Eyebrows: ಐಬ್ರೋ ಶೇಪ್​ ಸೂಪರ್ ಆಗಿ ಬರ್ಬೇಕು ಅಂದ್ರೆ ಹೀಗೆ ಮಾಡ್ಬೇಕಂತೆ

ಹಲವು ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗಿ ತಮ್ಮ ಐಬ್ರೋ ಮಾಡಿಸಿಕೊಂಡು ಬರುತ್ತಾರೆ. ಹೆಚ್ಚಿನ ಬ್ಯೂಟಿ ಪಾರ್ಲರ್ ಗಳಲ್ಲಿ ದಾರವನ್ನು ಉಪಯೋಗಿಸಿ ಐಬ್ರೋ ಮಾಡಲಾಗುತ್ತದೆ. ಇದು ತುಂಬಾ ಸುಲಭ ವಿಧಾನವಾಗಿದ್ದು, ನೀವು ಕೂಡ ಮನೆಯಲ್ಲಿ ಪ್ರಯತ್ನಿಸಿಬಹುದು. ಇದರ ಜೊತೆಗೆ ಇನ್ನೂ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿ ಉತ್ತಮ ಶೇಪ್ ಇರುವ ಹುಬ್ಬುಗಳನ್ನು ಪಡೆಯಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹುಬ್ಬು, ಮುಖದ ಸೌಂದರ್ಯ (Face Beauty) ಹೆಚ್ಚಿಸುವ ಒಂದು ಭಾಗ. ಹುಬ್ಬನ್ನು ಕಾಮನ ಬಿಲ್ಲಿಗೆ ಹೋಲಿಕೆ ಮಾಡಿ ಹೊಗಳಲಾಗುತ್ತದೆ. ಕೆಲವರಿಗೆ ಹುಬ್ಬು ದಪ್ಪವಾಗಿ, ಥೇಟ್ ಕಾಮನ ಬಿಲ್ಲಿನ ರೀತಿಯೇ ಇರುತ್ತದೆ. ಇನ್ನೂ ಕೆಲವರಿಗೆ ತೆಳ್ಳಗೆ ಇರುತ್ತದೆ. ಎಲ್ಲರೂ ಪೂರ್ಣವಾದ ಮತ್ತು ಗಾಢವಾದ ಹುಬ್ಬುಗಳನ್ನು (Eyebrow) ಹೊಂದಿರುವುದಿಲ್ಲ. ಅದಕ್ಕೆ ಅಂತಾನೇ ಹಲವಾರು ರೀತಿಯ ಹುಬ್ಬಿಗೆ ಸಂಬಂಧಿಸಿದ ಸೌಂದರ್ಯವರ್ಧಕಗಳನ್ನು (Cosmetics) ನಾವು ನೋಡಬಹುದು. ಹುಬ್ಬಿನ ಪೆನ್ಸಿಲ್ ಗಳು, ಶೇಡ್ಸ್ ಹೀಗೆ ಕೆಲವು ಹುಬ್ಬಿನ ಬಣ್ಣ, ಗಾತ್ರ ಹೆಚ್ಚಿಸಲು ಸಹಾಯ ಮಾಡುತ್ತವೆ. ಇನ್ನೂ ಆಕಾರಕ್ಕೆ ಬಂದರೆ ಸಾಮಾನ್ಯವಾಗಿ ಮಹಿಳೆಯರು (Women's) ಐಬ್ರೋ ಮಾಡಿಸಿಕೊಳ್ಳುವುದನ್ನು ನಾವು ನೋಡಬಹುದು. ಇದು ಹುಬ್ಬಿನ ಉತ್ತಮ ಆಕಾರಕ್ಕೆ ಸಹಾಯ ಮಾಡುತ್ತದೆ.

ಹಲವು ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗಿ ತಮ್ಮ ಐಬ್ರೋ ಮಾಡಿಸಿಕೊಂಡು ಬರುತ್ತಾರೆ. ಹೆಚ್ಚಿನ ಬ್ಯೂಟಿ ಪಾರ್ಲರ್ ಗಳಲ್ಲಿ ದಾರವನ್ನು ಉಪಯೋಗಿಸಿ ಐಬ್ರೋ ಮಾಡಲಾಗುತ್ತದೆ. ಇದು ತುಂಬಾ ಸುಲಭ ವಿಧಾನವಾಗಿದ್ದು, ನೀವು ಕೂಡ ಮನೆಯಲ್ಲಿ ಪ್ರಯತ್ನಿಸಿಬಹುದು. ಇದರ ಜೊತೆಗೆ ಇನ್ನೂ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿ ಉತ್ತಮ ಶೇಪ್ ಇರುವ ಹುಬ್ಬುಗಳನ್ನು ಪಡೆಯಬಹುದು.

ಮುಖಕ್ಕೆ ತಕ್ಕಂತೆ ಹುಬ್ಬು ಹೇಗಿರಬೇಕು?
ಮೊದಲಿಗೆ ಹುಬ್ಬಗಳ ಆಕಾರದ ಬಗ್ಗೆ ತಿಳಿದುಕೊಳ್ಳೋಣ. ಹುಬ್ಬಗಳ ಆಕಾರ ಹೇಗಿರಬೇಕೆಂಬುವುದು ನಿಮ್ಮ ಮುಖದ ಆಕಾರವನ್ನು ಅವಲಂಬಿಸಿರುತ್ತದೆ.

  • ದುಂಡು ಮುಖ – ಎತ್ತರದ ಹುಬ್ಬು

  • ಕೋಲು ಮುಖ – ನೇರ ಹುಬ್ಬು

  • ಹೃದಯದ ಆಕಾರದ ಮುಖ – ಎತ್ತರ ಮತ್ತು ತೆಳ್ಳನೆಯ ಹುಬ್ಬು

  • ಓವೆಲ್ ಆಕಾರದ ಮುಖ – ಯಾವುದಾದರು ಆಕಾರದ ಹುಬ್ಬು ಹೊಂದಿಕೆಯಾಗುತ್ತದೆ.


ಐಬ್ರೋಗಳಿಗೆ ಆಕಾರ ನೀಡಲು ಹಲವಾರು ವಿಧಾನಗಳಿವೆ. ಅವನ್ನು ಇಲ್ಲಿ ಒಂದೊಂದಾಗಿ ನೋಡೋಣ.

1) ದಾರದ ಸಹಾಯದಿಂದ ಐಬ್ರೋ ಮಾಡುವುದು (ಥ್ರೆಡ್ಡಿಂಗ್)
ಇದು ಹುಬ್ಬುಗಳಿಗೆ ಆಕಾರ ನೀಡುವಲ್ಲಿ ಬಳಸುವ ಸಾಮಾನ್ಯವಾದ ವಿಧಾನವಾಗಿದೆ. ಇದನ್ನು ನೀವು ಮನೆಯಲ್ಲೂ ಸಹ ಮಾಡಿಕೊಳ್ಳಬಹುದು. 11 ಇಂಚಿನ ದಾರದ ಮೂಲಕ ನಿಮ್ಮ ಬೆರಳುಗಳ ಸಹಾಯದಿಂದ ಈ ವಿಧಾನವನ್ನು ಪ್ರಯತ್ನಿಸಬಹುದು. ಇದು ಎಲ್ಲರಿಗೂ ಪರಿಚಿತವಾಗಿರುವಂತಹ ಒಂದು ವಿಧಾನವಾಗಿದೆ.

ಮುಖದ ಆಕಾರಕ್ಕೆ ತಕ್ಕಂತೆ ದಾರದ ಸಹಾಯದಿಂದ ಹುಬ್ಬುಗಳನ್ನು ಕೀಳುತ್ತಾ ಹೋಗಬೇಕು. ಸರಿಯಾದ ಆಕಾರದಲ್ಲಿ ಬರಲು ಸಾಕಷ್ಟು ಗಮನ ವಹಿಸಬೇಕು. ನಿಮ್ಮ ಎರಡು ಕೈಗಳ ತೋರು ಬೆರಳು ಮತ್ತು ಹೆಬ್ಬರಳಿನ ಸಹಾಯದಿಂದ ದಾರವನ್ನು ಹಿಡಿದುಕೊಂಡು ಹೆಚ್ಚುವರಿ ಹುಬ್ಬುಗಳ ಮೇಲೆ ಎಳೆಯಬೇಕು. ಹೀಗೆ ಮಾಡುವುದರಿಂದ ಹುಬ್ಬುಗಳು ಕಿತ್ತು ಬರುತ್ತವೆ. ಈ ಸಮಯದಲ್ಲಿ ಸ್ವಲ್ಪ ಉರಿ ಎನಿಸಬಹುದು. ಹೀಗೆ ಹಲವಾರು ಬಾರಿ ಹೆಚ್ಚುವರಿ ಮತ್ತು ಆಕಾರದ ಹೊರಗಿನ ಹುಬ್ಬುಗಳನ್ನು ದಾರದ ಸಹಾಯದಿಂದ ತೆಗೆಯಬೇಕು. ಮತ್ತು ನಿಮ್ಮ ಹಣೆಯ ಮೇಲಿರುವ ಕೂದಲುಗಳನ್ನು ಸಹ ದಾರದ ಸಹಾಯದಿಂದ ತೆಗೆಯಬಹುದು. ಇದಕ್ಕೆ ಪೂರ್ ಹೆಡ್ ಥ್ರೆಡ್ಡಿಂಗ್ ಎನ್ನಲಾಗುತ್ತದೆ.

ವಿಧಾನ ಪೂರ್ಣಗೊಂಡ ನಂತರ ಲೋಷನ್ ಅನ್ನು ಹುಬ್ಬಿನ ಸುತ್ತಲೂ ಹಚ್ಚಿಕೊಳ್ಳಿ

2) ಐಬ್ರೋ ಪ್ಲಕ್ಕಿಂಗ್
ಇದು ಕೂಡ ಸರಳ ವಿಧಾನವಾಗಿದೆ. ಚೂಪಾದ ಪ್ಲಕ್ಕಿಂಗ್ ಸಾಧನ ಬಳಸಿ ಹೆಚ್ಚುವರಿ ಹುಬ್ಬನ್ನು ತೆಗೆಯುವುದಾಗಿದೆ. ನೀವು ಪ್ಲಕ್ಕಿಂಗ್ ಮಾಡುವಾಗ ಆ ಸಾಧನವು ಚೂಪಾಗಿರುವಂತೆ ನೋಡಿಕೊಳ್ಳಿ. ಚೂಪಾಗಿರುವ ಪ್ಲಕ್ಕರ್ ಬಳಸಿದರೆ ಕೆಲಸವು ಸುಲಭವಾಗುತ್ತದೆ.

ಮೊದಲಿಗೆ ಪೆನ್ಸಿಲ್ ಸಹಾಯದಿಂದ ಐಬ್ರೋದ ಆಕಾರ ಹೇಗಿರಬೇಕೆಂದು ತಿದ್ದಿಕೊಳ್ಳಿ ನಂತರ ನಿಮ್ಮ ಮಾರ್ಕ್ ನ ಹೊರಗಿನ ಕೂದಲುಗಳನ್ನು ಕೀಳುತ್ತಾ ಬನ್ನಿ. ಸರಿಯಾದ ಶೇಪ್ ಬರುವವರೆಗೂ ಹೀಗೆ ಮಾಡಿ. ಈ ವಿಧಾನ ಹೆಚ್ಚು ಉರಿಯುವುದರಿಂದ ಐಬ್ರೋ ಆದ ತಕ್ಷಣ ಐಸ್ ಅಥವಾ ಜೆಲ್ ಹಚ್ಚಿಕೊಳ್ಳಿ

3) ಐಬ್ರೋ ವ್ಯಾಕ್ಸಿಂಗ್
ಕೂದಲುಗಳನ್ನು ನಿವಾರಿಸುವ ಕೊಂಚ ನೋವಿನಿಂದ ಕೂಡಿದ ವಿಧಾನವೆಂದರೆ ವ್ಯಾಕ್ಸಿಂಗ್. ಆದರೆ ಈ ವಿಧಾನ ಅನುಸರಿಸಲು ಅತ್ಯಂತ ನೈಪುಣ್ಯದ ಅಗತ್ಯವಿದೆ. ಮನೆಯಲ್ಲಿ ಐಬ್ರೋ ವ್ಯಾಕ್ಸಿಂಗ್ ಮಾಡಲು ವ್ಯಾಕ್ಸ್, ಪೌಡರ್ ಮತ್ತು ಲೋಷನ್ ಬೇಕಾಗುತ್ತದೆ.

ಇದನ್ನೂ ಓದಿ: Skin Care: ಮುಖದ ಅಂದಕ್ಕಾಗಿ ಯಾವ ಪದಾರ್ಥಗಳ ಫೇಸ್ ಪ್ಯಾಕ್ ಉತ್ತಮ? ಬೆಸ್ಟ್ ಆಯ್ಕೆಗಳಿವು

ಮೊದಲಿಗೆ ಐಬ್ರೋ ಆಕಾರ ಗುರುತು ಮಾಡಿಕೊಂಡು ಹುಬ್ಬಿನ ಮೇಲೆ ಪೌಡರ್ ಮತ್ತು ಲೋಷನ್ ಹಚ್ಚಿಕೊಳ್ಳಿ.  ನಂತರ ವ್ಯಾಕ್ಸ್ ಅನ್ನು 37 ಡಿಗ್ರಿಯಲ್ಲಿ ಬಿಸಿ ಮಾಡಿ ಮರದ ಒಂದು ಕಡ್ಡಿಯಲ್ಲಿ ಹೆಚ್ಚುವರಿ ಹುಬ್ಬಿನ ಮೇಲೆ ಬಳಿಯಿರಿ. ನಂತರ ಪೇಪರ್ ಸ್ಟ್ರಿಪ್ ಅನ್ನು ಅದರ ಮೇಲೆ ಅಂಡಿಸಿ. ಈಗ ಸ್ವಲ ಹೊತ್ತು ವ್ಯಾಕ್ಸ್ ಅನ್ನು ಹಾಗೆ ಬಿಟ್ಟು ನಂತರ ಎಳೆಯಿರಿ. ಹೀಗೆ ಮಾಡುವುದರಿಂದ ಹೆಚ್ಚುವರಿ ಕೂದಲು ಕಿತ್ತು ಬರುತ್ತದೆ.

ದಪ್ಪ ಹುಬ್ಬುಗಳನ್ನು ಹೇಗೆ ರೂಪಿಸುವುದು?
ನಿಮ್ಮ ಹುಬ್ಬಿನ ಪ್ರಾರಂಭದಿಂದ ಕೂದಲನ್ನು ತೆಗೆಯುವ ಮೂಲಕ ಪ್ರಾರಂಭಿಸಿ, ಒಮ್ಮೆ ನೀವು ಕಮಾನುಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹುಬ್ಬಿನ ಮೇಲ್ಭಾಗಕ್ಕೆ ಎಚ್ಚರಿಕೆಯಿಂದ ವಿಧಾನಗಳನ್ನು ಬಳಸಿ ಮತ್ತು ನೀವು ಮೇಲ್ಭಾಗವನ್ನು ಪೂರ್ಣಗೊಳಿಸಿದ ನಂತರ, ಹುಬ್ಬಿನ ಕೆಳಗೆ ಎಳೆಗಳನ್ನು ತೆಗೆದುಹಾಕಿ ನಂತರ ಎರಡೂ ಹುಬ್ಬುಗಳು ಸಮವಾಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಇನ್ನೊಂದು ಬದಿಯಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ತೆಳುವಾದ ಹುಬ್ಬುಗಳನ್ನು ಹೇಗೆ ರೂಪಿಸುವುದು?
ನಿಮ್ಮ ಹುಬ್ಬುಗಳು ಈಗಾಗಲೇ ಇರುವುದಕ್ಕಿಂತ ತೆಳ್ಳಗಾಗದಿರಲು ಕೂದಲಿನ ಹೆಚ್ಚುವರಿ ಎಳೆಗಳನ್ನು ಮಾತ್ರ ತೆಗೆದುಹಾಕಲು ನೀವು ಪ್ರಯತ್ನಿಸಬೇಕು.ಮತ್ತು ಕೂದಲನ್ನು ಚಪ್ಪಟೆಯಾಗಿ ಇಡಲು ಸ್ವಲ್ಪ ಹುಬ್ಬಿನ ಜೆಲ್ ಅನ್ನು ಅನ್ವಯಿಸಿ ಮತ್ತು ನಂತರ ಕೆಳಭಾಗದಲ್ಲಿ ಮತ್ತು ನಿಮ್ಮ ಹುಬ್ಬುಗಳ ಅಂಚಿನಲ್ಲಿ ಯಾವುದೇ ಅಡ್ಡಾದಿಡ್ಡಿ ಕೂದಲುಗಳನ್ನು ತೆಗೆದುಹಾಕಿ.

ಇದನ್ನೂ ಓದಿ: Good Morning: ಬೆಳಗ್ಗೆ ಎದ್ದೇಳೋಕೆ ಬೇಜಾರಾಗುತ್ತಿದೆಯಾ? ನಿಮ್ಮ ದಿನ ಚೆನ್ನಾಗಿರಬೇಕು ಅಂದ್ರೆ ಈ ರೀತಿ ಮಾಡಿ

ಕಣ್ಣು ತುಂಬಾ ಸೂಕ್ಷ್ಮ ಅಂಗವಾಗಿರುವುದರಿಂದ ಐಬ್ರೋ ಮಾಡುವ ವಿಧಾನಗಳಾದ ವ್ಯಾಕ್ಸಿಂಗ್ ನಂತಹ ವಿಧಾನಗಳಿಂದ ಎಚ್ಚರಿಕೆಯಿಂದಿರಬೇಕು. ಇನ್ನೂ ಹುಬ್ಬಿಗೆ ಆಕಾರ ಕೊಡುವಾಗಲೂ ಸಹ ಬಹಳ ಗಮನವಿರಬೇಕು. ಸ್ವಲ್ಪ ಎಡವಟ್ಟಾದರೂ ಹುಬ್ಬಿನ ಆಕಾರವೇ ಬದಲಾಗಿ ಬಿಡುತ್ತದೆ. ಆಮೇಲೆ ಮತ್ತೆ ಕೂದಲು ಹುಟ್ಟುವವರೆಗೂ ಮುಜುಗರ ಅನುಭವಿಸಬೇಕಾಗುತ್ತದೆ.
Published by:Ashwini Prabhu
First published: