Bad Dreams: ಕೆಟ್ಟ ಕನಸಿನಿಂದ ಹೆದರಿದ್ದೀರಾ? ಇದನ್ನು ತಡೆಯಲು ಇಲ್ಲಿದೆ ಟ್ರಿಕ್ಸ್

ಒಳ್ಳೆಯ ಕನಸು ಬೀಳುತ್ತಿದ್ದರೆ ಒಳ್ಳೆಯದೇ ಬಿಡಿ. ಆದ್ರೆ ಕೆಟ್ಟ ಕನಸು ಬೀಳುತ್ತಿದ್ದರೆ ಅದನ್ನು ನೀವು ಸುಮ್ಮನೆ ಬಿಟ್ಟು ಬಿಡುವಂತಿಲ್ಲ. ಕೆಲವರಿಗೆ ಯಾರೋ ಬೆನ್ನತ್ತಿದ, ಹಾಗೆ ಭೂತ ಪ್ರೇತ ಬಂದ ಹಾಗೆ, ತಮ್ಮ ಆಪ್ತರಿಗ್ಯಾರಿಗೋ ಅಪಾಯವಾದ ಹಾಗೆ ಕನಸು ಬೀಳುತ್ತಿರುತ್ತದೆ. ಹಾಗಿದ್ರೆ ಇದಕ್ಕೆ ಏನು ಪರಿಹಾರವಿದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಒಳ್ಳೆಯ ಕನಸಿನಿಂದ (Dreams) ನಮ್ಮ ದಿನವೆಲ್ಲ ಖುಷಿ ಖುಷಿಯಾಗಿದ್ದರೆ (Happy) ಕೆಟ್ಟ ಕನಸು ದಿನದ ಆನಂದವನ್ನೇ ಕಸಿದು ಬಿಡುತ್ತೆ. ಒಳ್ಳೆಯ ಕನಸು ಬೀಳುತ್ತಿದ್ದರೆ ಒಳ್ಳೆಯದೇ ಬಿಡಿ. ಆದ್ರೆ ಕೆಟ್ಟ ಕನಸು (Bad Dreams) ಬೀಳುತ್ತಿದ್ದರೆ ಅದನ್ನು ನೀವು ಸುಮ್ಮನೆ ಬಿಟ್ಟು ಬಿಡುವಂತಿಲ್ಲ. ಕೆಲವರಿಗೆ ಯಾರೋ ಬೆನ್ನತ್ತಿದ ಹಾಗೆ ಭೂತ ಪ್ರೇತ ಬಂದ ಹಾಗೆ, ತಮ್ಮ ಆಪ್ತರಿಗ್ಯಾರಿಗೋ ಅಪಾಯವಾದ (Dangerous) ಹಾಗೆ ಕನಸಿನಲ್ಲೂ ಭಯ ಪಡುವ ಹಾಗೆ ಕನಸುಗಳು ಬೀಳುತ್ತಿರುತ್ತವೆ.  ಅವರು ಕನಸಿನಲ್ಲೂ ಅಳುತ್ತಿರುತ್ತಾರೆ (Crying). ಎದ್ದು ನೋಡಿದರೆ ನಿಜವಾಗಿಯೂ ಅಳುತ್ತಿರುವಂತೆ ಮುಖಭಾವವಿರುತ್ತೆ. ಭಯಪಟ್ಟಿರುತ್ತಾರೆ. ಎದೆಬಡಿತ ಜೋರಾಗಿರುತ್ತೆ. ಮತ್ತೆ ಕಣ್ಮುಚ್ಚಲೂ ಆಗದಷ್ಟು ಗೊಂದಲಕ್ಕೀಡಾಗಿರುತ್ತಾರೆ.


ಕೆಟ್ಟ ಕನಸು ಬೀಳೋದನ್ನು ನಿಲ್ಲಿಸಲು ಈ ರೀತಿ ಮಾಡಿ 
ಹಾಗಿದ್ರೆ ಈ ಕೆಟ್ಟ ಕನಸು ಯಾಕೆ ಬೀಳುತ್ತೆ? ಮಾನಸಿಕ ತಜ್ಞರ ಪ್ರಕಾರ ಕನಸು ಅನ್ನೋದು ನಮ್ಮ ಸುಪ್ತ ಮನಸ್ಸಿನ ಪ್ರತಿಬಿಂಬ. ಮನಸ್ಸಿನಲ್ಲಿರೋದೇ ಕನಸಿನಲ್ಲಿ ಬರುತ್ತೆ ಎನ್ನುತ್ತಾರೆ ತಜ್ಞರು. ಹಾಗಿದ್ರೆ ಇದನ್ನು ಹೇಗೆ ನಿಲ್ಲಿಸಬಹುದು ಅನ್ನೋದಕ್ಕೆ ಇಲ್ಲಿದೆ ಕೆಲ ಟಿಪ್ಸ್.‌
  • ನಿಮ್ಮ ಮಾನಸಿಕ ಆರೋಗ್ಯ ಪರೀಕ್ಷಿಸಿ. ಆತಂಕ ಹಾಗೂ ಒತ್ತಡ ಈ ಎರಡೂ ಕೆಟ್ಟ ಕನಸಿಗೆ ಮೂಲ ಕಾರಣ. ಹಾಗಾಗಿ ಮಾನಸಿಕ ಒತ್ತಡದಂತಹ ಮಾನಸಿಕ ಖಾಯಿಲೆಗಳು ನಿಮ್ಮ ಮೆದುಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಹಾಗಾಗಿ ನೀವು ಮೆಂಟಲ್‌ ಹೆಲ್ತ್‌ ಚೆಕ್‌ ಮಾಡಿಸಿಕೊಳ್ಳಬೇಕು.

  • ಇನ್ನು ಆಘಾತಕಾರಿ ಅನುಭವಗಳು ಕೆಟ್ಟ ಕನಸಿಗೆ ಮತ್ತೊಂದು ಕಾರಣ. ಯಾವುದೇ ಆಘಾತ, ಹಿಂಸೆ, ಆಪ್ತರ ಸಾವು ಹೀಗೆ ಮನಸ್ಸಿಗೆ ಆಘಾತ ತರುವ ಅನುಭವ ಆಗಿಯೇ ಇರುತ್ತದೆ. ಇದರಂದ ಆಚೆ ಬರಲು ನೀವು ತಜ್ಞರ ಸಹಾಯ ತೆಗೆದುಕೊಳ್ಳಬಹುದು.

  • ಮಲಗುವ ದಿನಚರಿ ಸರಿಯಾಗಿರಲಿ. ನಿಮ್ಮ ಮಲಗುವ ಕೋಣೆ ನಿಮಗೆ ಸುಖವಾದ ನಿದ್ದೆ ಬರುವಂತೆ ಇರಲಿ. ಸ್ವಚ್ಛವಾಗಿರಲಿ. ಇದು ಒಳ್ಳೆಯ ನಿದ್ದೆಗೆ ಸಹಕಾರಿ ಎಂಬುದನ್ನು ನೆನಪಿಡಿ.

  • ಮಲಗುವ 90 ನಿಮಿಷ ಮೊದಲು ಹದವಾದ ಬೆಚ್ಚಗಿನ ನೀರಿನಲ್ಲಿ ಸ್ನಾನಮಾಡಿ. ಕೆಟ್ಟ ಕನಸುಗಳನ್ನು ದೂರಮಾಡಲು ಇದು ಸಹಾಯ ಮಾಡುತ್ತದೆ. ಅಲ್ಲದೇ ನೀವು ಮನಸ್ಸಿನ ತುಮುಲ ದೂರಗೊಳಿಸಲು ಧ್ಯಾನ ಮಾಡಬಹುದು.

  • ನಿಮ್ಮ ಆತಂಕ ದುಗುಡಗಳನ್ನು ಬರೆದಿಡಿ. ಇನ್ನು, ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಮತ್ತೆ ವೈದ್ಯರ ಬಳಿ ಪರೀಕ್ಷಿಸಿ. ಏಕೆಂದರೆ ಕೆಲ ಔಷಧಗಳು ನರವ್ಯೂಹವನ್ನು ಅಥವಾ ಮಾನಸಿಕ ಒತ್ತಡವನ್ನು ಕಡಿಮೆಯೊಳಿಸುವಂಥ ಅಂಶಗಳನ್ನು ಒಳಗೊಂಡಿರುತ್ತವೆ.


ಇದನ್ನೂ ಓದಿ: Weight Loss Tips: ವ್ಯಾಯಾಮ ಮಾಡೋಕೆ ಟೈಮ್​ ಇಲ್ವಾ? ಈ 3 ಹ್ಯಾಕ್ಸ್​ ಟ್ರೈ ಮಾಡಿ

ಮಲಗುವ ಸಮಯದಲ್ಲಿ ಈ ವಸ್ತುಗಳಿಂದ ದೂರವಿರಿ 

  • ಮಲಗುವ ಮುನ್ನ ಆಲ್ಕೋಹಾಲ್‌ ಸೇವನೆಯನ್ನು ಬಿಟ್ಟುಬಿಡಿ. ಹಾಗೆಯೇ ಮಲಗುವ ಮೊದಲು ನೀವು ಯಾವ ಆಹಾರವನ್ನು ಸೇವಿಸುತ್ತೀರಿ ಎಂಬುದರ ಮೇಲೆ ಗಮನವಿಡಿ.

  • ನಿದ್ದೆ ಮಾಡುವ ಮೊದಲು ಏನನ್ನು ಮಾಡುತ್ತೀರಿ ಎನ್ನುವುದು ತುಂಬಾ ಮುಖ್ಯ. ಹಿಂಸೆಯ ಅಥವಾ ಭಯದ ಮೂವಿ ನೋಡೋದು ಅಥವಾ ಅಂಥ ಪುಸ್ತಕ ಓದುವುದನ್ನು ಬಿಟ್ಟುಬಿಡಿ.

  • ಮಲಗುವ ಮುನ್ನ ನಿಮ್ಮ ಸ್ಮಾರ್ಟ್‌ ಫೋನ್‌, ಲ್ಯಾಪ್ ಟಾಪ್‌, ಟಿವಿ ಯಿಂದ ದೂರವಿರಿ. ಅದರಲ್ಲೂ ಹಗಲು ರಾತ್ರಿಯೆನ್ನದೇ ಸ್ಮಾರ್ಟ್‌ ಫೋನ್‌ ನೋಡುವ ಅಭ್ಯಾಸದಿಂದ ಮೆದುಳಿನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗುತ್ತವೆ.


ಇದನ್ನೂ ಓದಿ:  Weight Loss Product Effects: ತೂಕ ಇಳಿಸುವ ಉತ್ಪನ್ನಗಳಿಂದ ಅಂಗಾಂಗ ವೈಫಲ್ಯ!? ವೈದ್ಯರು ಹೀಗಂತಾರೆ

ಕನಸೆಂಬುದು ನಿಮ್ಮದೇ ಸುಪ್ತ ಮನಸ್ಸಿನ ಪ್ರತಿಬಿಂಬ. ಹೀಗಾಗಿ ಮೇಲೆ ವಿವರಿಸಿದ ಅಂಶಗಳನ್ನು ನೀವು ಅಳವಡಿಸಿಕೊಂಡಲ್ಲಿ ಮನಸ್ಸು ತಿಳಿಯಾಗಿ ಕೆಟ್ಟ ಕನಸು ದೂರವಾಗಿ ಸುಖ ನಿದ್ರೆಯನ್ನು ನೀವು ಪಡೆಯಬಹುದು. ಜೀವನದ ಜಂಜಾಟದಲ್ಲಿ ನಿದ್ರೆಯೆಂಬುದು ತುಂಬ ಮುಖ್ಯ. ಅದಕ್ಕಾಗಿ ಮನಸ್ಸನ್ನು ಖುಷಿಯಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ ಅನ್ನುವುದನ್ನು ನೆನಪಿಡಿ.

Published by:Ashwini Prabhu
First published: