Food Tips: ಓಟ್ಸ್​ನಿಂದ ಏನೆಲ್ಲಾ ತಿಂಡಿ ಮಾಡ್ಬೋದು ಗೊತ್ತಾ?

Oats Food Recipe: ಪ್ರತಿದಿನ ಓಟ್ಸ್‌ನಿಂದ ತಯಾರಿಸಿದ ತಿಂಡಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅನೇಕ ಜನರು ಮುಂಜಾನೆ ಜಿಮ್‌ನಲ್ಲಿ(Gym) ಕಠಿಣವಾದ ತಾಲೀಮು ಮಾಡಿದ ನಂತರ ತಮ್ಮ ಬೆಳಗ್ಗಿನ ಉಪಾಹಾರವಾಗಿ ಓಟ್ಸ್ (Oats)ಅನ್ನು ಹಾಲಿನಲ್ಲಿ ಹಾಕಿಕೊಂಡು ಸೇವಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ.ಓಟ್ಸ್ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಓಟ್ಸ್ ಬಳಸಿಕೊಂಡು ಸಹ ನಾವು ಅನೇಕ ಆರೋಗ್ಯಕರ ತಿಂಡಿಗಳನ್ನು ಮಾಡಿಕೊಳ್ಳಬಹುದು. ಓಟ್ಸ್‌ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಒಮೆಗಾ ಆಮ್ಲವಿದ್ದು, ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.ಆರೋಗ್ಯಕರ ಹೃದಯಕ್ಕೆ ಓಟ್ಸ್ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಮಗೆ ಪ್ರಮುಖ ವಿಟಮಿನ್ ಗಳು, ಖನಿಜಗಳು ಮತ್ತು ನಾರನ್ನು ಒದಗಿಸುತ್ತದೆ. ಓಟ್ಸ್‌ನಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ರತಿದಿನ ಓಟ್ಸ್‌ನಿಂದ ತಯಾರಿಸಿದ ತಿಂಡಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಓಟ್ಸ್ ಅನ್ನು ನೀವು ಅನೇಕ ವಿಧಗಳ ತಿಂಡಿಗಳಾಗಿ ತಯಾರಿಸಿಕೊಳ್ಳಬಹುದು. ಯಾವ ಯಾವ ತಿಂಡಿಗಳನ್ನು ತಯಾರಿಸಿಕೊಳ್ಳಬಹುದು ಎಂದು ನೀವು ಕೇಳಿದರೆ, ನಿಮಗಾಗಿ ಇಲ್ಲಿವೆ ಕೆಲವು ಆರೋಗ್ಯಕರ ಕಡಿಮೆ ಕೊಬ್ಬಿನಾಂಶ ಹೊಂದಿರುವ ಓಟ್ಸ್ ತಿಂಡಿಗಳ ಬಗ್ಗೆ ಮಾಹಿತಿ.

ಇಲ್ಲಿದೆ ಮಾಹಿತಿ: ಒಲೆಯ ಮೇಲಿಟ್ಟ ಅಡುಗೆ ಎಣ್ಣೆ ಕಾದಿದೆಯೋ ಇಲ್ಲವೋ ನೋಡಲು ಇಲ್ಲಿದೆ ಸೂಪರ್ ಟಿಪ್ಸ್‌..

ಓಟ್ಸ್ ಚುಡುವಾ:ಒಣ ಓಟ್ಸ್ ಮತ್ತು ಅವಲಕ್ಕಿಯನ್ನು ಒಟ್ಟಿಗೆ ಹುರಿದುಕೊಳ್ಳುವ ಮೂಲಕ ಓಟ್ಸ್ ಚುಡುವಾವನ್ನು ಮಾಡಿಕೊಳ್ಳಬಹುದು. ಅವುಗಳಿಗೆ ಕಡಲೆ ಬೇಳೆ, ಕಡಲೆಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಮಿಶ್ರಣವನ್ನು ಮಸಾಲೆಯಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ ಮತ್ತು ಆರೋಗ್ಯಕರ ರುಚಿಕರವಾದ ತಿಂಡಿ ಸಿದ್ಧವಾಗುತ್ತದೆ.

ಬಾದಾಮಿ ಗ್ರಾನೋಲಾ ಬಾರ್ಸ್‌:ಈ ಗ್ರಾನೋಲಾ ಬಾರ್‌ಗಳನ್ನು ತಯಾರಿಸಲು ನಿಮಗೆ ಗೋಧಿ ಹಿಟ್ಟು, ಬಿಳಿ ಓಟ್ಸ್, ಬೆಲ್ಲ, ತೆಂಗಿನ ಪುಡಿ, ಜೇನುತುಪ್ಪ ಮತ್ತು ಸ್ವಲ್ಪ ಬೆಣ್ಣೆ ಬೇಕಾಗುತ್ತದೆ.

ಓಟ್ಸ್ ಇಡ್ಲಿ: ಓಟ್ಸ್ ಇಡ್ಲಿ ತಿಂಡಿಗೆ ಉತ್ತಮ ಆಯ್ಕೆಯಾಗಿದೆ. ಪೌಷ್ಠಿಕಾಂಶದ ಮೌಲ್ಯ ಹೆಚ್ಚಿಸಲು ಓಟ್ಸ್‌ನೊಂದಿಗೆ ಈ ಇಡ್ಲಿಗಳನ್ನು ಮಾಡಿ. ನೀವು ಕಡಿಮೆ ಕೊಬ್ಬಿನ ತಿಂಡಿ ಬಯಸಿದಾಗ ಓಟ್ಸ್ ಇಡ್ಲಿ ಮಾಡಿಕೊಂಡು ಸೇವಿಸುವುದು ಒಳ್ಳೆಯದು.

ಓಟ್ಸ್ ಉತ್ತಪಂ:ನಿಮಗೆ ತುಂಬಾ ಹಸಿವು ಎನಿಸಿದಾಗ ಕಡಿಮೆ ಕೊಬ್ಬಿನಾಂಶವಿರುವ ಓಟ್ಸ್ ಉತ್ತಪಂ ಮಾಡಿಕೊಳ್ಳುವುದು ಉತ್ತಮ ಆಯ್ಕೆ ಆಗುತ್ತದೆ. ಇದರಲ್ಲಿ ನೀವು ರುಚಿ ಮತ್ತು ಆರೋಗ್ಯಕ್ಕೆ ತರಕಾರಿಯನ್ನು ಸೇರಿಸಿಕೊಳ್ಳಬಹುದು.

ಓಟ್ಸ್ ಢೋಕ್ಲಾ:ನಿಮಗೆ ಗುಜರಾತಿನ ಜನಪ್ರಿಯ ತಿಂಡಿಯಾದ ಢೋಕ್ಲಾ ತಿನ್ನಬೇಕು ಎಂದೆನಿಸಿದರೆ ನೀವು ಕಡಿಮೆ ಕೊಬ್ಬಿನಾಂಶವಿರುವ ಓಟ್ಸ್ ಢೋಕ್ಲಾ ತಯಾರಿಸಿಕೊಳ್ಳಬಹುದು. ಇದನ್ನು ಮಾಡಲು ಪುಡಿ ಮಾಡಿದ ಓಟ್ಸ್ ಮತ್ತು ರವೆ ತೆಗೆದುಕೊಳ್ಳಿ. ಮಸಾಲೆಗಳನ್ನು ಓಟ್ಸ್ ಮತ್ತು ರವೆಯೊಂದಿಗೆ ಸೇರಿಸಿಕೊಳ್ಳಿ ಮತ್ತು ಇದಕ್ಕೆ ತರಕಾರಿಯನ್ನು ಸೇರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ABC ಜ್ಯೂಸ್ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಪ್ರತಿದಿನ ಸೇವಿಸದೆ ಇರಲ್ಲ..

ಓಟ್ಸ್‌ನಿಂದ ಮಾಡುವಂತಹ ಆರೋಗ್ಯಕರ ಮತ್ತು ಕಡಿಮೆ ಕೊಬ್ಬಿನಾಂಶ ಹೊಂದಿರುವ ತಿಂಡಿಗಳನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ಸೇವಿಸಿ.
Published by:Sandhya M
First published: