Monsoon Sweets: ಮಳೆಗಾಲದಲ್ಲಿ ಖಾರ ಮಾತ್ರವಲ್ಲ, ಈ ಸ್ವೀಟ್ಸ್ ಅನ್ನೂ ಒಮ್ಮೆ ಟ್ರೈ ಮಾಡಿ ನೋಡಿ

ಮಳೆಗಾಲದಲ್ಲಿ ಈ ಪಕೋಡಾಗಳು, ಸಮೋಸಾ ಇನ್ನಿತರ ತಿಂಡಿಗಳನ್ನು ತಿನ್ನಲು ಒಳ್ಳೆಯ ಕಾಲ ಎಂದೇ ಹೇಳಬಹುದು. ಆದರೆ ಕೆಲವು ಜನರಿಗೆ ಖಾರದ ತಿಂಡಿಗಳು ಅಷ್ಟೊಂದು ಇಷ್ಟವಾಗುವುದಿಲ್ಲ. ಕೆಲವು ಜನಕ್ಕೆ ಬರೀ ಸಿಹಿ ತಿಂಡಿಗಳು ಮಾತ್ರ ಇಷ್ಟವಾಗುತ್ತಿರುತ್ತವೆ. ಬರೀ ಖಾರದ ತಿಂಡಿಗಳಾದಚಕ್ಕಲಿ, ಕೋಡುಬಳೆ ಅಂತ ಇರೋರಿಗೆ ನಾವಿಲ್ಲಿ ಭಾರತದ ಕೆಲವು ಮಿಠಾಯಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಮಳೆಗಾಲದಲ್ಲಿ (Monsoon) ದೇಹ ಮತ್ತು ಮನಸ್ಸು ಬೆಚ್ಚಗೆ ಇರಲು ಬಯಸುತ್ತವೆ. ಅದಕ್ಕನುಗುಣವಾಗಿ ಮಳೆಗಾಲದಲ್ಲಿ ಊಟ, ನಿದ್ದೆ ಎಲ್ಲವೂ ಬದಲಾವಣೆ ಆಗುತ್ತದೆ. ಮಳೆ ಬಂದರೆ ಚಳಿಯೂ ಜಾಸ್ತಿ. ಈ ಕೊರೆಯುವ ಚಳಿಯಲ್ಲಿ ಬೆಚ್ಚಗಿನ ಸ್ನಾನ, ಬೆಚ್ಚಗಿನ ವಾತಾವರಣ, ಬಿಸಿ-ಬಿಸಿ ಚಹಾ ಅದರ ಜೊತೆಗೆ ತಿನ್ನಲು ಕುರುಕಲು ತಿಂಡಿ (Snacks) ಇದ್ದರೆ ಎಂಥಾ ಮಜ ಇರುತ್ತದೆ ಅಲ್ವಾ. ಮಳೆಗಾಲದಲ್ಲಿ ಈ ಪಕೋಡಾಗಳು, ಸಮೋಸಾ ಇನ್ನಿತರ ತಿಂಡಿಗಳನ್ನು ತಿನ್ನಲು ಒಳ್ಳೆಯ ಕಾಲ ಎಂದೇ ಹೇಳಬಹುದು. ಆದರೆ ಕೆಲವು ಜನರಿಗೆ ಖಾರದ ತಿಂಡಿಗಳು ಅಷ್ಟೊಂದು ಇಷ್ಟವಾಗುವುದಿಲ್ಲ. ಕೆಲವು ಜನಕ್ಕೆ ಬರೀ ಸಿಹಿ ತಿಂಡಿಗಳು (Sweets) ಮಾತ್ರ ಇಷ್ಟವಾಗುತ್ತಿರುತ್ತವೆ. ಬರೀ ಖಾರದ ತಿಂಡಿಗಳಾದಚಕ್ಕಲಿ, ಕೋಡುಬಳೆ ಅಂತ ಇರೋರಿಗೆ ನಾವಿಲ್ಲಿ ಭಾರತದ (India) ಕೆಲವು ಮಿಠಾಯಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

 1) ಗೇವರ್‌
ಇದು ಮೂಲತಃ ರಾಜಸ್ಥಾನದ ಸಿಹಿ ಖಾದ್ಯವಾಗಿದೆ. ಇದನ್ನು ಶ್ರಾವಣ ಮಾಸದಲ್ಲಿ ಬರುವ ರಕ್ಷಾ ಬಂಧನ ಮತ್ತು ತೀಜ್‌ನಂತಹ ಮಳೆಗಾಲದ ಹಬ್ಬಗಳಲ್ಲಿ ಇದನ್ನು ತಯಾರಿಸುತ್ತಾರೆ. ಈ ಸಿಹಿ ಖಾದ್ಯಕ್ಕೆ ದೇಸಿ ತುಪ್ಪ, ಸಕ್ಕರೆ ಪಾಕವನ್ನು ಸೇರಿಸಿ ಚೆನ್ನಾಗಿ ಬೇಯಿಸಲಾಗುತ್ತದೆ. ಇದು ನೋಡಲು ಒಂದು ಸಿಡಿ ಡಿಸ್ಕ್‌ ತರ ಇದ್ದು, ತಿನ್ನುವಾಗ ಸ್ಪಂಜಿನ ಸಿಹಿ ಎಳೆಯು ಬಿಚ್ಚಿಕೊಳ್ಳುತ್ತಿರುತ್ತದೆ. ಇದಕ್ಕೆ ಇನ್ನು ರುಚಿ ಬರಲೆಂದು ಒಣ ಹಣ್ಣುಗಳು ಮತ್ತು ಇತರ ಸೀಸನ್‌ ಹಣ್ಣುಗಳನ್ನು ಸೇರಿಸಿ ಸವಿಯಲು ಕೊಡುತ್ತಾರೆ.

2) ಮಾಲ್ಪುವಾ ವಿತ್ ರಾಬ್ರಿ
ಈ ಸಿಹಿ ಖಾದ್ಯವು ಉತ್ತರ ಭಾರತದಲ್ಲಿ ಮಳೆಗಾಲದಲ್ಲಿ ಬಹಳ ಫೇಮಸ್‌ ಸಿಹಿ ಖಾದ್ಯವಾಗಿದೆ. ಇದು ಒಂದು ಸಿಹಿ ಪ್ಯಾನ್‌ ಕೇಕ್‌ ಆಗಿದ್ದು, ಇದನ್ನು ಸಿಹಿ ಹಾಲಿನೊಂದಿಗೆ ಬಡಿಸಲಾಗುತ್ತದೆ.

ಇದನ್ನೂ ಓದಿ:  Non-Veg Recipe: ಭಾನುವಾರದ ಬಾಡೂಟಕ್ಕೆ ಚಿಕನ್ ಫ್ರೈ ಮಸಾಲ ಮಾಡಿ

3) ಬಲುಶಹಿ
 ಇದು ಮೂಲತಃ ಬಿಹಾರದ ಸಿಹಿ ಖಾದ್ಯವಾಗಿದ್ದು, ಇದನ್ನು ಮೈದಾ ಹಿಟ್ಟಿನಿಂದ ತಯಾರಿಸಿ, ನಂತರ ತುಪ್ಪದಲ್ಲಿ ಹೆಚ್ಚು ಹೊತ್ತು ಕರಿದು ನಂತರ ಸಕ್ಕರೆ ಪಾಕದಲ್ಲಿ ಅವುಗಳನ್ನು ಸೇರಿಸಿ, ಸ್ವಲ್ಪ ಸಮಯದ ನಂತರ ಸವಿಯಲು ಕೊಡುತ್ತಾರೆ.

4) ಲ್ಯಾಬೊಂಗೊ-ಲಟಿಕಾ
ಮೂಲತಃ ಇದು ಸಾಂಪ್ರದಾಯಿಕ ಬಂಗಾಳಿ ಸಿಹಿ ಖಾದ್ಯವಾಗಿದ್ದು, ಇದನ್ನು ಮೈದಾ, ಖೋಯಾ, ಜಾಯಿಕಾಯಿ ಪುಡಿ, ತೆಂಗಿನಕಾಯಿ ತುರಿ, ತುಪ್ಪ, ಬಾದಾಮಿ, ಒಣದ್ರಾಕ್ಷಿ, ಏಲಕ್ಕಿ, ಲವಂಗ ಮತ್ತು ಸಕ್ಕರೆಯೊಂದಿಗೆ ತಯಾರಿಸಲಾಗುತ್ತದೆ. ಬಂಗಾಳಿಯಲ್ಲಿ, ಲ್ಯಾಬೊಂಗೋ ಎಂದರೆ ಲವಂಗ ಎಂಬ ಅರ್ಥ ಬರುತ್ತದೆ.

5) ಸೂಜಿ ರವಾ ಹಲ್ವಾ
ಇದನ್ನು ಬಹುಬೇಗನೆ ತಯಾರಿಸಬಹುದು, ಇದಕ್ಕೆ ಕಡಿಮೆ ಸಾಮಾಗ್ರಿಗಳು ಬೇಕಾಗುತ್ತವೆ. ರವಾ ಮತ್ತು ಸಕ್ಕರೆ ಇದ್ದರೆ ಕೆಲವೇ ನಿಮಿಷಗಳಲ್ಲಿ ಇದನ್ನು ತಯಾರಿಸಿಕೊಂಡು ರುಚಿಯಾದ ಸೂಜಿ ಹಲ್ವಾ ಸವಿಯಬಹುದು.

6) ಪಾಯಸ
ಈ ಸಿಹಿ ಖಾದ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಇದನ್ನು ಉತ್ತರ ಭಾರತದಲ್ಲಿ ಖೀರ್ ಎಂದೂ ಕರೆಯುತ್ತಾರೆ ದಕ್ಷಿಣ ಭಾರತದಲ್ಲಿ ಇದು ಪಾಯಸ ಎಂದೇ ಪ್ರಸಿದ್ಧಿ ಪಡೆದ ಸಿಹಿ ಖಾದ್ಯವಾಗಿದೆ. ಇದನ್ನು ಅಕ್ಕಿ, ಹಾಲು, ಸಕ್ಕರೆ ಅಥವಾ ಬೆಲ್ಲ ಮತ್ತು ಕೆಲವೊಮ್ಮೆ ಖೋಯಾದಿಂದ ತಯಾರಿಸಲಾಗುತ್ತದೆ, ಈ ಸಿಹಿ ಖಾದ್ಯವು ಎಷ್ಟು ರುಚಿಯಾಗಿರುತ್ತದೆ ಎಂದರೆ ಅದನ್ನು ಕುಡಿದವರಿಗೆ ಗೊತ್ತು. ಇದನ್ನು ಮಳೆಗಾಲದಲ್ಲಿ ಕುಡಿದರಂತೂ ಸ್ವರ್ಗಕ್ಕೆ ಎರಡೇ ಗೇಣು ಅನಿಸುವಷ್ಟು ಆನಂದ ಇದನ್ನು ಸೇವಿಸುವಾಗ ನಮಗೆ ಸಿಗುತ್ತದೆ.

7) ಶಾಹಿ ತುಕ್ಡಾ
ಇದನ್ನು ಮತ್ತೊಂದು ಅರ್ಥದಲ್ಲಿ ಡಬಲ್‌ ಕಾ ಮೀಠಾಯಿ ಎಂದು ಕರೆಯುತ್ತಾರೆ. ಇದು ಅತ್ಯಂತ ಸಿಹಿ ಖಾದ್ಯವಾಗಿದ್ದು, ಇದನ್ನು ಡೀಪ್‌ ಫ್ರೈಡ್‌ ಬ್ರೆಡ್‌ ಮತ್ತು ರಾಬ್ರಿಯೊಂದಿಗೆ ತಯಾರಿಸಲಾಗುತ್ತದೆ. ಇದನ್ನು ಇನ್ನು ರುಚಿಗೊಳಿಸಲು ಸಕ್ಕರೆ, ಏಲಕ್ಕಿ ಪುಡಿ, ಕೇಸರಿ ಮತ್ತು ಒಣ ಹಣ್ಣುಗಳು ಹಾಕಿ ಸವಿಯಲು ಕೊಟ್ಟರೆ ಆಹಾ ಎಂಥ ರುಚಿ ಅನಿಸದೇ ಇಲ್ಲ.

ಇದನ್ನೂ ಓದಿ:  Food Recipe: ಕೊತ್ತಂಬರಿ ರಸಂ ಮಾಡುವುದು ಹೇಗೆ? ಒಮ್ಮೆ ಟ್ರೈ ಮಾಡಿ ಹೊಸ ರುಚಿ ಸವಿಯಿರಿ

8) ಗುಲಾಬ್‌ ಜಾಮೂನ್‌
ಇದನ್ನು ಖೋಯಾ ಮತ್ತು ಸಕ್ಕರೆ ಪಾಕದಿಂದ ತಯಾರಿಸಲಾಗುಇತ್ತದೆ. ಬೆಚ್ಚಗಿನ ಗುಲಾಬ್‌ ಜಾಮೂನ್‌ ತಿನ್ನುತ್ತಿದ್ದರೆ ವಾಹ್‌ ಎನಿಸುತ್ತದೆ. ಈ ಎಲ್ಲ ರುಚಿಕರ ಸಿಹಿ ಮಿಠಾಯಿಗಳೊಂದಿಗೆ ನಿಮ್ಮ ಮಳೆಗಾಲವನ್ನು ಎಂಜಾಯ್‌ ಮಾಡಬಹುದು.
Published by:Ashwini Prabhu
First published: