• Home
  • »
  • News
  • »
  • lifestyle
  • »
  • Back Acne Remedy: ಬೆನ್ನಿನ ಮೇಲಿನ ಮೊಡವೆಗಳಿಗೆ ಸೂಪರ್ ಮನೆಮದ್ದುಗಳಿದೆ ನೋಡಿ

Back Acne Remedy: ಬೆನ್ನಿನ ಮೇಲಿನ ಮೊಡವೆಗಳಿಗೆ ಸೂಪರ್ ಮನೆಮದ್ದುಗಳಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Back Acne Home Remedies: ಈ ಮೊಡವೆ ಸಮಸ್ಯೆ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಇಬ್ಬರಲ್ಲಿ ಸಹ ಕಾಣಿಸುತ್ತದೆ. ಇದಕ್ಕೆ ನೀವು ಮನೆಯಲ್ಲಿಯೇ ಪರಿಹಾರ ಪಡೆಯಬಹುದು. ಹೇಗೆ ಎಂಬುದು ಇಲ್ಲಿದೆ.

  • Share this:

ಬೆನ್ನಿನ ಮೇಲಿನ (Back)  ಉಂಟಾಗುವ ಮೊಡವೆಗಳನ್ನು (Pimples) ಸಾಮಾನ್ಯವಾಗಿ "ಬ್ಯಾಕ್ ಮೊಡವೆ" (Back Acne) ಎಂದು ಕರೆಯಲಾಗುತ್ತದೆ. ಇವುಗಳು ಮುಖದ ಮೊಡವೆಗಳಿಗಿಂತ ಕಿರಿಕಿರಿಯನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು. ಬೆನ್ನಿನ ಮೊಡವೆ, ಸಾಮಾನ್ಯ ಮೊಡವೆಯಂತೆಯೇ ಆದರೆ ಮುಖದ ಮೇಲಿನ ಮೊಡವೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇದಕ್ಕೆ ಕಾರಣಗಳೂ ಬೇರೆ ಬೇರೆ ಇರುತ್ತದೆ. ವಿವಿಧ ಕಾರಣಗಳಿಂದ ಇವುಗಳನ್ನು ಕೆಂಪು ಬಣ್ಣಕ್ಕೆ ತಿರುಗಬಹುದು, ಬಿಳಿ ಚುಕ್ಕೆಗಳು, ಕಪ್ಪು ಚುಕ್ಕೆಗಳು ಮತ್ತು ಗಂಟುಗಳು ಹೀಗೆ ವಿವಿಧ ರೀತಿಯಲ್ಲಿ ಸಮಸ್ಯೆಗಳು ಬರುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಇಬ್ಬರಲ್ಲಿ ಸಹ ಕಾಣಿಸುತ್ತದೆ. ಇದಕ್ಕೆ ನೀವು ಮನೆಯಲ್ಲಿಯೇ ಪರಿಹಾರ (Home Remedies)  ಪಡೆಯಬಹುದು. ಹೇಗೆ ಎಂಬುದು ಇಲ್ಲಿದೆ.


ಬೆನ್ನಿನ ಮೊಡವೆಗಳಿಗೆ ಕಾರಣಗಳು:
ಡ್ಯಾಂಡ್ರಫ್, ಹಾರ್ಮೋನ್ PCOD, ಫೋಲಿಕ್ಯುಲೈಟಿಸ್, ಬಿಗಿಯಾದ ಬಟ್ಟೆ ಧರಿಸುವುದು ಅಥವಾ ಬಟ್ಟೆಗಳ ಅರ್ಲಜಿ, ರಾಸಾಯನಿಕಯುಕ್ತ ಕೂದಲು ಆರೈಕೆ ಉತ್ಪನ್ನಗಳು, ಶೇವಿಂಗ್ ಮತ್ತು ವ್ಯಾಕ್ಸಿಂಗ್, ಕೆಲ ತೈಲಗಳು ಮತ್ತು ಚರ್ಮದ ಕ್ರೀಮ್ಗಳು ಬೆನ್ನು ಮೊಡವೆಗಳಿಗೆ ಮುಖ್ಯ ಕಾರಣಗಳು ಎಂದು ತಜ್ಞರು ಹೇಳುತ್ತಾರೆ.


ಬೆನ್ನಿನಲ್ಲಿ ಉಂಟಾಗುವ ಮೊಡವೆಗಳನ್ನು ಹೇಗೆ ತಡೆಯುವುದು ಎಂಬುದರ ಕುರಿತು ನಾವು ಹಲವಾರು ಬಾರಿ ಯೋಚನೆ ಮಾಡಿರುತ್ತೇವೆ. ಅಲ್ಲದೇ, ಇದು ಕೆಲವೊಮ್ಮೆ ಸಮಸ್ಯೆ ಸಹ ಆಗುತ್ತದೆ. ಇಷ್ಟದ ಬಟ್ಟೆಗಳನ್ನು ಹಾಕಿಕೊಳ್ಳುವುದಕ್ಕೆ ಸಹ ಆಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ನೀಡಲು ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನಗಳು ಸಿಗುತ್ತದೆ. ಆದರೆ, ಉತ್ಪನ್ನಗಳು ಬಳಸುವುದರಿಂದ ಖಂಡಿತವಾಗಿಯೂ ಅಡ್ಡಪರಿಣಾಮಗಳು ಉಂಟಾಗಬಹುದು. ಹಾಗಾಗಿ ನಿಮಗೆ ಮನೆಯಲ್ಲಿಯೇ ಕೆಲ ನೈಸರ್ಗಿಕ ಮಾರ್ಗಗಳನ್ನು ಬಳಸಿ ಇದಕ್ಕೆ ಪರಿಹಾರ ಪಡೆಯಬಹುದು.


ಸ್ಯಾಂಡಲ್​ವುಡ್​ ಅಥವಾ ಶ್ರೀಗಂಧ
ಶ್ರೀಗಂಧವು ಚರ್ಮದಿಂದ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಶ್ರೀಗಂಧವನ್ನು ರೋಸ್ ವಾಟರ್ ನೊಂದಿಗೆ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಂಡು, ಪ್ರತಿದಿನ ಬೆನ್ನಿಗೆ ಹಚ್ಚಿ ರಾತ್ರಿ ಮಲಗಿಕೊಳ್ಳಿ. ಮರುದಿನ ಬೆಳಗ್ಗೆ ತೊಳೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಬೆನ್ನಿನ ಮೇಲಿನ ಮೊಡವೆಗಳು ಮಾಯವಾಗುತ್ತವೆ.


ಲೋಳೆಸರ ಅಥವಾ ಅಲೋವೆರಾ
ಅಲೋವೆರಾ ಜೆಲ್ ಅನ್ನು ಪ್ರತಿದಿನ ಬೆನ್ನಿನ ಮೇಲೆ ಹಚ್ಚುವುದರಿಂದ ಮೊಡವೆಗಳಿಂದ ಉಂಟಾಗುವ ಕೆಂಪು ಮತ್ತು ಊತ ಕಡಿಮೆಯಾಗುತ್ತದೆ. ಏಕೆಂದರೆ ಅಲೋವೆರಾದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅಲೋವೆರಾ ಜೆಲ್ ಅನ್ನು ಅರಿಶಿನದೊಂದಿಗೆ ಬೆರೆಸಿ ಬೆನ್ನಿನ ಮೇಲೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಸಮಸ್ಯೆಗಳಿಗೆ ಸಹ ಪರಿಹಾ ನೀಡುತ್ತದೆ.


ಜೇನುತುಪ್ಪ
ಜೇನುತುಪ್ಪವು ಅತ್ಯುತ್ತಮ ರೋಗನಿರೋಧಕ ವಸ್ತುವಾಗಿದೆ. ನಿಮ್ಮ ಬೆನ್ನಿನಲ್ಲಿ ಬಹಳಷ್ಟು ಮೊಡವೆಗಳಿದ್ದರೆ, ಜೇನುತುಪ್ಪವನ್ನು ನೇರವಾಗಿ ಅಥವಾ ನಿಮ್ಮ ಬೆನ್ನಿನ ಮೇಲೆ ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಿ. ಇಲ್ಲದಿದ್ದರೆ, 3 ಟೇಬಲ್ಸ್ಪೂನ್ ಜೇನುತುಪ್ಪವನ್ನು 1 ಟೇಬಲ್ಸ್ಪೂನ್ ಚಕ್ಕೆಯ ಪುಡಿಯೊಂದಿಗೆ ಬೆರೆಸಿ, ರಾತ್ರಿ ಮಲಗುವ ಮೊದಲು ನಿಮ್ಮ ಬೆನ್ನಿನ ಮೇಲೆ ಹಚ್ಚಿ ಮತ್ತು ರಾತ್ರಿಯಿಡೀ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಿರಿ. ಹೀಗೆ ಮಾಡಿದರೂ ಒಳ್ಳೆಯ ಫಲಿತಾಂಶ ಸಿಗುತ್ತದೆ.


ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯನ್ನು ತಿಂದ್ರೆ ಸಿಗೋ ಪ್ರಯೋಜನಗಳು ಒಂದೆರೆಡಲ್ಲ




ಟೊಮ್ಯಾಟೋ:
ಟೊಮ್ಯಾಟೋ ಚರ್ಮಕ್ಕೆ ಹಲವಾರು ರೀತಿಯಲ್ಲಿ ಅನೇಕ ಪ್ರಯೋಜನ ನೀಡುತ್ತದೆ. ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ, ಅದನ್ನು ನೇರವಾಗಿ ಬೆನ್ನಿನ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ನೆನೆಸಿ ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಬೆನ್ನಿನ ಮೇಲಿನ ಮೊಡವೆಗಳಷ್ಟೇ ಅಲ್ಲ ಅದರಿಂದ ಉಂಟಾದ ಕಲೆಗಳೂ ಮಾಯವಾಗುತ್ತವೆ.


ನಿಂಬೆ ರಸ:
ನಿಂಬೆ ರಸವು ಬೆನ್ನಿನ ಮೊಡವೆಗಳನ್ನು ಸಹ ಹೋಗಲಾಡಿಸುತ್ತದೆ. ನಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ನಿಮ್ಮ ಬೆನ್ನಿನ ಮೇಲೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಇದರ ಮೂಲಕ ಬೆನ್ನಿನ ಮೇಲಿನ ಮೊಡವೆಗಳೂ ಮಾಯವಾಗುತ್ತವೆ. ನಿಂಬೆ ರಸವು ನಿಮ್ಮ ಚರ್ಮವನ್ನು ಸುಡುತ್ತದೆ ಎಂದು ಯೋಚಿಸಬೇಡಿ. ನೋವು ಇಲ್ಲದೆ ಉತ್ತಮ ಫಲಿತಾಂಶ ಸಿಗುವುದಿಲ್ಲ.


ಇದನ್ನೂ ಓದಿ: ಬೇಗ ತೂಕ ಇಳಿಸಲು ಸುಲಭ ಮಾರ್ಗಗಳಿವು, ಟ್ರೈ ಮಾಡಿ ನೋಡಿ


ಹಾಗೆಯೇ, ಸರಿಯಾದ ತ್ವಚೆಯ ಕ್ರೀಮ್ ಮತ್ತು ಶಾಂಪೂವನ್ನು ಬಳಸಬೇಕಾಗುತ್ತದೆ. ಹಿಂಭಾಗವನ್ನು ಸ್ಕ್ರಬ್ ಮಾಡುವುದನ್ನು ತಪ್ಪಿಸಬೇಕು. ಸ್ವಲ್ಪ ಪರಿಮಳಯುಕ್ತ ಬ್ಯಾಕ್ಟೀರಿಯಾ ವಿರೋಧಿ ಸೋಪ್ ಬಳಸುವುದು ಉತ್ತಮ. ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು ಬಹಳ ಮುಖ್ಯ.

Published by:Sandhya M
First published: