Yogasanas: ಮದುವೆ ದಿನ ಮುಖ ಕಾಂತಿಯುತವಾಗಿ ಕಾಣ್ಬೇಕು ಅಂದ್ರೆ ಯೋಗಾಸನ ಟ್ರೈ ಮಾಡಿ

Yogasanas: ನೃತ್ಯ ವೀರಭದ್ರ, ಯೋಧನ ಭಂಗಿ ಎಂದು ಸಹ ಕರೆಯಲ್ಪಡುವ ಈ ಆಸನವನ್ನು ಪಾದಗಳ ನಡುವೆ 2 ರಿಂದ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಮುಂಭಾಗದ ಮೊಣಕಾಲನ್ನು 90 ಡಿಗ್ರಿಗೆ ಬಾಗಿಸಿ ಮತ್ತೊಂದು ಕಾಲನ್ನು ಹಿಂದೆ ನೇರವಾಗಿ ಚಾಚಬೇಕು. ತೋಳುಗಳನ್ನು ನೇರವಾಗಿ ಮೇಲಕ್ಕೆ ಚಾಚಿರಿ. ಈ ಆಸನ ಮಾಡುವುದರಿಂದ ದೇಹದ ಚರ್ಮದ ಸ್ಥಿತಿ ಸುಧಾರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಮದುವೆಗಳ(Weddings) ಸೀಸನ್ ಅಲ್ಲದೆ ಚಳಿಗಾಲ (Winter)ಬೇರೆ. ಇಂತಹ ಶೀತದ ವಾತಾವರಣದಲ್ಲಿ ಯಾರಿಗಾದರೂ ತಮ್ಮ ಮುಖದ ಕಾಂತಿ, ಆ ಹೊಳಪು (Brightness)ತಮ್ಮ ಮದುವೆಯ ದಿನ ಸ್ವಲ್ಪವೂ ಕಡಿಮೆ ಆಗಬಾರದು ಎಂಬ ಆಸೆ ಇರುವುದು ಸಹಜವಾದ ವಿಷಯ.ಆದರೆ ಕೆಲವೊಮ್ಮೆ ನಿರಂತರ ಸಮಾರಂಭಗಳು, ಆಹಾರ ಮತ್ತು ಅತಿಯಾದ ಶ್ರಮವು ನಿಮ್ಮ ಮುಖದಲ್ಲಿರುವ ಕಾಂತಿಯನ್ನು(Moisture) ಮಂದವಾಗಿಸುತ್ತದೆ. ಮುಖದ ಮೇಲೆ ಆ ಹೊಳಪು ನೋಡಲು ನೀವು ಮೇಕಪ್ (make-up)ಮಾಡಿಕೊಳ್ಳುತ್ತೀರಿ, ಆದರೆ ಈ ಮೇಕಪ್‌ನ ನಿಯಮಿತ ಬಳಕೆಯು ಚರ್ಮದ ನೈಸರ್ಗಿಕ ತೇವಾಂಶ ಮತ್ತು ಹೊಳಪನ್ನು ತೆಗೆದು ಹಾಕಬಹುದು. ಅದಕ್ಕಾಗಿ ಇಲ್ಲಿ ನಿಮಗಾಗಿ ನಿಮ್ಮ ಮುಖದ ಕಾಂತಿ ಮತ್ತು ಹೊಳಪು ಹೆಚ್ಚು ಮಾಡಲು ಸಹಾಯಕವಾಗುವ 5 ಯೋಗಾಸನಗಳನ್ನು(Yogasanas) ಇಲ್ಲಿ ತಿಳಿಸಲಾಗಿದೆ. ನೀವು ಈ ಯೋಗಾಸನಗಳನ್ನು ಮನೆಯಲ್ಲಿಯೇ ಮಾಡಿ ನೋಡಿ, ನಿಮ್ಮ ಮುಖದಲ್ಲಿ ಹೇಗೆ ಕಾಂತಿ ಮತ್ತು ಹೊಳಪು ಸದಾ ಇರುತ್ತದೆ ಎಂದು ಅನುಭವಕ್ಕೆ ಬರುತ್ತದೆ.

ವಿನೀತ ಗರುಡಾ ಹಸ್ತ
ಈ ಆಸನವನ್ನು ಹದ್ದಿನ ಭಂಗಿ ಎಂದು ಸಹ ಕರೆಯುತ್ತಾರೆ. ಇದು ದೇಹವನ್ನು ಸಮತೋಲನಗೊಳಿಸುವ ಆಸನವಾಗಿದ್ದು, ಇದರಲ್ಲಿ ಒಂದು ಕಾಲನ್ನು ನಿಂತಿರುವ ಸ್ಥಾನದಲ್ಲಿ ಇನ್ನೊಂದರ ಮೇಲೆ ಅಡ್ಡವಾಗಿ, ಒಂದು ತೋಳನ್ನು ಇನ್ನೊಂದು ತೋಳಿನ ಮೇಲೆ ಅಡ್ಡವಾಗಿ ಇರಿಸಲಾಗುತ್ತದೆ. ಈ ಆಸನವು ಶಕ್ತಿ, ಏಕಾಗ್ರತೆ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ, ನಿಮ್ಮ ಮುಖಕ್ಕೆ ಕಾಂತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: Kareena Kapoor Khan: ರಿವೀಲ್ ಆಯ್ತು ಕರೀನಾ ಕಪೂರ್ ಫಿಟ್‌ನೆಸ್ ರಹಸ್ಯ

ನೃತ್ಯ ವೀರಭದ್ರ
ಯೋಧನ ಭಂಗಿ ಎಂದು ಸಹ ಕರೆಯಲ್ಪಡುವ ಈ ಆಸನವನ್ನು ಪಾದಗಳ ನಡುವೆ 2 ರಿಂದ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಮುಂಭಾಗದ ಮೊಣಕಾಲನ್ನು 90 ಡಿಗ್ರಿಗೆ ಬಾಗಿಸಿ ಮತ್ತೊಂದು ಕಾಲನ್ನು ಹಿಂದೆ ನೇರವಾಗಿ ಚಾಚಬೇಕು. ತೋಳುಗಳನ್ನು ನೇರವಾಗಿ ಮೇಲಕ್ಕೆ ಚಾಚಿರಿ. ಈ ಆಸನ ಮಾಡುವುದರಿಂದ ದೇಹದ ಚರ್ಮದ ಸ್ಥಿತಿ ಸುಧಾರಿಸುತ್ತದೆ.

ಜಾನು ಸಿರ್ಶಾಸನಾ
ಇದು ತಲೆಯಿಂದ ಮೊಣಕಾಲಿನವರೆಗಿನ ಭಂಗಿಯಾಗಿದ್ದು, ಇದನ್ನು ಕುಳಿತುಕೊಂಡು ಮಾಡಲಾಗುತ್ತದೆ. ಒಂದು ಕಾಲನ್ನು ಹೊರಗೆ ಚಾಚಿ, ಇನ್ನೊಂದು ಕಾಲನ್ನು ಮೊಣಕಾಲು ನೇರ ಕಾಲಿನಿಂದ ದೂರಕ್ಕೆ ಚಾಚಿ ಬಾಗಿಸಿ. ತೋಳುಗಳನ್ನು ಹೊರಗೆ ಚಾಚಿ, ಚಾಚಿದ ಪಾದವನ್ನು ಮುಟ್ಟಲು ಪ್ರಯತ್ನಿಸಿ. ಈ ಆಸನವು ದೇಹದಲ್ಲಿ ರಕ್ತದ ಸರಿಯಾದ ಹರಿವಿಗೆ ಸಹಾಯ ಮಾಡುತ್ತದೆ, ಇದು ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ಮೂತ್ರಪಿಂಡ ಹಾಗೂ ಯಕೃತ್ತಿನ ಆರೋಗ್ಯ ಕಾಪಾಡುತ್ತದೆ. ಈ ಆಸನವು ನಿಮ್ಮ ಮುಖದ ಚರ್ಮಕ್ಕೆ ನೈಸರ್ಗಿಕವಾಗಿ ಹೊಳಪನ್ನು ತರುತ್ತದೆ.

ಊರ್ಧವ ಮುಖ ಭಾರದ್ವಜ್
ಇದು ಕುಳಿತುಕೊಳ್ಳುವ ಭಂಗಿಯಲ್ಲಿ ಮಂಡಿಗಳನ್ನು ಬಾಗಿಸಿ, ಒಂದು ಕಾಲಿನ ಪಾದವನ್ನು ಇನ್ನೊಂದು ಕಾಲಿನ ತೊಡೆಯ ಮೇಲೆ ಇರಿಸಲಾಗುತ್ತದೆ, ಇದಕ್ಕೆ ವಿರುದ್ಧವಾಗಿ ಕೈ ಹಿಂದಿನಿಂದ ಪಾದಗಳನ್ನು ಮುಟ್ಟಿರಿ. ಈ ಆಸನವು ಕಿಬ್ಬೊಟ್ಟೆ ಬಲಪಡಿಸುತ್ತದೆ ಮತ್ತು ಕೆಳಬೆನ್ನಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದು ಜೀರ್ಣಕಾರಿ ಕಾರ್ಯವಿಧಾನಗಳನ್ನು ಸುಧಾರಿಸುತ್ತದೆ ಮತ್ತು ಕಿಬ್ಬೊಟ್ಟೆ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಜೀರ್ಣಾಂಗ ವ್ಯವಸ್ಥೆಯು ಚರ್ಮಕ್ಕೆ ತುಂಬಾ ಸಹಾಯಕಾರಿಯಾಗಿದೆ.

ಇದನ್ನೂ ಓದಿ: Bedtime Yoga: ಬೆಡ್‌ ಟೈಮ್‌ ಯೋಗ ಟ್ರೈ ಮಾಡಿ... ಚನ್ನಾಗಿ ನಿದ್ರೆ ಬರುತ್ತೆ!

ಮತ್ಸ್ಯಾಸನ
ಇದನ್ನು ಮೀನಿನ ಭಂಗಿ ಮತ್ತು ಬ್ಯಾಕ್ ಬೆಂಡ್‌ಗಳ ರಚನೆ ಎಂದು ಸಹ ಕರೆಯಲಾಗುತ್ತದೆ. ಅಭ್ಯಾಸಿಯು ಬೆನ್ನಿನ ಮೇಲೆ ಮಲಗುತ್ತಾರೆ ಮತ್ತು ಮೊಣಕೈಗಳನ್ನು ನೆಲಕ್ಕೆ ತಾಗಿಸಿ ಎದೆಯ ಭಾಗವನ್ನು ಮೇಲಕ್ಕೆ ಎತ್ತುತ್ತಾನೆ. ಈ ಆಸನ ಸರ್ವ ರೋಗಗಳನ್ನು ನಾಶ ಮಾಡುವುದು. ಇದು ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ.
Published by:vanithasanjevani vanithasanjevani
First published: