Baby Care: ರಾತ್ರಿ ಹೊತ್ತು ಮಗು ಮಲಗದೇ ಅಳುತ್ರಿದ್ರೆ, ಈ ಟ್ರಿಕ್​ ಫಾಲೋ ಮಾಡಿ

ಈ ಮಧ್ಯೆ ರಾತ್ರಿ ವೇಳೆ ನಿದ್ದೆ ಮಾಡದೇ ಅಳುವ ಮಕ್ಕಳನ್ನು ಸುಮ್ಮನಾಗಿಸೋಕೆ ಮತ್ತೆ ನಿದ್ದೆ ಮಾಡಿಸೋಕೆ ಜಪಾನಿನ ಸಂಶೋಧಕರು ಒಂದು ಉಪಾಯ ಕಂಡುಡಿದಿದ್ದಾರೆ. ಅದೇ 5 ಮತ್ತು 8. ಅರೇ! ಇದೇನಿದು ನಂಬರ್‌ ಅಂದುಕೊಂಡ್ರಾ? ಇದು ಮ್ಯಾಜಿಕ್‌ ಜೋಡಿ ನಂಬರ್‌. ಮಗುವನ್ನು ಸುಮ್ಮನಿರಿಸಿ ನಿದ್ದೆ ಮಾಡಿಸೋಕೆ ಅದು ಹೇಗೆ ಕೆಲ್ಸ ಮಾಡುತ್ತೆ ಅನ್ನೋದನ್ನ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮನೆಯಲ್ಲಿ ಪುಟ್ಟ ಮಗುವಿದ್ದರೆ (Baby) ಅಪ್ಪ ಅಮ್ಮನದು ಒಂದೇ ಗೋಳು.. ʼರಾತ್ರಿಯೆಲ್ಲ ಇದ್ದೇನೇ ಮಾಡಿಲ್ಲ ಮಗು.. ಏನ್‌ ಮಾಡೋದೋ ಏನೋ.. ನಮಗೂ ನಿದ್ದೇನೇ ಇಲ್ಲ. ರಾತ್ರಿಯೆಲ್ಲ (Night) ಮಗು ಅಳ್ತಾನೇ ಇತ್ತು. ಏನಾಗ್ತಿದೆ.. ಏನು ಮಾಡೋದು ಅಂತಾನೇ ಗೊತ್ತಾಗಿಲ್ಲ..ʼ ಅನ್ನೋದು. ಹೌದು.. ಮಕ್ಕಳು ಅದ್ರಲ್ಲೂ ಶಿಶುಗಳು ರಾತ್ರಿ ಅಳೋದು ಸಾಮಾನ್ಯವೇ. ಅವರನ್ನು ನಿದ್ದೆ (Sleep) ಮಾಡಿಸೋಕೆ ಹೆತ್ತವರು ಹೆಣಗಾಡೋದು ಅಷ್ಟೇ ಕಾಮನ್. ಹಗಲು ಹೊತ್ತಿನಲ್ಲಿ ಹೇಗೋ ನಡೆದುಹೋಗುತ್ತೆ. ಆದ್ರೆ ರಾತ್ರಿ ವೇಳೆ ಅಳುವ ಮಕ್ಕಳನ್ನು (Crying Baby) ಅದರಲ್ಲೂ ನಿದ್ದೆ ಮಾಡದೇ ಒದ್ದಾಡುವ ಮಕ್ಕಳನ್ನು ಹೇಗೆ ಸುಮ್ಮನಿರಿಸೋದು.. ನಿದ್ದೆ ಮಾಡುವಂತೆ ಮಾಡೋದು ಅನ್ನೋದು ಮಿಲಿಯನ್‌ ಡಾಲರ್‌ ಪ್ರಶ್ನೇನೇ ಹೌದು... ‌

ಈ ಮಧ್ಯೆ ರಾತ್ರಿ ವೇಳೆ ನಿದ್ದೆ ಮಾಡದೇ ಅಳುವ ಮಕ್ಕಳನ್ನು ಸುಮ್ಮನಾಗಿಸೋಕೆ ಮತ್ತೆ ನಿದ್ದೆ ಮಾಡಿಸೋಕೆ ಜಪಾನಿನ ಸಂಶೋಧಕರು ಒಂದು ಉಪಾಯ ಕಂಡುಡಿದಿದ್ದಾರೆ. ಅದೇ 5 ಮತ್ತು 8. ಅರೇ! ಇದೇನಿದು ನಂಬರ್‌ ಅಂದುಕೊಂಡ್ರಾ? ಇದು ಮ್ಯಾಜಿಕ್‌ ಜೋಡಿ ನಂಬರ್‌. ಮಗುವನ್ನು ಸುಮ್ಮನಿರಿಸಿ ನಿದ್ದೆ ಮಾಡಿಸೋಕೆ ಅದು ಹೇಗೆ ಕೆಲ್ಸ ಮಾಡುತ್ತೆ ಅನ್ನೋದನ್ನ ನೋಡೋಣ.

ಮಗುವನ್ನು ಮಲಗಿಸುವ ವಿಧಾನ 
ಈ ಸಂಶೋಧನೆಗೆ ಜಪಾನಿನ ಸಂಶೋಧಕರು 21 ಮಕ್ಕಳನ್ನು ಮತ್ತು ಅವರ ತಾಯಂದಿರನ್ನು ಬಳಸಿಕೊಂಡಿದ್ದಾರೆ. ಅವರ ಪ್ರಕಾರ 5 ನಿಮಿಷಗಳ ಕಾಲ ಮಗುವನ್ನು ಎತ್ತಿಕೊಂದು ನಿಧಾನವಾಗಿ ನಡೆಯಬೇಕು. ನಂತರದಲ್ಲಿ 8 ನಿಮಿಷಗಳ ಕಾಲ ಮಗುವನ್ನು ಎತ್ತಿಕೊಂಡು ಕೂರಬೇಕು. ನಂತರ ನಿಧಾನವಾಗಿ ಮಗುವನ್ನು ಬೆಡ್‌ ಮೇಲೆ ಮಲಗಿಸಬೇಕು. ಮಗುವನ್ನು ಎತ್ತಿಕೊಂಡು ನಡೆಯುವಾಗ ಮಗು ಶಾಂತವಾಗುತ್ತದೆ. ನಂತರ ನಿಧಾನವಾಗಿ ನಿದ್ದೆಗೆ ಜಾರುತ್ತದೆ.

ಇದನ್ನೂ ಓದಿ: HFM Disease: ಪೋಷಕರೇ ಎಚ್ಚರ, ಮಕ್ಕಳಲ್ಲೂ ಕಾಣಿಸಿಕೊಳ್ತಿದೆ ಕಾಲುಬಾಯಿ ರೋಗ! ಏನಿದರ ಲಕ್ಷಣ, ಇದಕ್ಕೆ ಪರಿಹಾರವೇನು? ತಜ್ಞರು ಹೇಳುತ್ತಾರೆ ಕೇಳಿ

ಈ ಅಧ್ಯಯನ ಜರ್ನಲ್‌ ಕರೆಂಟ್‌ ಬಯೋಲಜಿ ಪ್ರಕಟವಾಗಿದೆ. ಇದರ ಪ್ರಕಾರ ಮಗು ಅಳುತ್ತಿರುವಾಗ ಐದು ನಿಮಿಷಗಳ ಕಾಲ ಮಗುವಿನ ತಾಯಿ ಎತ್ತಿಕೊಂಡು ನಿಧಾನವಾಗಿ ನಡೆದಲ್ಲಿ ಮಗು ಅಳುವನ್ನು ನಿಲ್ಲಿಸುತ್ತದೆ. ತಾಯಿಯ ಮೈಯ್ಯ ಬೆಚ್ಚನೆಯ ಶಾಖ ತಾಕಿ ಮಗುವಿನ ಎದೆಬಡಿತ ನಿಧಾನವಾಗಿ ಕಡಿಮೆಯಾಗುತ್ತದೆ. ಹೀಗೆ ಮಾಡಿದಾಗ ಶೇ.46 ರಷ್ಟು ಶಿಶುಗಳು ನಿದ್ದೆಗೆ ಜಾರುತ್ತವೆ. ಮತ್ತೆ ಶೇ18 ರಷ್ಟು ಶಿಶುಗಳು ಸ್ವಲ್ಪ ಸಮಯದ ನಂತರ ನಿದ್ದೆಗೆ ಜಾರುತ್ತವೆ ಅಂತ ಹೇಳಲಾಗಿದೆ. ಹೀಗೆಯೇ ದಿನವೂ ಮಗುವಿಗೆ ರೂಢಿ ಮಾಡಿಸಿದಲ್ಲಿ ಮಗು ಸುಮ್ಮನೆ ಮಲಗೋಕೆ ಶುರು ಮಾಡುತ್ತೆ.

ಈ ಬಗ್ಗೆ ಡಾ. ಕುಮಿ ಕರೋದಾ ಏನು ಹೇಳುತ್ತಾರೆ?
ಆದ್ರೆ ಮಗುವನ್ನು ಮಲಗಿಸಲು ಇದೇ ಒಂದು ಅಳತೆಗೋಲು ಎನ್ನಲಾಗುವುದಿಲ್ಲ. ಅಲ್ಲದೇ ನಾನು ನಾಲ್ಕು ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇನೆ. ನಾನು ಈ ಪ್ರಯೋಗಗಳನ್ನು ಮಾಡಿದ್ದೇನೆ. ಈ ಸಂಶೋಧನೆಯ ಸಂಪೂರ್ಣ ಅಂಕಿ ಅಂಶ ಬರುವವರೆಗೆ ಈ ಅಧ್ಯಯನದ ಪ್ರಮುಖ ಫಲಿತಾಂಶ ಊಹಿಸೋದು ಕಷ್ಟ ಅಂತ ಜಪಾನ್‌ ನ ಸೈತಮಾದಲ್ಲಿರುವ RIKEN ಸೆಂಟರ್‌ ಫಾರ್‌ ಬ್ರೈನ್‌ ಸೈನ್ಸ್‌ ನಲ್ಲಿರುವ ಅಂಗಸಂಸ್ಥೆ ಸಾಮಾಜಿಕ ನಡವಳಿಕೆ ಘಟಕದ ಟೀಂ ಲೀಡರ್‌ ಡಾ. ಕುಮಿ ಕರೋದಾ ಹೇಳಿದ್ದಾರೆ.

ಇದನ್ನೂ ಓದಿ:  Parenting Tips: ಹೆರಿಗೆಯ ನಂತ್ರ ಮಗು ಬಿಟ್ಟು ಆಫೀಸ್​ ಹೋಗುವ ಅಮ್ಮಂದಿರಿಗೆ ಈ ಟಿಪ್ಸ್

ಸಮಯದ ಕುರಿತಾದ ಮಾರ್ಗಸೂಚಿಗಳು ಕೆಲ ಪಾಲಕರಿಗೆ ಸಹಾಯಕವಾಗಬಹುದು. ಆದ್ರೆ ಇದು ಎಲ್ಲ ಮಕ್ಕಳನ್ನೂ ನಿದ್ದೆ ಮಾಡಸಲು ಪೋಷಕರಿಗೆ ಸಹಾಯವಾಗುತ್ತೆ ಅಂತ ಹೇಳಲಾಗದು ಅಂತ ಅಮೆರಿಕನ್‌ ಅಕಾಡೆಮಿ ಆಫ್‌ ಪೀಡಿಯಾಟ್ರಿಕ್ಸ್‌ ಪೋಷಕರ ವೆಬ್‌ ಸೈಟ್‌ ನ ವೈದ್ಯಕೀಯ ಸಂಪಾದಕ ಮುಖ್ಯಸ್ಥ ಡಾ. ಜೆನ್ನಿಫರ್‌ ಶು ಹೇಳಿದ್ದಾರೆ. ಅಲ್ಲದೇ ಪ್ರತಿ ಮಗುವೂ ಬೇರೆ ಬೇರೆಯಾಗಿದ್ದು ಒಂದೇ ಪದ್ಧತಿಗೆ ಪ್ರತಿಕ್ರಿಯಿಸುತ್ತೆ ಅಂತ ಹೇಳೋಕಾಗೋದಿಲ್ಲ ಅಂತಲೂ ಅವರು ಹೇಳಿದ್ದಾರೆ.
Published by:Ashwini Prabhu
First published: