ಸಾಮಾನ್ಯವಾಗಿ ಇಡ್ಲಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಳಗಿನ ತಿಂಡಿಗೆ ಇಡ್ಲಿ ಮತ್ತು ಸಾಂಬಾರ್ ಬೆಸ್ಟ್ ಕಾಂಬಿನೇಷನ್. ಇಡ್ಲಿಯಲ್ಲಿ ತಟ್ಟೆ ಇಡ್ಲಿ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ಓಟ್ಸ್ ಇಡ್ಲಿ, ಪಡ್ಡು ಹೀಗೆ ವಿಧವಿಧವಾದ ಇಡ್ಲಿಗಳಿದೆ. ಆದರೆ ಪ್ರತಿ ಬಾರಿ ಇದೇ ರೀತಿಯ ಇಡ್ಲಿ ತಿಂದು ನಿಮಗೆ ಬೋರ್ ಆಗಿದ್ದರೆ ಒಮ್ಮೆ ನೂತನವಾದ ಲಾವಾ ಇಡ್ಲಿ ಟ್ರೈ ಮಾಡಿ. ಸಾಮಾನ್ಯವಾಗಿ ಲಾವಾ ಕೇಕ್ ಅನ್ನು ನೀವು ಕೇಳಿರುತ್ತೀರಾ, ಆದರೆ ಲಾವಾ ಇಡ್ಲಿ ಯಾವುದು ಎಂದು ನೀವು ಅಂದುಕೊಳ್ಳಬಹುದು. ಆದರೆ ಈ ಲಾವಾ ಇಡ್ಲಿ, ನಿಮಗೆ ಹೊಸ ಟೆಸ್ಟ್ ನೀಡುವುದರ ಜೊತೆಗೆ ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಬಹಳ ಸುಲಭವಾಗಿ ಮಾಡಿ ಸವಿಯಬಹುದು. ಇದು ಮಕ್ಕಳಿಗಂತೂ ಸಖತ್ ಇಷ್ಟವಾಗುತ್ತದೆ. ಏಕೆಂದರೆ ಈ ಇಡ್ಲಿಯಲ್ಲಿ ಪಾನಿಪುರಿಯಲ್ಲಿ ಬಳಸುವ ಪುರಿಯನ್ನು ಬಳಸಲಾಗುತ್ತದೆ. ಅಷ್ಟಕ್ಕೂ ಲಾವಾ ಇಡ್ಲಿ ಮಾಡುದು ಹೇಗೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಮೊದಲಿಗೆ ಇಡ್ಲಿ ಹಿಟ್ಟು, ಸಾಂಬಾರ್ ತಯಾರಿಸಿಕೊಳ್ಳಬೇಕು. ನಂತರ ಲಾವಾ ಇಡ್ಲಿಯನ್ನು ಮಾಡಬಹುದಾಗಿದೆ. ಹಾಗಾಗಿ ಇಡ್ಲಿ ಹಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು 2 ಕಪ್ ಇಡ್ಲಿ ಅಕ್ಕಿ, 1 ಕಪ್ ಉದ್ದಿನ ಬೇಳೆ, 1/4 ಕಪ್ ಅವಲಕ್ಕಿ, ತುಪ್ಪ/ಎಣ್ಣೆ.
ಇಡ್ಲಿ ಹಿಟ್ಟು ತಯಾರಿಸಿಕೊಳ್ಳುವುದೇಗೆ?
ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು
4 ಹಸಿರು ಮೆಣಸಿನಕಾಯಿ, 3 ಟೊಮ್ಯಾಟೋ, 1 ಸ್ಪೂನ್ ಸಾಸಿವೆ, ಸ್ವಲ್ಪ ಕೊತ್ತಂಬರಿ, 2 ಒಣ ಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಸ್ಪೂನ್ ಜಿರಿಗೆ, 1/2 ಸ್ಪೂನ್ ಮೆಂತ್ಯ, 2 ಈರುಳ್ಳಿ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಅರಿಶಿಣ ಪುಡಿ, 1 ಚಮಚ ಮೆಣಸಿನ ಪುಡಿ, 1 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಂಬಾರ್ ಪುಡಿ, 1 ಸ್ಪೂನ್ ತೊಗರಿ ಬೇಳೆ
ಸಾಂಬಾರ್ ಮಾಡುವ ವಿಧಾನ
ಲಾವಾ ಇಡ್ಲಿ ಮಾಡುವ ವಿಧಾನ
ಮೊದಲಿಗೆ ಲಾವ್ ಕೇಕ್ ಮಾಡುವ ಪುಟ್ಟ ಕಪ್ಗೆ ಎಣ್ಣೆ ಸವರಿ, ಸ್ವಲ್ಪ ಇಡ್ಲಿ ಹಿಟ್ಟನ್ನು ಹಾಕಿ, ಪಾನಿಪುರಿಗೆ ಬಳಸುವ ಪುರಿಯನ್ನು ಮಧ್ಯದಲ್ಲಿ ಹೋಲ್ ಮಾಡಿ. ನಂತರ ಅದರೊಳಗೆ ತಯಾರಿಸಿಟ್ಟುಕೊಂಡಿರುವ ಸಾಂಬಾರ್ ಹಾಕಿ, ಪುರಿಯಿಂದ ಮುಚ್ಚಬೇಕು. ಕೊನೆಗೆ ಇಡ್ಲಿ ಹಿಟ್ಟನ್ನು ಪುರಿಯ ಮೇಲೆ ಹಾಕಿ. ಇಡ್ಲಿ ಹಬೆ ಮಾಡುವ ಪಾತ್ರೆಯಲ್ಲಿಟ್ಟು ಮಧ್ಯಮ ಉರಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ. ಚೆನ್ನಾಗಿ ಇಡ್ಲಿ ಬೆಂದ ನಂತರ ತೆಗೆದರೆ ಲಾವಾ ಇಡ್ಲಿ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ