Home Remedies: ಬೆನ್ನಿನ ಮೇಲೂ ಮೂಡುತ್ತಾ ಮೊಡವೆ? ಡೋಂಟ್ ವರಿ, ಇದಕ್ಕೂ ಇದೆ ಮನೆಮದ್ದು

ಬಹಳಷ್ಟು ಜನರು ತಮ್ಮ ಬೆನ್ನಿನ ಮೇಲೆ ಮತ್ತು ಭುಜದ ಮೇಲೆ ಮೊಡವೆಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಮೊಡವೆಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಈ ಮೊಡವೆಗಳ ಪರಿಹಾರಕ್ಕೆ ಇಲ್ಲಿ ನೀಡಿರುವ ಮನೆಮದ್ದುಗಳನ್ನು ಅನುಸರಿಸಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಮೊಡವೆಗಳ (Pimple) ಸಮಸ್ಯೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎದುರಿಸುತ್ತಾರೆ. ಮಹಿಳೆಯರು ಮಾತ್ರವಲ್ಲದೆ ಪುರುಷರನ್ನೂ (Men's) ಈ ಸಮಸ್ಯೆ ಕಾಡುತ್ತದೆ. ಮೊಡವೆಗಳ ಸಮಸ್ಯೆ ಹದಿಹರೆಯದಲ್ಲಿ ಪ್ರಾರಂಭವಾದರೂ ದೀರ್ಘಕಾಲದವರೆಗೆ ಇರುತ್ತದೆ. ಮೊಡವೆ ಮುಖದ (Face) ಮೇಲೆ ಮಾತ್ರವಲ್ಲದೆ ಭುಜ, ಬೆನ್ನು, ಎದೆ ಮತ್ತು ಕುತ್ತಿಗೆಯ ಮೇಲೂ ಕಂಡುಬರುತ್ತವೆ. ಮೃತ ತ್ವಚೆಯ ಕೋಶಗಳು ರಂಧ್ರಗಳನ್ನು ನಿರ್ಬಂಧಿಸಿದಾಗ ಮೊಡವೆಗಳು ಉತ್ಪತ್ತಿಯಾಗುತ್ತವೆ. ದೇಹದಲ್ಲಿನ ಮೇದೋಗ್ರಂಥಿಗಳ ಸ್ರಾವ ಮತ್ತು ಪ್ರೊಪಿಯೊನಿಬ್ಯಾಕ್ಟೀರಿಯಂನಿಂದ ಕೂಡ ಮೊಡವೆಗಳು ಉಂಟಾಗುತ್ತವೆ. ಅನೇಕ ವ್ಯಕ್ತಿಗಳಲ್ಲಿ, ಹಾರ್ಮೋನುಗಳ (Hormones) ಬದಲಾವಣೆಗಳು ಮತ್ತು ಕೆಲವು ಔಷಧಿಗಳು (Medicines) ಮತ್ತು ಕಾಮೆಡೋಜೆನಿಕ್ ಉತ್ಪನ್ನಗಳ ಸೇವನೆಯಿಂದಾಗಿ ಕೂಡ ಮೊಡವೆಗಳು ಸಂಭವಿಸುತ್ತವೆ.

ಬೆನ್ನಿನ ಮೇಲೆ ಮೊಡವೆ ಸಮಸ್ಯೆ
ಬಹಳಷ್ಟು ಜನರು ತಮ್ಮ ಬೆನ್ನಿನ ಮೇಲೆ ಮತ್ತು ಭುಜದ ಮೇಲೆ ಮೊಡವೆಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಮೊಡವೆಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಹೆಲ್ತ್‌ಲೈನ್‌ ವರದಿ ಮಾಡಿರುವಂತೆ, ಬಿಗಿಯಾದ ಅಥವಾ ಅನಾನುಕೂಲವಲ್ಲದ ಬಟ್ಟೆಗಳನ್ನು ಧರಿಸುವುದು, ಬ್ಯಾಕ್‌ಪ್ಯಾಕ್‌ಗಳು ಮತ್ತು ಪರ್ಸ್ ಪಟ್ಟಿಗಳು ಕೂಡ ವ್ಯಕ್ತಿಯ ಹಿಂಭಾಗದಲ್ಲಿ ಅಥವಾ ಭುಜದ ಮೇಲೆ ಮೊಡವೆಗಳು ಉಂಟಾಗಲು ಕಾರಣವಾಗಿವೆ.

ಇನ್ನು ಕೆಲವರು ಅನುವಂಶಿಕ ಕಾರಣಗಳಿಂದ ಮೊಡವೆಗಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಕಳಪೆ ನೈರ್ಮಲ್ಯ ಮತ್ತು ಕೊಳಕು ತ್ವಚೆಯಿಂದಾಗಿ ಮೊಡವೆಗಳು ಉಂಟಾಗುತ್ತವೆ ಎಂದು ನಂಬಲಾಗಿದೆ. ದೇಹದಲ್ಲಿ ಮೇದೋಗ್ರಂಥಿಗಳ ಅತಿಯಾದ ರಚನೆ ಮತ್ತು ಮೃತ ಚರ್ಮದ ಜೀವಕೋಶಗಳು ಚರ್ಮದ ರಂಧ್ರಗಳನ್ನು ನಿರ್ಬಂಧಿಸುತ್ತವೆ. ಈ ಮುಚ್ಚಿದ ರಂಧ್ರಗಳು ಮೊಡವೆಗಳನ್ನು ಉಂಟುಮಾಡುತ್ತವೆ.

ಮೊಡವೆಗಳ ಪರಿಹಾರಕ್ಕೆ ನೀವು ಇಲ್ಲಿ ನೀಡಿರುವ ಮನೆಮದ್ದುಗಳನ್ನು ಅನುಸರಿಸಬಹುದು

ಟಿ ಟ್ರೀ ಆಯಿಲ್
ಆಗಾಗ್ಗೆ ಮೊಡವೆಗಳ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಟಿ ಟ್ರಿ ಆಯಿಲ್ ಹಾಗೂ ಅಲೊವೆರಾದಿಂದ ಮಾಡಿದ ಉತ್ಪನ್ನಗಳನ್ನು ತ್ವಚೆಗೆ ಬಳಸಿ. ಮೊಡವೆಗಳನ್ನು ತಗ್ಗಿಸಲು ಟಿ ಟ್ರಿ ಆಯಿಲ್, ಅಂತೆಯೇ ಅಲೊವೆರಾ ಕೂಡ ಇತರ ಆ್ಯಂಟಿಬಯೋಟಿಕ್‌ಗಳಿಗಿಂತ ಪರಿಣಾಮಕಾರಿ.

ಇದನ್ನೂ ಓದಿ:  Hair Wash Method: ತಲೆಸ್ನಾನವನ್ನು ಸರಿಯಾಗಿ ಮಾಡೋದು ಹೀಗಂತೆ, ನೀವ್ ಹೇಗ್ ಮಾಡ್ತೀರಾ?

ಆ್ಯಪಲ್ ಸೈಡರ್ ವಿನೇಗರ್
ಆ್ಯಪಲ್ ಸೈಡರ್ ವಿನೇಗರ್ ಮೊಡವೆಗಳನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ. ಅದಾಗ್ಯೂ ಆ್ಯಪಲ್ ಸೈಡರ್ ವಿನೇಗರ್ ಅನ್ನು ನೇರವಾಗಿ ತ್ವಚೆಗೆ ಹಚ್ಚುವುದು ತುರಿಕೆಗೆ ಅಥವಾ ಕಿರಿಕಿರಿಗೆ ಕಾರಣವಾಗಬಹುದು. ನೀವು ನಾಲ್ಕನೇ ಒಂದು ಭಾಗದಷ್ಟು ಆ್ಯಪಲ್ ಸೈಡರ್ ವಿನೇಗರ್ ಅನ್ನು ಮುಕ್ಕಾಲು ಪಾಲು ನೀರಿನಲ್ಲಿ ಮಿಶ್ರಣ ಮಾಡಬೇಕು.

ಓಟ್‌ಮೀಲ್ ಬಾತ್
ಓಟ್ ಮೀಲ್ ಹಿತವಾದ ಮತ್ತು ಆ್ಯಂಟಿ-ಇನ್‌ಫ್ಲಾಮೇಟರಿ ಏಜೆಂಟ್‌ಗಳನ್ನು ಹೊಂದಿರುತ್ತದೆ. ಶುಷ್ಕ, ಕಿರಿಕಿರಿ ಅಥವಾ ಒರಟಾದ ಚರ್ಮಕ್ಕೆ ಇದು ಒಳ್ಳೆಯದು. ಭುಜ ಮತ್ತು ಬೆನ್ನಿನ ಮೊಡವೆಗಳನ್ನು ನಿವಾರಿಸಲು ಓಟ್ ಮೀಲ್ ಬಾತ್ ಒಳ್ಳೆಯದು. ಬೇಯಿಸದ ಓಟ್ಸ್ ಅನ್ನು ನುಣ್ಣಗೆ ಬ್ಲೆಂಡರ್‌ನಲ್ಲಿ ರುಬ್ಬಿಕೊಳ್ಳಿ ನಂತರ ಇದನ್ನು ನೀರಿನಲ್ಲಿ ಮಿಶ್ರ ಮಾಡಿಕೊಂಡು ಮೊಡವೆಗಳಿರುವಲ್ಲಿಗೆ ಹಚ್ಚಿಕೊಳ್ಳಬಹುದು. ಓಟ್‌ಮೀಲ್ ಸುರಕ್ಷಿತವಾಗಿದೆ.

ಬೆನ್ನಿನ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕೆಲವೊಂದು ಟಿಪ್ಸ್‌ಗಳು

 • ವರ್ಕ್‌ಔಟ್ ನಂತರದ ಸ್ನಾನ
  ಬೆವರನ್ನು ಸ್ವಚ್ಛಗೊಳಿಸದೆಯೇ ಹಾಗೆಯೇ ಬಿಡುವುದರಿಂದ ಇದು ಒಣಗುತ್ತದೆ ಇದರಿಂದ ಕೂಡ ಬೆನ್ನ ಮೇಲೆ ಮೊಡವೆಗಳು ಉಂಟಾಗಬಹುದು. ವರ್ಕ್‌ಔಟ್ ನಂತರ ಕೂಡಲೇ ಸ್ನಾನಮಾಡಿ. ಬಟ್ಟೆಗಳನ್ನು ಸ್ವಚ್ಛಗೊಳಿಸಿ

 • ಹಗುರವಾದ ಬಟ್ಟೆಗಳನ್ನು ಧರಿಸಿ
  ಬಿಗಿಯಾದ ಉಡುಪುಗಳನ್ನು ವರ್ಕ್‌ಔಟ್ ಸಮಯದಲ್ಲಿ ಧರಿಸುವುದರಿಂದ ಕೂಡ ಬೆವರುಗಳನ್ನು ಇದು ಹಿಡಿದಿಟ್ಟುಕೊಳ್ಳಬಹುದು

 • ಕೂದಲನ್ನು ಮೇಲಕ್ಕೆತ್ತಿ ಕಟ್ಟಿ
  ಉದ್ದನೆಯ ಕೂದಲು ನಿಮ್ಮ ಬೆನ್ನಿನ ಚರ್ಮಕ್ಕೆ ಎಣ್ಣೆ ಮತ್ತು ಕೊಳೆಯನ್ನು ಸೇರಿಸಬಹುದು, ಇದು ಮೊಡವೆಗಳ ಉಲ್ಬಣಕ್ಕೆ ಕಾರಣವಾಗಬಹುದು. ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ ಮತ್ತು ಬೆವರುವ ಸಮಯದಲ್ಲಿ ಅದನ್ನು ಬನ್ ಅಥವಾ ಪೋನಿಟೇಲ್‌ನಲ್ಲಿ ಬಂಧಿಸಿ.


ಇದನ್ನೂ ಓದಿ: Hair Care: ಉದ್ದನೆಯ ಕೂದಲು ನಿಮ್ಮದಾಗಬೇಕೆ? ಹಾಗಿದ್ರೆ ಅಲೋವೆರಾ ಈ ರೀತಿ ಬಳಸಿ

 • ಸನ್‌ಸ್ಕ್ರೀನ್ ಅನ್ನು ಎಚ್ಚರಿಕೆಯಿಂದ ಆರಿಸಿ
  ನಿಮ್ಮ ಚರ್ಮವನ್ನು ಹಾನಿಕಾರಕ ಸೂರ್ಯನಿಂದ ರಕ್ಷಿಸುವುದು ಮುಖ್ಯವಾಗಿದೆ. ಬೆನ್ನಿಗೆ ಹಚ್ಚಲು ಎಣ್ಣೆ ಮುಕ್ತವಾದ ಮತ್ತು ಹೆಚ್ಚು ರಾಸಾಯನಿಕವಲ್ಲದ ಸನ್‌ಸ್ಕ್ರೀನ್ ಆಯ್ಕೆ ಮಾಡಿ.

Published by:Ashwini Prabhu
First published: