗ್ರಾಂ ಸಕ್ಕರೆ ಇರುತ್ತದೆ. ನಿತ್ಯವೂ ದ್ರಾಕ್ಷಿಯನ್ನು ತಿಂದರೆ ತೂಕ ಖಂಡಿತಾ ಹೆಚ್ಚುತ್ತದೆ.


ಇದನ್ನೂ ಓದಿ: Health Tips: ಈ 5 ಸೂಪರ್ ಫುಡ್‍ಗಳನ್ನು ಸೇವಿಸಿ ಮುಪ್ಪನ್ನು ಕೊಂಚ ದೂರವಿಡಿ..!


3.    ಒಣ ಹಣ್ಣುಗಳು: ಒಣ ಪ್ಲಮ್ ಹಣ್ಣು ಮತ್ತು ಒಣದ್ರಾಕ್ಷಿಯಂತಹ ಹಣ್ಣುಗಳಲ್ಲಿ ನೀರಿನ ಅಂಶ ಇರುವುದಿಲ್ಲವಾದ ಕಾರಣ,  ಕ್ಯಾಲರಿಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. 100 ಗ್ರಾಂ ದ್ರಾಕ್ಷಿಗಳಿಗೆ ಹೋಲಿಸಿದರೆ 100 ಗ್ರಾಂ ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಇರುತ್ತದೆ. ಒಂದು ಕಪ್ ಒಣ ದ್ರಾಕ್ಷಿಯಲ್ಲಿ 500 ಕ್ಯಾಲರಿಗಳು ಮತ್ತು ಒಂದು ಕಪ್ ಒಣ ಪ್ಲಮ್ ಹಣ್ಣಿನಲ್ಲಿ 450 ಕ್ಯಾಲರಿಗಳು ಇರುತ್ತವೆ. ಹಾಗಾಗಿ ತೂಕ ಇಳಿಸಬೇಕೆಂದು ಇದ್ದರೆ ಇವನ್ನು ತಿನ್ನಬೇಡಿ. ತಿನ್ನಲೇಬೇಕೆಂದು ಇದ್ದರೆ, ಕಡಿಮೆ ಪ್ರಮಾಣದಲ್ಲಿ ತಿನ್ನಿ.


4.    ಬಾಳೆಹಣ್ಣು: ಹೌದು, ಎಲ್ಲ ವರ್ಗದವರ ಅಚ್ಚುಮೆಚ್ಚಿನ ಬಾಳೆ ಹಣ್ಣು ಆರೋಗ್ಯಕ್ಕೇನೋ ಅತ್ಯುತ್ತಮ, ಆದರೆ ಅತಿಯಾಗಿ ತಿಂದರೆ ಬೊಜ್ಜು ಬರೋದು ಖಚಿತ. ಏಕೆಂದರೆ ಬಾಳೆಹಣ್ಣಿನಲ್ಲಿ ಅಧಿಕ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಒಂದು ಬಾಳೆ ಹಣ್ಣಿನಲ್ಲಿ 150 ಕ್ಯಾಲರಿ ಇರುತ್ತದೆ. ಆದ್ದರಿಂದ ನೀವು ನಿತ್ಯವೂ 2-3 ಬಾಳೆ ಹಣ್ಣು ತಿನ್ನುವವರಾಗಿದ್ದರೆ, ನಿಮ್ಮ ತೂಕ ಹೆಚ್ಚುವ ಸಾಧ್ಯತೆ ಹೆಚ್ಚಿರುತ್ತದೆ. ಗ್ಲೆಸೆಮಿಕ್ ಇಂಡೆಕ್ಸ್‌ನಲ್ಲಿ ಕಡಿಮೆ ಇರುವುದರಿಂದ, ಇದೊಂದು ಒಳ್ಳೆಯ ತಿನಿಸು ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ತಿನ್ನುವುದಾದರೆ ದಿನಕ್ಕೊಂದು ಬಾಳೆಹಣ್ಣು ತಿನ್ನಿ.


ಇದನ್ನೂ ಓದಿ: ಪ್ರಶಾಂತ್​ ನೀಲ್ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಸೆಲೆಬ್ರಿಟಿಗಳು: ವಿಡಿಯೋ ಶೇರ್​ ಮಾಡಿದ ಹೊಂಬಾಳೆ ಫಿಲಂಸ್


5.   ಮಾವಿನ ಹಣ್ಣು: ಮಾವಿನ ಹಣ್ಣು , ಅನಾನಾಸಿನಂತಹ  ಹಣ್ಣುಗಳು ನಮ್ಮ ದೇಹದ ತೂಕ ಇಳಿಸಲು ಅಡ್ಡಿ ಮಾಡುವಂತಹ ಕ್ಯಾಲೋರಿಗಳನ್ನು ಹೊಂದಿರಬಹುದು. ಅವು ಅತ್ಯಂತ ಸಿಹಿಯಾಗಿರುವುದರಿಂದ, ತೂಕ ಇಳಿಸಲಿಚ್ಚಿಸುವವರು ಅವುಗಳನ್ನು ತಿನ್ನದಿರುವುದೇ ಲೇಸು.


ಮೇಲೆ ತಿಳಿಸಿದ ಎಲ್ಲ ಹಣ್ಣುಗಳು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಅವುಗಳನ್ನು ತಿನ್ನಲು ಹೆದರಬೇಕಿಲ್ಲ. ಆದರೆ ತೂಕ ಇಳಿಸುವುದಾದರೆ ಕಡಿಮೆ ಪ್ರಮಾಣದಲ್ಲಿ ತಿನ್ನಿ.

Published by:Anitha E
First published: