ಆತಂಕ ಇಲ್ಲದೆ ಆರಾಮಾಗಿ ಬದುಕಲು ಈ 3-3-3 ಸೂತ್ರ ಅನುಸರಿಸಿ ನೋಡಿ..

3-3-3 ನಿಯಮ ನಮ್ಮ ಮನಸ್ಸನ್ನು ವರ್ತಮಾನದಲ್ಲಿಯೇ ಇರುವಂತೆ ಮಾಡಲು ಮತ್ತು ಮನಸ್ಸನ್ನು ನಕಾರಾತ್ಮಕ ಅಂಶಗಳಿಂದ ದೂರವಿರಲು ನಮಗೆ ಅಪಾರವಾಗಿ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬದಲಾಗುತ್ತಿರುವ ಜೀವನಶೈಲಿ (Lifestyle) ನಾಗಾಲೋಟದ ಬದುಕಿನಿಂದಾಗಿ ದೈಹಿಕ ಆರೋಗ್ಯದ ಜೊತೆ ಜೊತೆ ಮಾನಸಿಕ ಆರೋಗ್ಯವೂ (Mental Health) ಹದಗೆಡುತ್ತಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ದೂರದ ಮಾತಾಗಿ ಉಳಿದುಹೋಗಿದೆ. ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಬದುಕು ಸಹ ಪ್ರತಿಕ್ಷಣವೂ ಸುಂದರವಾಗಿ ಕಾಣುತ್ತದೆ. ಆದರೆ ಮನುಷ್ಯ ಆತಂಕ, ಖಿನ್ನತೆ (Anxiety, Depression)  ಹೀಗೆ ಇವುಗಳ ನಡುವೆಯೇ ಬದುಕುವ ಪರಿಸ್ಥಿತಿ ಎದುರಾಗಿದೆ. ಹೌದು ಪ್ರಪಂಚದಾದ್ಯಂತ ಬಹಳಷ್ಟು ಜನರು ಖಿನ್ನತೆ ಮತ್ತು ಆತಂಕದಿಂದ ಬದುಕುತ್ತಿದ್ದು, ಇದು ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.

  ಸಕಾರಾತ್ಮಕ ದೃಷ್ಟಿಕೋನ ಹೊಂದುವುದು ಮುಖ್ಯ

  ಮನಶ್ಶಾಸ್ತ್ರಜ್ಞ ಡಾ. ಶ್ವೇತಾಂಬರ ಸಬರ್ವಾಲ್ ಪ್ರಕಾರ, ಆತಂಕ ಇಂದು ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಅದನ್ನು ಸರಿಯಾಗಿ ನಿಭಾಯಿಸುವುದು ಹೇಗೆ ಎಂದು ನಮಗೆ ಇನ್ನೂ ತಿಳಿದಿಲ್ಲ ಮತ್ತು ಜೀವನದ ಬಗ್ಗೆ ಉತ್ತಮ ಮತ್ತು ಸಕಾರಾತ್ಮಕ ದೃಷ್ಟಿಕೋನ ಹೊಂದುವ ಮೂಲಕ ಆತಂಕ ಮುಚ್ಚಿಡಲು ಪ್ರಯತ್ನಿಸುತ್ತೇವೆ ಎಂದು ಸಬರ್ವಾಲ್ ಹೇಳುತ್ತಾರೆ. ವೈದ್ಯರ ಪ್ರಕಾರ ನೋಡುವುದು, ಗ್ರಹಿಸುವುದು, ಗುರುತಿಸುವುದು ಮತ್ತು ಸ್ವೀಕರಿಸುವುದು ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವರು 3-3-3 ನಿಯಮದ ಬಗ್ಗೆ ವಿವರಿಸಿ, ಇದು ನಮ್ಮ ಮನಸ್ಸನ್ನು ವರ್ತಮಾನದಲ್ಲಿಯೇ ಇರುವಂತೆ ಮಾಡಲು ಮತ್ತು ಮನಸ್ಸನ್ನು ನಕಾರಾತ್ಮಕ ಅಂಶಗಳಿಂದ ದೂರವಿರಲು ನಮಗೆ ಅಪಾರವಾಗಿ ಸಹಾಯ ಮಾಡುತ್ತದೆ.

   3-3-3 ನಿಯಮ ಹೀಗಿದೆ.. 

  • ಮೊದಲನೆಯದಾಗಿ ನೀವು ಕೇಳುವ ಮೂರು ಶಬ್ದಗಳನ್ನು ಹೆಸರಿಸಿ
  • ಎರಡನೆಯದಾಗಿ ನಿಮ್ಮ ದೇಹದ ಮೂರು ಭಾಗಗಳಾದ ನಿಮ್ಮ ಬೆರಳುಗಳು, ಭುಜಗಳು ಮತ್ತು ನಂತರ ಪಾದಗಳನ್ನು ಸ್ಮರಿಸಿ
  • ಮೂರನೆಯದಾಗಿ ನೀವು ನೋಡುವ ಮೂರು ವಿಷಯಗಳನ್ನು ಸೂಚಿಸಿ

  ನಮ್ಮ ಮೆದುಳು ಚಂಚಲತೆ ಅನುಭವಿಸಿದಾಗ ಈ ನಿಯಮವು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

  ಸಬರ್ವಾಲ್ ಒಬ್ಬರು ಪ್ರಮುಖ ಮನಶ್ಶಾಸ್ತ್ರಜ್ಞರು. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ಇವರು ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಪೋಸ್ಟ್‌ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ಪೋಸ್ಟ್‌ನಲ್ಲಿ, ಡಿಸೆಂಬರ್ ತಿಂಗಳನ್ನು ನಾವು ಪ್ರಾರಂಭಿಸಿದಾಗ ನಮ್ಮ ಬಗ್ಗೆ ನಾವು ಹೇಗೆ ಒಳ್ಳೆಯದನ್ನು ಅನುಭವಿಸಬೇಕು, ಚಿಂತಿಸಬೇಕು ಎಂಬುದರ ಮಹತ್ವವನ್ನು ಒತ್ತಿ ಹೇಳಿದರು. ಮಾನಸಿಕ ಆರೋಗ್ಯವನ್ನು ಹದಗೆಡಿಸುವ ಸಣ್ಣದೊಂದು ರೋಗಲಕ್ಷಣಗಳನ್ನು ನಾವು ಅನುಭವಿಸುತ್ತಿದ್ದೇವೆ ಎಂದು ತಿಳಿದ ತಕ್ಷಣ ನಾವು ಮಾನಸಿಕ ಆರೋಗ್ಯ ಚಿಕಿತ್ಸೆಯ ಸಹಾಯ ತೆಗೆದುಕೊಳ್ಳಬೇಕು ಎಂದು ಮನಶ್ಶಾಸ್ತ್ರಜ್ಞರು ವಿವರಿಸಿದರು.

  ಇದನ್ನೂ ಓದಿ: Winter Food: ಈ ಚಳಿಗಾಲದಲ್ಲಿ ಬಿರಿಯಾನಿ ತಿನ್ನೋದೇ ಬೆಸ್ಟ್​ ಅಂತೆ.. ಏಕೆ ಗೊತ್ತಾ?

  ಊಹೆಗಳು ನಮ್ಮ ಮಾನಸಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂದರೆ ಋಣಾತ್ಮಕ ಚಿಂತೆಗೆ ಕಾರಣವಾಗುತ್ತದೆ. ಹಾಗಾಗಿ ಊಹೆ ಮನಸ್ಥಿತಿಯಿಂದ ದೂರ ಉಳಿಯುವುದು ಉತ್ತಮ ಎನ್ನುತ್ತಾರೆ ಸಬರ್ವಾಲ್. ಉದಾಹರಣೆಗೆ, ಕೆಲವು ಸಾಮಾನ್ಯ ಋಣಾತ್ಮಕ ಊಹೆಗಳು ಕೆಲಸದಲ್ಲಿ ಯಾವುದೇ ಮಾನ್ಯತೆ ಪಡೆಯುತ್ತಿಲ್ಲ. ಯಾಕೆಂದರೆ ಪ್ರಪಂಚದ ಮನಸ್ಥಿತಿಯೂ ದಿನೇ ದಿನೇ ಹದಗೆಡುತ್ತಿದ್ದು, ಯಾರನ್ನೂ ನಂಬದೇ ನಮ್ಮ ಪ್ರಯತ್ನದ ಮುಖೇನ ಸಾಗುವುದು ಒಳಿತು ಎಂಬುದು ಸಬರ್ವಾಲ್ ಕಿವಿಮಾತು.

  ಒಳ್ಳೆಯ ಆಹಾರ ಸೇವಿಸಿ 

  1. ಪ್ರತಿದಿನ ಕನಿಷ್ಠ 5 ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸಿ

  2. ನಿಮ್ಮ ಊಟದಲ್ಲಿ ಆಲೂಗೆಡ್ಡೆ, ಬ್ರೆಡ್, ಅಕ್ಕಿ, ಪಾಸ್ತಾ ಅಥವಾ ಪಿಷ್ಟ ಕಾರ್ಬೋಹೈಡ್ರೇಟ್‍ಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ಸಾಧ್ಯವಿದ್ದರೆ ಇಡೀ ಧಾನ್ಯಗಳನ್ನು ಸಹ ಸೇವಿಸಿ

  3. ಡೈರಿ ಉತ್ಪನ್ನಗಳ ಬದಲಿಗೆ ಸೋಯಾ ಪಾನೀಯಗಳಂತಹ ಕಡಿಮೆ ಕೊಬ್ಬು ಮತ್ತು ಕಡಿಮೆ ಸಕ್ಕರೆಯನ್ನೊಳಗೊಂಡಿರುವ ಆಹಾರಗಳಿಗೆ ಆದ್ಯತೆ ನೀಡಿ

  4. ಬೀನ್ಸ್, ಕಾಳುಗಳು, ಮೀನು, ಮೊಟ್ಟೆ, ಮಾಂಸ ಮತ್ತು ಇತರೆ ಪ್ರೋಟೀನ್‍ಯುಕ್ತ ಆಹಾರ ಸೇವಿಸಿ

  5. ವಿಶೇಷವಾಗಿ ವಾರದಲ್ಲಿ 2 ಬಾರಿ ಮೀನುಗಳನ್ನು ಸೇವಿಸಿ. ಅದರಲ್ಲಿ ಒಂದು ಎಣ್ಣೆಯುಕ್ತವಾಗಿರಬೇಕು

  6. ಅಪರ್ಯಾಪ್ತ ತೈಲಗಳನ್ನು ಬಳಸಿ

  7. ಪ್ರತಿದಿನ 6 ರಿಂದ 8 ಲೋಟ ದ್ರವಯುಕ್ತ ಪದಾರ್ಥ ಸೇವಿಸಿ
  Published by:Kavya V
  First published: