• Home
  • »
  • News
  • »
  • lifestyle
  • »
  • Belly Fat: ಹೊಟ್ಟೆಯ ಕೊಬ್ಬು ಕರಗಿಸೋಕೆ ಈ 10 ಯೋಗಾಸನಗಳು ಬೆಸ್ಟ್​

Belly Fat: ಹೊಟ್ಟೆಯ ಕೊಬ್ಬು ಕರಗಿಸೋಕೆ ಈ 10 ಯೋಗಾಸನಗಳು ಬೆಸ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆದರೆ ಬೊಜ್ಜನ್ನು ಅದರಲ್ಲೂ ಬೆಲ್ಲಿ ಫ್ಯಾಟ್‌ ಕರಗಿಸುವುದು ಕಷ್ಟ ಅಂತಲೇ ಹಲವಾರು ಜನರು ಅಂದುಕೊಳ್ಳುತ್ತಾರೆ. ತಜ್ಞರ ಪ್ರಕಾರ, ಚೆನ್ನಾಗಿ ತಿನ್ನುವುದು ಮತ್ತು ಆಗಾಗ್ಗೆ ವ್ಯಾಯಾಮ ಮಾಡುವುದು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ.

  • Share this:

ದೇಹದಲ್ಲಿ ಬೊಜ್ಜು(Cholesterol) ಸಂಗ್ರಹವಾದಂತೆ ಅದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ (Problems) ಎಡೆಮಾಡಿಕೊಡುತ್ತದೆ. ಬೊಜ್ಜು ನಿಮ್ಮ ದೇಹದಲ್ಲಿ ಹಲವಾರು ನಕಾರಾತ್ಮಕ ಪರಿಣಾಮಗಳನ್ನು(Negative Effects ) ಉಂಟುಮಾಡುತ್ತದೆ. ಇದು ನಿಮ್ಮ ನಿದ್ರೆಯ(Sleep) ಚಕ್ರವನ್ನು ಅಡ್ಡಿಪಡಿಸುತ್ತದೆ, ನಿಮಗೆ ಹೆಚ್ಚು ಆಯಾಸವನ್ನು ಉಂಟುಮಾಡುತ್ತದೆ, ಜೊತೆಗೆ ಹೃದ್ರೋಗ, ಮಧುಮೇಹ, ಮೂತ್ರಪಿಂಡದ ಕಲ್ಲುಗಳು ಮತ್ತು ಬಂಜೆತನ ಸೇರಿದಂತೆ ಹಲವಾರು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.


ಆದರೆ ಬೊಜ್ಜನ್ನು ಅದರಲ್ಲೂ ಬೆಲ್ಲಿ ಫ್ಯಾಟ್‌ ಕರಗಿಸುವುದು ಕಷ್ಟ ಅಂತಲೇ ಹಲವಾರು ಜನರು ಅಂದುಕೊಳ್ಳುತ್ತಾರೆ. ತಜ್ಞರ ಪ್ರಕಾರ, ಚೆನ್ನಾಗಿ ತಿನ್ನುವುದು ಮತ್ತು ಆಗಾಗ್ಗೆ ವ್ಯಾಯಾಮ ಮಾಡುವುದು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ. ಆದ್ದರಿಂದ, ನೀವು ಫ್ಲಾಟ್‌ ಬೆಲ್ಲಿಯ ಕನಸು ಕಾಣುತ್ತಿದ್ದರೆ ಸರಿಯಾಗಿ ತಿನ್ನಿ ಹಾಗೂ ಹೆಚ್ಚು ವ್ಯಾಯಾಮ ಮಾಡಿ ಎನ್ನುತ್ತಾರೆ ತಜ್ಞರು.


ಅದರಲ್ಲೂ ದೇಹದ ಕೊಬ್ಬನ್ನು ಕರಗಿಸಲು ಯೋಗ ಅತ್ಯುತ್ತಮ ವಿಧಾನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯೋಗ ಒಟ್ಟಾರೆ ಶರೀರದ ಆರೋಗ್ಯಕ್ಕೆ ಒಳ್ಳೆಯದಾದರೂ ಹೊಟ್ಟೆಯ ಕೊಬ್ಬನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಡಿಮೆ ಮಾಡುವಂಥ ಯೋಗಾಸನಗಳನ್ನು ಮಾಡಿದರೆ ನೀವು ಅತ್ಯುತ್ತಮ ಫಲಿತಾಂಶ ನಿರೀಕ್ಷಿಸಬಹುದು.


ಇದನ್ನೂ ಓದಿ: Women Health: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ


ಅಕ್ಷರ ಯೋಗ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸಂಸ್ಥಾಪಕ ಹಿಮಾಲಯನ್ ಸಿದ್ಧ ಅಕ್ಷರ್ ಅವರು ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಯೋಗಾಸನ ಅತ್ಯುತ್ತಮ ಎಂದು ಹೇಳುತ್ತಾರೆ.


“ಕಿಬ್ಬೊಟ್ಟೆಯ ಕೊಬ್ಬು ಬಹಳ ಅಪಾಯಕಾರಿ. ಇದು ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. ನೀವು ದೊಡ್ಡ ಹೊಟ್ಟೆಯನ್ನು ಹೊಂದಿದ್ದರೆ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಸೇರಿದಂತೆ ರೋಗಗಳನ್ನು ಹೊಂದುವ ಸಾಧ್ಯತೆಯಿದೆ.


ಆದಾಗ್ಯೂ, ಯೋಗಾಸನಗಳು ತೂಕವನ್ನು ಕಳೆದುಕೊಳ್ಳಲು ಮತ್ತು ನಿಮ್ಮ ಹೊಟ್ಟೆಯನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಟೋನ್ ಮಾಡಲು ಸಹಾಯ ಮಾಡುತ್ತದೆ" ಎಂಬುದಾಗಿ ಅವರು ಹೇಳುತ್ತಾರೆ.


ಹೊಟ್ಟೆಯ ಕೊಬ್ಬನ್ನು ಹೋಗಲಾಡಿಸಲು ಈ ಯೋಗಾಸನಗಳು ಬೆಸ್ಟ್‌


1. ಹಾಲಾಸನ ಅಥವಾ ನೇಗಿಲು ಭಂಗಿ




*ನಿಮ್ಮ ಬೆನ್ನಿನ ಮೇಲೆ ಮಲಗಿ. ನಿಮ್ಮ ಅಂಗೈಗಳು ನಿಮ್ಮ ಪಕ್ಕದಲ್ಲಿ, ನೆಲದ ಮೇಲೆ ಇರುವಂತೆ ನೋಡಿಕೊಳ್ಳಿ.


*ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಳಸಿ, ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ 90 ಡಿಗ್ರಿ ಆಗುವಂತೆ ಮಾಡಿ.


*ನಿಮ್ಮ ಅಂಗೈಗಳನ್ನು ನೆಲದ ಮೇಲೆ ದೃಢವಾಗಿ ಇಡಿ.


*ನಿಧಾನವಾಗಿ ಕಾಲುಗಳನ್ನು ನಿಮ್ಮ ತಲೆಯ ಬಳಿ ತನ್ನಿ.


*ಅಗತ್ಯವಿದ್ದರೆ, ನಿಮ್ಮ ಅಂಗೈಗಳಿಂದ ನಿಮ್ಮ ಕೆಳಗಿನ ಬೆನ್ನನ್ನು ಹಿಡಿದುಕೊಳ್ಳಿ.


* ಸಹಜವಾಗಿ ಉಸಿರಾಡಿ.


* 15 ರಿಂದ 20 ಸೆಕೆಂಡುಗಳ ಕಾಲ ಇದೇ ಭಂಗಿಯಲ್ಲಿರಿ.


2. ಚಕ್ರಾಸನ ಅಥವಾ ಚಕ್ರ ಭಂಗಿ




*ಮೊದಲು ನೀವು ಬೆನ್ನಿನ ಮೇಲೆ ಮಲಗಿ


* ನಿಮ್ಮ ಕೈಗಳನ್ನು ಭುಜಗಳ ಮೇಲ್ಭಾಗದ ನೆಲದ ಮೇಲೆ ಇರಿಸಿ.


*ನಿಮ್ಮ ಕೈಗಳು ಹಾಗೂ ಕಾಲುಗಳ ಮೇಲೆ ಭಾರ ಹಾಕಿ ನಿಮ್ಮ ಮೇಲಿನ ದೇಹವನ್ನು ಕಮಾನಿನಂತೆ ಮೇಲಕ್ಕೆತ್ತಿ. ನಿಮ್ಮ ತಲೆಯನ್ನು ನೆಲಕ್ಕೆ ತಾಕುವಂತೆ ಇರಿಸಿ.


*ನಿಮ್ಮ ಪಾದಗಳನ್ನು ಒತ್ತಿರಿ ಹಾಗೂ ನಿಮ್ಮ ಕಾಲುಗಳು, ಸೊಂಟ ಮತ್ತು ಹೊಟ್ಟೆಯನ್ನು ಮೇಲಕ್ಕೆತ್ತಿ.


*ನಿಮ್ಮ ಪಾದ ಹಾಗೂ ಕೈಗಳು ನಿಮ್ಮ ತೂಕ ಹೊರುವಂತೆ ನೋಡಿಕೊಳ್ಳಿ.


* ನಿಮ್ಮ ದೇಹವನ್ನು ಕಮಾನಿನಂತೆ ಬಾಗಿಸಿ. ಆಳವಾಗಿ ಉಸಿರಾಡಿ.


* 15 ರಿಂದ 20 ಸೆಕೆಂಡುಗಳ ಕಾಲ ಈ ಆಸನ ಮಾಡಿ.


3. ಧನುರಾಸನ ಅಥವಾ ಬಿಲ್ಲಿನಾಕಾರದ ಪೋಸ್‌




* ನಿಮ್ಮ ಹೊಟ್ಟೆಯ ಮೇಲೆ ಮಲಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ.


* ನಿಮ್ಮ ಕೈ ಮತ್ತು ಕಾಲುಗಳನ್ನು ಮೇಲಕ್ಕೆತ್ತಿ.


*ಮೇಲಕ್ಕೆ ನೋಡಿ ಮತ್ತು ನಿಧಾನವಾಗಿ ನಿಮ್ಮ ಕೈಗಳಿಂದ ಕಾಲನ್ನು ಹಿಡಿದುಕೊಳ್ಳಿ.


* ಹೀಗೆಯೇ 15 ರಿಂದ 20 ಸೆಕೆಂಡುಗಳ ಕಾಲ ಈ ಆಸನ ಮಾಡಿ.


4. ಸಂತೋಲನಾಸನ ಅಥವಾ ಹಲಗೆ ಭಂಗಿ




*ಮೊದಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ.


*ನಿಮ್ಮ ಕೈಗಳನ್ನು ನಿಮ್ಮ ಭುಜಗಳ ಕೆಳಗೆ ಇರಿಸಿ.


*ನಿಮ್ಮ ಸೊಂಟ, ಮೊಣಕಾಲುಗಳು ಮತ್ತು ಮೇಲಿನ ಭಾಗವನ್ನು ಮೇಲಕ್ಕೆತ್ತಿ.


*ನಿಮ್ಮ ಕಾಲ್ಬೆರಳುಗಳು ನೆಲದಲ್ಲಿರಲಿ.


*ನಿಮ್ಮ ಬೆನ್ನು, ಸೊಂಟ ಮತ್ತು ಮೊಣಕಾಲುಗಳ ಜೋಡಣೆ ಸರಿಯಾಗಿದೆಯೇ ಎಂದು ಪರಿಶೀಲಿಸಿ.


*ನಿಮ್ಮ ಮಣಿಕಟ್ಟುಗಳನ್ನು, ನಿಮ್ಮ ತೋಳುಗಳನ್ನು ನೇರವಾಗಿ ನಿಮ್ಮ ಭುಜದ ಕೆಳಗೆ ಇರಿಸಿ ನಿಧಾನವಾಗಿ ಉಸಿರಾಡಿ.


5. ವಸಿಷ್ಠಾಸನ ಅಥವಾ ಸೈಡ್‌ ಪ್ಲಾಂಕ್‌ ಪೋಸ್




* ಇದು ಸಂತೋಲನಾಸನ ಭಂಗಿಯ ಮುಂದುವರಿದ ಭಾಗವಾಗಿದೆ. ಆದ್ದರಿಂದ ಸಂತೋಲನಾಸನದಿಂದಲೇ ಇದನ್ನು ಆರಂಭಿಸಿ.


*ಹಾಗೆಯೇ ನಿಧಾನವಾಗಿ ಬಲಭಾಗಕ್ಕೆ ತಿರುಗಿ, ಎಡ ಅಂಗೈಯನ್ನು ಮೇಲಕ್ಕೆತ್ತಿ.


*ನಿಮ್ಮ ಪಾದಗಳನ್ನು ಜೋಡಿಸಿ.


* ನಂತರದ ಎಡಭಾಗಕ್ಕೆ ತಿರುಗಿ ಬಲ ಅಂಗೈಯನ್ನು ಮೇಲಕ್ಕೆತ್ತಿ.


6. ಉಸ್ತ್ರಾಸನ‌ ಅಥವಾ ಒಂಟೆ ಭಂಗಿ




*ಮೊದಲು ಯೋಗ ಮ್ಯಾಟ್‌ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ.


* ನಿಮ್ಮ ಕೈಗಳನ್ನು ಮೇಲಕ್ಕೆ ಚಾಚಿ.


* ನಿಧಾನವಾಗಿ ಉಸಿರೆಳೆದುಕೊಂಡು ಹಿಂದಕ್ಕೆ ಬಾಗಿ ನಿಮ್ಮ ಬೆನ್ನನ್ನು ಕಮಾನು ಮಾಡಿ.


* ನಿಮ್ಮ ಅಂಗೈಗಳನ್ನು ನಿಮ್ಮ ಕಾಲುಗಳ ಮೇಲೆ ಇರಿಸಿ.


* ನಿಧಾನವಾಗಿ ಉಸಿರಾಟ ನಡೆಸಿ.


7. ಏಕ ಪಾದಾಸನ ಅಥವಾ ಒಂದು ಕಾಲು ಭಂಗಿ




*ಮೊದಲು ಇದನ್ನು ಸಮಸ್ಥಿತಿಯಲ್ಲಿ ಪ್ರಾರಂಭಿಸಿ.


* ನೀವು ನಿಮ್ಮ ತೋಳುಗಳನ್ನು ಚಾಚಿ ಮತ್ತು ನಿಮ್ಮ ಅಂಗೈಗಳನ್ನು ನಮಸ್ಕಾರ ರೀತಿಯಲ್ಲಿ ಸೇರಿಸಿ.


* ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ.


* ನೀವು ಉಸಿರಾಡುವಾಗ ನೆಲಕ್ಕೆ ಸಮಾನಾಂತರವಾಗುವವರೆಗೆ ನಿಮ್ಮ ಮೇಲಿನ ದೇಹವನ್ನು ಮುಂದಕ್ಕೆ ಬಾಗಿಸಿ.


* ನಿಮ್ಮ ತೋಳುಗಳನ್ನು ನಿಮ್ಮ ಕಿವಿಗೆ ಹತ್ತಿರ ಇರಿಸಿ.


* ನಿಧಾನವಾಗಿ ನಿಮ್ಮ ಬಲಗಾಲನ್ನು ನಿಮ್ಮ ಹಿಂದೆ ಮೇಲಕ್ಕೆತ್ತಿ ಚಾಚಬೇಕು.


* ನಿಮ್ಮ ತೋಳುಗಳು, ಮೇಲಿನ ದೇಹ, ಬಲ ಕಾಲು ಮತ್ತು ಸೊಂಟ ಎಲ್ಲವೂ ನೇರ ರೇಖೆಯಲ್ಲಿರುವಂತೆ ನೋಡಿಕೊಳ್ಳಿ.


8. ಚತುರಂಗ ದಂಡಾಸನ ಅಥವಾ ಲೋ ಪ್ಲಾಂಕ್‌ ಪೋಸ್




*ನಿಮ್ಮನ್ನು ಅರ್ಧ-ಪುಶ್-ಅಪ್‌ಗೆ ಇಳಿಸಿ. ಇದರಿಂದ ನಿಮ್ಮ ಮೇಲಿನ ತೋಳುಗಳು ನೆಲಕ್ಕೆ ಸಮಾನಾಂತರವಾಗಿರುತ್ತವೆ.


*ನೀವು ನಿಮ್ಮನ್ನು ಕೆಳಕ್ಕೆ ಇಳಿಸಿದಾಗ, ನಿಮ್ಮ ಮೊಣಕೈಗಳಲ್ಲಿ 90 ಡಿಗ್ರಿ ಕೋನವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಮೊಣಕೈಗಳು ನಿಮ್ಮ ಪಕ್ಕೆಲುಬುಗಳ ಬದಿಗಳನ್ನು ಸ್ಪರ್ಶಿಸಬೇಕು.


* ನಿಮ್ಮ ಮಣಿಕಟ್ಟುಗಳು ಮತ್ತು ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಬೇಕು.
* ನಿಮ್ಮ ದೇಹವನ್ನು ನೇರವಾಗಿರುವಂತೆ ನೋಡಿಕೊಳ್ಳಬೇಕು.


* ಹತ್ತರಿಂದ ಹದಿನೈದು ಸೆಕೆಂಡುಗಳ ಕಾಲ ಈ ಆಸನ ಮಾಡಿ.


9. ಪಾದಹಸ್ತಾಸನ ಅಥವಾ ಮುಂದಕ್ಕೆ ಬಾಗಿದ ಭಂಗಿ




*ಮೊದಲು ನೇರವಾಗಿ ನಿಂತುಕೊಳ್ಳಿ.


* ನಂತರ ಉಸಿರೆಳೆದುಕೊಂಡು ನೇರವಾಗಿ ಮುಂದಕ್ಕೆ ಬಾಗಿ.


*ನಿಮ್ಮ ಅಂಗೈಗಳನ್ನು ನೆಲದ ಮೇಲೆ ಇರಿಸಲು ಪ್ರಯತ್ನಿಸಿ.


* ಆರಂಭದಲ್ಲಿ ಇದನ್ನು ಮಾಡಲು ಸುಲಭವಾಗುವಂತೆ ಮೊಣಕಾಲುಗಳನ್ನು ಬಗ್ಗಿಸಬಹುದು.


10. ಹಸ್ತ ಉತ್ತಾನಾಸನ ಅಥವಾ ಎತ್ತಿದ ತೋಳುಗಳ ಭಂಗಿ




*ಮೊದಲು ನೀವು ನೇರವಾಗಿ ನಿಂತುಕೊಳ್ಳಿ.


*ನಂತರ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಚಾಚಿ.


*ಕಮಾನು ರಚಿಸಲು ನಿಮ್ಮ ತಲೆ, ಕುತ್ತಿಗೆ ಮತ್ತು ಮೇಲಿನ ಬೆನ್ನನ್ನು ಸ್ವಲ್ಪ ಬಗ್ಗಿಸಿ.


*ನಿಮ್ಮ ಮೇಲಿನ ದೇಹವನ್ನು ಹಿಂದಕ್ಕೆ ತಿರುಗಿಸುವಾಗ ನಿಮ್ಮ ಕೈಗಳನ್ನು ನಿಮ್ಮ ಕಿವಿಗಳ ಪಕ್ಕದಲ್ಲಿ ಇರಿಸಿ.


* ನಿಧಾರವಾಗಿ ಉಸಿರಾಡಿ ಜೊತೆಗೆ ನಿಮ್ಮ ನೋಟವನ್ನು ಕೇಂದ್ರೀಕರಿಸಿ.


ದೇಹದ ತೂಕ ಹೇಗಾದರೂ ಕಡಿಮೆ ಮಾಡಿಕೊಳ್ಳಬಹುದು ಆದರೆ ಹೊಟ್ಟೆಯ ಕೊಬ್ಬು ಕರಗಿಸೋದು ಅತ್ಯಂತ ಕಷ್ಟ ಎಂಬುದಾಗಿ ಅನೇಕರು ಗೊಣಗುತ್ತಿರುತ್ತಾರೆ.


ಆದರೆ ಈ ಯೋಗಾಸನಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಅವು ಏರೋಬಿಕ್ ವ್ಯಾಯಾಮದಂತೆಯೇ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಅಲ್ಲದೇ ಇವು ಕ್ಯಾಲೊರಿಗಳನ್ನು ಬರ್ನ್‌ ಮಾಡುವುದರಲ್ಲಿ ಕೂಡ ಸಹಾಯ ಮಾಡುತ್ತದೆ.




ಒಟ್ಟಾರೆ, ಯೋಗಾಸನ ತತ್‌ಕ್ಷಣವೇ ಫಲಿತಾಂಶಗಳನ್ನು ನೀಡದೇ ಹೋದರೂ ಸ್ವಲ್ಪ ಸಮಯ ನಿಯಮಿತವಾಗಿ ಮಾಡುತ್ತ ಹೋದರೆ ಖಂಡಿತಾ ಫಲಿತಾಂಶ ಸಿಗುತ್ತದೆ.


ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ನೀವು ಪಡೆದುಕೊಳ್ಳಬಹುದು. ತಜ್ಞರು ಕೂಡ ಹಲವಾರು ಆರೋಗ್ಯ ತೊಂದರೆಗಳಿಗೆ ನಿರ್ದಿಷ್ಟ ಯೋಗದ ಆಸನಗಳನ್ನು ಮಾಡಲು ಸಲಹೆ ನೀಡುತ್ತಾರೆ.


ಒಟ್ಟಾರೆ ಹೊಟ್ಟೆಯ ಕೊಬ್ಬು ಕಸಗಿಸಲು ಮೇಲೆ ಹೇಳಲಾದ ಯೋಗಾಸನಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ. 

Published by:Latha CG
First published: