• Home
  • »
  • News
  • »
  • lifestyle
  • »
  • Diabetes Remedy: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಮಧುಮೇಹ ಕಂಟ್ರೋಲ್ ಮಾಡ್ಬೋದು

Diabetes Remedy: ನಿಮ್ಮ ಲೈಫ್​ಸ್ಟೈಲ್​ ಈ ರೀತಿ ಬದಲಾದ್ರೆ ಮಧುಮೇಹ ಕಂಟ್ರೋಲ್ ಮಾಡ್ಬೋದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How to Prevent Diabetes: ನಿಮ್ಮ ವೈದ್ಯರೊಂದಿಗೆ ಮಧುಮೇಹವನ್ನು ತಡೆಗಟ್ಟುವ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯವಾಗಿದೆ. ಒಟ್ಟಾರೆ ವ್ಯಾಯಾಮ, ಸರಿಯಾದ ಆಹಾರ ಪದ್ಧತಿಯನ್ನು ಒಳಗೊಂಡ ಉತ್ತಮ ಜೀವನಶೈಲಿಯಿಂದ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

  • Share this:

ಮಧುಮೇಹ (Diabetes) ಇಂದು ಸರ್ವೇ ಸಾಮಾನ್ಯವಾಗಿದೆ. ವಯಸ್ಸಾದವರು, ಯುವಜನತೆ ಸೇರಿದಂತೆ ಚಿಕ್ಕ ಚಿಕ್ಕ ಮಕ್ಕಳೂ (Children) ಕೂಡ ಮಧುಮೇಹದಿಂದ ಬಳಲುತ್ತಿರುತ್ತಾರೆ. ಅನಾರೋಗ್ಯಕರ ಆಹಾರ ಪದ್ಧತಿ (Food Style) , ಜಡವಾದ ಜೀವನ ಶೈಲಿ (Life Style) ಹಾಗೂ ಅನುವಂಶೀಯತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಮಧುಮೇಹಕ್ಕೆ ಬೊಜ್ಜು ಅಥವಾ ಸ್ಥೂಲಕಾಯ ಕೂಡ ಕಾರಣವಾಗುತ್ತದೆ. ಇದು ಜೀವನ ಮತ್ತು ದೀರ್ಘಾಯುಷ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮಧುಮೇಹವು ಅದರ ಅನೇಕ ಸಮಸ್ಯೆಗಳಿಂದ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಒತ್ತಡವನ್ನೂ ಹೆಚ್ಚಿಸುತ್ತದೆ. ಏಕೆಂದರೆ ನಿರಂತರವಾಗಿ ರಕ್ತದಲ್ಲಿನ ಸಕ್ಕರೆ 9Sugar Level)  ಮಟ್ಟವನ್ನು ಪರೀಕ್ಷಿಸುವ ಅವಶ್ಯಕತೆಯಿರುತ್ತದೆ. ಜೊತೆಗೆ ನಿರ್ಬಂಧಿತ ಆಹಾರ ಮತ್ತು ದೈನಂದಿನ ಔಷಧಿಗಳನ್ನು ಸೇವಿಸುವುದು ಅನಿವಾರ್ಯವಾಗಿರುತ್ತದೆ.


ಹಾಗಾಗಿ, ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಅನ್ನೋ ಹಾಗೆ ಬಂದ ಮೇಲೆ ಚಿಕಿತ್ಸೆ ಮಾಡೋದಕ್ಕಿಂತ ಬಾರದ ಹಾಗೆ ತಡೆಯುವುದೇ ಬೆಸ್ಟ್.‌  ಜೀವನಶೈಲಿ ಮತ್ತು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಮಧುಮೇಹದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.


ಟೈಪ್ 2 ಡಯಾಬಿಟಿಸ್, ಮಧುಮೇಹದ ಅತ್ಯಂತ ಸಾಮಾನ್ಯ ವಿಧವಾಗಿದೆ. ಆರೋಗ್ಯಕರ ಆಹಾರವನ್ನು ತಿನ್ನುವುದು ಮತ್ತು ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವುದರಿಂದ ಮಧುಮೇಹವನ್ನು ತಡೆಗಟ್ಟಬಹುದು. ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರೆ, ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆಯ ವಂಶವಾಹಿನಿ ಹೊಂದಿದ್ದರೆ ಅದರ ತಡೆಗಟ್ಟುವಿಕೆ ಕಷ್ಟವಾಗುತ್ತದೆ.


ಇನ್ನು, ನೀವು ಪ್ರಿಡಯಾಬಿಟಿಸ್ ಹೊಂದಿದ್ದರೆ, ಅಂದರೆ ರಕ್ತದಲ್ಲಿನ ಸಕ್ಕರೆಯು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಮಧುಮೇಹ ಬರೋದನ್ನು ತಡೆಗಟ್ಟಲು ಅಥವಾ ತಡವಾಗಿ ಬರುವಂತೆ ಮಾಡಲು ನೀವು ಸರಳವಾದ ಜೀವನಶೈಲಿಯನ್ನು ಬದಲಾಯಿಸಬಹುದು ಎನ್ನುತ್ತಾರೆ ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟೀಸ್ ಸೆಂಟರ್ ನ ಉಪಾಧ್ಯಕ್ಷ ಹಾಗೂ ಸಲಹೆಗಾರ ಡಾ ರಂಜಿತ್ ಉನ್ನಿಕೃಷ್ಣನ್.


ನಿಮ್ಮ ದಿನಚರಿಯಲ್ಲಿ ಸರಳವಾದ ವ್ಯಾಯಾಮ ಮತ್ತು ಆಹಾರದಲ್ಲಿ ಬದಲಾವಣೆ ಸೇರಿದಂತೆ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಮಧುಮೇಹದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯ. ಜೀವನ ಶೈಲಿ ಬದಲಾಯಿಸಿಕೊಳ್ಳದೇ ಹೋದಲ್ಲಿ ನರಗಳು, ಕಣ್ಣು, ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನೀವು ಬೇಗ ಎಚ್ಚರಗೊಂಡಷ್ಟೂ ಈ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಕಡಿಮೆ.


ಮಧುಮೇಹವು ಪ್ರಾರಂಭವಾಗುವ ಮೊದಲೇ ಅದನ್ನು ತಡೆಗಟ್ಟಲು ಡಾ ಉನ್ನಿಕೃಷ್ಣನ್ 5 ನೈಸರ್ಗಿಕ ಮಾರ್ಗಗಳನ್ನು ಸೂಚಿಸಿದ್ದಾರೆ.


1.ನಿಮ್ಮ ತೂಕವನ್ನು ಕಡಿಮೆ ಮಾಡಿ: ಆಹಾರ ಮತ್ತು ವ್ಯಾಯಾಮದ ಬದಲಾವಣೆಗಳ ಮೂಲಕ ನಿಮ್ಮ ದೇಹದ ತೂಕದ ಶೇಕಡಾ 7 ರಷ್ಟು ಕಳೆದುಕೊಂಡಾಗ ಮಧುಮೇಹದ ಅಪಾಯವನ್ನು ಸುಮಾರು ಶೇ. 60ರಷ್ಟು ಕಡಿಮೆ ಮಾಡಲು ಸಾಧ್ಯವಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್, ​​ಪ್ರಿಡಯಾಬಿಟಿಸ್ ಹೊಂದಿರುವ ಜನರು ರೋಗದ ಪ್ರಗತಿಯನ್ನು ತಡೆಗಟ್ಟಲು ತಮ್ಮ ತೂಕದ ಶೇಕಡಾ 7 ರಿಂದ 10 ರಷ್ಟು ಕಳೆದುಕೊಳ್ಳಬೇಕೆಂದು ಶಿಫಾರಸು ಮಾಡುತ್ತದೆ.
ಹೆಚ್ಚು ತೂಕ ಇಳಿಕೆಯು ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ಪರಿಣಾಮ ಬೀರುತ್ತದೆ. ನೀವು ಪ್ರಸ್ತುತ ತೂಕವನ್ನು ಆಧರಿಸಿ ನಿಮ್ಮ ತೂಕ ಇಳಿಕೆಯ ಗುರಿಯನ್ನು ನಿರ್ಧರಿಸಿ. ವಾರಕ್ಕೆ 1-2 ಪೌಂಡ್ ತೂಕವನ್ನು ಕಳೆದುಕೊಳ್ಳುವ ಪ್ರಯತ್ನದ ಬಗ್ಗೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ.


2. ದೈಹಿಕವಾಗಿ ಕ್ರಿಯಾಶೀಲರಾಗಿರುವುದು: ಹೆಚ್ಚು ಕ್ರಿಯಾಶೀಲರಾಗಿರುವುದು ಉತ್ತಮ ಗುಣಮಟ್ಟದ ಜೀವನಕ್ಕೆ ಕಾರಣವಾಗಬಹುದು ಎಂದು ಸಾಬೀತಾಗಿದೆ. ಪ್ರತಿದಿನ ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವುದು ನಿಮ್ಮ ಆರೋಗ್ಯ ಮತ್ತು ಕ್ಷೇಮಕ್ಕೆ ಅತ್ಯುತ್ತಮ. ನಿತ್ಯವೂ ವ್ಯಾಯಾಮ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಜನರು ತೂಕವನ್ನು ಕಳೆದುಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ವ್ಯಾಯಾಮ ಅತ್ಯಂತ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಎಲ್ಲಾ ವಯಸ್ಸಿನವರಿಗೂ ಅಗತ್ಯವಾಗಿದೆ.


3. ಆರೋಗ್ಯಕರವಾಗಿ ತಿನ್ನಿರಿ: ನಿಮ್ಮ ಆಹಾರದಲ್ಲಿ ಸಸ್ಯ ಮೂಲವು ನಿಮಗೆ ಬೇಕಾದ ಜೀವಸತ್ವಗಳು ಮತ್ತು ಖನಿಜಗಳನ್ನು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು ಸಕ್ಕರೆ, ಪಿಷ್ಟ ಮತ್ತು ಫೈಬರ್ ಅನ್ನು ಒಳಗೊಂಡಿರುತ್ತವೆ.


ಫೈಬರ್ ಭರಿತ ಆಹಾರಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ, ಫೈಬರ್-ಸಮೃದ್ಧ ಆಹಾರಗಳಲ್ಲಿ ಹಣ್ಣುಗಳು ಮತ್ತು ಪಿಷ್ಟವಿಲ್ಲದ ತರಕಾರಿಗಳು, ಹಸಿರು ಸೊಪ್ಪುಗಳು ಮತ್ತು ಕೋಸುಗಡ್ಡೆ ಮುಂತಾದವನ್ನು ಸೇವಿಸಬೇಕು. ಬೀನ್ಸ್, ಕಡಲೆ, ದ್ವಿದಳ ಧಾನ್ಯಗಳು ಮತ್ತು ಸಂಪೂರ್ಣ ಗೋಧಿ ಬ್ರೆಡ್, ಬ್ರೌನ್ ರೈಸ್, ಓಟ್ಸ್ ಮತ್ತು ಕ್ವಿನೋವಾದಂತಹ ಧಾನ್ಯಗಳ ಸೇವನೆ ಉತ್ತಮ.


ನಿಮ್ಮ ಆಹಾರದಲ್ಲಿ ನೀವು ಸಂಸ್ಕರಿಸಿದ ಸಕ್ಕರೆಯ ಬದಲಿಗೆ ಬೇರೆಯ ಸಿಹಿಯನ್ನು ಬಳಸಬಹುದಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕಾರ್ಬ್‌ನ ಪ್ರಯೋಜನಗಳನ್ನು ನೀಡುತ್ತದೆ. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.


4. ಆರೋಗ್ಯಕರ ಕೊಬ್ಬನ್ನು ಸೇವಿಸಿ : ಆರೋಗ್ಯಕರ ಕೊಬ್ಬನ್ನು ತಿನ್ನುವುದು ನಿಮ್ಮ ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು. ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಕೊಬ್ಬು ಹೊಂದಿರುವ ಆಹಾರಗಳನ್ನು ಕಡಿಮೆ ಸೇವಿಸಬೇಕು.


ಸಾಮಾನ್ಯವಾಗಿ "ಉತ್ತಮ ಕೊಬ್ಬುಗಳು" ಎಂದು ಕರೆಯಲ್ಪಡುವ ಕೊಬ್ಬುಗಳು ನಿಮ್ಮ ತೂಕವನ್ನು ನಿರ್ವಹಿಸಲು ಅಗತ್ಯವಿರುವ ಪ್ರಯೋಜನಗಳನ್ನು ಒದಗಿಸುತ್ತವೆ. ಈ ರೀತಿಯ ಕೊಬ್ಬಿನ ಉತ್ತಮ ಮೂಲಗಳು ಎಂದರೆ ಆಲಿವ್, ಸೂರ್ಯಕಾಂತಿ, ಕುಸುಬೆ, ಹತ್ತಿಬೀಜ ಮತ್ತು ಕ್ಯಾನೋಲ ಎಣ್ಣೆಗಳು.


ಬಾದಾಮಿ, ಕಡಲೆಕಾಯಿ, ಅಗಸೆಬೀಜ ಮತ್ತು ಇತರ ಪ್ರಭೇದಗಳು ತಮ್ಮದೇ ಆದ ವಿಶಿಷ್ಟ ಪ್ರಯೋಜನಗಳನ್ನು ನೀಡುತ್ತವೆ. ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್, ಟೂನಾ ಮತ್ತು ಕಾಡ್ ಮುಂತಾದ ಮೀನುಗಳು ಒಳ್ಳೆಯದು.


ಸ್ಯಾಚುರೇಟೆಡ್ ಕೊಬ್ಬುಗಳನ್ನು ಡೈರಿ ಉತ್ಪನ್ನಗಳು ಮತ್ತು ಮಾಂಸಗಳಲ್ಲಿ ಕಾಣಬಹುದು. ಈ "ಕೆಟ್ಟ ಕೊಬ್ಬನ್ನು" ಸಣ್ಣ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇಲ್ಲದಿದ್ದರೆ ನೀವು ಅಪಧಮನಿಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಹೋಗುವ ಅಪಾಯವಿದೆ. ಕಡಿಮೆ ಕೊಬ್ಬನ್ನು ಹೊಂದಿರುವ ಡೈರಿ ಉತ್ಪನ್ನಗಳನ್ನು ತಿನ್ನಲು ಪ್ರಯತ್ನಿಸಿ ಜೊತೆಗೆ ಕೆಂಪು ಮಾಂಸ ಮತ್ತು ಹೆಚ್ಚಿನ ಕೊಬ್ಬಿನ ಕೋಳಿಯ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.


ಇದನ್ನೂ ಓದಿ: ಆಹಾರ ಪ್ರಿಯರ ಫೇವರೇಟ್ ಈ ಮಿಲಿಟರಿ ಹೋಟೆಲ್​ಗಳು, ಇದರ ಇತಿಹಾಸ ರೋಚಕ


5. ಆರೋಗ್ಯಕರ ಆಯ್ಕೆಯ ಮೇಲೆ ಗಮನವಿಡಿ: ನೀವು ಏನನ್ನು ತಿನ್ನುತ್ತಿರೋ ಅದೇ ನಿಮ್ಮಲ್ಲಿ ಕಾಣುತ್ತದೆ ಎಂಬಂತೆ, ಆರೋಗ್ಯಕರ ಆಹಾರ ಪದ್ಧತಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಪಾಲಿನೊ ಅಥವಾ ಕಿಟೋ ಡಯೆಟ್‌ ತೂಕ ಇಳಿಕೆಗೆ ಒಳ್ಳೆಯದು.


ಆದರೆ, ಈ ಆಹಾರ ಕ್ರಮಗಳ ದೀರ್ಘಾವಧಿ ಪ್ರಯೋಜನಗಳು ಇನ್ನೂ ತಿಳಿದಿಲ್ಲ. ಭವಿಷ್ಯದಲ್ಲಿ ಆರೋಗ್ಯಕರ ತೂಕ ಮತ್ತು ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಪ್ರಮುಖ ಆಹಾರದ ಗುರಿಗಳಲ್ಲಿ ಒಂದಾಗಿದೆ. ಅದನ್ನು ಮಾಡಲು, ನೀವು ಬದ್ಧರಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.


ಉತ್ತಮ ಆಹಾರ ಆಯ್ಕೆಗಳನ್ನು ಮಾಡಲು ಮತ್ತು ಆರೋಗ್ಯಕರ ಭಾಗಗಳನ್ನು ತಿನ್ನಲು ನಿಮಗೆ ಸಹಾಯ ಮಾಡುವ ಒಂದು ತಂತ್ರವೆಂದರೆ ನಿಮ್ಮ ಪ್ಲೇಟ್ ಅನ್ನು ವಿಭಜಿಸುವುದು. ಆರೋಗ್ಯಕರ ಆಹಾರವನ್ನು ಉತ್ತೇಜಿಸುವ ಪ್ಲೇಟ್‌ನಲ್ಲಿ ಮೂರು ವಿಭಾಗಗಳಿವೆ: ಒಂದೂವರೆ ಭಾಗ: ತರಕಾರಿಗಳು, ಕಾಲು ಭಾಗ: ಧಾನ್ಯಗಳು, ಇನ್ನು ಕಾಲು ಭಾಗ ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳು, ಮೀನುಗಳು, ಅಥವಾ ಪ್ರೋಟೀನ್-ಭರಿತ ಆಹಾರಗಳನ್ನು ಒಳಗೊಂಡಿರಬೇಕು.


ಇನ್ನು, ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವಯಸ್ಕರಿಗೆ ಮತ್ತು ಅದಕ್ಕಿಂತ ಕೆಳಗಿನವರಿಗೆ ಟೈಪ್ 2 ಡಯಾಬಿಟಿಸ್ ರೋಗನಿರ್ಣಯದ ಪರೀಕ್ಷೆಗಳೊಂದಿಗೆ ದಿನನಿತ್ಯದ ಸ್ಕ್ರೀನಿಂಗ್ ಅನ್ನು ಶಿಫಾರಸು ಮಾಡುತ್ತದೆ.


ಇದನ್ನೂ ಓದಿ: ಈ 5 ಸೂಪರ್ ಫುಡ್​ಗಳಿದ್ರೆ ಸಾಕು ತೂಕ ಇಳಿಸೋದು ಬಹಳ ಸುಲಭ


ಎಲ್ಲಕ್ಕಿಂತ ಮೊದಲು ನೀವು, ನಿಮ್ಮ ವೈದ್ಯರೊಂದಿಗೆ ಮಧುಮೇಹವನ್ನು ತಡೆಗಟ್ಟುವ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯವಾಗಿದೆ. ಒಟ್ಟಾರೆ ವ್ಯಾಯಾಮ, ಸರಿಯಾದ ಆಹಾರ ಪದ್ಧತಿಯನ್ನು ಒಳಗೊಂಡ ಉತ್ತಮ ಜೀವನಶೈಲಿಯಿಂದ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Published by:Sandhya M
First published: